ಸೈಲೆಂಟ್ ಆಗಿ ಕಾಡಲಿದೆ ಲಿವರ್ ಸಮಸ್ಯೆ! ಎಚ್ಚರ ತಪ್ಪದಿರಿ...

By Arshad

ನಾಗಾಲೋಟದ ಧಾವಂತದಲ್ಲಿ ನಾವು ನಮ್ಮ ಆರೋಗ್ಯವನ್ನು ಕಡೆಗಣಿಸುತ್ತಿರುವುದೇನೂ ಸುಳ್ಳಲ್ಲ. ಇದು ಗೊತ್ತಾಗುವುದು ನಮಗೆ ಈ ಕಡಗಣನೆಯ ಪರಿಣಾಮದಿಂದ ಎದುರಾದ ತೊಂದರೆ ಸಹಿಸಲಸಾಧ್ಯವಾದ ನೋವು ಕೊಟ್ಟ ಬಳಿಕವೇ. ನಮ್ಮ ದೇಹವೊಂದು ನಿಸರ್ಗದ ಅದ್ಭುತ ಸೃಷ್ಟಿಯಾಗಿದ್ದು ಇದರ ಒಂದು ಅದ್ಭುತ ಲಕ್ಷಣವೆಂದರೆ ಕೆಲವು ಅಂಗಾಂಶಗಳು ಸವೆದರೂ ಮತ್ತೆ ಬೆಳೆಯುವುದು ಹಾಗೂ ಸ್ವತಃ ರಿಪೇರಿ ಮಾಡಿಕೊಳ್ಳುವುದು. ಆದರೆ ಎಲ್ಲಾ ಅಂಗಗಳಿಗೆ ಮತ್ತೆ ಬೆಳೆಯುವ ಸಾಮರ್ಥ್ಯವಿಲ್ಲ. ಚರ್ಮ, ಕೂದಲು, ಸ್ನಾಯುಗಳು ಮತ್ತೆ ಬೆಳೆಯುವ ಕ್ಷಮತೆ ಹೊಂದಿವೆ.

Signs Of Liver Damage That We Did Not Know

ಆದರೆ ಮತ್ತೆ ಬೆಳೆಯುವಂತಹ ಕ್ಷಮತೆ ಪಡೆದಿರುವ ಏಕಮಾತ್ರ ಅಂಗವೆಂದರೆ ಯಕೃತ್ ಅಥವಾ ಲಿವರ್. ದೇಹದ ಯಾವುದೇ ಅಂಗದ ಕಾರ್ಯಕ್ಷಮತೆ ಕಡಿಮೆಯಾದರೆ ಅಥವಾ ಯಾವುದಾದರೂ ರೋಗ ಬಾಧಿಸಿದರೆ ಇದರ ಇರುವಿಕೆಯನ್ನು ದೇಹ ಕೆಲವಾರು ರೂಪದಲ್ಲಿ ಪ್ರಕಟಿಸುತ್ತದೆ. ಆದರೆ ನಿತ್ಯದ ಚಟುವಟಿಕೆಗಳ ಜಂಜಡದಲ್ಲಿ ನಾವು ಈ ನೋವು ಹಾಗೂ ಇತರ ಲಕ್ಷಣಗಳನ್ನು ಅಲಕ್ಷಿಸಿಬಿಡುತ್ತೇವೆ.

ಒಂದು ವೇಳೆ, ಚಿಕ್ಕದು ಎಂಬ ನೋವನ್ನು ಸಹಾ ಗಮನಿಸಿ ಈ ಬಗ್ಗೆ ವೈದ್ಯರಿಂದ ತಪಾಸಣೆಗೊಳಪಟ್ಟು ಕಾರಣವನ್ನು ಕಂಡುಕೊಂಡರೆ ಈ ನೋವಿಗೆ ಇರುವ ಕಾರಣ ಉಲ್ಬಣಗೊಳ್ಳುವುದಕ್ಕೆ ಮುಂಚಿತವಾಗಿ ಚಿಕಿತ್ಸೆ ಪಡೆದು ಆರೋಗ್ಯ ಸರಿಪಡಿಸಿಕೊಳ್ಳುವುದು ಜಾಣತನದ ಕ್ರಮ ಹಾಗೂ ವೈದ್ಯರೂ ಪ್ರಶಂಸಿಸುವ ಕ್ರಮವಾಗಿದೆ. ಯಕೃತ್ತಿನ ಕಾಯಿಲೆಯನ್ನು ಉಪಚರಿಸುವ ಮನೆಮದ್ದುಗಳು

ಯಕೃತ್ ಬೆಳೆಯಬಲ್ಲ ಅಂಗವಾದರೂ ಇದು ಬೆಳೆಯುವುದು ಕತ್ತರಿಸಿದ ಬಳಿಕ ಮಾತ್ರವೇ ಹೊರತು ಒಂದು ವೇಳೆ ಯಕೃತ್ ಗೆ ತೊಂದರೆ ಉಂಟಾದರೆ ಇದಕ್ಕೆ ಚಿಕಿತ್ಸೆ ಮಾತ್ರ ಆದಷ್ಟು ಬೇಗನೇ ಪ್ರಾರಂಭಿಸಬೇಕು. ಯಕೃತ್ ತೊಂದರೆಗೆ ಹೆಪಟೈಟಿಸ್ ಬಿ, ಸಿ, ಮತ್ತು ಎ., ಮದ್ಯದ ಪ್ರಭಾವದಿಂದ ಎದುರಾಗುವ ಆಲ್ಕೋಹಾಲಿಕ್ ಹೆಪಟೈಟಿಸ್, ಲಿವರ್ ಸಿರ್ರೋಸಿಸ್, ಯಕೃತ್ ನಲ್ಲಿ ಕೊಬ್ಬು ಮೊದಲಾದವು ಯಕೃತ್ ನ ಸಾಮಾನ್ಯ ಕಾರ್ಯಕ್ಷಮತೆಯನ್ನು ಕುಗ್ಗಿಸಿ ಒಂದು ಹಂತ ತಲುಪಿದ ಬಳಿಕ ಅಂಗದ ವೈಫಲ್ಯಕ್ಕೆ ಕಾರಣವಾಗುತ್ತವೆ.

ಯಕೃತ್‌ನ ಕಾಯಿಲೆಗೆ ವೈರಸ್ಸಿನ ಸೋಂಕು, ಮಿತಿಮೀರಿದ ಮದ್ಯಸೇವನೆಯಿಂದ ಯಕೃತ್ ನಲ್ಲಿ ಕಾಣಿಸಿಕೊಂಡ ಉರಿಯೂತ, ಯಕೃತ್ ನಲ್ಲಿ ಕೊಬ್ಬಿನ ಸಂಗ್ರಹದಲ್ಲಿ ಹೆಚ್ಚಳ ಸಹಾ ಕಾರಣವಾಗಬಲ್ಲವು. ನಮ್ಮ ದೇಹದ ಯಾವುದೋ ಅಗೋಚರ ಶಕ್ತಿಯೊಂದು ಯಕೃತ್ ಇದರಲ್ಲಿ ಯಾವುದಾದರೊಂದು ಕಾರಣದಿಂದ ತೊಂದರೆಗೊಳಗಾಗಿದ್ದರೆ ತಕ್ಷಣ ಇದನ್ನು ಸರಿಪಡಿಸಿ ಎಂದು ಕೆಲವು ಸೂಚನೆಗಳನ್ನು ನೀಡುತ್ತದೆ. ಬನ್ನಿ, ಈ ಸೂಚನೆಗಳು ಯಾವುವು ಎಂಬುದನ್ನು ಮುಂದೆ ಓದಿ...

ಸೂಚನೆ #1
ನಮ್ಮ ದೇಹ ವಿಸರ್ಜಿಸುವ ಕಲ್ಮಶಗಳ ಬಣ್ಣ ಈ ತೊಂದರೆಯನ್ನು ತಿಳಿಸುವ ಸ್ಪಷ್ಟ ಸೂಚನೆಯಲ್ಲಿ ಪ್ರಮುಖವಾಗಿದೆ. ಮಲ ಮತ್ತು ಮೂತ್ರದ ಬಣ್ಣ ಸಾಮಾನ್ಯವಾಗಿರದೇ ಬದಲಾಗಿದ್ದರೆ ಕೆಲವು ಪರೀಕ್ಷೆಗಳ ಮೂಲಕ ಯಕೃತ್ ತೊಂದರೆಯಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಮೂತ್ರದ ಬಣ್ಣ ಗಾಢವಾಗಿದ್ದು ನೀರಿನಲ್ಲಿ ಮೂಡಿಸುವ ಗುಳ್ಳೆಗಳು ಸಾಮಾನ್ಯ ನೀರಿನ ಗುಳ್ಳೆಗಳು ಒಡೆಯುವುದಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡರೆ (ಅಂದರೆ ಸೋಪಿನ ನೊರೆಯಂತಿದ್ದರೆ) ಹಾಗೂ ಮಲದಲ್ಲಿ ನೀರಿನ ಅಂಶ ಹೆಚ್ಚಿದ್ದು ಬಿಳಿಚಿದ ಹಳದಿ ಬಣ್ಣದಲ್ಲಿದ್ದರೆ ತಕ್ಷಣವೇ ವೈದ್ಯರಿಂದ ತಪಾಸಣೆಗೆ ಒಳಪಡುವುದೇ ಉತ್ತಮ. ಎಚ್ಚರ: ನಿಮ್ಮ ಲಿವರ್ ಕೂಡ ಅಪಾಯದಲ್ಲಿ ಸಿಲುಕಿರಬಹುದು!

ಸೂಚನೆ #2
ಹೊಟ್ಟೆಯಲ್ಲಿ ಆಮ್ಲೀಯತೆ ಉಂಟಾಗುವುದು ಸಿದ್ಧ ಆಹಾರಗಳಲ್ಲಿ ಉಪಯೋಗಿಸಿರುವ ಯಾವುದೋ ಒಂದು ರಾಸಾಯನಿಕದ ಪ್ರಭಾವವಾಗಿರಬಹುದು. ಆದರೆ ಯಾವ ಊಟ ಮಾಡಿದರೂ ಪ್ರತಿನಿತ್ಯವೂ ಹೊಟ್ಟೆಯಲ್ಲಿ ಆಮ್ಲೀಯತೆ ಉಂಟಾಗಿ ಹುಳಿತೇಗು ಕಂಡುಬಂದರೆ ಇದಕ್ಕೆ ಆಹಾರ ಕಾರಣವಾಗಿರಲಿಕ್ಕಿಲ್ಲ. ಒಂದು ವೇಳೆ ಹುಳಿತೇಗಿನ ಜೊತೆಗೇ ವಾಕರಿಕೆ ಮತ್ತು ವಾಂತಿ ಸಹಾ ಎದುರಾದರೆ ಇದು ಯಕೃತ್ ವೈಫಲ್ಯದತ್ತ ಜಾರುತ್ತಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ.

ಸೂಚನೆ #3
ಒಂದು ವೇಳೆ ನಿಮಗೆ ಆಹಾರದಿಂದ ಯಾವುದೇ ಅಲರ್ಜಿ ಇಲ್ಲದಿದ್ದರೂ ಕೆಲವಾರು ಕಡೆಗಳಲ್ಲಿ ಸತತವಾದ ತುರಿಕೆ ಕಂಡುಬಂದರೆ ಇದು ಯಕೃತ್ ನ ತೊಂದರೆಗೆ ಕಾರಣವಾಗಿರಬಹುದು. ತಕ್ಷಣವೇ ವೈದ್ಯರಲ್ಲಿ ತಪಾಸಣೆಗೊಳಪಡುವುದೇ ಕ್ಷೇಮ. ಅಪಾಯಕಾರಿ ಲಿವರ್ ಕಾಯಿಲೆಯನ್ನು ಉಪಚರಿಸುವ ಮನೆಮದ್ದುಗಳು

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Signs Of Liver Damage That We Did Not Know

Many a times, we get so caught up with our fast-paced lives that we tend to ignore our health until it is too late. Nature gives us a number of warnings in the form of signs and symptoms when we are at the risk of a particular disorder. If we pay heed to nature's warnings and get the required treatment as early as possible, we can cut down the risk of serious complications.
X
Desktop Bottom Promotion