Latest Updates
-
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
ವಿವಾಹದ ಬಳಿಕ, ದೇಹದ ತೂಕ ಹೆಚ್ಚಾಗುತ್ತಿದೆಯೇ?
ವಿವಾಹ ಜೀವನದ ಒಂದು ಪ್ರಮುಖ ಘಟ್ಟವಾಗಿದ್ದು ಸುಖವಾದ ಸಾಂಸಾರಿಕ ಜೀವನ ನಡೆಸುವವರು ಉತ್ತಮ ಆರೋಗ್ಯ ಹೊಂದಿರುತ್ತಾರೆ ಹಾಗೂ ಇವರ ಆಯಸ್ಸು ಸಹಾ ಹೆಚ್ಚುತ್ತದೆ. ಆದರೆ ಸಾಮಾನ್ಯವಾಗಿ ವಿವಾಹದ ಬಳಿಕ ಹೆಚ್ಚಿನ ಜೋಡಿಗಳು ಸ್ಥೂಲಕಾಯದತ್ತ ವಾಲುತ್ತಾರೆ. ಇದಕ್ಕೆ ಕಾರಣವೇನು ಗೊತ್ತೇ? ಇದಕ್ಕೆ ಒಂದೇ ಕಾರಣವನ್ನು ಹೇಳಲಾಗದಿದ್ದರೂ ಸುಮಾರಾಗಿ ಬದಲಾಗುವ ಜೀವನಶೈಲಿ ಒಂದು ಪ್ರಮುಖ ಕಾರಣವೆಂದು ಖಂಡಿತಾ ಹೇಳಬಹುದು. ಇತ್ತೀಚೆಗೆ ನಡೆಸಿದ ಒಂದು ಸಂಶೋಧನೆಯ ಪ್ರಕಾರ ವಿವಾಹಿತರು ಅವಿವಾಹಿತರಿಗಿಂತಲೂ ಕೊಂಚ ಹೆಚ್ಚು ಪ್ರಮಾಣದಲ್ಲಿ ಆಹಾರ ಸೇವಿಸುತ್ತಾರೆ ಹಾಗೂ ವಿವಾಹಪೂರ್ವಕ್ಕೆ ಇದ್ದ ದೈಹಿಕ ಚಟುವಟಿಕೆ ವಿವಾಹದ ಬಳಿಕ ಕಡಿಮೆಯಾಗುತ್ತದೆ.
ಅಲ್ಲದೇ ಪರಸ್ಪರರ ಸಂಗದಿಂದ ಉಲ್ಲಸಿತವಾಗುವ ಮನ ಹೆಚ್ಚು ತಿನ್ನಲು, ಹೆಚ್ಚು ಆರಾಮ ಮಾಡಲು ಪ್ರೇರೇಪಿಸುತ್ತದೆ. ಈ ಸಂಶೋಧನೆಯಲ್ಲಿ ಹಲವು ವ್ಯಕ್ತಿಗಳ ಬಿಎಂಐ (BMI-Boby Mass Index ಅಂದರೆ ಎತ್ತರಕ್ಕೆ ತಕ್ಕನಾಗಿ ಇರಬೇಕಾಗಿರುವ ತೂಕದ ಕೋಷ್ಠಕ) ಹಾಗೂ ವ್ಯಕ್ತಿಯು ವಿವಾಹಿತನೇ ಅಲ್ಲವೇ ಎಂಬ ಮಾಹಿತಿಗಳನ್ನು ಕಲೆಹಾಕಲಾಯ್ತು. ಹೆಚ್ಚಿನ ಬಿಎಂಐ ಇದ್ದವರು (ಅಂದರೆ ಹೆಚ್ಚು ಸ್ಥೂಲದೇಹಿಗಳು) ಹಲವು ಕಾಯಿಲೆಗಳಿಗೆ ಸುಲಭವಾಗಿ ತುತ್ತಾಗುತ್ತಾರೆಂದೂ ಕಡಿಮೆ ಇದ್ದವರೂ ಬೇರೆ ರೀತಿಯಲ್ಲಿ ಅನಾರೋಗ್ಯಕ್ಕೆ ಒಳಗಾಗುತ್ತಾರೆಂದೂ ತಿಳಿಸಿತು. ಸುಮಾರು ಹತ್ತು ಸಾವಿರ ಜೋಡಿಗಳನ್ನು ಸಂದರ್ಶಿಸಿ ಅವರಿಂದ ಮಾಹಿತಿಗಳನ್ನು ಪಡೆದು ವಿಶ್ಲೇಷಿಸಿದ ಬಳಿಕ ಒಂದು ಮಹತ್ವದ ಸಂಗತಿಯನ್ನು ಈ ಸಂಶೋಧನೆ ಪ್ರಕಟಿಸಿತು.
ನಿಮ್ಮ ಪುರುಷನ ಹೃದಯ ಗೆಲ್ಲಲು ಆತನ ಹೊಟ್ಟೆಯನ್ನು ತೃಪ್ತಿಪಡಿಸಿ ಎಂಬುದೊಂದು ಆಂಗ್ಲ ಸುಭಾಷಿತ. ಇದನ್ನು ಪ್ರತಿ ತಾಯಿಯೂ ತನ್ನ ಮಗಳಿಗೆ ಹೇಳಿಕೊಡುವ ಕಾರಣ ಪತ್ನಿಯರು ತಮ್ಮ ಪತಿಯರಿಗೆ ಬಹುವಾಗಿ ತಿನ್ನಿಸಿ ಹೃದಯ ಗೆಲ್ಲುವ ತವಕದಲ್ಲಿರುತ್ತಾರೆ. ಪಾಪದ ಪತಿ ಈ ಹುನ್ನಾರವನ್ನರಿಯದೇ ರುಚಿಯಾದ ಊಟ ತಿಂಡಿಯನ್ನು ಸರಿಯಾಗಿ ತಿಂದು ದಿನೇ ದಿನೇ ತೂಕ ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಾನೆ. ಇತ್ತ ಪತಿಯ ಹೃದಯ ಗೆದ್ದ ಪತ್ನಿ ಗರ್ಭವತಿಯಾದ ಬಳಿಕ ಹಲವು ಹಾರ್ಮೋನುಗಳ ಕಾರಣ ತೂಕ ಹೆಚ್ಚಿಕೊಳ್ಳುತ್ತಾಳೆ. ಇನ್ನೊಂದು ಸ್ವಾರಸ್ಯಕರ ಸಂಗತಿ ಎಂದರೆ ತಮ್ಮ ಸಂಗಾತಿಯನ್ನು ಕಂಡುಕೊಳ್ಳಲು ತಮ್ಮ ಅಂಗಸೌಷ್ಠವ ತೆಳುವಾಗಿರಬೇಕೆಂದು ಜತನ ವಹಿಸಿದ್ಧ ಪತಿ ಪತ್ನಿಯರು ವಿವಾಹದ ಬಳಿಕ ತಮ್ಮ ಪಾಲಿಗೆ ದಕ್ಕಿದ ಸಂಗಾತಿಯನ್ನು ಮನಸಾರೆ ಒಪ್ಪಿ ಇನ್ನು ದೇಹದ ಬಗ್ಗೆ ಕಾಳಜಿ ವಹಿಸುವ ಅಗತ್ಯವಿಲ್ಲ ಎಂದು ನಿರಾಳರಾಗಿರುವುದು ತೂಕ ಹೆಚ್ಚಲು ಇನ್ನೊಂದು ಕಾರಣವಾಗಿದೆ. ಈ ವಿವರಗಳು ನಗು ಬರಿಸಿತೇ? ಆದರೆ ಇವು ಸಂಶೋಧನೆಗಳಿಂದ ಕಂಡುಬಂದ ವಾಸ್ತವಗಳಾಗಿವೆ. ಈ ಪರಿಸ್ಥಿತಿಗೆ ಬಾರದೇ ಇರಲು ಕೆಲವು ಆಪ್ತಸಲಹೆಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ, ಮುಂದೆ ಓದಿ...

ಆಪ್ತಸಲಹೆ 1
ಇನ್ನೊಂದು ಸಂಶೋಧನೆಯ ಪ್ರಕಾರ 89% ಜನರು ಮನೆಯಲ್ಲಿ ಅಡುಗೆ ಮಾಡಿ ಅಪರೂಪಕ್ಕೆ ಹೊರಗೆ ಊಟ ಮಾಡುತ್ತಾರೆ. ನೀವು ಇದೇ ವರ್ಗಕ್ಕೆ ಸೇರಿದವರಾಗಿದ್ದರೆ ನಿಮ್ಮ ಆಹಾರವನ್ನು ನೀವೇ ಆಯ್ದುಕೊಳ್ಳಿ. ಹೆಚ್ಚಿನ ನಾರು ಇರುವ, ತೂಕ ಹೆಚ್ಚಿಸದ ಆಹಾರಗಳಿಗೆ ಆದ್ಯತೆ ನೀಡಿ. ಹೊರಗಿನ ಆಹಾರಕ್ಕೆ ಸಾಧ್ಯವಾದಷ್ಟು ಜಾಗ ನೀಡಬೇಡಿ. ಕಡಿಮೆ ಕ್ಯಾಲೋರಿಗಳ ಆಹಾರ, ಮೈದಾ ಬದಲಿಗೆ ಗೋಧಿಹಿಟ್ಟಿನ ಬಳಕೆ ಉತ್ತಮ.

ಆಪ್ತಸಲಹೆ 2
ಫ್ರಿಜ್ಜಿನಲ್ಲಿ ಕೇವಲ ಹಣ್ಣು ಮತ್ತು ತರಕಾರಿಗಳಿರಲಿ. ಸಿಹಿ, ಕೇಕ್, ಚಾಕಲೇಟು ಮೊದಲಾದ ಸಕ್ಕರೆ ಆಧಾರಿತ ಖಾದ್ಯಗಳನ್ನು ತರಲೇಬೇಡಿ ಅಥವಾ ತಯಾರಿಸಲೇಬೇಡಿ. ಏಕೆಂದರೆ ಫ್ರಿಜ್ ತೆರೆದಾಗ ಒಳಗಿರುವ ಸಿಹಿಪದಾರ್ಥ ನೋಡಿದ ಯಾರಿಗಾದರೂ ತಿನ್ನುವ ಬಯಕೆಯನ್ನು ಹತ್ತಿಕ್ಕಿಕೊಳ್ಳಲು ಸಾಧ್ಯವಿಲ್ಲ.

ಆಪ್ತಸಲಹೆ 3
ನಿಮ್ಮ ಸಂವಾದಗಳನ್ನು ಬೆಳಗ್ಗಿನ ವಾಯುವಿಹಾರದ ಸಮಯಕ್ಕೆ ನಿಗದಿಪಡಿಸಿ. ಏಕೆಂದರೆ ವಾಯುವಿಹಾರದ ಸಮಯದಲ್ಲಿ ಗಂಡಹೆಂಡಿರು ತಮ್ಮ ನಡುವಣ ಸಂಭಾಷಣೆಗಳನ್ನು, ಮುಂದಿನ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ವಾಯುವಿಹಾರದ ದಣಿವು ಗೊತ್ತಾಗುವುದೇ ಇಲ್ಲ. ಇದರಿಂದ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗಿದಂತೆಯೂ ಆಯಿತು, ಸಂಭಾಷಣೆಯೂ ಸಾಧ್ಯವಾಯಿತು.

ಆಪ್ತಸಲಹೆ 4
ವ್ಯಾಯಾಮ ಮಾಡಲಿಕ್ಕೆ ನಿಮಗೆ ಸೋಮಾರಿತನ ಎನಿಸಿದರೆ ಮುಂದಿನ ಬಾರಿ ನಿಮ್ಮ ಸಂಗಾತಿಯೊಂದಿಗೆ ವ್ಯಾಯಾಮ ಮಾಡಿ. ಒಬ್ಬಂಟಿಯಾಗಿದ್ದಾಗ ಮಾಡುವ ವ್ಯಾಯಾಮಕ್ಕಿಂತಲೂ ನಿಮ್ಮ ಸಂಗಾತಿಯೊಂದಿಗೆ ಮಾಡುವ ವ್ಯಾಯಾಮ ಇಷ್ಟವಾಗುತ್ತದೆ. ಅಲ್ಲದೇ ಇಬ್ಬರೂ ನಿಯಮಿತವಾಗಿ ವ್ಯಾಯಾಮ ಮಾಡಲು ಕಟಿಬದ್ದರಾಗುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳುವ ಜೊತೆಗೇ ತೂಕವನ್ನು ಹೆಚ್ಚದಂತೆ ನೋಡಿಕೊಳ್ಳಬಹುದು.

ಆಪ್ತಸಲಹೆ 5
ಒಂದು ವೇಳೆ ನಿಮ್ಮ ವಿವಾಹದಲ್ಲಿ ಏನಾದರೂ ಕಲಹವಿದ್ದರೆ ಇದರ ಕೋಪವನ್ನು ತಿನ್ನುವ ಮೂಲಕ ತೀರಿಸಿಕೊಳ್ಳಲು ಹೋಗಬೇಡಿ. ಬದಲಿಗೆ ಶಾಂತಿಯುತ ಸಂವಾದ, ಹಿರಿಯರ ಸಲಹೆ, ಕೆಲವೊಂದು ವಿಷಯದಲ್ಲಿ ಇಬ್ಬರೂ ತಮ್ಮ ಸಂಗಾತಿಗಾಗಿ ಚಿಕ್ಕವರಾಗುವುದು ಮೊದಲಾದ ಕ್ರಮಗಳಿಂದ ನಿಮ್ಮ ವಿವಾಹವನ್ನು ಮತ್ತೆ ಹಸಿರಾಗಿಸಲು ಪ್ರಯತ್ನಿಸಿ.

ಆಪ್ತಸಲಹೆ 6
ಮನೆಯ ಸಾಮಾನು ತರಲು ನಡೆದೇ ಹೋಗಿ. ಎರಡು ಕೈಗಳಲ್ಲಿ ಹೊತ್ತು ತರಬಹುದಾದಷ್ಟು ತರಕಾರಿ, ದಿನಸಿಗಳನ್ನು ಎತ್ತಿ ನಡೆದುಕೊಂಡು ಬಂದರೆ ಹೆಚ್ಚಿನ ತೂಕ ಕಳೆದುಕೊಂಡಂತೆಯೂ ಆಯಿತು ಹಾಗೂ ಕಾರಿನ ಪೆಟ್ರೋಲಿಗೆ ಹಾಕಬೇಕಾಗಿದ್ದ ಹಣವೂ ಉಳಿಯಿತು.

ಆಪ್ತಸಲಹೆ 7
ದಂಪತಿಗಳ ನಡುವಣ ಪ್ರಣಯ ಚಟುವಟಿಕೆಗಳು ನಿರಂತರವಾಗಿರಲಿ. ಪ್ರಣಯ ಚಟುವಟಿಕೆಯಿಂದ ದಂಪತಿಗಳ ನಡುವೆ ಬಾಂಧವ್ಯ, ಪ್ರೇಮ ಹೆಚ್ಚುವುದು ಮಾತ್ರವಲ್ಲ, ಕ್ಯಾಲೋರಿಗಳೂ ಬಳಸಲ್ಪಡುವ ಕಾರಣ ತೂಕ ಹೆಚ್ಚದೇ ಇರುತ್ತದೆ.



Click it and Unblock the Notifications











