For Quick Alerts
ALLOW NOTIFICATIONS  
For Daily Alerts

ದಿನನಿತ್ಯ ಗಂಜಿ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ

By Manu
|

ಗಂಜಿ ಎಂದೊಡನೆ ಇದನ್ನು ಬಡವರ ಊಟವೆಂದು ಹೆಚ್ಚಿನವರು ನಿರ್ಧರಿಸಿಬಿಡುತ್ತಾರೆ. ಹಿಂದಿನಿಂದಲೂ ಕೆಲವು ಆಹಾರಗಳನ್ನು ಕೆಲವು ವರ್ಗಗಳಿಗೆ ಮೀಸಲಾಗಿಸಿ ಅದನ್ನು ಇತರರು ಸೇವಿಸದೇ ಇರುವುದು ಪೂರ್ವಾಗ್ರಹವಾಗಿದೆ. ಉದಾಹರಣೆಗೆ ಬಿಳಿ ಈರುಳ್ಳಿಯನ್ನು ಕೆಳವರ್ಗದ ಜನತೆ ಅಡುಗೆಗೆ ಉಪಯೋಗಿಸುತ್ತಾರೆಂದೇ ಕೆಲವರ್ಗದ ಜನರು ತಿನ್ನುವುದೇ ಇಲ್ಲ. ಅದೇ ರೀತಿ ಗಂಜಿ ಎಂದಾಕ್ಷಣ ರೋಗಿಗಳು ಅಥವಾ ಬಡವರು ತಿನ್ನುವುದು ಎಂಬ ಪೂರ್ವಾಗ್ರಹದಿಂದ ಹೆಚ್ಚಿನವರು ಮುಖ ಸಿಂಡರಿಸುತ್ತಾರೆ.

ಆದರೆ ವಾಸ್ತವವಾಗಿ ಆರೋಗ್ಯಕ್ಕೆ ಅತ್ಯಂತ ಪೂರಕವಾದ ಈ ಗಂಜಿ ಸುಲಭವಾಗಿ ತಯಾರಿಸಬಹುದಾದ ಮತ್ತು ವಿವಿಧ ರೋಗಗಳನ್ನು ಸಮರ್ಥವಾಗಿ ನಿವಾರಿಸಬಲ್ಲ ಗುಣ ಹೊಂದಿದೆ. ಅದರಲ್ಲೂ ಕುಚ್ಚಲಕ್ಕಿಯ (ಕೆಂಪು ಅಕ್ಕಿಯ) ಗಂಜಿ ಅಂತೂ ಶಕ್ತಿಯ ಆಗರ. ಅದರಲ್ಲೂ ಅಕ್ಕಿ ಬೆಂದ ಬಳಿಕ ಅದರ ನೀರನ್ನು ಪ್ರತಿ ದಿನ ಸೋಸಿಕೊಂಡು ಕುಡಿಯಿವುದರಿಂದ ಇನ್ನಷ್ಟು ಆರೋಗ್ಯಕಾರಿ ಲಾಭಗಳನ್ನು ಪಡೆಯಬಹುದು. ಬನ್ನಿ ಬನ್ನಿ ಗಂಜಿಯ ಮಹತ್ವ ಮತ್ತು ಆರೋಗ್ಯಕರ ಗುಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ, ಮುಂದೆ ಓದಿ..

ನಿರ್ಜಲೀಕರಣ ತಡೆಯುವುದು

ನಿರ್ಜಲೀಕರಣ ತಡೆಯುವುದು

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಗಂಜಿನೀರು ನೈಸರ್ಗಿಕವಾಗಿ ದೇಹಕ್ಕೆ ನೀರನ್ನು ಒದಗಿಸುವುದು. ಅತೀ ಬೇಸಿಗೆಯಲ್ಲಿ ಇದು ತುಂಬಾ ಉಪಯುಕ್ತವೆಂದು ಸಾಬೀತಾಗಿದೆ. ಒಂದು ಲೋಟ ಗಂಜಿನೀರು ನಿರ್ಜಲೀಕರಣ ತಡೆಯುವುದು.

ಮಲಬದ್ಧತೆ ನಿವಾರಣೆ

ಮಲಬದ್ಧತೆ ನಿವಾರಣೆ

ಗಂಜಿಯಲ್ಲಿರುವ ಪಿಷ್ಟದಲ್ಲಿ ನಮ್ಮ ಜೀರ್ಣಕ್ರಿಯೆಗೆ ನೆರವಾಗುವ ಬ್ಯಾಕ್ಟೀರಿಯಾಗಳು ಇರುವ ಕಾರಣ ಜೀರ್ಣಕ್ರಿಯೆ ಆರಾಮವಾಗಿ ನಡೆಯುತ್ತದೆ. ಅಲ್ಲದೇ ಉತ್ತಮ ಪ್ರಮಾಣದ ಕರಗಿದ ನಾರು ಇರುವುದರಿಂದ ಆಹಾರ ಸುಲಭವಾಗಿ ಚಲಿಸಲು ಮತ್ತು ವಿಸರ್ಜನೆ ಸುಲಭವಾಗಲು ನೆರವಾಗುತ್ತದೆ.

ಅತಿಸಾರ ನಿವಾರಣೆ

ಅತಿಸಾರ ನಿವಾರಣೆ

ಅತಿಸಾರದಿಂದ ಬಳಲುತ್ತಿರುವವರಿಗೆ ಇದು ತುಂಬಾ ಹಿಂದಿನಿಂದಲೂ ಕೊಡುತ್ತಿರುವಂತಹ ಮದ್ದಾಗಿದೆ. ಕೆಲವೊಂದು ಸಂಶೋಧನೆಗಳ ಪ್ರಕಾರ ಗಂಜಿನೀರು ಇತರ ಮದ್ದಿಗಿಂತ ತುಂಬಾ ಪರಿಣಾಮಕಾರಿಯೆಂದು ತಿಳಿದುಬಂದಿದೆ.

ಶಕ್ತಿಯ ಆಗರ

ಶಕ್ತಿಯ ಆಗರ

ಕಾರ್ಬೋಹೈಡ್ರೆಡ್ ಗಳಿಂದ ಸಮೃದ್ಧವಾಗಿರುವ ಗಂಜಿ ನೀರು ದೇಹಕ್ಕೆ ಶಕ್ತಿಯನ್ನು ನೀಡುವುದು. ಒಂದು ಲೋಟ ಕುಡಿದರೆ ನಿಮ್ಮ ದೇಹವು ಉಲ್ಲಾಸಿತವಾಗುವುದು.

ಕ್ಯಾನ್ಸರ್ ಬರದಂತೆ ತಡೆಯುವುದು

ಕ್ಯಾನ್ಸರ್ ಬರದಂತೆ ತಡೆಯುವುದು

ವಿಟಮಿನ್ ಎ ಮತ್ತು ಪೆನೊಲ್ಸ್ ಗಳಂತಹ ಆ್ಯಂಟಿಆ್ಯಕ್ಸಿಡೆಂಟ್ ಗಳನ್ನು ಹೊಂದಿರುವ ಗಂಜಿ ನೀರು ವಿವಿಧ ರೀತಿಯ ಕ್ಯಾನ್ಸರ್ ಬರದಂತೆ ತಡೆಯುವುದು.

ಅಲ್ಜಿಮರ್ ಕಾಯಿಲೆ ತಡೆಯುವುದು

ಅಲ್ಜಿಮರ್ ಕಾಯಿಲೆ ತಡೆಯುವುದು

ಗಂಜಿ ನೀರಿನಲ್ಲಿರುವ ಕೆಲವೊಂದು ಪೋಷಕಾಂಶಗಳು ನರಸಂವಾಹಕಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಇದು ಅಲ್ಜಿಮರ್ ಕಾಯಿಲೆ ಬರದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ವೈರಲ್ ಸೋಂಕು ನಿವಾರಣೆ

ವೈರಲ್ ಸೋಂಕು ನಿವಾರಣೆ

ವೈರಲ್ ನಿಂದ ಉಂಟಾದ ಸೋಂಕನ್ನು ನಿವಾರಿಸಲು ಗಂಜಿನೀರನ್ನು ಬಳಸಿಕೊಳ್ಳಬಹುದು. ಜ್ವರದ ವೇಳೆ ಒಂದು ಲೋಟ ಗಂಜಿ ನೀರನ್ನು ಕುಡಿದರೆ ದೇಹಕ್ಕೆ ಹಲವಾರು ರೀತಿಯ ಪೋಷಕಾಂಶಗಳು ಸಿಗುವುದು ಮತ್ತು ಜ್ವರ ಕಡಿಮೆಯಾಗಲು ನೆರವಾಗುವುದು.

ಸೂರ್ಯನಿಂದ ರಕ್ಷಣೆ

ಸೂರ್ಯನಿಂದ ರಕ್ಷಣೆ

ಒಂದು ಲೋಟ ಗಂಜಿನೀರನ್ನು ಕುಡಿದರೆ ನೀವು ಸೂರ್ಯನ ಯುವಿ ಕಿರಣಗಳಿಂದ ರಕ್ಷಣೆ ಪಡೆಯಬಹುದು. ಸೂರ್ಯನ ಯುವಿ ಕಿರಣಗಳು ಚರ್ಮಕ್ಕೆ ಹಾನಿಯುಂಟು ಮಾಡುವುದನ್ನು ತಡೆಯುವಂತಹ ಒರ್ಯಜೋನಲ್ ಗಂಜಿ ನೀರಿನಲ್ಲಿದೆ.

English summary

One Glass Of Rice Water Will Do This!

For centuries, people across the globe have used rice water for an array of health benefits. It is full of nutrients, carbohydrates and essential amino acids which make it an ideal drink to treat various health issues. Most of us often end up in throwing it away, as we're unaware of its medicinal properties that can treat illnesses and also prevent severe diseases. But, just one glass of rice water that we often chuck away in the sink is a rich source of energy and possesses great benefits for our overall health and well-being.
X
Desktop Bottom Promotion