For Quick Alerts
ALLOW NOTIFICATIONS  
For Daily Alerts

  ಸ್ವಚ್ಛತೆ ಕಾಪಾಡಿದರೆ ರೋಗಬಾಧೆ ದೂರ ಬಲುದೂರ...

  By Super Admin
  |

  ನಮ್ಮ ದೈನಂದಿನ ಜೀವನದಲ್ಲಿ ಸ್ಛಚತೆ ತುಂಬಾ ಮುಖ್ಯ. ಕೇಂದ್ರ ಸರಕಾರ ಕೂಡ ಸ್ವಚ್ಛ ಭಾರತ ಅಭಿಯಾನವನ್ನು ಶುರು ಮಾಡಿದೆ. ಈ ಅಭಿಯಾನದ ಮೂಲಕ ಬಯಲಿನಲ್ಲಿ ಶೌಚ ಮಾಡಬಾರದು ಮತ್ತು ಪ್ರತಿಯೊಂದು ಮನೆಯಲ್ಲೂ ಶೌಚಾಲಯವಿರಬೇಕು ಮತ್ತು ಪ್ರತಿಯೊಂದು ಗ್ರಾಮವೂ ಸ್ವಚ್ಛವಾಗಿರಬೇಕು ಎನ್ನುವುದು ಉದ್ದೇಶವಾಗಿದೆ. ಆದರೆ ಎಷ್ಟು ಮಂದಿ ತಮ್ಮ ದೈನಂದಿನ ಜೀವನದಲ್ಲಿ ಸ್ವಚ್ಛತೆಯನ್ನು ಪಾಲಿಸುತ್ತಾರೆ.

   

  Toothpaste

  ಸ್ವಚ್ಛತೆಯನ್ನು ಪಾಲಿಸಿದರೆ ಮುಂದಿನ ರೋಗರುಜಿನಗಳಿಂದ ದೂರವಿರಬಹುದು. ಬಾಲ್ಯದಿಂದಲೇ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಹೇಳಿಕೊಟ್ಟರೆ ಮುಂದಿನ ದಿನಗಳಲ್ಲಿ ಅವರು ಸ್ವಚ್ಛತೆಯನ್ನು ಅಳವಡಿಸಿಕೊಂಡು ಸೋಂಕು ಹಾಗೂ ರೋಗಗಳಿಂದ ದೂರವಿರಬಹುದು. ಹೆಚ್ಚಿನವರು ಹೊಸ ವರ್ಷಕ್ಕೆ ಧೂಮಪಾನ ತ್ಯಜಿಸುವುದು, ಆರೋಗ್ಯಕರವಾದ ಆಹಾರ ತಿನ್ನುವುದು, ಹಣ ಉಳಿಸುವುದು ಮೊದಲಾದವುಗಳ ಬಗ್ಗೆ ಪಣ ತೊಡುತ್ತಾರೆ.    'ಆರೋಗ್ಯವೇ ಭಾಗ್ಯ' ಎಂಬ ಅರಿವು ಎಂದೆಂದಿಗೂ ಇರಲಿ!

  ಆದರೆ ನಾವು ಸ್ವಚ್ಛವಾಗಿದ್ದುಕೊಂಡು ನಮ್ಮ ಸುತ್ತಲೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎನ್ನುವ ಬಗ್ಗೆ ಯಾರೂ ಪಣ ತೊಡುವುದಿಲ್ಲ. ಹೊಸ ವರ್ಷಕ್ಕೆ ಸ್ವಚ್ಛತೆಯ ಬಗ್ಗೆ ಪಣ ತೊಟ್ಟರೆ ತುಂಬಾ ಒಳ್ಳೆಯದು.

  bath
    

  *ಪ್ರತೀ ದಿನ ಎದ್ದಾಗ ಇಂದು ಏನು ಮಾಡಬೇಕೆಂದು ಯಾವತ್ತಾದರೂ ಕ್ರಿಯಾತ್ಮಕವಾಗಿ ಯೋಚನೆ ಮಾಡಿದ್ದೀರಾ? ಕೆಲವರ ಬೆಳಗ್ಗಿನ ಕ್ರಿಯೆಗಳು ತುಂಬಾ ನೀರವತೆಯಿಂದ ಕೂಡಿರುತ್ತದೆ. ಎದ್ದಕೂಡಲೇ ಶೌಚಾಲಯಕ್ಕೆ ಹೋಗುತ್ತಾರೆ. ಬ್ರಶ್ ತೆಗೆದುಕೊಂಡು ಹಲ್ಲುಜ್ಜುತ್ತಾರೆ. ಆದರೆ ಬೆಳಗ್ಗೆ ಹಲ್ಲುಉಜ್ಜಿದರೆ ಸಾಕಾಗದು. ರಾತ್ರಿ ಮಲಗುವ ಮುನ್ನ ಕೂಡ ಹಲ್ಲುಜ್ಜಬೇಕು.

  *ನಾಲಗೆಯನ್ನು ಕೂಡ ಬ್ರಶ್‌ನಿಂದ ಉಜ್ಜಿಕೊಳ್ಳಿ. ಪ್ರತೀದಿನವೂ ಸ್ನಾನ ಮಾಡುವುದು ಸ್ವಚ್ಛತೆಯ ಮತ್ತೊಂದು ವಿಧಾನ. ಪ್ರತೀ ದಿನವೂ ವಾತಾವರಣವೂ ಕಲುಷಿತವಾಗುತ್ತಿರುತ್ತದೆ. ಧೂಳು, ಹೊಗೆಯೊಂದಿಗೆ ನಾವು ಪ್ರತಿ ದಿನವೂ ಹೋರಾಡುತ್ತಿರುತ್ತೇವೆ. ಇಂತಹ ಸಂದರ್ಭದಲ್ಲಿ ನಿತ್ಯವೂ ಸ್ನಾನ ಮಾಡುವುದು ಅತ್ಯಗತ್ಯ.

  nailcutter
   

  *ಇದು ದೇಹವನ್ನು ಮಾತ್ರ ಸ್ವಚ್ಛ ಮಾಡುವುದು ಮಾತ್ರವಲ್ಲದೆ ದೇಹದ ನೋವು ಹಾಗೂ ಒತ್ತಡವನ್ನು ದೂರ ಮಾಡುತ್ತದೆ. ನಿಯಮಿತವಾಗಿ ಉಗುರುಗಳನ್ನು ಕತ್ತರಿಸುತ್ತಾ ಇರಿ. ಉಗುರುಗಳು ಉದ್ದವಾಗಿದ್ದರೆ ಅದರಲ್ಲಿ ಬ್ಯಾಕ್ಟೀರಿಯಾಗಳು ವಾಸಮಾಡುವುದು. ಶೀನುವಾಗ ಮತ್ತು ಕೆಮ್ಮುವಾಗ ಮುಖ ಮುಚ್ಚಿಕೊಳ್ಳಿ.          ಆರೋಗ್ಯವೇ ಭಾಗ್ಯ ನಾಣ್ಣುಡಿ ಮರೆತು, ಕೊರಗಬೇಡಿ!

  English summary

  Hygiene Habits That You Shouldn't Miss in Your Daily Routine

  There are certain hygiene habits that you must follow on a daily basis to live a clean and disease-free life. These habits need to be practised since childhood and if you are not one of them who follow these habits, read on to know more and make these a part of your daily life. So here are some of the hygienic habits that you should follow on a daily basis and make them a part of your life as a natural routine.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more