Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸಿಂಪಲ್ ಮನೆಮದ್ದು- ಇದು ಹತ್ತಾರು ಸಮಸ್ಯೆಗಳಿಗೆ ರಾಮಬಾಣ
ಉಗುರಿಗೆ ಹೋಗುವುದಕ್ಕಾಗಿ ಕೊಡಲಿ ತೆಗೆದುಕೊಂಡ ಎಂಬುದೊಂದು ಕನ್ನಡದ ಗಾದೆ. ಈ ಗಾದೆ ನಮ್ಮ ನಿತ್ಯದ ಚಿಕ್ಕಪುಟ್ಟ ನೋವು, ದೈಹಿಕ ತೊಂದರೆಗಳಿಗೂ ಅನ್ವಯವಾಗುತ್ತದೆ. ಪ್ರತಿ ಬಾರಿ ಶೀತ ತಲೆನೋವು ಎದುರಾದಾಗ ವೈದ್ಯರ ಬಳಿ ಧಾವಿಸುವ ಬದಲು ನೋವು ಪ್ರಾರಂಭವಾದೊಡನೇ ಕೆಲವು ಸುಲಭ ಮನೆಮದ್ದುಗಳನ್ನು ಅನುಸರಿಸಿದರೆ ತಕ್ಷಣ ಕಡಿಮೆಯಾಗುತ್ತದೆ. ಪವರ್‌ಫುಲ್ ಜ್ಯೂಸ್: ಇದು ಬರೋಬ್ಬರಿ 7 ಕಾಯಿಲೆಗಳಿಗೆ ರಾಮಬಾಣ!
ಒಟ್ಟಾರೆ ಆರೋಗ್ಯಕ್ಕೆ ಕೆಲವು ಮನೆಮದ್ದುಗಳು ಅತ್ಯಂತ ಪರಿಣಾಮಕಾರಿಯಾಗಿದ್ದು ಇದನ್ನು ತಿಳಿದುಕೊಂಡಿರುವುದು ಎಲ್ಲರಿಗೂ ಉತ್ತಮ. ಬನ್ನಿ ಇಂತಹ ಉತ್ತಮ ಪರಿಣಾಮಕಾರಿ ವಿಧಾನಗಳನ್ನು ನೋಡೋಣ:

ಶೀತ ನೆಗಡಿಯ ಸಮಸ್ಯೆಗೆ....
ಮಳೆಗಾಲದ ಆಗಮನವಾಗುತ್ತಿದ್ದಂತೆಯೇ ಆವರಿಸುವ ತೇವ ತನ್ನೊಂದಿಗೆ ಶೀತ ನೆಗಡಿ ಕೆಮ್ಮುಗಳನ್ನೂ ತರುತ್ತದೆ. ಅದರಲ್ಲೂ ಮಕ್ಕಳಿಗೆ ಶೀತ ಅತಿ ಬೇಗನೇ ಆವರಿಸುತ್ತದೆ. ಚಿಂತಿಸದಿರಿ, ದಿನನಿತ್ಯ ಹಾಲಿನೊಂದಿಗೆ ಕೊಂಚ ಅರಿಶಿನ ಪುಡಿಯನ್ನು ಬೆರೆಸಿ ಕುಡಿಯುವುದರಿಂದ, ಉತ್ತಮ ಫಲಿತಾಂಶ ಪಡೆಯಬಹುದು. ಮಕ್ಕಳ ಶೀತ ಶಮನಕ್ಕೆ-ಬಿಸಿ ಬಿಸಿ ಅರಿಶಿನ ಬೆರೆಸಿದ ಹಾಲು

ನಿತ್ಯವೂ ಒಂದು ಲೋಟ ಶುಂಠಿನೀರು...
ನಿತ್ಯವೂ ಒಂದು ಲೋಟ ಶುಂಠಿನೀರು ಕುಡಿಯುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ತನ್ಮೂಲಕ ಅಪಾಯವಾಯು, ಹೊಟ್ಟೆಯುಬ್ಬರಿಕೆ ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ ಹಾಗೂ ಕರುಳುಗಳಲ್ಲಿದ್ದ ತ್ಯಾಜ್ಯ ಹೊರಹೋಗಿರುವ ಮೂಲಕ ಹೊಟ್ಟೆ ಖಾಲಿಯಾದಂತನ್ನಿಸುತ್ತದೆ. ಮುಂಜಾನೆ ಎದ್ದು ಶುಂಠಿ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ

ಗಂಟಲ ಕೆರೆತಕ್ಕೆ
ಎರಡರಿಂದ ಮೂರು ಬಸಲೆ ಸೊಪ್ಪಿನ ಎಲೆಗಳನ್ನು ಕೊಂಚ ನೀರಿನಲ್ಲಿ ಕುದಿಸಿ. ಕುದಿಯಲು ಪ್ರಾರಂಭವಾದ ಬಳಿಕ ಉರಿಯನ್ನು ಕನಿಷ್ಠಕ್ಕಿಳಿಸಿ ಕುದಿಯುವುದನ್ನು ಮುಂದುವರೆಸಿ. ಕೊಂಚ ಹೊತ್ತಿನ ಬಳಿಕ ಎಲೆ ಪುಡಿಪುಡಿಯಾಗುತ್ತದೆ. ಈ ನೀರನ್ನು ಕೊಂಚವೇ ತಣಿಸಿ ಉಗುರುಬೆಚ್ಚಗಾಗಿಸಿ. ಈ ನೀರಿನಿಂದ ಗಂಟಲನ್ನು ಗಳಗಳ ಮಾಡಿ ಮುಕ್ಕಳಿಸಿ. ಕೊಂಚ ಹೊತ್ತು ಬೇರೇನನ್ನೂ ಸೇವಿಸಬೇಡಿ. ಇನ್ನು ಶೀತ, ಗಂಟಲು ಕೆರೆತಕ್ಕೆ ಗುಡ್ ಬೈ ಹೇಳಿ!

ಕಣ್ಣ ಕೆಳಗಿನ ಕಪ್ಪು ವರ್ತುಲಗಳು
ಕೊಂಚ ಕಿತ್ತಳೆರಸ ಮತ್ತು ಗ್ಲಿಸೆರಿನ್ ಬೆರೆಸಿ ನಿತ್ಯವೂ ತೆಳುವಾಗಿ ಹಚ್ಚಿಕೊಳ್ಳುತ್ತಿರಿ.

ಅಕಾಲಿಕ ಕೂದಲು ನೆರೆಯುವುದು
ನೆಲ್ಲಿಕಾಯಿಯನ್ನು ಚೆನ್ನಾಗಿ ಒಣಗಿಸಿ ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ. ಈ ತುಂಡುಗಳನ್ನು ಕೊಂಚ ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ. ಎಷ್ಟು ಕುದಿಸಬೇಕೆಂದರೆ ನೆಲ್ಲಿಕಾಯಿಯ ತುಂಡುಗಳು ಸುಟ್ಟು ಕರ್ರಗಾಗಬೇಕು. ಬಳಿಕ ಈ ಎಣ್ಣೆಯನ್ನು ತಣಿಸಿ ಕೂದಲಿಗೆ ನಿತ್ಯವೂ ಕೊಂಚ ಮಸಾಜ್ ಮೂಲಕ ಹಚ್ಚಿಕೊಳ್ಳಿ.

ತಲೆಹೊಟ್ಟು
ಸಮಪ್ರಮಾಣದಲ್ಲಿ ಕೊಂಚ ಬೆಚ್ಚಗಿನ ಕೊಬ್ಬರಿ ಎಣ್ಣೆ ಮತ್ತು ಕರ್ಪೂರವನ್ನು ಕುಟ್ಟಿ ಪುಡಿಮಾಡಿ ಬೆರೆಸಿ. ಪ್ರತಿ ರಾತ್ರಿ ಮಲಗುವ ಮುನ್ನ ತಲೆಗೆ ಹಚ್ಚಿಕೊಂಡು ಮಲಗಿ ಬೆಳಿಗ್ಗೆ ಸ್ನಾನ ಮಾಡಿ. ಸಿಂಪಲ್ ಟಿಪ್ಸ್: ತಲೆಹೊಟ್ಟು ಸಮಸ್ಯೆಗೆ ಪವರ್‌ಫುಲ್ ಮನೆಮದ್ದು

ಅಸ್ತಮಾ
ಒಂದು ದೊಡ್ಡಚಮಚ ಜೇನು ಮತ್ತು ಅರ್ಧ ದೊಡ್ಡಚಮಚ ಚೆಕ್ಕೆಯ ಪುಡಿಯನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಸೇವಿಸಿ. ಅಸ್ತಮಾ ಕಾಯಿಲೆಗೆ ಮನೆಮದ್ದು-ಸ್ಪೆಷಲ್ ಲೇಖನ

ಅಧಿಕ ರಕ್ತದೊತ್ತಡವಿದ್ದರೆ
ನೆಲ್ಲಿಕಾಯಿಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿದರೆ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ. ಇದನ್ನು ನಿತ್ಯವೂ ಪ್ರಥಮ ಆಹಾರವಾಗಿ ಬೆಳಿಗ್ಗೆ ಸೇವಿಸಿದರೆ ಹೆಚ್ಚು ಪರಿಣಾಮಕಾರಿಯಾಗಿದೆ. ಎಚ್ಚರ: ಅಧಿಕ ರಕ್ತದೊತ್ತಡ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!

ಕುಹರದಲ್ಲಿ ಸೋಂಕು ಇದ್ದರೆ (Sinus congestion)
ನೈಸರ್ಗಿಕ ವಿಧಾನದಲ್ಲಿ ತಯಾರಿಸಲಾದ ಸೇಬಿನ ಶಿರ್ಕಾ ಮತ್ತು ಕೊಂಚ ಕೇಯ್ನ್ ಮೆಣಸಿನ ಪುಡಿ ಯನ್ನು ಅರ್ಧ ಕಪ್ ಬಿಸಿನೀರಿನಲ್ಲಿ ಬೆರೆಸಿ ದಿನಕ್ಕೆರಡು ಬಾರಿ ಕುಡಿಯಿರಿ. ಆರೋಗ್ಯ ಟಿಪ್ಸ್: ಸೈನಸ್ ಸಮಸ್ಯೆಯನ್ನು ಸರಳವಾಗಿ ಮೈನಸ್ ಮಾಡಿ!

ಬಾಯಿಯಲ್ಲಿ ಹುಣ್ಣು ಆಗಿದ್ದರೆ
ಚೆನ್ನಾಗಿ ಹಣ್ಣಾದ (ಅಂದರೆ ಚುಕ್ಕೆಬಂದ ಸಿಪ್ಪೆಯ) ಬಾಳೆಹಣ್ಣು ಮತ್ತು ಕೊಂಚ ಜೇನು ಬೆರೆಸಿ ನಯವಾದ ಲೇಪನ ತಯಾರಿಸಿ. ಈ ಲೇಪನವನ್ನು ಹುಣ್ಣು ಇರುವ ಭಾಗಕ್ಕೆ ದಪ್ಪನಾಗಿ ಹಚ್ಚಿಕೊಂಡು ಸಾಧ್ಯವಾದಷ್ಟು ಹೊತ್ತು ಹಾಗೇ ಇರಿಸಲು ಯತ್ನಿಸಿ. ಬಾಯಿ ಹುಣ್ಣಿನಿಂದ ಹತಾಶೆಯೇ? ಈ ಲೇಖನ ಓದಿ...

ಅಪಾಯವಾಯು
ಒಂದು ಲೋಟ ನೀರಿಗೆ ಕಾಲು ಚಿಕ್ಕ ಚಮಚ ಅಡುಗೆ ಸೋಡಾ ಬೆರೆಸಿ ಕುಡಿದುಬಿಡಿ.

ವಿಪರೀತ ತಲೆನೋವು
ಒಂದು ಸೇಬುಹಣ್ಣಿನ ಸಿಪ್ಪೆ ಸುಲಿದು ಕೊಂಚ ಉಪ್ಪು ಚಿಮುಕಿಸಿಕೊಂಡು ದಿನದ ಪ್ರಥಮ ಆಹಾರವಾಗಿ ಸೇವಿಸಿ. ಕ್ಷಣಾರ್ಧದಲ್ಲಿ ತಲೆನೋವು ನಿವಾರಿಸುವ ಮನೆಮದ್ದುಗಳು

ಮಾಸಿಕ ರಜಾದಿನಗಳ ನೋವು
ಎರಡರಿಂದ ಮೂರು ಲಿಂಬೆಹಣ್ಣುಗಳ ರಸವನ್ನು ತಣ್ಣೀರಿನಲ್ಲಿ ಬೆರೆಸಿ ಉಪ್ಪು ಸಕ್ಕರೆ ಏನೂ ಇಲ್ಲದೇ ಪ್ರತಿದಿನ ಕುಡಿಯಬೇಕು. ಆ ದಿನಗಳಲ್ಲಿ ಕಾಡುವ ನೋವಿಗೆ ಫಲಪ್ರದ ಮನೆಮದ್ದು

ವೀಳ್ಯದೆಲೆಯ ಕರಾಮತ್ತು
ಕೆಮ್ಮು ಅಥವಾ ಉಸಿರಾಟದ ತೊಂದರೆಯಾದಾಗ ವೀಳ್ಯದ ಎಲೆಯನ್ನು ಸಾಸಿವೆ ಎಣ್ಣೆಯಲ್ಲಿ ಬಿಸಿ ಮಾಡಿ ಅದ್ದಿ ಎದೆಯ ಮೇಲೆ ಇಡುವುದರಿಂದ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ.ಎಲೆ ಅಡಿಕೆ ಜಜ್ಜಿ ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ತಿನ್ನುವುದರಿಂದ ಒಣ ಕೆಮ್ಮು ಕಡಿಮೆ ಆಗುತ್ತದೆ.



Click it and Unblock the Notifications
