Latest Updates
-
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ! -
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ
ಚಳಿಗಾಲದಲ್ಲಿ ಕಾಡುವ ಮೂಳೆ ಸಂದುಗಳ ನೋವು! ಪರಿಹಾರವೇನು?
ಇಂದಿನ ದಿನಗಳಲ್ಲಿ ಯುವಕರೂ ಸಂದುನೋವಿನಿಂದ ಬಳಲುತ್ತಿದ್ದಾರೆ. ಇದರಿಂದ ನಿತ್ಯದ ಚಟುವಟಿಕೆಗಳಿಗೂ ತೊಂದರೆಯಾಗುತ್ತದೆ. ಈ ಸಂದುನೋವನ್ನು ಸರ್ವಥಾ ಉದಾಸೀನ ಮಾಡುವಂತಿಲ್ಲ. ಏಕೆಂದರೆ ಕೊಂಚ ಉದಾಸೀನತೆಯಿಂದ ಈ ನೋವು ಹೆಚ್ಚಿದರೆ ಹಾಸಿಗೆ ಹಿಡಿದು ಆಸ್ಪ
ಚಳಿಗಾಲದಲ್ಲಿ ಮೂಳೆ ಕೊರೆಯುವಂತಹ ತಂಗಾಳಿ ಮೂಳೆಗಳ ಸಂದುಗಳಲ್ಲಿ ಅಪಾರವಾದ ನೋವು ತರುತ್ತದೆ. ಚಳಿಯಲ್ಲಿ ಎಲ್ಲಾದರೂ ಪೆಟ್ಟಾದರೆ ಇತರ ಸಮಯಕ್ಕಿಂತ ಬಹಳವೇ ಹೆಚ್ಚು ನೋಯುತ್ತದೆ. ಸಾಮಾನ್ಯವಾಗಿ ಹಿರಿಯರ ಮೂಳೆಗಳು ಹೆಚ್ಚು ಸವೆದಿರುವ ಕಾರಣ ಮೂಳೆಸಂದುಗಳ ನೋವು ಹಿರಿಯರಲ್ಲಿ ಚಳಿಗಾಲದಲ್ಲಿ ಸಹಜ.
ಆದರೆ ಇಂದಿನ ದಿನಗಳಲ್ಲಿ ಯುವಕರೂ ಸಂದುನೋವಿನಿಂದ ಬಳಲುತ್ತಿದ್ದಾರೆ. ಇದರಿಂದ ನಿತ್ಯದ ಚಟುವಟಿಕೆಗಳಿಗೂ ತೊಂದರೆಯಾಗುತ್ತದೆ. ಈ ಸಂದು ನೋವನ್ನು ಸರ್ವಥಾ ಉದಾಸೀನ ಮಾಡುವಂತಿಲ್ಲ. ಏಕೆಂದರೆ ಕೊಂಚ ಉದಾಸೀನತೆಯಿಂದ ಈ ನೋವು ಹೆಚ್ಚಿದರೆ ಹಾಸಿಗೆ ಹಿಡಿದು ಆಸ್ಪತ್ರೆ ಸೇರಬೇಕಾಗಿಯೂ ಬರಬಹುದು. ಮೂಳೆ ಸಂದುಗಳ ನೋವು, ಮುನ್ನೆಚ್ಚರಿಕೆ ಕ್ರಮ ಅರಿಯಿರಿ
ಆದರೆ ಕೊಂಚ ಆರೈಕೆ ಮತ್ತು ಎಚ್ಚರಿಕೆಗಳನ್ನು ಅನುಸರಿಸುವ ಮೂಲಕ ಈ ಸಂದುನೋವು ಬರದಂತೆ ಕಾಪಾಡಿಕೊಳ್ಳಬಹುದು. ವಿಶೇಷವಾಗಿ ಚಳಿಗಾಲದಲ್ಲಿ ಇದರ ಆರೈಕೆ ಹೇಗೆ ಎಂಬುದನ್ನು ಈಗ ನೋಡೋಣ....

ಸಂದು ನೋವು ಹೇಗೆ ಬರುತ್ತದೆ?
ನಮ್ಮ ಮೂಳೆಗಳು ದೃಢವಾಗಿದ್ದರೂ ಎರಡು ಮೂಳೆಗಳು ಕೂಡುವಲ್ಲಿ, ಅಂದರೆ ಮಡಚುವಲ್ಲಿ ಕೀಲಿನ ಆಕೃತಿಯಲ್ಲಿದ್ದು ಈ ಭಾಗ ಸಾಕಷ್ಟು ಮೃದುವಾಗಿರುತ್ತದೆ. ಮೂಳೆಗಳು ಪರಸ್ಪರ ಜಾರಲು ಜಾರುಕದಂತಹ ದ್ರವ ಸದಾ ಇಲ್ಲಿ ಇರಬೇಕು. ಚಳಿಗಾಲದಲ್ಲಿ ಈ ದ್ರವ ಕೊಂಚ ಗಟ್ಟಿಯಾಗಿ ಮೃದುಭಾಗವೂ ಗಟ್ಟಿಯಾಗುತ್ತದೆ. ಇದರಿಂದ ಈ ಭಾಗಕ್ಕೆ ಅಂಟಿಕೊಂಡಿದ್ದ ನರಾಗ್ರಗಳು ಕೊಂಚ ಒತ್ತಡಕ್ಕೇ ಸಂವೇದನೆ ನೀಡುತ್ತವೆ. ಇದೇ ಸಂದುನೋವು.

ಆಹಾರದಲ್ಲಿ ಒಮೆಗಾ-3 ಕೊಬ್ಬಿನ ಆಮ್ಲವಿರಲಿ
ಒಮೆಗಾ-3 ಕೊಬ್ಬಿನ ಆಮ್ಲ ಇರುವ ಆಹಾರಗಳನ್ನು ನಿಮ್ಮ ದಿನದ ಆಹಾರಗಳಲ್ಲಿ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಿ. ಈ ಆಮ್ಲಗಳು ಉತ್ತಮ ಉರಿಯೂತ ನಿವಾರಕವಾಗಿದ್ದು ಮೂಳೆಗಳು ಚಳಿಗಾಲದಲ್ಲಿ ಪೆಡಸಾಗುವುದನ್ನು ತಡೆಯುತ್ತದೆ.

ಒಮೆಗಾ-3 ಆಹಾರಗಳು....
ಸಾಲ್ಮನ್ ಮೀನು, ಮೀನಿನೆಣ್ಣೆ, ಅಕ್ರೋಟು ಮೊದಲಾವುಗಳಲ್ಲಿ ಈ ಆಮ್ಲ ಹೇರಳವಾಗಿದ್ದು ನಿತ್ಯವೂ ಕೊಂಚ ಪ್ರಮಾಣದಲ್ಲಿ ಸೇವಿಸುವ ಮೂಲಕ ಈ ತೊಂದರೆಯಿಂದ ರಕ್ಷಣೆ ಪಡೆಯಬಹುದು.

ನಿಮ್ಮ ಆಹಾರದಲ್ಲಿ ಇಡಿಯ ಕಾಳುಗಳಿರಲಿ
ಇಡಿಯ ಕಾಳುಗಳಲ್ಲಿ ಹೆಚ್ಚಿನ ನಾರಿನಂಶವಿರುತ್ತದೆ. ಅಲ್ಲದೇ ಇದರೊಂದಿಗೆ ವಿಟಮಿನ್, ಕ್ಯಾಲ್ಸಿಯಂ, ಕಬ್ಬಿಣ ಮೊದಲಾದ ಪೋಷಕಾಂಶಗಳೂ ಇರುತ್ತವೆ. ಆದ್ದರಿಂದ ಚಳಿಗಾಲದಲ್ಲಿ ಕಡ್ಡಾಯವಾಗಿ ಈ ಧಾನ್ಯಗಳನ್ನು ಸೇವಿಸುವ ಮೂಲಕ ಆರೋಗ್ಯವೂ ವೃದ್ಧಿಸುವುದಲ್ಲದೇ ಮೂಳೆಸಂಧುಗಳ ನೋವೂ ಇಲ್ಲವಾಗುತ್ತದೆ.

ಒಣಫಲಗಳನ್ನು ಸೇವಿಸಿ
ಒಣಫಲಗಳಲ್ಲಿ ಉತ್ತಮವಾದ ಕೊಬ್ಬು ಮತ್ತು ಇತರ ಪೋಷಕಾಂಶಗಳಿದ್ದು ಮೂಳೆಸಂದುಗಳ ನೋವಿನಿಂದ ರಕ್ಷಣೆ ನೀಡುತ್ತವೆ.

ಒಣಫಲಗಳನ್ನು ಸೇವಿಸಿ
ವಿಶೇಷವಾಗಿ ಈ ಪೋಷಕಾಂಶಗಳು ಮೂಳೆಗಳನ್ನು ಸವೆತದಿಂದ ರಕ್ಷಿಸುವ ಮೂಲಕ ಸಂಧುನೋವು ಬರದಂತೆ ನೋಡಿಕೊಳ್ಳುತ್ತವೆ.

ವ್ಯಾಯಾಮ ಮಾಡುತ್ತಿರಿ
ಚಳಿಗಾಲದಲ್ಲಿ ಸುಲಭ ವ್ಯಾಯಾಮಗಳಾದ ನಡೆದಾಟ, ಸೈಕಲ್ ಸವಾರಿ ಮತ್ತು ಇತರ ಮೈ ಬೆಚ್ಚಗಾಗಿಸುವ ಸುಲಭ ವಿಧಾನಗಳನ್ನು ಅನುಸರಿಸಿ. ಇದರಿಂದ ರಕ್ತಪರಿಚಲನೆ ಉತ್ತಮವಾಗಿರುವುದಲ್ಲದೇ ಸಂಧುನೋವು ಬರದಂತೆ ಇರಲೂ ನೆರವಾಗುತ್ತದೆ.

ವಿಟಮಿನ್ ಡಿ ಪ್ರಮಾಣ ಹೆಚ್ಚಿಸಿ
ವಿಟಮಿನ್ ಡಿ ಹೆಚ್ಚಿರುವ ಹಾಲು, ಹಾಲಿನ ಉತ್ಪನ್ನಗಳು, ಬ್ರೋಕೋಲಿ ಮೊದಲಾದ ತರಕಾರಿಗಳನ್ನು ನಿಮ್ಮ ನಿತ್ಯದ ಆಹಾರಗಳ ಮೂಲಕ ಸೇವಿಸಿ. ಇದರೊಂದಿಗೆ ಸಾಕಷ್ಟು ಬಿಸಿಲಿಗೆ ಒಡ್ಡಿಕೊಳ್ಳುವುದೂ ಅಗತ್ಯ.

ವಿಟಮಿನ್ ಡಿ ಪ್ರಮಾಣ ಹೆಚ್ಚಿಸಿ
ವಿಟಮಿನ್ ಡಿ ಲಭ್ಯತೆಯಿಂದ ಮೂಳೆಗಳು ದೃಢಗೊಳ್ಳುವುದು ಹಾಗೂ ಮೂಳೆಸಂದುಗಳಿಗೆ ಹೆಚ್ಚಿನ ಜಾರುಕ ಗುಣವನ್ನು ನೀಡುವ ಮೂಲಕ ಸಂಧುನೋವಿನ ತೊಂದರೆ ಬರದಂತೆ ತಡೆಯಬಹುದು.



Click it and Unblock the Notifications











