For Quick Alerts
ALLOW NOTIFICATIONS  
For Daily Alerts

  ಏರುತ್ತಿರುವ ಉರಿಬಿಸಿಲಿನ ಧಗೆ-ಆಹಾರ ಕ್ರಮ ಹೀಗಿರಲಿ

  By Jaya subramanya
  |

  ಬಿಸಿಲಿನ ಝಳ ನೆತ್ತಿಯನ್ನು ಸುಡುತ್ತಿರುವುದನ್ನು ನೀವು ಗಮನಿಸಿರಬಹುದು. ಅದರಲ್ಲೂ ಇತ್ತೀಚಿನ ದಿನಗಳಲ್ಲಿಯಂತೂ ಬಿಸಿಲಿನ ತೀವ್ರತೆ ಎಷ್ಟಿದೆಯೆಂದರೆ ಖಾದ ಹಂಚಿನ ಮೇಲೆ ನಡೆದಾಡಿದಂತಹ ಅನುಭವ ನಮಗುಂಟಾಗುತ್ತಿದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಕಡೆಗೆ ನೀವು ಗಮನ ನೀಡಿದಷ್ಟೂ ಅಪಾಯವನ್ನು ತಪ್ಪಿಸಿಕೊಳ್ಳಬಹುದಾಗಿದೆ. ತ್ವಚೆಗೆ ತೀವ್ರ ಹಾನಿಯನ್ನುಂಟು ಮಾಡುವ ಈ ಬಿಸಿಲು ದೇಹದಲ್ಲಿ ಅನಾರೋಗ್ಯವನ್ನು ಉಂಟುಮಾಡುವುದು ನಿಶ್ಚಿತ.

  ತೀವ್ರ ಬಿಸಿಲು ಹೀಟ್ ಸ್ಟ್ರೋಕ್ ತೊಂದರೆಗಳನ್ನು ನಿಮ್ಮಲ್ಲಿ ಉಂಟುಮಾಡಲಿದ್ದು ಆದಷ್ಟು ಮಧ್ಯಾಹ್ನ 1 ರಿಂದ 3 ಗಂಟೆಯ ಸಮಯದಲ್ಲಿ ಹೊರಗೆ ಹೋಗುವುದನ್ನು ನೀವು ನಿಲ್ಲಿಸಬೇಕು. ಈ ಸಮಯದಲ್ಲಿ ಸೂರ್ಯನ ಕಿರಣವು ಹೆಚ್ಚು ಹಾನಿಕರವಾಗಿರುವುದರಿಂದ ರಕ್ಷಣೆಯನ್ನು ನೀವು ಪಡೆದುಕೊಳ್ಳಲೇಬೇಕು. ತಲೆನೋವು, ತಲೆತಿರುಗುವುದು, ಬಿಳಿಚಿಕೊಂಡ ಚರ್ಮ, ಹೆಚ್ಚಿನ ದೇಹದ ಉಷ್ಣತೆ, ಆಯಾಸ, ವಾಕರಿಕೆ, ಸೆಳೆತ ಇತ್ಯಾದಿಗಳು ಹೀಟ್ ಸ್ಟ್ರೋಕ್‌ನ ಲಕ್ಷಣ ಎಂದೆನಿಸಿದೆ. ಈ ತೊಂದರೆಗಳು ನಿಮ್ಮನ್ನು ಹೆಚ್ಚು ಕಾಡುತ್ತಿದೆ ಎಂದಾದಲ್ಲಿ ಆದಷ್ಟು ಬೇಗನೇ ನೀವು ವೈದ್ಯರನ್ನು ಹೋಗಿ ಕಾಣುವುದು ಅತ್ಯುತ್ತಮ ಸಲಹೆಯಾಗಿದೆ.

  ವೃದ್ಧರು, ದುರ್ಬಲರು, ಅನಾರೋಗ್ಯ ಪೀಡಿತರು, ಸಾಕು ಪ್ರಾಣಿಗಳು, ಹೊರಾಂಗಣದಲ್ಲಿ ಕೆಲಸ ಮಾಡುವವರು ಯುವ ಜನಾಂಗ ಹೀಟ್ ಸ್ಟ್ರೋಕ್‌ಗೆ ಬೇಗನೇ ಬಲಿಯಾಗುತ್ತಾರೆ. ಬಿಸಿಲಿಗೆ ಹೋಗುವ ಮುನ್ನ ಕೆಲವೊಂದು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ತೊಂದರೆಯನ್ನು ನೀಗಿಸಿಕೊಳ್ಳಬಹುದಾಗಿದೆ. ಹಾಗಿದ್ದರೆ ಹೀಟ್ ಸ್ಟ್ರೋಕ್‌ನಿಂದ ನಿಮ್ಮನ್ನು ರಕ್ಷಿಸಿಕೊಳ್ಳುವ ಕೆಲವೊಂದು ಪರಿಹಾರ ಕ್ರಮಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಈ ಪರಿಹಾರಗಳು ನಿಮಗೆ ಹೀಟ್ ಸ್ಟ್ರೋಕ್‌ನಿಂದ ರಕ್ಷಿಸಿಕೊಳ್ಳುವ ಉಪಾಯವನ್ನು ತಿಳಿಸಿಕೊಡಲಿದೆ.

  ನೀರು ಕುಡಿಯುವುದು

  ನೀರು ಕುಡಿಯುವುದು

  ನಿಮ್ಮನ್ನು ನೀವು ಆದಷ್ಟು ಹೈಡ್ರೇಟ್ ಆಗಿ ಇರಿಸಿಕೊಳ್ಳಲು ಸಾಕಷ್ಟು ನೀರು ಕುಡಿಯಲೇಬೇಕು. ನೀವು ಹೊರಗೆ ಹೋಗುವ ಸಂದರ್ಭದಲ್ಲಿ ನೀರಿನ ಬಾಟಲಿ ಆದಷ್ಟು ನಿಮ್ಮೊಂದಿಗೆ ಇರಲಿ.

  ತಂಪು ಪಾನೀಯಗಳ ಸೇವನೆ ಬೇಡ

  ತಂಪು ಪಾನೀಯಗಳ ಸೇವನೆ ಬೇಡ

  ಹೊಟ್ಟೆಯ ಸೆಳೆತವನ್ನು ತಂಪು ಪಾನೀಯಗಳು ಉಂಟುಮಾಡುವ ಸಾಧ್ಯತೆ ಇರುವುದರಿಂದ ಐಸ್ ಹಾಕಿದ ಶೀತಲ ಪಾನೀಯಗಳ ಸೇವನೆ ಮಾಡಬೇಡಿ. ನಿಮ್ಮ ಬಾಯಾರಿಕೆಯನ್ನು ಇದು ಸ್ವಲ್ಪ ಹೊತ್ತು ನೀಗಿಸಿದರೂ ನಿಮ್ಮನ್ನು ಅಪಾಯಕ್ಕೆ ತಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

  ಮದ್ಯಪಾನ ಮತ್ತು ಕೆಫೇನ್ ಸೇವನೆ ತ್ಯಜಿಸಿ

  ಮದ್ಯಪಾನ ಮತ್ತು ಕೆಫೇನ್ ಸೇವನೆ ತ್ಯಜಿಸಿ

  ಈ ಸಮಯದಲ್ಲಿ ಇಂತಹ ಪಾನೀಗಳ ಸೇವನೆಯನ್ನು ನೀವು ಆದಷ್ಟು ಕಡಿಮೆ ಮಾಡಿದಷ್ಟೂ ಒಳ್ಳೆಯದು. ಕಡಿಮೆ ಸಕ್ಕರೆ ಮತ್ತು ಉಪ್ಪು ಇರುವ ಪಾನೀಗಳನ್ನು ಹೆಚ್ಚು ಸೇವಿಸಿ.

  ತಾಜಾ ತರಕಾರಿ ಸೇವಿಸಿ

  ತಾಜಾ ತರಕಾರಿ ಸೇವಿಸಿ

  ಸಲಾಡ್ಸ್, ತಾಜಾ ತರಕಾರಿಗಳನ್ನು ಮತ್ತು ಸೊಪ್ಪು ತರಕಾರಿಗಳ ಸೇವನೆಯನ್ನು ಬೇಸಿಗೆಯಲ್ಲಿ ನೀವು ಮಾಡಿದಷ್ಟೂ ಒಳ್ಳೆಯದು. ನೀರಿನಂಶ ಹೆಚ್ಚಿರುವ ತರಕಾರಿಗಳು ಮತ್ತು ಹಣ್ಣುಗಳನ್ನು ಈ ಸಮಯದಲ್ಲಿ ಮಾಡಿ ಅಂದರೆ ಸೌತೆಕಾಯಿ, ಕಲ್ಲಂಗಡಿ ಹಣ್ಣುಗಳನ್ನು ಆದಷ್ಟು ಬೇಸಿಗೆಯಲ್ಲಿ ಸೇವಿಸಿ.

  ಈರುಳ್ಳಿ ಸೇವನೆ

  ಈರುಳ್ಳಿ ಸೇವನೆ

  ಈರುಳ್ಳಿ ಮತ್ತು ಈರುಳ್ಳಿ ಸೇವನೆಯನ್ನು ಮಾಡುವುದು ಬೇಸಿಗೆಯ ಬಿಸಿಲಿನ ತೀವ್ರತೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಬಿಸಿಯಿಂದ ಉಂಟಾಗುವ ಸುಡುವಿಕೆಗಳನ್ನು ಹೋಗಲಾಡಿಸಲು ಈರುಳ್ಳಿ ರಸ ಸಹಕಾರಿ.

  ಇಲೆಕ್ಟ್ರೊಲೈಟ್ ಇರುವ ಪಾನೀಯಗಳ ಸೇವನೆ

  ಇಲೆಕ್ಟ್ರೊಲೈಟ್ ಇರುವ ಪಾನೀಯಗಳ ಸೇವನೆ

  ಆಮ್ ಪನ್ನಾ ಮತ್ತು ಎಳನೀರು ದೇಹವನ್ನು ತಂಪಾಗಿರಿಸುವಲ್ಲಿ ಸಹಕಾರಿಯಾಗಿದ್ದು ನೈಸರ್ಗಿಕ ಇಲೆಕ್ಟ್ರೊಲೈಟ್ ಅನ್ನು ದೇಹಕ್ಕೆ ಒದಗಿಸುತ್ತದೆ. ಮತ್ತು ಇದು ತಂಪು ಪಾನೀಯಗಳಿಂದ ಅತ್ಯುತ್ತಮ ಆಯ್ಕೆ ಎಂದೆನಿಸಿದೆ. ಲಿಂಬೆ ರಸಕ್ಕೆ ಎರಡು ಚಿಟಿಕೆ ಉಪ್ಪು, ಸ್ವಲ್ಪ ಸಕ್ಕರೆ ಚಿಟಿಕೆ ಸೋಡಿಯಮ್ ಬೈಕಾರ್ಬೊನೇಟ್ ಅಥವಾ ಬೇಕಿಂಗ್ ಸೋಡಾ ಸೇರಿಸಿ ಪಾನೀಯ ತಯಾರಿಸಿಕೊಳ್ಳಿ. ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಈ ಪಾನೀಯ ಸೇವಿಸಿ ಹೀಟ್ ಸ್ಟ್ರೋಕ್ ಅನ್ನು ತಡೆಗಟ್ಟಲು ಇದು ಸಹಕಾರಿಯಾಗಿದೆ. ಅಂತೆಯೇ ಮಜ್ಜಿಗೆ ಕೂಡ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುವುದರಿಂದ ಇದನ್ನು ಹೆಚ್ಚು ಸೇವಿಸಿ.

  ದೇಹದ ಬೆವರು

  ದೇಹದ ಬೆವರು

  ನೈಸರ್ಗಿಕ ಥರ್ಮೊಸ್ಟಾಟ್ ಅನ್ನು ಮಾನವ ದೇಹವು ಹೊಂದಿರುವುದರಿಂದ ಉಷ್ಣತೆಯನ್ನು ಇದು ಸಮಪ್ರಮಾಣದಲ್ಲಿ ಇರಿಸುತ್ತದೆ. ಬಿಸಿ ಜಾಸ್ತಿಯಾದಾಗ, ಬೆವರು ಸುರಿಯಲು ಆರಂಭವಾಗಿ ತಂಪಿನ ಅನುಭವವನ್ನು ಉಂಟುಮಾಡುತ್ತದೆ. ನೀವು ಬೆವರಿಲ್ಲ ಎಂದಾದಲ್ಲಿ, ಏನೋ ದೋಷವಿದೆ ಎಂಬುದು ಖಂಡಿತ. ಇದು ಹೀಟ್ ಸ್ಟ್ರೋಕ್ ಉಂಟಾಗಲಿದೆ ಎಂಬುದರ ಸೂಚನೆಯಾಗಿರಬಹುದು. ಈ ಸಂದರ್ಭದಲ್ಲಿ ಹೆಚ್ಚಿನ ನಿಗಾ ಇರಿಸಿಕೊಂಡು ಕಾಳಜಿಯನ್ನು ನೀವು ತೆಗೆದುಕೊಳ್ಳಬೇಕು.

  ಮಧ್ಯಾಹ್ನದ ಸಮಯದಲ್ಲಿ ಹೊರಹೋಗಬೇಡಿ

  ಮಧ್ಯಾಹ್ನದ ಸಮಯದಲ್ಲಿ ಹೊರಹೋಗಬೇಡಿ

  ತೀವ್ರ ಬಿಸಿಲು ಇರುವ ಸಂದರ್ಭದಲ್ಲಿ ಆದಷ್ಟು ಹೊರಗೆ ಹೋಗುವುದನ್ನು ನಿಲ್ಲಿಸಿ. ಇದು ಸಾಧ್ಯವಿಲ್ಲ ಎಂದಾದಲ್ಲಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವ ಮಾರ್ಗಗಳನ್ನು ಹುಡುಕಿ ಅಂದರೆ ಛತ್ರಿ ಬಳಸುವುದು, ಅಗಲವಾದ ಹ್ಯಾಟ್ ಬಳಕೆ, ಹಗುರವಾದ ಉಡುಪು ಧರಿಸುವುದು ಅಂತೆಯೇ ಸನ್ ಸ್ಕ್ರೀನ್ ಲೋಶನ್ ಅನ್ನು ಬಳಸಿ.

   

  English summary

  Preventive Measures To Avoid Heat Stroke

  The glaring rays of the sun beating down mercilessly can prove to be dangerous if certain precautions are not taken. Heat stroke can be fatal if it is not recognised on time or an immediate treatment is not provided. It is essential to keep the body hydrated during the hot summer months to keep away from the effects of heat stroke.
  Story first published: Friday, April 15, 2016, 8:02 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more