ದಿನನಿತ್ಯ ಮೀನು ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಿ!

By: Hemanth
Subscribe to Boldsky

ಮೀನುಗಳಲ್ಲಿ ಹೆಚ್ಚಿನ ಪೋಷಕಾಂಶಗಳು ಇರುವುದರಿಂದ ಇದು ದೇಹಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಮೀನು ಪ್ರತಿಯೊಬ್ಬರಿಗೂ ತುಂಬಾ ಒಳ್ಳೆಯ ಆಹಾರವೆಂದು ಹೇಳಲಾಗುತ್ತದೆ. ಆದರೆ ಗರ್ಭಿಣಿ ಮಹಿಳೆಯರು, ಕೆಲವೊಂದು ಆರೋಗ್ಯ ಸಮಸ್ಯೆ ಇರುವವರು ಮೀನನ್ನು ಕಡೆಗಣಿಸಬೇಕು. ಮೀನಿನಲ್ಲಿ ಪ್ರೋಟೀನ್ ಮತ್ತು ಒಮೆಗಾ3 ಕೊಬ್ಬಿನಾಮ್ಲವಿದೆ. ಆದರೆ ಅತಿಯಾಗಿ ಮೀನು ತಿಂದರೆ ಯಾವ ರೀತಿಯ ಪರಿಣಾಮ ಬೀರಬಹುದು.

ಎಷ್ಟು ಮೀನು ತಿನ್ನಬೇಕು ಎನ್ನುವ ಬಗ್ಗೆ ಕೆಲವು ಸಲ ಪ್ರಶ್ನೆ ಬರುವುದಿದೆ. ಸಾಲ್ಮನ್ ಮತ್ತು ಟುನಾದಂತಹ ಮೀನುಗಳಲ್ಲಿ ಹೆಚ್ಚಿನ ಪೋಷಕಾಂಶಗಳಿದ್ದು, ಇದು ಆರೋಗ್ಯಕ್ಕೆ ಲಾಭಕಾರಿ. ವಾರದಲ್ಲಿ ಎರಡು ಸಲ ಇದನ್ನು ತಿಂದರೆ ಹೆಚ್ಚಿನ ಲಾಭಗಳು ನಿಮಗೆ ಸಿಗಲಿದೆ. ಮೀನಿನ ಬಗ್ಗೆ ಕೆಲವೊಂದು ಸತ್ಯಗಳನ್ನು ಇಲ್ಲಿ ತಿಳಿದುಕೊಳ್ಳಿ. 

pregnancy

1.ಗರ್ಭಿಣಿ ಮಹಿಳೆಯರು ಮತ್ತು ಬಾಣಂತಿ ಮಹಿಳೆಯರು ಮೀನು ತಿನ್ನುವಾಗ ಎಚ್ಚರವಹಿಸಬೇಕು. ಕೆಲವೊಂದು ಮೀನುಗಳಲ್ಲಿ ಪಾದರಸವಿರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ವೈದ್ಯರ ಸಲಹೆ ಪಡೆದು ಮೀನು ಸೇವಿಸಿ. 

fish
 

2. ಯಾವ ಮೀನುಗಳಲ್ಲಿ ಅತಿಯಾದ ಪಾದರಸವಿರುತ್ತದೆ? ದೊಡ್ಡ ಗಾತ್ರದ ಮೀನುಗಳು ಹಾಗೂ ಇನ್ನೊಂದು ಮೀನನ್ನು ತಿಂದು ಬದುಕುವ ಮೀನುಗಳಲ್ಲಿ ಪಾದರಸವಿರುತ್ತದೆ. 

fish
 

3. ನೀವು ನಿಯಮಿತವಾಗಿ ಮೀನನ್ನು ಸೇವಿಸುತ್ತಾ ಇದ್ದರೆ ಪಾದರಸವು ಕಡಿಮೆ ಇರುವಂತಹ ಮೀನನ್ನು ಆಯ್ಕೆ ಮಾಡಿಕೊಳ್ಳಿ. ಸಾಲ್ಮನ್, ಸಿಗಡಿ, ಸಿಂಪಿ ಮತ್ತು ಮಳಿಮೃದ್ವಂಗಿಗಳಲ್ಲಿ ಪಾದರಸ ತುಂಬಾ ಕಡಿಮೆ ಇದೆ.

fish
 

4. ಹೆಚ್ಚಿನ ಪಾದರಸವಿರುವ ಮೀನಿನ ಸೇವನೆಯನ್ನು ಕಡಿಮೆ ಮಾಡಿ ಅಥವಾ ತ್ಯಜಿಸಿ. ಕತ್ತಿಮೀನು, ಟ್ಯುನಾ, ಮೀನುಗಳನ್ನು ತಿನ್ನಬೇಡಿ.

fish
 

5. ಒಂದೇ ರೀತಿಯ ಮೀನನ್ನು ತಿನ್ನುವ ಬದಲು ವಿವಿಧ ರೀತಿಯ ಮೀನು ತಿಂದರೆ ಅಪಾಯವು ಕಡಿಮೆಯಾಗುವುದು.

6. ವಾರದಲ್ಲಿ ಒಂದು ಅಥವಾ ಎರಡು ಸಲ ಮಾತ್ರ ಮೀನು ಸೇವಿಸಿ. ಮೀನು ತಿನ್ನಬಹುದೇ ಎಂದು ವೈದ್ಯರ ಸಲಹೆ ಪಡೆದುಕೊಳ್ಳಿ.

English summary

How Much Fish Is Too Much?

Fish lovers may sometimes wonder how much is too much. Is eating too much a concern? Well, it depends upon many factors. Firstly, your current health condition, your body weight, whether you are a pregnant woman, your favourite variety of fish and your intake per day- all of these factors do play a role. Here are some more facts...
Please Wait while comments are loading...
Subscribe Newsletter