Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆರೋಗ್ಯಕ್ಕಾಗಿ 10 ಮುಖ್ಯ ಮನೆ ಔಷಧಿ

ಆದರೆ ಈ ರೀತಿಯ ಅಭ್ಯಾಸಕ್ಕಿಂತ ಸಣ್ಣ ಪುಟ್ಟ ಕಾಯಿಲೆಗಳಿಗೆ ಮನೆ ಮದ್ದು ಬಳಸುವುದು ಒಳ್ಳೆಯದು. ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ, ಕಾಯಿಲೆ ಕೂಡ ಗುಣಮುಖವಾಗುವುದು. ಆದ್ದರಿಂದ ಈ ಕೆಳಗಿನ ಸಲಹೆಯು ತುಂಬಾ ಸಹಕಾರಿಯಾಗುವುದು.
1. ನೀರು: ದೇಹದಲ್ಲಿ ನೀರಿನಂಶ ಕಡಿಮೆಯಾದರೆ ತಲೆಸುತ್ತು, ಸುಸ್ತು ಕಂಡು ಬರುತ್ತದೆ, ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಹೃದಯ ಬಡಿತ ಹೆಚ್ಚಾಗುವುದು, ಮೂತ್ರದ ಬಣ್ಣದಲ್ಲಿ ವ್ಯತ್ಯಾಸ, ಕೈ ಕಾಲುಗಳ ಸ್ನಾಯುಗಳಲ್ಲಿ ಸೆಳತ, ತಲೆ ಸುತ್ತು ಕಂಡು ಬರುತ್ತದೆ. ಇದನ್ನೆಲ್ಲಾ ತಡೆಯಲು ಪ್ರತಿದಿನ 8-10 ಲೋಟ ನೀರನ್ನು ಕಡ್ಡಾಯವಾಗಿ ಕುಡಿಯಬೇಕು.
2. ಕ್ಲಬ್ ಸೋಡಾ: ಈ ಸೋಡಾ ಬಳಸಿದರೆ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ (dehydration) ಅಥವಾ ಹೊಟ್ಟೆ ಕೆಟ್ಟಾಗ ಇದನ್ನು ನೀರಿನಲ್ಲಿ ಕಲೆಸಿ ಕುಡಿದರೆ ಒಳ್ಳೆಯದು.
3. ಚಾಕಲೇಟ್ ಮಿಲ್ಕ್: ಚಾಕಲೇಟ್ ಮಿಲ್ಕ್ ಕುಡಿದರೆ ಸುಸ್ತು ನಿವಾರಣೆಯಾಗುತ್ತದೆ, ಆದ್ದರಿಂದ ಇದನ್ನು ಎನರ್ಜಿ ಡ್ರಿಂಕ್ ಆಗಿ ಉಪಯೋಗಿಸಬಹುದು.
4. ಜೇನು: ಮನೆ ಅಂದ ಮೇಲೆ ಜೇನು ಇಡುವುದು ಅವಶ್ಯಕ. ಜೇನನ್ನು ಅನೇಕ ಕಾಯಿಲೆಗಳನ್ನು ಗುಣಪಡಿಸಲು ಉಪಯೋಗಿಸಬಹುದು. ಅಜೀರ್ಣ, ಬೇಧಿ ಉಂಟಾದಾಗ ಹರಿವೆ ಸೊಪ್ಪಿನ ರಸಕ್ಕೆ ಚಿಟಿಕೆ ಏಲಕ್ಕಿ ಪುಡಿ ಮತ್ತು ಜೇನು ಬೆರೆಸಿ ಕುಡಿಯುವುದರಿಂದ ಬೇಧಿ ಕಡಿಮೆಯಾಗುತ್ತದೆ, ಇದನ್ನು ಮಕ್ಕಳಿಗೂ ಕೊಡಬಹುದಾಗಿದೆ. ಕೆಮ್ಮು ಕಾಣಿಸಿಕೊಂಡಾಗ ಜೇನಿಗೆ ಸ್ವಲ್ಪ ಕಾಳು ಮೆಣಸಿನ ಪುಡಿ ಮತ್ತು ತುಳಸಿ ರಸ ಸೇರಿಸಿ ಕುಡಿದರೆ ಗಂಟಲು ಕೆರತ, ಕೆಮ್ಮು ನಿವಾರಣೆಯಾಗುವುದು.
5. ಆಪಲ್ ಸೈಡರ್ ವಿನಿಗರ್: ಕೆಲವೊಮ್ಮೆ ಹೊಟ್ಟೆಯಲ್ಲಿ ಗ್ಯಾಸ್ ತುಂಬಿದಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಅಗ 2 ಚಮಚ ಆಪಲ್ ಸೈಡರ್ ವಿನಿಗರ್ ಅನ್ನು ಒಂದು ಲೋಟ ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ನೋವು ಕಡಿಮೆಯಾಗುವುದು. ದೇಹದಲ್ಲಿ ನಿಶ್ಯಕ್ತಿ ಉಂಟಾದಾಗ ಕೂಡ ಈ ರೀತಿ ಕುಡಿದರೆ ಶಕ್ತಿ ದೊರೆಯುತ್ತದೆ.
6. ನಿಂಬೆ ರಸ: ಪ್ರತಿದಿನ ನಿಂಬೆ ಪಾನಕ ಕುಡಿದರೆ ಅಸಿಡಿಟಿ ಸಮಸ್ಯೆ ಉಂಟಾಗುವುದಿಲ್ಲ. ನಿಂಬೆ ಪಾನಕವು ದೇಹದಲ್ಲಿ ರಕ್ತ ಸಂಚಾರ ಸರಿಯಾದ ರೀತಿಯಲ್ಲಿ ನಡೆಯಲು ಸಹಾಯಮಾಡುವುದು.
7. ಚಕ್ಕೆ: ಪ್ರತಿದಿನ ಅರ್ಧ ಚಮಚದಷ್ಟು ಚಕ್ಕೆ ತಿನ್ನುತ್ತಾ ಬಂದರೆ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್(ಬೊಜ್ಜು) ಕಡಿಮೆಯಾಗುವುದು. ಇದು ಮಧುಮೇಹ, ಮಂಡಿ ನೋವು, ಲುಕೆಮಿಯಾ ಮುಂತಾದ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ.
8. ಶುಂಠಿ: ಕೆಮ್ಮು ಕಫ ಸಮಸ್ಯೆ ಇದ್ದರೆ ಶುಂಠಿ ಕಷಾಯ ಮಾಡಿ ಕುಡಿದರೆ ಒಳ್ಳೆಯದು. ಶುಂಠಿ ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯಾಗಿದೆ. ದೇಹದಲ್ಲಿ ಜೀರ್ಣಶಕ್ತಿ ಕುಂದಿದಾಗ, ಅಮದೋಷದಿಂದ ವಾಯುನೋವು ಉಂಟಾಗುವುದು. ಇದನ್ನು ಹೋಗಲಾಡಿಸಲು ಶುಂಠಿ ತಿಂದರೆ ಪಚನಕ್ರಿಯೆ ಸರಿಯಾಗಿ ಆಗುವುದರಿಂದ ನೋವು ನಿವಾರಣೆಯಾಗುವುದು.
9. ಬೆಳ್ಳುಳ್ಳಿ: ಆರೋಗ್ಯ ಹೆಚ್ಚಿಸುವಲ್ಲಿ ಬೆಳ್ಳುಳ್ಳಿ ಪಾತ್ರವನ್ನು ನಿರಾಕರಿಸುವಂತೆ ಇಲ್ಲ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ರಕ್ತವನ್ನು ಶುದ್ಧೀಕರಿಸುತ್ತದೆ. ಇದನ್ನು ಹಸಿಯಾಗಿ ಬೆಳಗ್ಗೆ ತಿಂದರೆ ದೇಹದಲ್ಲಿರುವ ಅಧಿಕ ಬೊಜ್ಜು ಕಡಿಮೆಯಾಗುವುದು.
10. ಹೈಡ್ರೋಜನ್ ಪೆರಾಕ್ಸೈಡ್: ಅಲರ್ಜಿಯಿಂದ ತಲೆನೋವು ಉಂಟಾಗಿದ್ದರೆ , ಗಂಟಲಿನಲ್ಲಿ ಕೆರತ, ಮುಟ್ಟಿನ ತೊಂದರೆ ಈ ಸಮಸ್ಯೆಗಳ ನಿವಾರಣೆಗೆ ಹೈಡ್ರೋಜನ್ ಪರಾಕ್ಸೈಡ್ ತುಂಬಾ ಸಹಕಾರಿಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
