Latest Updates
-
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು
ಸಡನ್ ಆಗಿ ಕಾಡುವ 'ತಲೆ ಸುತ್ತು' ಸಮಸ್ಯೆ! ಏನಿದಕ್ಕೆ ಕಾರಣ?
ತಲೆ ಸುತ್ತು, ತಲೆ ತಿರುಗುವುದು, ತಲೆ ಚಕ್ಕರ್, ಇತ್ಯಾದಿ ಪದಗಳನ್ನು ಜನರು ತಮ್ಮ ಸಂಕಟ ಹೇಳಿಕೊಳ್ಳಲು ಬಳಸುತ್ತಿರುವುದನ್ನು ನಾವು ನೋಡುತ್ತಿರುತ್ತೇವೆ. ಈ ಸಮಸ್ಯೆಯು ನಮ್ಮ ದೇಹದಲ್ಲಿ ನಡೆಯುವ ಹಾರ್ಮೋನ್‌ಗಳ ಬದಲಾವಣೆಗಳಿಂದ ಮತ್ತು ರಕ್ತದ ಒತ್ತಡದಲ್ಲಿ ಉಂಟಾಗುವ ಕುಸಿತದಿಂದ ಕಂಡು ಬರುತ್ತದೆ.
ತಲೆ ತಿರುಗುವಿಕೆಯ ಜೊತೆಗೆ ದೃಷ್ಟಿ ಮಂದವಾಗುವಿಕೆ, ಶ್ರವಣ ಶಕ್ತಿಯು ಕುಂಠಿತವಾಗುವಿಕೆ, ಮಾತನಾಡಲು ಕಷ್ಟವಾಗುವಿಕೆ ಮತ್ತು ಎದೆ ಬಡಿತ ಏರು ಪೇರಾಗುವುದು ಕಂಡು ಬರುತ್ತದೆ. ಕೆಲವೊಂದು ಅಲರ್ಜಿಗಳು ಕಿವಿಯ ಒಳ ಭಾಗದಲ್ಲಿ ಏರು ಪೇರು ಮಾಡಿ ಸಮತೋಲವನ್ನು ತಪ್ಪಿಸಿ, ತಲೆ ಸುತ್ತುವಿಕೆಯನ್ನುಂಟು ಮಾಡುತ್ತವೆ.

ವರ್ಟಿಗೊದ ಸಾಮಾನ್ಯ ಸೂಚನೆಗಳೆಂದರೆ ತಲೆ ತಿರುಗುವುದು, ತೂರಾಡುವುದು ಮತ್ತು ಪ್ರಜ್ಞಾ ಶೂನ್ಯತೆಗಳಾಗಿರುತ್ತವೆ. ರಕ್ತದೊತ್ತಡವು ಕಡಿಮೆಯಾಗುವುದು ತಲೆ ತಿರುಗುವುದು ಮತ್ತು ಮೂರ್ಚೆ ಹೋಗುವುದಕ್ಕೆ ಇದು ಸಾಮಾನ್ಯವಾಗಿ ಊಟ ತಿಂದ ತಕ್ಷಣ ಬೇಗ ಸರಿ ಹೋಗುತ್ತದೆ. ಭಾರ ಎತ್ತುವಿಕೆ ಮತ್ತು ಆಯಾಸವನ್ನುಂಟು ಮಾಡುವ ಕೆಲಸಗಳು ತಲೆ ತಿರುಗುವಿಕೆಗೆ ಕಾರಣವಾಗುತ್ತದೆ. ತಲೆ ನೋವಿಗೆ ತಕ್ಷಣದ ಪರಿಹಾರ ಎಲ್ಲಿದೆ?
ಆಂಟಿಬಯೋಟಿಕ್‌ಗಳು ಸಹ ತಲೆ ತಿರುಗುವಿಕೆಗೆ ಕಾರಣವಾಗುತ್ತದೆ. ಯಾವುದೇ ಔಷಧವನ್ನು ತೆಗೆದುಕೊಳ್ಳುವ ಮೊದಲು ಅದರ ಅಡ್ಡ ಪರಿಣಾಮಗಳ ಕುರಿತು ಸಹ ತಿಳಿದುಕೊಳ್ಳುವುದು ಒಳ್ಳೆಯದು. ಅನಿಮಿಯಾ ಎಂಬುದು ರಕ್ತ ಹೀನತೆಯ ಗಂಭೀರ ಸಮಸ್ಯೆಯಾಗಿರುತ್ತದೆ. ಇದು ಪೋಷಕಾಂಶಗಳ ಕೊರತೆಯಿಂದ ಕಂಡು ಬರುವ ಸಮಸ್ಯೆಯಾಗಿರುತ್ತದೆ. ಈ ಸಮಸ್ಸೆಯಲ್ಲಿ ದೇಹದಲ್ಲಿ ಕೆಂಪು ರಕ್ತ ಕಣಗಳು ಕಡಿಮೆ ಇರುತ್ತವೆ ಮತ್ತು ಇವು ದೇಹದ ಸಮತೋಲನವನ್ನು ತಪ್ಪಿಸುತ್ತವೆ.
ನಿರ್ಜಲೀಕರಣ ಸಹ ತಲೆ ತಿರುಗುವಿಕೆಗೆ ಕಾರಣವಾಗುತ್ತದೆ. ಆದ್ದರಿಂದ ನೀವು ಬಿಸಿಲಿನಲ್ಲಿ ಎಲ್ಲೇ ಹೋಗುವುದಿದ್ದರೂ ಒಂದು ಬಾಟಲಿಯಲ್ಲಿ ನೀರು ತೆಗೆದುಕೊಂಡು ಹೋಗಿ. ಯಾವಾಗಲು ಅಗತ್ಯ ಪ್ರಮಾಣದಷ್ಟು ನೀರನ್ನು ಸೇವಿಸುತ್ತಾ ಇರಿ. ಕೆಲಸ ಮಾಡುವಾಗ ಬಿಡುವು ಮಾಡಿಕೊಂಡು ನೀರು ಕುಡಿಯಿರಿ. ಜೊತೆಗೆ ಆರೋಗ್ಯಕರವಾದ ಜೀವನ ಶೈಲಿಯನ್ನು ಅನುಸರಿಸಿ. ಆರೋಗ್ಯಕ್ಕಾಗಿ 10 ಮುಖ್ಯ ಮನೆ ಔಷಧಿ
ಇನ್ನೂ ಕೆಲವೊಮ್ಮೆ ಏರು ಪೇರಿನಿಂದ ಕೂಡಿದ ಎದೆ ಬಡಿತದ ಕಾರಣದಿಂದಾಗಿ ಸಹ ತಲೆ ತಿರುಗುವಿಕೆ ಕಾಣಿಸಿಕೊಳ್ಳುತ್ತದೆ. ಇದರಿಂದ ಮೆದುಳಿಗೆ ರಕ್ತ ಸರಬರಾಜು ಕಡಿಮೆಯಾಗುತ್ತದೆ. ಇದರಿಂದ ಹೃದಯಾಘಾತವಾಗಿ ಅದರಿಂದ ಸಾವು ಸಹ ಸಂಭವಿಸಬಹುದು. ಒಂದು ವೇಳೆ ನಿಮಗೆ ಹೃದಯದ ನಾಳಗಳ ಸಮಸ್ಯೆಯಿದ್ದಲ್ಲಿ, ಅದರಿಂದ ಸಹ ರಕ್ತ ಸಂಚಾರದ ಮೇಲೆ ಪರಿಣಾಮ ಉಂಟಾಗಿ, ತಲೆ ತಿರುಗುವಿಕೆ ಕಾಣಿಸಿಕೊಳ್ಳಬಹುದು.
ಈ ತಲೆ ಸುತ್ತುವಿಕೆಯು ವರ್ಟಿಗೊದಿಂದ ಬರುತ್ತದೆ. ವರ್ಟಿಗೊ ಎಂಬುದು ನಮಗೆ ನಮ್ಮ ಸುತ್ತಲಿನ ಪರಿಸರವು ಸುತ್ತಿದ ಹಾಗೆ ಅನುಭವವನ್ನುಂಟು ಮಾಡುವ ಸ್ಥಿತಿಯಾಗಿರುತ್ತದೆ. ಆದರೂ ಇದು ತುಂಬಾ ಹೊತ್ತು ಇರುವುದಿಲ್ಲ. ಮಧ್ಯ ವಯಸ್ಸಿನ ಹೆಂಗಸರಲ್ಲಿ ಈ ಸಮಸ್ಯೆಯು ಹೆಚ್ಚಾಗಿರುತ್ತದೆ. ಇದಕ್ಕೆ ಅವರ ದೇಹದಲ್ಲಿ ಉಂಟಾಗುವ ಹಾರ್ಮೋನ್‌ಗಳ ಅಸಮತೋಲನ ಮತ್ತು ಮುಟ್ಟು ನಿಲ್ಲುವ ಪ್ರಕ್ರಿಯೆಯೆ ಕಾರಣವಾಗಿರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


