For Quick Alerts
ALLOW NOTIFICATIONS  
For Daily Alerts

ಕಾಡುವ ಮಣಿಕಟ್ಟುಗಳ ನೋವಿಗೆ ಪರ್ಫೆಕ್ಟ್ ಮನೆಮದ್ದು

By Deepak M
|

ಬಹುಶಃ ನೀವು ಆ ನಿಮ್ಮ ಮಣಿಕಟ್ಟುಗಳ ನೋವಿನಿಂದ ಬಳಲುತ್ತಿರಬಹುದು ಅಥವಾ ಆ ಕುರಿತು ದೂರುತ್ತಿರಬಹುದು. ನಡೆಯುವಾಗ, ಮೆಟ್ಟಿಲು ಹತ್ತುವಾಗ, ಏನಾದರು ಕೆಲಸ ಮಾಡುವಾಗ, ಅಷ್ಟೇ ಏಕೆ ಕೆಲವರು ಗಾಡಿ ಓಡಿಸುವಾಗಲು ಮಣಿಕಟ್ಟಿನ ಸಮಸ್ಯೆ ಇದೆ ಎಂದು ಹೇಳುತ್ತಾರೆ. ಇದು ಇದ್ದಕ್ಕಿದ್ದಂತೆ ಬರಬಹುದು ಅಥವಾ ನಿಧಾನವಾಗಿ ಶುರುವಾಗಬಹುದು. ಆಗ ನಿಮ್ಮ ಮಣಿಕಟ್ಟುಗಳು ಹರಿದು ಹೋಗಿರುವ ಅಥವಾ ಅಲ್ಲಿ ಬಿರುಕು ಬಿಟ್ಟಿರುವ ಸಾಧ್ಯತೆ ಇರುತ್ತದೆ.

One Drink That Will Help Strengthen Your Ligaments

ಇದು ಮಣಿಕಟ್ಟುಗಳು ದುರ್ಬಲಗೊಂಡಾಗ ಕಾಣಿಸಿಕೊಳುತ್ತದೆ. ಮೂಳೆಯನ್ನು ಮತ್ತೊಂದು ಮೂಳೆಯ ಜೊತೆಗೆ ಜೋಡಿಸುವ ಅಂಗಾಂಶವನ್ನು ಮಣಿಕಟ್ಟು ಎನ್ನುತ್ತಾರೆ. ಇದು ಮಾನವನ ದೇಹದಾದ್ಯಂತ ಕಾಣಿಸಿಕೊಳ್ಳುತ್ತದೆ. ಅಲ್ಲದೆ ನಮ್ಮ ಚಲನೆಯನ್ನು ಸುಲಭ ಮಾಡುತ್ತದೆ. ಕೆಲವು ಬಾರಿ, ಒಂದು ಮಣಿಕಟ್ಟು ಹರಿದು ಕಡು ಯಾತನೆಯನ್ನು ನೀಡುತ್ತದೆ. ನಡೆದಾಡಲು ಕಷ್ಟವಾಗುವಂತಹ ಪರಿಸ್ಥಿತಿಯನ್ನು ಸಹ ಇದು ತಂದೊಡ್ಡುತ್ತದೆ.

ಮಣಿಕಟ್ಟುಗಳ ಮೇಲೆ ನಮ್ಮ ಇಡೀ ದೇಹವು ಅವಲಂಬಿತವಾಗಿರುವುದರಿಂದಾಗಿ, ಅದನ್ನು ಸರಿಯಾಗಿ ನೋಡಿಕೊಳ್ಳಬೇಕಾದುದು ಅಗತ್ಯ. ಅದು ಹೇಗೆ ಎಂದಿರಾ, ಚಿಂತೆ ಮಾಡಬೇಡಿ ಅದಕಾಗಿ ಒಂದು ರಸವಿದೆ! ಮುಂಗೈ- ಮಣಿಕಟ್ಟುಗಳ ದೃಢತೆಗೆ-ಮಯೂರಾಸನ ಅನುಸರಿಸಿ

ಬಾದಾಮಿ, ಕಿತ್ತಳೆ ರಸ, ಓಟ್‌ಮೀಲ್, ಅನಾನಸ್, ಚಕ್ಕೆ ಮತ್ತು ಜೇನು ತುಪ್ಪವನ್ನು ಬೆರೆಸಿ ಮಾಡುವ ಈ ರಸವು ನಿಮ್ಮ ಮಣಿಕಟ್ಟುಗಳಿಗೆ ಶಕ್ತಿಯನ್ನು ನೀಡುತ್ತದೆ. ಜೊತೆಗೆ ಆರೋಗ್ಯವನ್ನು ನೀಡಿ, ಅವುಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅದರಲ್ಲೂ ಚಕ್ಕೆಯಲ್ಲಿರುವ ಉರಿಯೂತ ನಿವಾರಕ ಗುಣಗಳು ಈ ರಸವನ್ನು ಮತ್ತಷ್ಟು ಆರೋಗ್ಯಕರವಾಗಿಸುತ್ತದೆ.

ಇನ್ನು ಅನಾನಸಿನಲ್ಲಿರುವ ಬ್ರೊಮೆಲೈನ್ ಕಿಣ್ವವು ಬಾವು ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಬ್ರೊಮೆಲೈನ್‌ನಲ್ಲಿ ವಿಟಮಿನ್ ಸಿ ಮತ್ತು ಮೆಗ್ನಿಷಿಯಂ ಹೆಚ್ಚಿರುತ್ತದೆ. ಜೊತೆಗೆ ಇದರಲ್ಲಿ ಆಂಟಿಆಕ್ಸಿಡೆಂಟ್ ಇರುವುದು ಸಹ ವಿಶೇಷ. ಹಾಗಾಗಿ ಈ ಆರೋಗ್ಯಕರ ಪಾನೀಯವನ್ನು ಪ್ರತಿದಿನ ಮಾಡಿಕೊಂಡು ಸೇವಿಸಿ, ನಿಮ್ಮ ಮಣಿಕಟ್ಟುಗಳನ್ನು ಶಕ್ತಿಶಾಲಿಗೊಳಿಸಿಕೊಳ್ಳಿ. ಬನ್ನಿ ಇನ್ನು ತಡಮಾಡದೆ ಇದನ್ನು ತಯಾರಿಸುವ ಬಗೆಯನ್ನು ತಿಳಿದುಕೊಳ್ಳೋಣ.

1. ಒಂದು ಲೋಟ ನೀರು ಮತ್ತು ಐದು ಗ್ರಾಂ ಚಕ್ಕೆಯನ್ನು ತೆಗೆದುಕೊಳ್ಳಿ.
2. ತುಂಡು ಮಾಡಿದ ಅನಾನಸನ್ನು ತೆಗೆದುಕೊಳ್ಳಿ, ಅದರ ರಸವನ್ನು ತೆಗೆದುಕೊಳ್ಳಿ.
3. ಒಂದು ಬಟ್ಟಲು ಓಟ್‌ಮೀಲ್ ಮತ್ತು ಒಂದು ಕಪ್ ಕಿತ್ತಳೆ ರಸವನ್ನು ತೆಗೆದುಕೊಳ್ಳಿ.
4. 20 ಗ್ರಾಂ ಬಾದಾಮಿ (ಜಜ್ಜಿರುವಂತಹದು) ಮತ್ತು 20 ಗ್ರಾಂ ಜೇನು ತುಪ್ಪವನ್ನು ತೆಗೆದುಕೊಳ್ಳಿ.
5. ಓಟ್‌ಮೀಲ್ ಅನ್ನು ಬೇಯಿಸಿ ಪಕ್ಕದಲ್ಲಿ ಇಟ್ಟುಕೊಳ್ಳಿ.


6. ಕಿತ್ತಳೆ ರಸ, ಜೇನು, ಬಾದಾಮಿ ಮತ್ತು ಚಕ್ಕೆಯನ್ನು ತೆಗೆದುಕೊಳ್ಳಿ, ಇದನ್ನು ಓಟ್‌ಮೀಲ್ ಜೊತೆಗೆ ಸೇರಿಸಿ.
7. ಅನಾನಸ್ ರಸವನ್ನು ಇದಕ್ಕೆ ಬೆರೆಸಿ, ಎಲ್ಲವನ್ನು ಒಟ್ಟಿಗೆ ಮಿಶ್ರಣ ಮಾಡಿ.
8. ಈಗ ಈ ರಸವು ಸೇವಿಸಲು ಸಿದ್ಧಗೊಂಡಿರುತ್ತದೆ. ಇದನ್ನು ಸೇವಿಸಿ ಫಲಿತಾಂಶವನ್ನು ನೀವೇ ನೋಡಿ. ಇದರ ಜೊತೆಗೆ ಮಣಿಕಟ್ಟು ಬಲಗೊಳಿಸುವ ವ್ಯಾಯಾಮಗಳನ್ನು ಸಹ ಮಾಡಿ.
English summary

One Drink That Will Help Strengthen Your Ligaments

You might have heard people complaining of an extreme pain due to the tear in the ligament, which makes them have a lot of pain while walking or doing any movement. It might occur all of a sudden or sometimes when people have a slight fall too, wherein the ligaments might tend to tear off. So, have a look at the way in which you could prepare this health drink and consume it regularly to strengthen the ligaments in the body.
Story first published: Monday, June 20, 2016, 20:02 [IST]
X
Desktop Bottom Promotion