For Quick Alerts
ALLOW NOTIFICATIONS  
For Daily Alerts

ಆರೋಗ್ಯದ ಕಣ್ಣು ಅದುವೇ ಹಳ್ಳಿಗಾಡಿನ 'ತಾಳೆ ಹಣ್ಣು'

By Super
|

ಸಾಮಾನ್ಯವಾಗಿ ಕರಾವಳಿಯ ಪಟ್ಟಣಗಳಲ್ಲಿ 'ಕಣ್ಣು' ಎಂದೇ ಮಾರಾಟವಾಗುವ ತಾಳೆ ಹಣ್ಣು (Palm fruit) ಬೇಸಿಗೆಯಲ್ಲಿ ಬಾಯಾರಿದವರ ನೀರಡಿಕೆ ತಣಿಸುವ ಫಲವಾಗಿದೆ. ಅದರಲ್ಲೂ ಬೇಸಿಗೆಯ ಮಧ್ಯಾಹ್ನ ತಿನ್ನಲು ಈ ಫಲ ಅತ್ಯುತ್ತಮವಾಗಿದೆ. ನೋಡಲಿಕ್ಕೆ ಇದು ಎಳನೀರಿನ ಒಳಭಾಗದ ಎಳೆಯ ತಿರುಳನ್ನು ಸುತ್ತಿಟ್ಟಂತೆ ಅಥವಾ ಲಿಚ್ಚಿ ಹಣ್ಣಿನ ಸಿಪ್ಪೆಯನ್ನು ಸುಲಿದು ಕೊಂಚ ಅಮುಕಿದಂತೆ ತೋರುತ್ತದೆ. ಕನ್ನಡದಲ್ಲಿ ತಾಳೆಹಣ್ಣು (ಐಸ್‌ ಆ್ಯಪಲ್‌ ಅಥವಾ ಈರೋಳ್) ಹಿಂದಿ, ಮರಾಠಿಯಲ್ಲಿ ಇದಕ್ಕೆ ತಾಡಗೋಲಾ, ತಮಿಳಿನಲ್ಲಿ ನುಂಗು, ತೆಲುಗಿನಲ್ಲಿ ತಾಟಿ ಮುಂಜಳಿ ಎಂದು ಕರೆಯುತ್ತಾರೆ.

ಇನ್ನು ಇದರ ಹಣ್ಣು ಮಾತ್ರವಲ್ಲ, ಇದರ ಕಾಂಡದಿಂದ ಒಸರುವ ರಸವೂ ಆರೋಗ್ಯಕರ ಮತ್ತು ಚೈತನ್ಯಕಾರಕವಾಗಿದೆ. ತೆಂಗಿನ ಮರದಂತೆಯೇ ತಾಳೆಮರದಿಂದಲೂ ಬೆಳಿಗ್ಗೆ ಮುಂಚೆ ಸಂಗ್ರಹಿಸುವ ಇದರ ನೀರನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಕರ್ನಾಟಕ ಮಹಾರಾಷ್ಟ್ರಗಳಲ್ಲಿ ಇದಕ್ಕೆ ನೀರಾ ಎಂದರೆ ತೆಲುಗಿನಲ್ಲಿ ತಾಟಿ ಕಳ್ಳು, ತಮಿಳಿನಲ್ಲಿ ಇದಕ್ಕೆ ಪಥಾನೀರ್ ಎಂದು ಕರೆಯುತ್ತಾರೆ.

ಈ ನೀರನ್ನು ಬೆಳಿಗ್ಗೆ ಸಂಗ್ರಹಿಸಿದರೆ ಮಾತ್ರ ಇದು ಸಿಹಿಯಾಗಿರುತ್ತದೆ. ಆದರೆ ಮಧ್ಯಾಹ್ನ ಅಥವಾ ಸಂಜೆ ಈ ನೀರು ಹುಳಿಬಂದಿದ್ದು ಮದ್ಯವಾಗಿ ಪರಿವರ್ತಿತವಾಗುವ ಹಂತದಲ್ಲಿರುತ್ತದೆ. ಈ ರಸವನ್ನು ಮದ್ಯ ತಯಾರಿಸಲು ಬಳಸುತ್ತಾರೆ. ಬನ್ನಿ ತಾಳೆಹಣ್ಣಿನ ತಿರುಳು ಮತ್ತು ನೀರಾದ ಆರೋಗ್ಯಕರ ಪ್ರಯೋಜಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ, ಮುಂದೆ ಓದಿ...

ದೇಹದ ತಾಪಮಾನವನ್ನು ನಿಯಂತ್ರಿಸುತ್ತದೆ

ದೇಹದ ತಾಪಮಾನವನ್ನು ನಿಯಂತ್ರಿಸುತ್ತದೆ

ದೇಹದ ತಾಪಮಾನ ಯಾವುದಾದರೂ ಕಾರಣಕ್ಕೆ ಏರಿದ್ದರೆ ತಾಳೆಹಣ್ಣಿನ ತಿರುಳು ತಾಪಮಾನವನ್ನು ಸಾಮಾನ್ಯಕ್ಕೆ ತರಲು ನೆರವಾಗುತ್ತದೆ. ಇದೇ ಕಾರಣಕ್ಕೆ ಬೇಸಿಗೆಯ ಬೇಗೆ ತಣಿಸಲು ಈ ಹಣ್ಣು ಅಮೃತಸಮಾನವಾಗಿದೆ.

ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿದೆ

ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿದೆ

ಈ ಹಣ್ಣಿನಲ್ಲಿ ಸೋಡಿಯಂ, ಪೊಟ್ಯಾಶಿಯಂ ಮತ್ತಿತರ ಸೂಕ್ಷ್ಮ ಪೋಷಕಾಂಶಗಳು ಸಮೃದ್ಧವಾಗಿವೆ. ಈ ಪೋಷಕಾಂಶಗಳು ದೇಹದಲ್ಲಿ ದ್ರವದ ಪ್ರಮಾಣ ಸೂಕ್ತವಾಗಿರುವಂತೆ ಮತ್ತು ಎಲೆಕ್ಟ್ರೋಲೈಟುಗಳು ಪ್ರಮಾಣ ಸಮರ್ಪಕವಾಗಿರುವಂತೆ ನೋಡಿಕೊಳ್ಳುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿದೆ

ಸೂಕ್ಷ್ಮ ಪೋಷಕಾಂಶಗಳಿಂದ ಸಮೃದ್ಧವಾಗಿದೆ

ಈ ಗುಣದಿಂದಾಗಿಯೇ ಬೇಸಿಗೆಯ ಬೇಗೆಯಲ್ಲಿ ಬೆಂದ ದೇಹಕ್ಕೆ ತಂಪು ಮತ್ತು ಚೇತೋಹಾರಿ ಅನುಭವವನ್ನು ನೀಡುತ್ತದೆ. ಅಲ್ಲದೇ ಆಯಾಸ ಮತ್ತು ನೀರಿನ ಕೊರತೆಯಾಗುವುದರಿಂದಲೂ ತಪ್ಪಿಸುತ್ತದೆ.

ಹೊಟ್ಟೆಯುರಿ ಕಡಿಮೆಗೊಳಿಸಲು ತಾಳೆಹಣ್ಣಿನ ಮದ್ದು

ಹೊಟ್ಟೆಯುರಿ ಕಡಿಮೆಗೊಳಿಸಲು ತಾಳೆಹಣ್ಣಿನ ಮದ್ದು

ತಾಳೆಹಣ್ಣಿನ ತಿರುಳು ಬೇಸಿಗೆಯ ಬೇಗೆ ಕಡಿಮೆಗೊಳಿಸುವ ಜೊತೆಗೇ ಹೊಟ್ಟೆಯುರಿ ಅಥವಾ ಗ್ಯಾಸ್ ತೊಂದರೆಯಿಂದಲೂ ರಕ್ಷಿಸುತ್ತದೆ. ಹೊಟ್ಟೆಯುರಿ, ಆಮ್ಲೀಯತೆ, ಹುಳಿತೇಗು ಮೊದಲಾದ ತೊಂದರೆಗಳಿಗೆ ಇದು ಉತ್ತಮ ಶಮನಕಾರಿಯಾಗಿರುವ ಜೊತೆಗೇ ಇದು ರುಚಿಕರವೂ ಆಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೊಟ್ಟೆಯುರಿ ಕಡಿಮೆಗೊಳಿಸಲು ತಾಳೆಹಣ್ಣಿನ ಮದ್ದು

ಹೊಟ್ಟೆಯುರಿ ಕಡಿಮೆಗೊಳಿಸಲು ತಾಳೆಹಣ್ಣಿನ ಮದ್ದು

ವಿಶೇಷವಾಗಿ ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಎದುರಾಗುವ ಹೊಟ್ಟೆಯುರಿಯನ್ನು ಕಡಿಮೆಗೊಳಿಸಲು ತಾಳೆಹಣ್ಣಿನ ತಿರುಳು ಅತ್ಯುತ್ತಮವಾಗಿದೆ. ಇದರಲ್ಲಿರುವ ವಿಟಮಿನ್ ಬಿ12 ಸಹಿತ ಇತರ ಪೋಷಕಾಂಶಗಳು ಮತ್ತು ಖನಿಜಗಳು ದೇಹಕ್ಕೆ ಶಕ್ತಿ ನೀಡುವ ಜೊತೆಗೇ ಹೊಟ್ಟೆಯುರಿ ಕಡಿಮೆಗೊಳಿಸಲೂ ನೆರವಾಗುತ್ತದೆ.

ಶಕ್ತಿಯ ಆಗರವಾಗಿದೆ

ಶಕ್ತಿಯ ಆಗರವಾಗಿದೆ

ಇದರಲ್ಲಿ ಉತ್ತಮ ಪ್ರಮಾಣದ ಪೋಷಕಾಂಶಗಳಿದ್ದು ಇಡಿಯ ದಿನಕ್ಕೆ ಸಾಕಾಗುವಷ್ಟಿದೆ. ದಿನದಲ್ಲಿ ಒಂದೆರಡು ತಾಳೆಹಣ್ಣನ್ನು ಸೇವಿಸುವುದರಿಂದ, ಬೇಸಿಗೆಯಲ್ಲಿ ದೇಹ ಕಳೆದುಕೊಳ್ಳುವ ಶಕ್ತಿಯನ್ನು ಮರುತುಂಬಿಸಿ ಶಕ್ತಿ ಉಳಿಯುವಂತೆ ಮಾಡುತ್ತದೆ. ಇದೇ ಕಾರಣಕ್ಕೆ ಬೇಸಿಗೆಯಲ್ಲಿ ತಾಳೆ ಹಣ್ಣು ಸೇವಿಸಲು ಅತ್ಯುತ್ತಮ ಹಣ್ಣಾಗಿದೆ.

ನಿರ್ಜಲೀಕರಣದಿಂದ ರಕ್ಷಿಸುತ್ತದೆ

ನಿರ್ಜಲೀಕರಣದಿಂದ ರಕ್ಷಿಸುತ್ತದೆ

ಇನ್ನು ತಾಳೆ ಹಣ್ಣಿನಂತೆ, ತಾಳೆ ಮರದಿಂದ ತೆಗೆದ ನೀರಾ ಕೂಡ ಅಷ್ಟೇ ಪ್ರಯೋಜನಕಾರಿ. ಸಾಮಾನ್ಯವಾಗಿ ಬೇಸಿಗೆಯಲ್ಲಿ ನೀರು ಕುಡಿಯುವುದು ಸೆಖೆ ತಡೆಯಲು ಉತ್ತಮವಾದರೂ ಇದರ ಪರಿಣಾಮ ಕೆಲವೇ ಹೊತ್ತಿನವರೆಗೆ ಇರುತ್ತದೆ. ಆದ್ದರಿಂದ ಪದೇ ಪದೇ ನೀರು ಕುಡಿಯುತ್ತಲೇ ಇರಬೇಕಾಗುತ್ತದೆ. ಇದೇ ಕಾರಣಕ್ಕೆ ಹಿಂದೆ ನೀರಿನೊಂದಿಗೆ ಚಿಕ್ಕ ಬೆಲ್ಲದ ತುಂಡನ್ನು ತಿನ್ನುತ್ತಿದ್ದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಿರ್ಜಲೀಕರಣದಿಂದ ರಕ್ಷಿಸುತ್ತದೆ

ನಿರ್ಜಲೀಕರಣದಿಂದ ರಕ್ಷಿಸುತ್ತದೆ

ಆದರೆ ಇದಕ್ಕೂ ಉತ್ತಮವಾದ ಪರಿಣಾಮವನ್ನು ನೀರಾ ಕುಡಿಯುವ ಮೂಲಕ ಪಡೆಯಬಹುದು. ಬೆಳಿಗ್ಗೆ ಮತ್ತು ಮಧ್ಯಾಹ್ನ ಒಂದೊಂದು ಲೋಟ ನೀರಾ ಕುಡಿಯುವ ಮೂಲಕ ಇಡಿಯ ದಿನ ದೇಹದಿಂದ ನಷ್ಟವಾಗುವ ನೀರನ್ನು ಮರುತುಂಬಿಸುವ ಮೂಲಕ ಚೈತನ್ಯವನ್ನು ಕಾಪಾಡುತ್ತದೆ.

ತಾಳೆ ಹಣ್ಣನ್ನು ಸೇವನೆಯ ಬಗ್ಗೆ ಕೈಗೊಳ್ಳಬೇಕಾದ ಎಚ್ಚರಿಕೆಗಳು

ತಾಳೆ ಹಣ್ಣನ್ನು ಸೇವನೆಯ ಬಗ್ಗೆ ಕೈಗೊಳ್ಳಬೇಕಾದ ಎಚ್ಚರಿಕೆಗಳು

ಒಂದು ವೇಳೆ ನೀವು ತೂಕ ಕಳೆದುಕೊಳ್ಳುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೆ ನೀರಾ ಅಥವಾ ತಾಳೆಯ ಸೇವನೆ ಸೂಕ್ತವಲ್ಲ. ಏಕೆಂದರೆ ನೀರಾದಲ್ಲಿ ಅತಿ ಹೆಚ್ಚಿನ ಪ್ರಮಾಣದ ಕ್ಯಾಲೋರಿಗಳು ಮತ್ತು ಸಕ್ಕರೆ ಇದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಾಳೆ ಹಣ್ಣನ್ನು ಸೇವನೆಯ ಬಗ್ಗೆ ಕೈಗೊಳ್ಳಬೇಕಾದ ಎಚ್ಚರಿಕೆಗಳು

ತಾಳೆ ಹಣ್ಣನ್ನು ಸೇವನೆಯ ಬಗ್ಗೆ ಕೈಗೊಳ್ಳಬೇಕಾದ ಎಚ್ಚರಿಕೆಗಳು

ಇವು ಬೇಸಿಗೆಯ ಬೇಗೆಯನ್ನು ಕಡಿಮೆ ಮಾಡಿದರೂ ತೂಕವನ್ನು ಕೊಂಚ ಹೆಚ್ಚಿಸುತ್ತವೆ. ಆದ್ದರಿಂದ ತೂಕ ಕಳೆದುಕೊಳ್ಳುತ್ತಿರುವವರಿಗೆ ಒಂದು ಲೋಟ ನೀರಿಗೆ ಕೊಂಚ ಲಿಂಬೆ ಮತ್ತು ಉಪ್ಪು ಸೇರಿಸಿ ಕುಡಿಯುವುದೇ ಶ್ರೇಯಸ್ಕರವಾಗಿದೆ.

ತಾಳೆಹಣ್ಣಿನ ಪೇಯ ತಯಾರಿಸುವ ವಿಧಾನ

ತಾಳೆಹಣ್ಣಿನ ಪೇಯ ತಯಾರಿಸುವ ವಿಧಾನ

*ಕೆಲವು ತಾಳೆಹಣ್ಣಿನ ಕಣ್ಣುಗಳನ್ನು ಸುಲಿದು ತಿರುಳನ್ನು ಸಂಗ್ರಹಿಸಿ. ಈ ತಿರುಳನ್ನು ಸಾಧ್ಯವಾದಷ್ಟು ಚಿಕ್ಕ ತುಂಡುಗಳನ್ನಾಗಿಸಿ. ಸಂಗ್ರಹವಾದ ತಿರುಳಿನ ಎರಡರಷ್ಟು ಹಾಲನ್ನು ಕುದಿಸಿ. ಕುದಿ ಬಂದ ಬಳಿಕ ಕೊಂಚ ಕಲ್ಲುಸಕ್ಕರೆ (palm candy) ಸೇರಿಸಿ ಕೆಲವು ಹಸಿರು ಏಲಕ್ಕಿಗಳನ್ನು ಸೇರಿಸಿ ನಡುನಡುವೆ ತಿರುವುತ್ತಿರಿ. ಕೊಂಚಹೊತ್ತಿನಲ್ಲಿ ಕಲ್ಲುಸಕ್ಕರೆ ಕರಗುತ್ತದೆ. ಕರಗಿದೆ ಎಂದು ಅನ್ನಿಸಿದ ಬಳಿಕ ಉರಿ ನಂದಿಸಿ. ಈಗ ತಾಳೆಯ ತಿರುಳಿನ ತುಂಡುಗಳನ್ನು ಮಿಶ್ರಣ ಮಾಡಿ ಕಲಕಿ ಹಾಗೇ ತಣಿಯಲು ಬಿಡಿ.

*ಹಸುವಿನ ಹಾಲು ಬೇಡ ಎನಿಸಿದರೆ ತೆಂಗಿನ ಹಾಲನ್ನೂ ಬಳಸಬಹುದು. ಆದರೆ ಕುದಿಯುವಾಗ ಅತಿ ಕಡಿಮೆ ಉರಿ ಇರಬೇಕು, ಇಲ್ಲದಿದ್ದರೆ ತೆಂಗಿನ ಹಾಲು ಒಡೆಯುತ್ತದೆ. ಹೊಟ್ಟೆಯಲ್ಲಿ ಮತ್ತು ಕರುಳಿನಲ್ಲಿ ಹುಣ್ಣು ಇದ್ದವರಿಗೆ ತೆಂಗಿನ ಹಾಲಿನ ಪೇಯ ಅತ್ಯುತ್ತಮವಾಗಿದೆ. ಬದಲಾವಣೆಗೆ ಹಾಲು ಮತ್ತು ತೆಂಗಿನ ಹಾಲಿನ ಮಿಶ್ರಣವನ್ನೂ ಪ್ರಯತ್ನಿಸಬಹುದು. ಈ ಹಾಲನ್ನು ಬಾಟಲಿಯಲ್ಲಿ ಸಂಗ್ರಹಿಸಿ ಫ್ರಿಜ್ಜಿನಲ್ಲಿಟ್ಟು ಎರಡು ದಿನಗಳವರೆಗೂ ಸೇವಿಸಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಾಳೆಹಣ್ಣಿನ ಪೇಯ ತಯಾರಿಸುವ ವಿಧಾನ

ತಾಳೆಹಣ್ಣಿನ ಪೇಯ ತಯಾರಿಸುವ ವಿಧಾನ

*ತಾಳೆಯಲ್ಲಿ ವಿಟಮಿನ್ ಬಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಗಂಧಕ ಉತ್ತಮ ಪ್ರಮಾಣದಲ್ಲಿವೆ. ಈ ಪೇಯ ಸುಲಭವಾಗಿ ಜೀರ್ಣವಾಗುವ ಕಾರಣ ಎಲ್ಲಾ ವಯಸ್ಸಿನವರು ಸೇವಿಸಬಹುದಾಗಿದೆ. ಇದರ ಪೋಷಕಾಂಶಗಳು ತಕ್ಷಣ ರಕ್ತಕ್ಕೆ ಲಭಿಸುವ ಕಾರಣ ಬೇಸಿಗೆಯಲ್ಲಿ ಸೇವಿಸಲು ಉತ್ತಮವಾದ ಆಯ್ಕೆಯಾಗಿದೆ. ಆದರೆ ತಾಳೆಯನ್ನು ಆರಿಸುವಾಗ ಸಾಧ್ಯವಾದಷ್ಟು ಎಳೆಯ ತಾಳೆಯನ್ನೇ ಆರಿಸಿಕೊಳ್ಳಬೇಕು. ಬಲಿತ ತಾಳೆ ಜೀರ್ಣಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೇ ಇದನ್ನು ಜಗಿಯುವುದೂ ಕಷ್ಟಕರ.

English summary

Health benefits of tadgola (ice apple)

Ice apples or tadgolas are available across coastal regions of India during summer. The fleshy and juicy fruit of the sugar palm tree is probably the only thing you need to eat on a hot sunny summer afternoon. It is translucent and pale white in colour and resembles a lychee in texture. Have a look some health benefits of tadgola
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more