For Quick Alerts
ALLOW NOTIFICATIONS  
For Daily Alerts

ಪ್ರತಿದಿನ ಮಲಗುವ ಮುನ್ನ ಹಲ್ಲುಜ್ಜಿ-ವೈದ್ಯರಿಂದ ದೂರವಿರಿ!

By Manu
|

ನಾವು ತಿನ್ನುವ ಆಹಾರವು ಸರಿಯಾಗಿ ಜೀರ್ಣವಾಗಬೇಕೆಂದರೆ ಅದಕ್ಕೆ ಪ್ರಮುಖ ಕಾರಣ ಹಲ್ಲುಗಳು. ಹಲ್ಲುಗಳು ಇಲ್ಲವೆಂದಾದರೆ ನಮಗೆ ಘನ ಆಹಾರವನ್ನು ಸೇವಿಸಲು ಸಾಧ್ಯವೇ ಇಲ್ಲ. ಇದಕ್ಕಾಗಿ ಹಲ್ಲುಗಳ ಆರೈಕೆ ತುಂಬಾ ಮುಖ್ಯ. ದಿನಾ ಬೆಳಿಗ್ಗೆ ಎದ್ದು ನಾವು ಹಲ್ಲುಜ್ಜುತ್ತೇವೆ. ಆದರೆ ಎಷ್ಟು ಮಂದಿ ರಾತ್ರಿ ಊಟದ ಬಳಿಕ ಮಲಗುವ ಮೊದಲು ಹಲ್ಲುಜ್ಜುತ್ತಾರೆ? ಹಲ್ಲುಗಳ ಹೊಳಪಿಗೆ ಸರಳ ಟ್ರಿಕ್ಸ್- ಅದೇ ಆಯುರ್ವೇದ ಚಿಕಿತ್ಸೆ!

ಕೆಲವರು ಉದಾಸೀನದಿಂದ ಹಲ್ಲುಜ್ಜುವುದನ್ನು ಬಿಟ್ಟು ಚೂಯಿಂಗ್ ಗಮ್, ಪುದೀನಾ ಜಗಿಯುತ್ತಾರೆ. ಇನ್ನು ಕೆಲವರು ಮೌಥ್ ವಾಶ್‌ನಿಂದ ಬಾಯಿ ಸ್ವಚ್ಛಗೊಳಿಸುತ್ತಾರೆ. ದಿನದಲ್ಲಿ ಎರಡು ಸಲ ಹಲ್ಲುಜ್ಜಿದರೆ ನಿಮ್ಮ ಆರೋಗ್ಯಕ್ಕೆ ಆಗುವ ಲಾಭಗಳು ಏನು ಎಂದು ತಿಳಿದುಕೊಳ್ಳುವ....

ದಂತಕುಳಿ ತಡೆ

ದಂತಕುಳಿ ತಡೆ

ರಾತ್ರಿ ವೇಳೆ ಹಲ್ಲುಜ್ಜುವುದರಿಂದ ಬಾಯಿಯಲ್ಲಿ ಬ್ಯಾಕ್ಟೀರಿಯಾ ಶೇಖರಣೆಯಾಗುವುದು ತಪ್ಪುವುದು. ಪದರಗಳಿಂದಾಗಿ ನಿರ್ಮಾಣವಾಗುವ ದಂತಕುಳಿಯನ್ನು ತಡೆಯುವುದು. ಬಾಯಿಯ ಸಮಸ್ಯೆಯನ್ನು ನಿವಾರಣೆ ಮಾಡಲು ರಾತ್ರಿ ಮಲಗುವ ಮೊದಲು ಹಲ್ಲುಜ್ಜುವುದನ್ನು ಮರೆಯಬೇಡಿ.

ಒಸಡಿನ ರೋಗಗಳ ಅಪಾಯವಿರಲ್ಲ

ಒಸಡಿನ ರೋಗಗಳ ಅಪಾಯವಿರಲ್ಲ

ದಿನದಲ್ಲಿ ಎರಡು ಸಲ ಹಲ್ಲುಜ್ಜುವುದರಿಂದ ಬಾಯಿಯ ಆರೋಗ್ಯವನ್ನು ಸುಧಾರಿಸುವುದರೊಂದಿಗೆ ಒಸಡು ಮತ್ತು ಹಲ್ಲಿನ ಸಮಸ್ಯೆಗಳನ್ನು ನಿವಾರಣೆ ಮಾಡುವುದು.

ಒಸಡಿನ ರೋಗಗಳ ಅಪಾಯವಿರಲ್ಲ

ಒಸಡಿನ ರೋಗಗಳ ಅಪಾಯವಿರಲ್ಲ

ರಾತ್ರಿ ವೇಳೆ ಹಲ್ಲುಜ್ಜದೆ ಇದ್ದಾಗ ಹಲ್ಲುಗಳಲ್ಲಿ ಆಹಾರದ ಕಣಗಳು ತುಂಬಿಕೊಂಡು ಟಾರ್ಟರ್ ನಿರ್ಮಾಣ ಮಾಡುತ್ತದೆ. ಇದರಿಂದ ಒಸಡುಗಳಲ್ಲಿ ಉರಿಯೂತ ಮತ್ತು ರಕ್ತಸ್ರಾವ ಕಾಣಿಸಿಕೊಳ್ಳುವುದು.

ಬಾಯಿ ವಾಸನೆ ನಿವಾರಣೆ

ಬಾಯಿ ವಾಸನೆ ನಿವಾರಣೆ

ಬೆಳಿಗ್ಗೆ ಎದ್ದ ಕೂಡಲೇ ಬಾಯಿಯು ದುರ್ವಾಸನೆ ಬೀರಲು ಕಾರಣ ರಾತ್ರಿ ಹಲ್ಲುಜ್ಜದೆ ಇರುವುದು. ಹಲ್ಲುಗಳ ಸಂಧಿನಲ್ಲಿರುವ ಆಹಾರದ ಕಣಗಳಲ್ಲಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗಿ ಅದು ಬಿಡುಗಡೆ ಮಾಡುವ ರಾಸಾಯನಿಕದಿಂದ ವಾಸನೆ ಬರುತ್ತದೆ. ಬಾಯಿಯ ಕೆಟ್ಟ ವಾಸನೆ ನಮಗೆ ಮುಜುಗರ ಉಂಟು ಮಾಡುವುದು. ಬಾಯಿ ದುರ್ವಾಸನೆ ತಡೆಗೆ, ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ತೂಕ ಕಳೆದುಕೊಳ್ಳಲು ಸಹಕಾರಿ

ತೂಕ ಕಳೆದುಕೊಳ್ಳಲು ಸಹಕಾರಿ

ರಾತ್ರಿ ಮಲಗುವ ಮುನ್ನ ಹಲ್ಲುಜ್ಜುದರಿಂದ ಹುಮ್ಮಸ್ಸು ಬರುವುದು ಮತ್ತು ತಡರಾತ್ರಿ ಮತ್ತೆ ಏನಾದರೂ ತಿನ್ನುವುದರಿಂದ ತಡೆಯುತ್ತದೆ. ಕ್ಯಾಲೋರಿ ಸೇವನೆ ಕಡಿಮೆಯಾದರೆ ಅದರಿಂದ ತೂಕ ಕಳೆದುಕೊಳ್ಳಲು ನೆರವಾಗುವುದು.

ಹೃದಯದ ರಕ್ಷಣೆ

ಹೃದಯದ ರಕ್ಷಣೆ

ಬಾಯಿಯ ಆರೋಗ್ಯವು ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರಬಲ್ಲದು. ಟಾರ್ಟರ್ ಮತ್ತು ಪದರಗಳಿಗೆ ಕಾರಣವಾಗುವಂತಹ ಬ್ಯಾಕ್ಟೀರಿಯಾಗಳು ರಕ್ತನಾಳಗಳನ್ನು ಸೇರಿಕೊಂಡು ಹೃದಯದಲ್ಲಿನ ರಕ್ತನಾಳಗಳಲ್ಲಿ ತಡೆ ಉಂಟು ಮಾಡಬಹುದು.

ಹೃದಯದ ರಕ್ಷಣೆ

ಹೃದಯದ ರಕ್ಷಣೆ

ಇದರಿಂದ ಹೃದಯದೊಳಗೆ ರಕ್ತಸ್ರಾವವಾಗಿ ಅಪಧಮನಿಗಳು ಛಿದ್ರವಾಗುವಂತೆ ಮಾಡಿ ಹೃದಯದ ಸಮಸ್ಯೆಗೆ ಕಾರಣವಾಗಬಹುದು. ನೆನಪಿಡಿ: ಪುಟ್ಟ ಹೃದಯದ ಆರೋಗ್ಯವನ್ನು ಕಡೆಗಣಿಸದಿರಿ!

English summary

Reasons you should brush your teeth before going to bed

Most of us brush our teeth early in the morning but how many of us brush at night? If you're like me, it is very likely that you feel lazy at night and skip brushing or often replace brushing with chewing gums, mints or mouthwashes. Here are a few reasons why you need to change your habit and brush your teeth twice a day.
Story first published: Tuesday, September 20, 2016, 20:04 [IST]
X
Desktop Bottom Promotion