Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ತಲೆ ನೋವಿಗೆ ತಕ್ಷಣದ ಪರಿಹಾರ ಎಲ್ಲಿದೆ?

ಮಾತ್ರೆ ನುಂಗುವುದು ಹಲವು ಅಡ್ಡ ಪರಿಣಾಮಗಳಿಗೆ ದಾರಿ ಮಾಡಿಕೊಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೂ ಬೇರೆ ವಿಧಿಯಿಲ್ಲದೆ ಮಾತ್ರೆಗಳನ್ನು ನುಂಗುವುದು ರೂಢಿ. ಅದಕ್ಕೆಂದೇ ತಲೆ ನೋವಿಗೆ ಇಲ್ಲಿ ಕೆಲವು ನೈಸರ್ಗಿಕ ಟಿಪ್ಸ್ ಗಳನ್ನು ನೀಡಲಾಗಿದೆ.
ತಲೆ ನೋವಿಗೆ ನೈಸರ್ಗಿಕ ಮಾರ್ಗ ಏಕೆ ಅನುಸರಿಸಬೇಕು?
* ನೈಸರ್ಗಿಕ ವಿಧಾನವನ್ನು ಅನುಸರಿಸುವುದರಿಂದ ದೇಹದಲ್ಲಿ ಕೆಮಿಕಲ್ ಉಳಿದುಕೊಳ್ಳುವುದಿಲ್ಲ. ಅಂದರೆ ಪ್ಯಾರಾಸೆಟಮೊಲ್ ಅಥವಾ ಆಸ್ಪಿರಿನ್ ಅಂಶ ಉಳಿಯುವುದಿಲ್ಲ. ಇದರಿಂದ ಅಡ್ಡ ಪರಿಣಾಮವೂ ಉಂಟಾಗುವುದಿಲ್ಲ.
* ತುಂಬಾ ಸುಲಭವಾಗಿ ಅನುಸರಿಸಬಹುದಾದ ಈ ವಿಧಾನದಿಂದ ಬೇಗನೆ ನೋವಿಗೆ ಉಪಶಮನ ಕಂಡುಕೊಳ್ಳಬಹುದು.
ತಲೆ ನೋವಿಗೆ ಮನೆ ಔಷಧಿ ಯಾವುದು?
* ಮಸಾಲಾ ಟೀ ಕುಡಿಯಿರಿ: ತಲೆ ನೋವು ಕಾಣಿಸಿಕೊಂಡ ತಕ್ಷಣ ಮಸಾಲಾ ಟೀ ಸೇವಿಸಿದರೆ ರಿಲ್ಯಾಕ್ಸ್ ಆಗುತ್ತದೆ. ಮಸಾಲೆ ಟೀ ತಲೆ ನೋವು ಹೋಗಿಸುವಲ್ಲಿ ಹೆಚ್ಚು ಪರಿಣಾಮಕಾರಿ. ಇದು ಮೆದುಳಿನ ನರವನ್ನು ಚುರುಕುಗೊಳಿಸಿ ನೋವನ್ನು ಹೋಗಲಾಡಿಸುತ್ತದೆ. ಟೀನಲ್ಲಿ ಶುಂಠಿ, ಲವಂಗ ಮತ್ತು ಏಲಕ್ಕಿ ಇರಬೇಕು. ಆದರೆ ಟೀ ಕುಡಿಯುವುದನ್ನೇ ಚಟ ಮಾಡಿಕೊಂಡು ಟೀ ಸಿಗದಿದ್ದ ಪಕ್ಷದಲ್ಲಿ ತಲೆ ನೋವು ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಈ ಸಲಹೆ ಅನ್ವಯಿಸುವುದಿಲ್ಲ.
* ಬಿಸಿ ಎಣ್ಣೆ ಮಸಾಜ್: ಅತಿಯಾದ ಒತ್ತಡದಿಂದ ತಲೆ ನೋವು ಉಂಟಾಗಿದ್ದರೆ ಎಣ್ಣೆ ಮಸಾಜ್ ಗಿಂತ ಬೇರೆ ಪರಿಹಾರವಿಲ್ಲ. ಯಾವುದಾದರೂ ಗಿಡಮೂಲಿಕೆಯ ಎಣ್ಣೆಯನ್ನು (ನೀಲಗಿರಿ ಎಣ್ಣೆ) ಬೆಚ್ಚಗೆ ಮಾಡಿ ಬೆರಳಿನ ಸಹಾಯದಿಂದ ತಲೆಯ ಮೇಲೆ ಮೆತ್ತಗೆ ವೃತ್ತಾಕಾರವಾಗಿ ಮಸಾಜ್ ಮಾಡಿಕೊಳ್ಳಬೇಕು. ನೋವು ಹೆಚ್ಚಿರುವ ಜಾಗಕ್ಕೆ ಹೆಚ್ಚು ಒತ್ತಡ ಹೇರಿ ಮಸಾಜ್ ಮಾಡಿಕೊಂಡರೆ ನೋವು ಉಪಶಮನಗೊಳ್ಳುತ್ತದೆ.
* ಬಿಸಿ ನೀರಿನೊಂದಿಗೆ ನಿಂಬೆರಸ: ಮದ್ಯ ಕುಡಿದು ನಿಶೆ ಇಳಿದಿರದಿದ್ದರೂ ತಲೆ ನೋವು ಬರುತ್ತದೆ. ಅಂತಹ ಸಮಯದಲ್ಲಿ ಈ ವಿಧಾನವನ್ನು ಅನುಸರಿಸಬೇಕು. ಅಂದರೆ ಒಂದು ಗ್ಲಾಸ್ ಬಿಸಿ ನೀರಿನಲ್ಲಿ ನಿಂಬೆರಸ ಹಿಂಡಿ ಸ್ವಲ್ಪ ಸಕ್ಕರೆ ಮತ್ತು ಉಪ್ಪನ್ನು ಬೆರೆಸಿ ಚೆನ್ನಾಗಿ ತಿರುಗಿಸಿ ಕುಡಿಯಬೇಕು. ಇದನ್ನು ಸ್ವಲ್ಪ ಸಮಯದ ಅಂತರದಲ್ಲಿ ಸುಮಾರು 3 ಬಾರಿ ಕುಡಿದರೆ ತಲೆ ನೋವು ಮತ್ತು ತಲೆ ಸುತ್ತು ಕಡಿಮೆಯಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
