For Quick Alerts
ALLOW NOTIFICATIONS  
For Daily Alerts

ಕಿಡ್ನಿಯ ಆರೋಗ್ಯಕ್ಕೆ ಸರಳ ಜ್ಯೂಸ್-ನೀವೂ ಒಮ್ಮೆ ಪ್ರಯತ್ನಿಸಿ

By Arshad
|

ಕಾರ್ಯನಿಮಿತ್ತ ಹೊರಗೆ ಹೋಗುವವರೆಲ್ಲರಿಗೂ ಹೊರಗಿನ ಊಟ ಮತ್ತು ಪೇಯಗಳನ್ನು ಅನಿವಾರ್ಯವಾಗಿ ಸೇವಿಸಬೇಕಾಗಿ ಬರುತ್ತದೆ. ಒಂದು ವೇಳೆ ನೀವೂ ಹೊರಗಿನ ಆಹಾರ ಪಾನೀಯಗಳನ್ನು ಅನಿವಾರ್ಯವಾಗಿ ಸೇವಿಸಬೇಕಾಗಿ ಬಂದು ನಿಮ್ಮ ಅರೋಗ್ಯದ ಬಗ್ಗೆ ಕಾಳಜಿಯನ್ನೂ ಹೊಂದಿದ್ದರೆ ಮೊದಲಿಗೆ ನಿಮ್ಮ ಕಾಳಜಿ ನಿಮ್ಮ ಮೂತ್ರಪಿಂಡಗಳ ಬಗ್ಗೆ ಇರಬೇಕು.

ಏಕೆಂದರೆ ಹೊರಗಿನ ಪಾನೀಯಗಳಲ್ಲಿರುವ ಕಲ್ಮಶಗಳನ್ನು ಸ್ವಚ್ಛಗೊಳಿಸುತ್ತಾ ಮೂತ್ರಪಿಂಡಗಳಲ್ಲಿ ಹೆಚ್ಚಿನ ವಿಷಕಾರಿ ವಸ್ತುಗಳು ಸಂಗ್ರಹವಾಗಿರುತ್ತವೆ. ವಿಶೇಷವಾಗಿ ನೀರಿನಲ್ಲಿ ಕರಗಿರುವ ಲವಣಗಳು. ಈ ಲವಣಗಳನ್ನು ಶೋಧಿಸಿದ ಬಳಿಕ ಮೂತ್ರಪಿಂಡಗಳಲ್ಲಿ ಉಳಿದುಕೊಳ್ಳುವ ಲವಣಗಳ ಸಾಂದ್ರತೆ ಹೆಚ್ಚುತ್ತಾ ಕಲ್ಲಿನ ರೂಪ ಪಡೆಯುತ್ತವೆ.

Cranberry

ಈ ಕಲ್ಲುಗಳು ನಿಧಾನವಾಗಿ ದೊಡ್ಡದಾಗುತ್ತಾ ಕಡೆಗೊಂದು ದಿನ ಅಪಾರ ನೋವು ನೀಡುತ್ತವೆ. ಅಲ್ಲದೇ ಕಲ್ಮಶಗಳು ಹೆಚ್ಚು ಹೆಚ್ಚು ಆಮ್ಲೀಯವಾಗುತ್ತಾ ಹೋದಂತೆ ಮೂತ್ರವೂ ಹೆಚ್ಚು ಹಳದಿಯಾಗುತ್ತದೆ. ಆದ್ದರಿಂದ ಮೂತ್ರಪಿಂಡಗಳಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ಕಾಲಕಾಲಕ್ಕೆ ನಿವಾರಿಸಿ ಸ್ವಚ್ಛಗೊಳಿಸುತ್ತಾ ಇರಬೇಕು.

ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಲು ಔಷಧಿಗಳೇನೂ ಬೇಕಾಗಿಲ್ಲ. ಇದಕ್ಕೆ ನೈಸರ್ಗಿಕ ಸಾಮಾಗ್ರಿಗಳೇ ಸಾಕು. ಈ ಕೆಲಸವನ್ನು ಸಮರ್ಥವಾಗಿ ಮಾಡಬಲ್ಲ ಕೆಲವು ಮನೆಮದ್ದುಗಳಿವೆ. ಬನ್ನಿ ಇಂತಹ ಒಂದು ಪ್ರಬಲ ಮತ್ತು ಸಮರ್ಥವಾದ ವಿಧಾನವನ್ನು ನೋಡೋಣ:

ಅಗತ್ಯವಿರುವ ಸಾಮಾಗ್ರಿಗಳು:
* ಕ್ರ್ಯಾನ್ಬೆರಿ ಹಣ್ಣಿನ ರಸ: ½ ಕಪ್
* ಲಿಂಬೆ ರಸ - ½ ಕಪ್

ತಯಾರಿಸುವ ವಿಧಾನ
* ಮೊದಲು ಒಂದು ಕಪ್‌ನಲ್ಲಿ ಮೇಲಿನ ಎರಡೂ ರಸಗಳನ್ನು ಸೇರಿಸಿ ಚೆನ್ನಾಗಿ ಕಲಕಿ ಮಿಶ್ರಣ ಮಾಡಿ.
* ಈ ಪೇಯ ಕೊಂಚ ಹುಳಿಯಾಗಿರುತ್ತದೆ. ಆದರೆ ಇದಕ್ಕೆ ಉಪ್ಪು ಸಕ್ಕರೆ ಏನನ್ನೂ ಸೇರಿಸಬೇಡಿ.


* ಈ ಪೇಯವನ್ನು ಪ್ರತಿದಿನ ರಾತ್ರಿ ಊಟ ಮಾಡಿದ ಬಳಿಕ ಈ ಪೇಯವನ್ನು ಸೇವಿಸಿ.
* ಉತ್ತಮ ಪರಿಣಾಮಕ್ಕಾಗಿ ಕೊಂಚ ನಡೆದಾಡಿ ಬಂದು ಎಷ್ಟು ಸಾಧ್ಯವೋ ಅಷ್ಟೂ ಹೆಚ್ಚು ನೀರು ಕುಡಿದು ಮಲಗಿ.
English summary

Homemade Drink Can Cleanse Your Kidneys!

There are many home remedies for healthy kidneys that can be made using natural ingredients. If you are looking for a home remedy to improve the health of your kidneys naturally, have a look at this natural remedy.
Story first published: Monday, September 19, 2016, 20:04 [IST]
X
Desktop Bottom Promotion