Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಉದ್ಯೋಗಿಗಳೇ ಈ ಟಿಪ್ಸ್‌ಗಳೇ ನಿಮ್ಮ ಹೃದಯ ರಕ್ಷಕ
ಬದುಕಿಗೆ ಉದ್ಯೋಗವು ಅತಿಮುಖ್ಯವಾದುದು. ಇಂದಿನ ಆಧುನಿಕ ಯುಗದಲ್ಲಿ ಪುರುಷ ಮತ್ತು ಮಹಿಳೆ ಇಬ್ಬರೂ ಕಚೇರಿಗಳಲ್ಲಿ ದುಡಿಯುವುದು ಅತ್ಯವಶ್ಯಕವಾಗಿದೆ. ಗಗನಕ್ಕೇರುತ್ತಿರುವ ಖರ್ಚು ವೆಚ್ಚಗಳು ಅದನ್ನು ಪೂರೈಸಲು ದುಡ್ಡು ಹೀಗೆ ಒಂದಿಲ್ಲೊಂದು ಅವಶ್ಯಕತೆಗಳಿಗಾಗಿ ಮನೆಯ ಯಜಮಾನನಿಗೆ ಆತನ ಪತ್ನಿ ಸಾಥ್ ಕೊಡಬೇಕಿದೆ. ಪುರುಷನಷ್ಟೇ ಮಹಿಳೆ ಕೂಡ ಸಮನಾಗಿರುವುದರಿಂದ ಆಕೆಗೆ ಕೂಡ ಉದ್ಯೋಗ ಮುಖ್ಯವಾದ ಭವಿಷ್ಯವಾಗಿದೆ.
ಭವಿಷ್ಯದ ಉನ್ನತಿಗಾಗಿ ನಾವು ಮಾಡುವ ಉದ್ಯೋಗ ನಮಗೆ ಮುಖ್ಯವಾಗಿರುತ್ತದೆ. ಆದರೆ ದಿನದ 12 ಗಂಟೆಗಳು ಕಚೇರಿಯಲ್ಲಿ ವ್ಯಯಿಸುವುದು ಎಂದರೆ ಅದೊಂದು ತಲೆನೋವೇ ಸರಿ ಅಲ್ಲವೇ..? ವಿಶ್ರಾಂತಿಯಿಲ್ಲದ ಕೆಲಸ ನಿಮ್ಮನ್ನು ಅನಾರೋಗ್ಯಕ್ಕೆ ದೂಡುವುದು ಖಂಡಿತ ಅಂತೆಯೇ ಕಚೇರಿಯಲ್ಲಿ ನೀವು ಕೆಲಸ ಮಾಡುತ್ತಿರುವಾಗ ಕೆಲವೊಂದು ಶೈಲಿಗಳನ್ನು ನೀವು ಬದಲಿಸುತ್ತೀರಿ.
ಇದೂ ಕೂಡ ನಿಮಗೆ ಅನಾರೋಗ್ಯವನ್ನುಂಟು ಮಾಡಬಹುದು. ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಇಂತಹ ತಪ್ಪುಗಳನ್ನು ನೀವು ಮಾಡುತ್ತಿರುತ್ತೀರಿ ಮತ್ತು ಆ ತಪ್ಪುಗಳನ್ನು ನಿಮಗೆ ತೋರಿಸುವ ಕೆಲಸವನ್ನು ಇಂದಿನ ಲೇಖನದಲ್ಲಿ ನಾವು ಮಾಡುತ್ತಿದ್ದೇವೆ. ಇಂತಹ ಅನಾರೋಗ್ಯಕರ ನಡವಳಿಕೆಗಳು ಹೃದಯ ಕಾಯಿಲೆಗಳಂತಹ ಭೀಕರತೆಯನ್ನು ನಿಮಗೆ ತಂದೊಡ್ಡಬಹುದು. ಹಾಗಿದ್ದರೆ ಈ ತಪ್ಪುಗಳನ್ನು ದೈನಂದಿನ ಜೀವನದಲ್ಲಿ ನೀವು ಮಾಡುತ್ತಿದ್ದೀರಿ ಎಂದಾದಲ್ಲಿ ಅದನ್ನೀಗಲೇ ತ್ಯಜಿಸಿ ಮತ್ತು ಆರೋಗ್ಯಕರ ವಿಧಾನದಲ್ಲಿ ನಡೆಯಿರಿ...

ಎರ್ರಾಬಿರ್ರಿ ತಿನ್ನುವುದು
ಬಿಸ್ಕತ್ತು, ಪಾನೀಯಗಳು, ಲೆಕ್ಕವಿಲ್ಲದಷ್ಟು ಕಾಫಿ ಸೇವನೆ ಅಂತೆಯೇ ಹೆಚ್ಚು ಕ್ಯಾಲೋರಿ ಇರುವ ತಿಂಡಿತಿನಿಸುಗಳನ್ನು ನೀವು ಸೇವಿಸುತ್ತಿದ್ದೀರಿ ಎಂದಾದಲ್ಲಿ ಇದಕ್ಕೆ ಇಂದೇ ಫುಲ್ ಸ್ಟಾಪ್ ಹಾಕಿ. ಕೊಬ್ಬಿನಿಂದ ಕೂಡಿರುವ ಇಂತಹ ಆಹಾರಗಳ ಅನಿಯಮಿತ ಸೇವನೆ ನೀವು ಮಾಡಿದಿರಿ ಎಂದಾದಲ್ಲಿ ಸ್ಥೂಲಕಾಯತೆ ನಿಮ್ಮನ್ನು ಕೂಡಲೇ ಸಮೀಪಿಸುತ್ತದೆ ಮತ್ತು ಹೃದಯ ರೋಗಗಳಿಗೆ ನೀವು ಬೇಗನೇ ಒಳಗಾಗುತ್ತೀರಿ.

ಉಪ್ಪಿನ ಸೇವನೆ ಕಡಿಮೆ ಮಾಡಿ
ನಿಮ್ಮ ಆಹಾರದಲ್ಲಿ ಉಪ್ಪಿನ ನಿಯಂತ್ರಣವನ್ನು ಮಾಡಿ. ಒಬ್ಬ ವ್ಯಕ್ತಿ 1500 ಗ್ರಾಮ್‌ಗಿಂತಲೂ ಹೆಚ್ಚಿನ ಉಪ್ಪಿನ ಸೇವನೆಯನ್ನು ಮಾಡಿದಿರಿ ಎಂದಾದಲ್ಲಿ ರಕ್ತದೊತ್ತಡ ಹೆಚ್ಚಾಗಬಹುದು ಎಂಬುದು ಆರ್‌ಡಿಎ ತಿಳಿಸಿದೆ. ಚಿಪ್ಸ್‌ಗಳು, ಉಪ್ಪಿನ ಬಿಸ್ಕತ್ತು ಮತ್ತು ಅಧಿಕ ಉಪ್ಪಿನಂಶದಿಂದ ಕೂಡಿರುವ ಆಹಾರಗಳ ಸೇವನೆಯನ್ನು ಬಿಡಿ.

ವಿಶ್ರಾಂತಿ ತೆಗೆದುಕೊಳ್ಳಿ
ದೀರ್ಘ ಸಮಯದವರೆಗೆ ಕುಳಿತುಕೊಂಡೇ ಕೆಲಸ ಮಾಡುವುದು ಅಷ್ಟು ಒಳ್ಳೆಯದಲ್ಲ. ನಿಮ್ಮ ಸೀಟ್ ಬಿಟ್ಟು ಆಗಾಗ್ಗೆ ವಿಶ್ರಾಂತಿ ತೆಗೆದುಕೊಳ್ಳಿ. ಅತ್ತಿಂದಿತ್ತ ನಡೆದಾಡುವುದು, ಸಣ್ಣ ವಾಕ್ ಮೊದಲಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಿ

ಧೂಮಪಾನಿಗಳಿಂದ ದೂರವಿರಿ
ನಿಮ್ಮ ಸ್ಥಳದಲ್ಲಿ ಧೂಮಪಾನಕ್ಕೆ ಅವಕಾಶವನ್ನು ನೀಡಬೇಡಿ. ನೀವು ಧೂಮಪಾನ ಮಾಡುವುದಕ್ಕಿಂತಲೂ ಧೂಮಪಾನಿಗಳು ಸೇವಿಸಿ ಬಿಟ್ಟ ಹೊಗೆಯನ್ನು ನೀವು ಸೇವಿಸುವ ಅಪಾಯವೇ ಅಧಿಕವಾಗಿದೆ.

ಒತ್ತಡ ನಿವಾರಿಸಿ
ಅತಿಯಾದ ಕಚೇರಿ ಕೆಲಸದಿಂದ ಹೆಚ್ಚಿನ ಒತ್ತಡಕ್ಕೆ ಒಳಗಾಗಿದ್ದೀರಾ? ಇಂತಹ ಸಂದರ್ಭದಲ್ಲಿ ನಿಮ್ಮ ಹೃದಯಕ್ಕೆ ನೀವು ಹೆಚ್ಚಿನ ಒತ್ತಡವನ್ನು ಹಾಕುತ್ತಿದ್ದೀರಿ. ಎಷ್ಟೇ ಒತ್ತಡದ ಕೆಲಸವನ್ನು ನೀವು ಮಾಡುತ್ತಿದ್ದರೂ ಕೊಂಚ ವಿರಾಮವನ್ನು ಪಡೆದುಕೊಳ್ಳಿ.

ಉಸಿರಾಟ
ಹೆಚ್ಚಿನ ಕೆಲಸದ ಒತ್ತಡದಿಂದಾಗಿ ನೀವು ಸರಿಯಾಗಿ ಉಸಿರಾಟವನ್ನು ನಡೆಸದೇ ಇದ್ದಿರಬಹುದು. ನಿಮ್ಮ ಸಂಪೂರ್ಣ ಆರೋಗ್ಯಕ್ಕೆ ಇದು ಕೆಟ್ಟದ್ದಾಗಿದೆ. ಆದ್ದರಿಂದ ದೀರ್ಘವಾಗಿ ಉಸಿರಾಡಲು ಮರೆಯದಿರಿ.

ನೀರು ಸೇವನೆ
ಕೊನೆಯ ಅತ್ಯುತ್ತಮ ಸಲಹೆ ಎಂದರೆ ಹೆಚ್ಚು ನೀರು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ. ನೀರು ಕುಡಿಯುವುದು ನಿಮ್ಮ ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ. ಅಂತೆಯೇ ನೀರು ದೊಡ್ಡ ಕರುಳಿನ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಮೂತ್ರಕೋಶ ಕ್ಯಾನ್ಸರ್‌ನ ನಿವಾರಣೆಗೂ ದಿವ್ಯೌಷಧವಾಗಿದೆ.



Click it and Unblock the Notifications