Latest Updates
-
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ!
ಕೇಳಿ ಇಲ್ಲಿ, ಇನ್ನು 'ಉಪ್ಪಿಟ್ಟು' ಎಂದಾಕ್ಷಣ ಮುಖ ಸಿಂಡರಿಸಬೇಡಿ
ಇವತ್ತು ಬೆಳಗಿನ ಉಪಹಾರಕ್ಕೆ, ಯಾರೆಲ್ಲಾ ಉಪ್ಪಿಟ್ಟು ತಂದಿದ್ದೀರಿ, ಕೈ ಎತ್ತಿ ಎಂದು ಶಾಲಾ ಮಕ್ಕಳಲ್ಲಿ ಕೇಳಿದರೆ ಹತ್ತರಲ್ಲಿ ಐದು ಕೈಗಳಾಗದರೂ ಮೇಲೇಳುತ್ತವೆ. ಇದಕ್ಕೆ ಕಾರಣವೇನೆಂದರೆ ಉಪ್ಪಿಟ್ಟು ಅತಿ ಬೇಗನೇ, ರುಚಿಯಾಗಿ ಮತ್ತು ಪುಷ್ಟಿಕರವಾಗಿ ಮಾಡಬಹುದಾದ ತಿಂಡಿಯಾಗಿರುವುದು. ವಾರಕ್ಕೆ ಹಲವು ಬಾರಿ ತಿಂದೂ ತಿಂದೂ ಬೇಸರವಾಗಿರುವ ಒಂದೇ ಕಾರಣ ಬಿಟ್ಟರೆ ಉಪ್ಪಿಟ್ಟನ್ನು ನಿರಾಕರಿಸಲು ಬೇರಾವುದೇ ಕಾರಣವಿಲ್ಲ. ಆದರೆ ಇದಕ್ಕೊಂದು ಸುಲಭ ಪರಿಹಾರವಿದೆ. ಅದೆಂದರೆ ಉಪ್ಪಿಟ್ಟಿನಲ್ಲಿ ಕೊಂಚ ಬದಲಾವಣೆ ಮಾಡಿ ಬೇರೆ ಬೇರೆ ರುಚಿಗಳನ್ನು ಸೇರಿಸುವುದು. ಆಹಾ ಕಾಯಿ ಉಪ್ಪಿಟ್ಟು, ಒಮ್ಮೆ ರುಚಿ ನೋಡಲೇಬೇಕು
ದಕ್ಷಿಣ ಭಾರತದ ಪ್ರತಿ ಮನೆಯಲ್ಲಿಯೂ ವಾರಕ್ಕೆರಡು ಬಾರಿಯಾದರೂ ತಯಾರಾಗುವ ಉಪ್ಪಿಟ್ಟಿನ ಮುಖ್ಯ ಪರಿಕರವೆಂದರೆ ಗೋಧಿರವೆ. ಕೆಲವರು ಅತಿ ಚಿಕ್ಕ ಕಣದ ರವೆ ಆಯ್ಕೆಮಾಡಿದರೆ ಕೆಲವರು ಮಧ್ಯಮ ಗಾತ್ರದ ರವೆಯನ್ನು ಆಯ್ದುಕೊಳ್ಳುತ್ತಾರೆ. ಗೋಧಿಯನ್ನು ಚಿಕ್ಕದಾಗಿ ಪುಡಿಮಾಡಿ ತಯಾರಾದ ರವೆಯಲ್ಲಿ ಗೋಧಿಯಲ್ಲಿರುವ ಎಲ್ಲಾ ಗುಣಗಳಿವೆ. ಕ್ಯಾಬೇಜ್ ರವೆ ಉಪ್ಪಿಟ್ಟು
ಪ್ರತಿ ನೂರು ಗ್ರಾಂ ರವೆಯಲ್ಲಿ 71 ಗ್ರಾಮ್ ಕಾರ್ಬೋಹೈಡ್ರೇಟುಗಳು, ಮೂರು ಗ್ರಾಂ ಕರಗದ ನಾರು, ಹನ್ನೆರಡು ಗ್ರಾಂ ಪ್ರೋಟೀನು ಮತ್ತು ಕೇವಲ ಒಂದು ಗ್ರಾಂ ಕೊಬ್ಬು ಇದೆ. ಅಲ್ಲದೇ ಕೆಲವು ಅವಶ್ಯಕ ಖನಿಜಗಳಾದ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಶಿಯಂ, ಗಂಧಕ, ಪೊಟ್ಯಾಶಿಯಂ, ಸೋಡಿಯಂ ಮತ್ತು ಸತು ಇವೆ. ಅಲ್ಲದೇ ವಿಟಮಿನ್ ಬಿ ಕಾಂಪ್ಲೆಕ್ಸ್ ಸಹಿತ ಇತರ ವಿಟಮಿನ್ನುಗಳಿವೆ. ಬನ್ನಿ ಉಪ್ಪಿಟ್ಟಿನ ಸೇವನೆ ಯಾವ ರೀತಿಯಲ್ಲಿ ಆರೋಗ್ಯಕ್ಕೆ ಅನುಕೂಲಕರವಾಗಿದೆ ಎಂಬುದನ್ನು ಈಗ ನೋಡೋಣ:

ನಿಧಾನವಾಗಿ ಜೀರ್ಣವಾಗುತ್ತದೆ
ಗೋಧಿಯಂತೆಯೇ ಉಪ್ಪಿಟ್ಟು ಸಹಾ ಹೊಟ್ಟೆಯಲ್ಲಿ ನಿಧಾನವಾಗಿ ಜೀರ್ಣವಾಗುವ ಕಾರಣ ಇದು ತುಂಬಾ ಹೊತ್ತಿನವರೆಗೆ ಜೀರ್ಣಾಂಗಗಳಲ್ಲಿದ್ದು ಬೇಗನೇ ಹಸಿವಾಗುವ ತೊಂದರೆಯಿಂದ ತಪ್ಪಿಸುತ್ತದೆ. ಆದ್ದರಿಂದ ದಿನದ ಮುಖ್ಯ ಆಹಾರಗಳ ನಡುವೆ ಬೇರೆ ಆಹಾರ ಸೇವಿಸುವ ಅಗತ್ಯವಿಲ್ಲದ ಕಾರಣ ಅನಗತ್ಯವಾದ ಆಹಾರ ಹೊಟ್ಟೆ ಸೇರುವುದು ತಪ್ಪುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಉಪ್ಪಿಟ್ಟನ್ನು ಹೆಚ್ಚು ಬೇಯಿಸುವ ಅಗತ್ಯವಿಲ್ಲದಿರುವ ಕಾರಣ ಗೋಧಿಯಲ್ಲಿರುವ ವಿಟಮಿನ್ನುಗಳು ಹೆಚ್ಚು ನಷ್ಟವಾಗದೇ ಸರಿಸುಮಾರು ಪೂರ್ಣಪ್ರಮಾಣದಲ್ಲಿ ದೇಹಕ್ಕೆ ಲಭ್ಯವಾಗುತ್ತವೆ. ಮುಖ್ಯವಾಗಿ ವಿಟಮಿನ್ ಬಿ ಮತ್ತು ಇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ.

ದಿನವಿಡೀ ಚಟುವಟಿಕೆಯಿಂದಿರಲು ನೆರವಾಗುತ್ತದೆ
ಡಿಯ ದಿನದ ಚಟುವಟಿಕೆಗೆ ಆಹಾರ ನಿಧಾನವಾಗಿ ಜೀರ್ಣವಾಗುತ್ತಾ ನಿರಂತರವಾಗಿ ಸಿಗುವಂತಿರಬೇಕು. ಈ ಅಗತ್ಯವನ್ನು ಉಪ್ಪಿಟ್ಟು ಸಮರ್ಪಕವಾಗಿ ನೆರವೇರಿಸುತ್ತದೆ.

ದಿನವಿಡೀ ಚಟುವಟಿಕೆಯಿಂದಿರಲು ನೆರವಾಗುತ್ತದೆ
ಒಂದು ವೇಳೆ ಕೆಲವು ತರಕಾರಿಗಳನ್ನು ಉಪ್ಪಿಟ್ಟಿನೊಂದಿಗೆ ಸೇರಿಸಿದರೆ ಆಹಾರದಲ್ಲಿ ಇನ್ನಷ್ಟು ಪೌಷ್ಟಿಕತೆ ಹಾಗೂ ನಾರು ಲಭ್ಯವಾಗುವ ಕಾರಣ ಚೈತನ್ಯವನ್ನು ಹೆಚ್ಚಿಸುತ್ತದೆ.

ಮೂತ್ರಪಿಂಡಗಳಿಗೂ ಉತ್ತಮವಾಗಿದೆ
ಗೋಧಿಯಲ್ಲಿರುವ ಪೊಟ್ಯಾಶಿಯಂ ಮೂತ್ರಪಿಂಡಗಳ ಕಾರ್ಯಕ್ಷಮತೆಗೆ ನೆರವಾಗುವ ಕಾರಣ ಮೂತ್ರಪಿಂಡಗಳು ಉತ್ತಮ ಆರೋಗ್ಯ ಪಡೆಯಲು ಉಪ್ಪಿಟ್ಟು ನೆರವಾಗುತ್ತದೆ.

ಹೃದಯಕ್ಕೂ ಉತ್ತಮ
ಗೋಧಿಯಲ್ಲಿರುವ ಪೋಷಕಾಂಶಗಳು ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತವೆ. ಅಲ್ಲದೇ ಇದರಲ್ಲಿರುವ ಸೆಲೆನಿಯಂ ಎಂಬ ಧಾತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

ನೆರವಾಗುವ ತರಕಾರಿಗಳು
ಉಪ್ಪಿಟ್ಟು ತಯಾರಿಸುವಾಗ ಈರುಳ್ಳಿ, ಟೊಮೇಟೊ ಹೊರತಾಗಿ ಆಲುಗಡ್ಡೆ, ಹಸಿರು ಬಟಾಣಿ, ಕ್ಯಾರೆಟ್, ಶೇಂಗಾಬೀಜ, ಕಾಯಿತುರಿ ಮೊದಲಾದ ಹಲವು ತರಕಾರಿಗಳನ್ನು ಸೇರಿಸುವ ಮೂಲಕ ವೈವಿಧ್ಯತೆಯ ಜೊತೆಗೇ ಅಪಾರವಾದ ಪ್ರಮಾಣದಲ್ಲಿ ಪೋಷಕಾಂಶಗಳನ್ನೂ ಪಡೆಯಬಹುದು. ಇದು ರುಚಿಯ ಜೊತೆಗೆ ಆರೋಗ್ಯವನ್ನೂ ವೃದ್ಧಿಸುತ್ತದೆ.

ಮೂಳೆಗಳು ದೃಢಗೊಳ್ಳುತ್ತವೆ
ಗೋಧಿಯಲ್ಲಿರುವ ಖನಿಜಗಳಾದ ಮೆಗ್ನೀಶಿಯಂ, ಗಂಧಕ ಮತ್ತು ಸತು ನರವ್ಯವಸ್ಥೆಯನ್ನು ಉತ್ತಮಗೊಳಿಸಿದರೆ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸಲು ನೆರವಾಗುತ್ತದೆ.

ಉತ್ತಮ ಪ್ರಮಾಣದ ಕಬ್ಬಿಣ ದೊರಕುತ್ತದೆ
ಗೋಧಿರವೆಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣವಿರುವ ಕಾರಣ ಇದು ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಉತ್ತಮವಾದ ಆಹಾರವಾಗಿದೆ. ಜೊತೆಗೇ ಉತ್ತಮ ರಕ್ತಪರಿಚಲನೆಗೂ ನೆರವಾಗುತ್ತದೆ.

ನೆರವಾಗುವ ಒಣಫಲಗಳು
ಉಪ್ಪಿಟ್ಟನ್ನು ತಿನ್ನುವಾಗ ನಡುನಡುವೆ ಒಣಫಲಗಳು ಸಿಕ್ಕರೆ ಇದು ರುಚಿಯನ್ನು ಇನ್ನಷ್ಟು ಹೆಚ್ಚುತ್ತದೆ. ಬಡವರ ಬಾದಾಮಿಯಾದ ಶೇಂಗಾಬೀಜ ಹೆಚ್ಚಿನವರ ಆಯ್ಕೆಯಾಗಿದೆ.

ನೆರವಾಗುವ ಒಣಫಲಗಳು
ಎಣ್ಣೆ ಬಿಸಿಮಾಡುವಾಗಲೇ ಶೇಂಗಾ ಸೇರಿಸಿ ಕೊಂಚ ಹುರಿದರೆ ಇನ್ನೂ ಉತ್ತಮ. ಬದಲಿಗೆ ಗೋಡಂಬಿ, ಬಾದಾಮಿ, ಪಿಸ್ತಾ ಮೊದಲಾದವುಗಳನ್ನೂ ಸೇರಿಸಬಹುದು.



Click it and Unblock the Notifications










