Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದಿನನಿತ್ಯ ಮೂರು ಬಾಳೆಹಣ್ಣು ಸೇವಿಸಿ, ವೈದ್ಯರನ್ನು ದೂರವಿರಿಸಿ
ಸಾಮಾನ್ಯವಾಗಿ ಎಲ್ಲಾ ಕಾಲದಲ್ಲಿಯೂ, ಎಲ್ಲೆಡೆಯೂ, ಅಗ್ಗವಾಗಿ ಸಿಗುವ ಹಣ್ಣು ಎಂದರೆ ಬಾಳೆಹಣ್ಣು. ಹೆಚ್ಚು ಕಾಲ ಇಡಲು ಸಾಧ್ಯವಿಲ್ಲ ಎಂಬ ಒಂದೇ ಅವಗುಣ ಬಿಟ್ಟರೆ ಬೇರೆಲ್ಲವೂ ಸದ್ಗುಣಗಳೇ. ಇದಕ್ಕೂ ನೇಂದ್ರಬಾಳೆ, ಪುಟ್ಟಬಾಳೆಗಳಂತಹವು ಅಪವಾದವಾಗಿವೆ. ಇವನ್ನು ಹೆಚ್ಚು ಕಾಲ ಸಂಗ್ರಹಿಸಿಡಬಹುದು. ಆದರೆ ಪಚ್ಚಬಾಳೆ ಮೊದಲಾದವುಗಳನ್ನು ಹೆಚ್ಚು ಕಾಲ ಸಂಗ್ರಹಿಸಿಡಲು ಸಾಧ್ಯವಿಲ್ಲ. ನಿತ್ಯವೂ ಬಾಳೆಹಣ್ಣನ್ನು ಸೇವಿಸುವುದರಿಂದ ಹಲವು ಆರೋಗ್ಯಕರ ಪ್ರಯೋಜನಗಳಿವೆ. ಬಾಳೆ ಹಣ್ಣಿನ ಸಿಪ್ಪೆಯ 10 ಅದ್ಭುತ ಪ್ರಯೋಜನಗಳು
ಮಲಬದ್ಧತೆಯಿಂದ ಕಾಪಾಡುವುದು, ಹೊಟ್ಟೆಯುರಿ, ಅಜೀರ್ಣ ಮೊದಲಾದವುಗಳಿಂದ ರಕ್ಷಿಸುವುದು ನೇರಪ್ರಯೋಜನಗಳಾದರೆ ಹೃದಯದ ತೊಂದರೆಗಳಿಂದ ರಕ್ಷಿಸುವುದು ಮಹಿಳೆಯರಿಗೆ ಮಾಸಿಕ ತೊಂದರೆಗಳಿಂದ ಉಪಶಮನ ನೀಡುವುದು ಮೊದಲಾದವು ನಿತ್ಯವೂ ಸೇವಿಸುವುದರ ದೀರ್ಘಕಾಲಿಕ ಪ್ರಯೋಜನಗಳಾಗಿವೆ. ಬಾಳೆಹಣ್ಣಿನಲ್ಲಿರುವ ಸಕ್ಕರೆ ತಕ್ಷಣವೇ ರಕ್ತಕ್ಕೆ ಸಿಗುವ ಕಾರಣ ಹೆಚ್ಚಿನ ದೈಹಿಕ ಚಟುವಟಿಕೆಯ ಅವಶ್ಯಕತೆ ಇದ್ದಾಗ ಸೇವಿಸಲು ಸೂಕ್ತವಾದ ಆಹಾರವಾಗಿದೆ. ಅಲ್ಲದೇ ಇದರಲ್ಲಿರುವ ಕೆಲವು ಪೋಷಕಾಂಶಗಳು ರಕ್ತದ ಮೂಲಕ ಮೆದುಳಿಗೆ ತಲುಪಿದಾಗ ಮನಸ್ಸಿಗೆ ನಿರಾಳವೆನಿಸುವ ಕೆಲವು ರಸದೂತಗಳನ್ನು ತಲುಪಿಸುವ ಕಾರಣ ಮನಸ್ಸು ದುಗುಡದಿಂದ ಹೊರಬರಲು ಸಾಧ್ಯವಾಗುತ್ತದೆ.
ಅಲ್ಲದೇ ಕ್ರೀಡಾಪಟುಗಳಿಗೆ ಅಗತ್ಯವಿರುವ ತಕ್ಷಣದ ನರಪ್ರಚೋದನೆಯ ಶಕ್ತಿ (reflex system) ನೀಡಲು ಬಾಳೆಹಣ್ಣು ಅತ್ಯುತ್ತಮವಾದುದರಿಂದ ಹೆಚ್ಚಿನ ಕ್ರೀಡಾಪಟುಗಳು ಮತ್ತು ವ್ಯಾಯಾಮ ಮಾಡುವವರು ಬಾಳೆಹಣ್ಣುಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಇದು ಸ್ಥೂಲಕಾಯವನ್ನು ಹೆಚ್ಚಿಸದ ಕಾರಣ ಯಾವುದೇ ವಯಸ್ಸಿನವರು ತೂಕ ಹೆಚ್ಚುವ ಭಯವಿಲ್ಲದೇ ಸೇವಿಸಬಹುದಾಗಿದೆ. ದಿನಕ್ಕೊಂದು ಸೇಬು ತಿಂದು ವೈದ್ಯರನ್ನು ದೂರವಿಡುವಂತೆಯೇ ದಿನಕ್ಕೆ ಮೂರು ಬಾಳೆಹಣ್ಣುಗಳನ್ನು ತಿಂದೂ ವೈದ್ಯರನ್ನು ದೂರವಿಡಬಹುದು ಎಂದು ಇತ್ತೀಚಿನ ಸಮೀಕ್ಷೆಗಳು ತಿಳಿಸುತ್ತವೆ. ಆದರೆ ಇದನ್ನು ಪರಾಮರ್ಶಿಸುವ ಮುನ್ನ ನಿಮ್ಮ ಕುಟುಂಬ ವೈದ್ಯರನ್ನು ಸಮಾಲೋಚಿಸಿದ ಬಳಿಕವೇ ಮುಂದುವರೆಯುವುದು ಕ್ಷೇಮ. ಬನ್ನಿ, ಈ ವಿಧಾನದ ಸಾಧಕ ಬಾಧಕಗಳನ್ನು ಮುಂದೆ ಓದಿ...

ಮನೋಭಾವ ಪ್ರಫುಲ್ಲವಾಗುವುದು
ಬಾಳೆಹಣ್ಣಿನಲ್ಲಿ ಟ್ರಿಪ್ಟೋಫಾನ್ (Tryptophan) ಎಂಬ ಪೋಷಕಾಂಶವಿದೆ. ಇದು ಮೆದುಳಿನಲ್ಲಿ ಸೆರೋಟೋನಿನ್ ಎಂಬ ರಾಸಾಯನಿಕವಾಗಿ ಪರಿವರ್ತಿತವಾಗುತ್ತದೆ. ಇದರಿಂದ ಮೆದುಳಿನಲ್ಲಿ ಆಗುವ ಚಟುವಟಿಕೆಗಳನ್ನು ನಿಯಂತ್ರಿಸಿ ದುಗುಡದಿಂದ ಹೊರಬರಲು ಸಾಧ್ಯವಾಗುತ್ತದೆ. ಆದ್ದರಿಂದ ಖಿನ್ನತೆ, ದುಗುಡ ಚಿಂತೆಗಳಿದ್ದಾಗ ಬಾಳೆಹಣ್ಣಿನ ಸೇವನೆ ಉತ್ತಮವಾಗಿದೆ.

ರಕ್ತದೊತ್ತಡವನ್ನು ನಿಯಂತ್ರಿಸುವುದು
ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಸಂತುಲಿತ ಪ್ರಮಾಣದಲ್ಲಿದ್ದು ದಿನಕ್ಕೆ ಮೂರು ಬಾಳೆಹಣ್ಣುಗಳನ್ನು ತಿನ್ನುವ ಮೂಲಕ (ವೈದ್ಯರ ಅಪ್ಪಣೆ ಮೇರೆಗೆ) ರಕ್ತದ ಒತ್ತಡ ಸಮತೋಲನದಲ್ಲಿರಲು ಸಾಧ್ಯವಾಗುತ್ತದೆ.

ಮದ್ಯಪಾನದ ಅಮಲು ಇಳಿಸುತ್ತದೆ
ಮದ್ಯಪಾನದ ಬಳಿಕ ಏರಿದ ಮತ್ತು ಇಳಿದ ಬಳಿಕವೂ ಕಾಡುವ ಜೊಂಪುತನವನ್ನು ನಿವಾರಿಸಲು ಕೆಲವು ಬಾಳೆಹಣ್ಣುಗಳನ್ನು ತಿನ್ನುವುದು ಉತ್ತಮ. ಒಂದು ವೇಳೆ ರಾತ್ರಿ ಬಹಳ ಹೊತ್ತಿನವರೆಗೆ ಎಚ್ಚರಿದ್ದು ಬೆಳಿಗ್ಗೆ ಜೊಂಪು ಹಿಡಿದಾಗಲೂ ಬಾಳೆಹಣ್ಣು ಉತ್ತಮ ಆಹಾರವಾಗಿದೆ.

ಧೂಮಪಾನ ಬಿಡಲು
ಧೂಮಪಾನಿಗಳು ಈ ಚಟದಿಂದ ಹೊರಬರಲು ಚ್ಯೂಯಿಂಗ್ ಗಮ್ ಮೊದಲಾದ ವಿಧಾನವನ್ನು ಅನುಸರಿಸುತ್ತಾರೆ. ಆದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ ಪ್ರತಿ ಬಾರಿ ಧೂಮಪಾನ ಮಾಡಲು ಮನಸ್ಸಾದಾಗಲೆಲ್ಲಾ ಒಂದು ಬಾಳೆಹಣ್ಣನ್ನು ತಿಂದರೆ ಆ ಬಯಕೆ ದೂರವಾಗಿ ನಿಜವಾಗಿಯೂ ಧೂಮಪಾನದ ಚಟದಿಂದ ಹೊರಬರಬಹುದು.

ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಕಡಿಮೆಯಾಗುತ್ತದೆ
ದಿನಕ್ಕೆ ಮೂರು ಬಾಳೆಹಣ್ಣುಗಳನ್ನು ತಿನ್ನುವ ಮೂಲಕ ದೇಹದಲ್ಲಿ, ಅದರಲ್ಲೂ ವಿಶೇಷವಾಗಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವ ಸಂಭವ ಕಡಿಮೆಯಾಗುತ್ತದೆ ತನ್ಮೂಲಕ ಹೃದಯಸ್ತಂಭನ ಮತ್ತು ಮೆದುಳುಸ್ರಾವದ ಸಂಭವವೂ ಕಡಿಮೆಯಾಗುತ್ತದೆ. ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಇದಕ್ಕೆ ನೆರವಾಗುತ್ತದೆ.

ಕಬ್ಬಿಣದ ಕೊರತೆ ನೀಗಿಸುತ್ತದೆ
ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದ ಕಬ್ಬಿಣದ ಅಂಶವೂ ಇರುವ ಕಾರಣ ರಕ್ತದಲ್ಲಿನ ಹೀಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಲು ನೆರವಾಗುತ್ತದೆ. ಇದೇ ಕಾರಣಕ್ಕೆ ಬಾಣಂತಿಯರು ಮತ್ತು ರಕ್ತಹೀನತೆಯಿಂದ ಬಳಲುವವರಿಗೆ ಬಾಳೆಹಣ್ಣು ಉತ್ತಮ ಆಹಾರವಾಗಿದೆ.

ಮಲಬದ್ಧತೆಯಿಂದ ತಡೆಯುತ್ತದೆ
ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇದೆ. ಇದು ಮಲಬದ್ಧತೆಯಿಂದ ಬಳಲುವವರಿಗೆ ಉತ್ತಮ ಆಹಾರವಾಗಿದ್ದು ರಾತ್ರಿ ಊಟದ ಬಳಿಕ ಬಾಳೆಹಣ್ಣು ತಿಂದವರಿಗೆ ಮುಂಜಾನೆಯ ವಿಧಿ ಸುಲಭವಾಗಿ ಆಗುತ್ತದೆ.

ಹೊಟ್ಟೆಯ ಉರಿಯನ್ನು ತಣಿಸುತ್ತದೆ
ಹೊಟ್ಟೆಯ ಹಸಿವನ್ನು ತಣಿಸಲು ಬಾಳೆಹಣ್ಣು ಉತ್ತಮ ಆಹಾರವಾಗಿದ್ದು ಎಲ್ಲೆಡೆ, ಸುಲಭವಾಗಿ ಮತ್ತು ಅಗ್ಗವಾಗಿ ಸಿಗುತ್ತದೆ. ಅಲ್ಲದೇ ಇದರಲ್ಲಿರುವ ಪೋಷಕಾಂಶಗಳು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ತಡೆದು ಹೊಟ್ಟೆಯಲ್ಲಿ ಉಂಟಾಗುವ ಉರಿಯನ್ನು ನಿವಾರಿಸುತ್ತದೆ.

ಮೂಳೆಗಳು ದೃಢಗೊಳ್ಳುತ್ತವೆ
ಇತ್ತೀಚಿನ ಕೆಲವು ಸಂಶೋಧನೆಗಳ ಪ್ರಕಾರ ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಮೂಳೆಗಳನ್ನು ಗಟ್ಟಿಗೊಳಿಸಲು ನೆರವಾಗುತ್ತವೆ. ಅಲ್ಲದೇ ಮೂಳೆಗಳ ಸವೆತವನ್ನೂ ತಡೆಯುತ್ತವೆ.

ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ
ನಮ್ಮ ಜೀರ್ಣರಸದಲ್ಲಿರುವ ಅಂಶಗಳಲ್ಲಿ ಪೆಕ್ಟಿನ್ ಸಹಾ ಒಂದು. ಇದು ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದಲ್ಲಿರುವ ಕಾರಣ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ. ಹೆಚ್ಚುವರಿ ಪೆಕ್ಟಿನ್ ಆಹಾರದಲ್ಲಿನ ವಿಷಕಾರಿ ವಸ್ತುಗಳನ್ನು ಒಡೆದು ತ್ಯಾಜ್ಯರೂಪದಲ್ಲಿ ದೇಹದಿಂದ ಹೊರಹಾಕಲು ಸಹಕಾರಿಯಾಗಿದೆ. ಜೊತೆಗೇ ದೇಹ ಅರಗಿಸಿಕೊಳ್ಳಲಾರದ ಖನಿಜಗಳನ್ನು ನಿವಾರಿಸಲೂ ಬಳಕೆಯಾಗುತ್ತದೆ.

ಆಹಾರದ ಇತರ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ
ಬಾಳೆಹಣ್ಣಿನಲ್ಲಿರುವ ಕರಗುವ ನಾರು ಹೊಟ್ಟೆಯಲ್ಲಿ ಕರಗಿ ಜೀರ್ಣಕ್ರಿಯೆಗೆ ಅವಶ್ಯವಿರುವ ಕೆಲವು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ನೆರವಾಗುತ್ತದೆ. prebiotic ಎಂದು ಕರೆಯಲಾಗುವ ಈ ವಿದ್ಯಮಾನದಿಂದ ಇತರ ಆಹಾರಗಳ ಮೂಲಕ ಲಭ್ಯವಾದ, ಸುಲಭವಾಗಿ ಜೀರ್ಣವಾಗದ ಆಹಾರವನ್ನು ಈ ಬ್ಯಾಕ್ಟೀರಿಯಾಗಳು ಜೀರ್ಣಿಸಲು ನೆರವಾಗುತ್ತದೆ. ಅಲ್ಲದೇ ಜೀರ್ಣಕ್ರಿಯೆಗೆ ನೆರವಾಗುವ ಇತರ ಎಂಜೈಮು(enzymes)ಗಳನ್ನು ಉತ್ಪಾದಿಸುತ್ತದೆ. ಈ ಎಂಜೈಮುಗಳು ಹೆಚ್ಚಿನ ಪ್ರೋಟೀನ್ ಯುಕ್ತ ಆಹಾರ (ಉದಾಹರಣೆಗೆ ಮಾಂಸ) ಗಳನ್ನು ಜೀರ್ಣಿಸಿಕೊಳ್ಳಲು ಅಗತ್ಯವಾಗಿವೆ.

ಆಮಶಂಕೆಯಿಂದ ರಕ್ಷಿಸುತ್ತದೆ
ಆಮಶಂಕೆಯಾಗಿ ನಿತ್ರಾಣತೆ ಎದುರಾಗಿದ್ದಾಗ ಬಾಳೆಹಣ್ಣಿನ ಸೇವನೆ ಉತ್ತಮ. ಇದರಿಂದ ಕರುಳುಗಳಲ್ಲಿ ಆಮಶಂಕೆಯ ಮೂಲಕ ಇಲ್ಲವಾಗಿದ್ದ ಎಲೆಕ್ಟ್ರೋಲೈಟುಗಳನ್ನು ಮತ್ತೆ ಪಡೆಯಲು ನೆರವಾಗುತ್ತದೆ. ಇದರಿಂದ ಆಮಶಂಕೆಯಿಂದಾದ ನಿತ್ರಾಣತೆಯಿಂದ ಬಳಲಿದ್ದ ದೇಹ ಬೇಗನೇ ಚೈತನ್ಯ ಪಡೆಯುತ್ತದೆ.

ಹೊಟ್ಟೆಯಲ್ಲಿ ಆಮ್ಲೀಯತೆಯಾಗುವುದರಿಂದ ರಕ್ಷಿಸುತ್ತದೆ
ಬಾಳೆಹಣ್ಣು ಜಠರದಲ್ಲಿ ಕರಗಿದ ಬಳಿಕ ಹೊಟ್ಟೆಯಲ್ಲಿ ವಾಯು ಉತ್ಪನ್ನವಾಗುವ ಪ್ರಮಾಣವನ್ನು ತಗ್ಗಿಸಿ ಹುಳಿತೇಗು, ಹೊಟ್ಟೆಯುರಿ, ಎದೆಯುರಿ, gastroesophageal reflux disease (GERD) ಎಂಬ ಅನ್ನನಾಳದ ಉರಿಯ ತೊಂದರೆಯಿಂದ ರಕ್ಷಿಸುತ್ತದೆ.



Click it and Unblock the Notifications











