Latest Updates
-
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
ತೂಕ ಇಳಿಸಬೇಕೇ..? ಬಾಳೆದಿಂಡಿನ ಜ್ಯೂಸ್ ಸೇವಿಸಿ ನೋಡಿ
ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ. ಏಕೆಂದರೆ ತೆಂಗಿನ ಮರದಲ್ಲಿ ಬಳಕೆಗೆ ಬರದೇ ಇರುವ ಭಾಗವೇ ಇಲ್ಲ. ಕಡೆಗೆ ಬೇರು ಸಹಾ ಕೆಲವು ಔಷಧಿಗಳನ್ನು ತಯಾರಿಸಲು ಬರುತ್ತದೆ. ಅಂತೆಯೇ ಬಾಳೆಮರವೂ ಸಹಾ. ಬೇರು ಒಂದನ್ನು ಬಿಟ್ಟು ಬಹುತೇಕ ಇಡಿಯ ಮರದ ಭಾಗಗಳು ಒಂದಲ್ಲಾ ಒಂದು ಕೆಲಸಕ್ಕೆ ಬರುತ್ತವೆ. ಹೂವು, ಹಣ್ಣು, ಎಲೆ ಮೊದಲಾದವು ನಿತ್ಯದ ಬಳಕೆಗೆ ಉಪಯುಕ್ತವಾಗಿವೆ. ಬಾಳೆಹಣ್ಣನ್ನು
ಜೀರಿಗೆಯೊಂದಿಗೆ ಸೇವಿಸಿದರೆ ತೂಕ ಕಡಿಮೆಯಾಗಲು ನೆರವಾಗುತ್ತದೆ. ಆದರೆ ಕಾಂಡ? ಸಾಮಾನ್ಯವಾಗಿ ನೀರು ಹೆಚ್ಚಿರುವೆಡೆ ತೆಪ್ಪ ತಯಾರಿಸಿ ನದಿ, ಕೆರೆಗಳನ್ನು ದಾಟುತ್ತಾರೆ. ಇನ್ನುಳಿದಂತೆ ಕಾಂಡದ ನಡುವಿನಲ್ಲಿರುವ ದಿಂಡು (ಕುಹಕರೂಪದಲ್ಲಿ ಟ್ಯೂಬ್ ಲೈಟ್ ಎಂದೂ ಕರೆಯುತ್ತಾರೆ) ತೂಕ ಇಳಿಸುವವರಿಗೆ ಅತ್ಯುತ್ತಮವಾದ ಆಹಾರವಾಗಿದೆ. ಬಾಳೆದಿಂಡಿನ ಜ್ಯೂಸ್‌ನಲ್ಲಿ ಏನೆಲ್ಲಾ ಪ್ರಯೋಜನಗಳಿವೆ ನೋಡಿ?
ಇದರ ಮರ್ಮವೇನೆಂದರೆ ಈ ದಿಂಡಿನಲ್ಲಿರುವ ಪೋಷಕಾಂಶಗಳು ಅತಿ ಹೆಚ್ಚಿನ ಮತ್ತು ದೃಢವಾದ, ಆದರೆ ಹೊಟ್ಟೆಯಲ್ಲಿ ಕರಗುವ ನಾರುಗಳಾಗಿವೆ. ಆದರೆ ಈ ನಾರುಗಳನ್ನು ಜೀರ್ಣಿಸಿ ಮುಂದೆ ಕಳುಹಿಸಲು ಅತಿ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿಯ ಅಗತ್ಯವಿದೆ. ಇದಕ್ಕೆ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಮತ್ತು ಸಕ್ಕರೆಯನ್ನು ಬಳಸಿಕೊಳ್ಳಬೇಕಾಗಿ ಬರುತ್ತದೆ.

ಅಲ್ಲದೇ ಬಾಳೆದಿಂಡಿನ ಖಾದ್ಯವನ್ನು ಸೇವಿಸಿದ ಬಳಿಕ ಮುಂದಿನ ಹಲವು ಗಂಟೆಗಳವರೆಗೆ ನಮ್ಮ ಜೀರ್ಣಾಂಗಗಳು ಇದರ ಕಠಿಣ ನಾರನ್ನು ಕರಗಿಸುವಲ್ಲಿ ಮಗ್ನವಾಗಿ ಮುಂದಿನ ಆಹಾರಕ್ಕೆ ಬೇಡಿಕೆ ಇಡುವುದನ್ನೇ ಮರೆತು ಬಿಡುತ್ತವೆ. ಪರಿಣಾಮವಾಗಿ ಈ ಹೊತ್ತಿನಲ್ಲಿ ಸೇವಿಸಬಹುದಾಗಿದ್ದ ಅನಾರೋಗ್ಯಕರ ಆಹಾರವನ್ನು ಸೇವಿಸಿ ಇನ್ನಷ್ಟು ತೂಕ ಹೆಚ್ಚಳವಾಗಿದ್ದು ತಡೆದಂತಾಗುತ್ತದೆ. ಅಂದರೆ ತೂಕ ಇಳಿಕೆಯ ವೇಗ ದ್ವಿಗುಣಗೊಳ್ಳುತ್ತದೆ.
ಬಾಳೆದಿಂಡನ್ನು ಕರಗಿಸಲು ಹೆಚ್ಚಿನ ಜೀರ್ಣರಸಗಳು ಬೇಕಾಗುವುದರಿಂದ ಹೊಟ್ಟೆ ಮತ್ತು ಇತರ ಜೀರ್ಣಾಂಗಗಳು ಅನಿವಾರ್ಯವಾಗಿ ಹೆಚ್ಚಿನ ಜೀರ್ಣರಸಗಳನ್ನು ಸ್ರವಿಸಬೇಕಾಗುತ್ತದೆ. ಇದರ ಪ್ರಬಲತೆಯ ಕಾರಣದಿಂದ ಹೊಟ್ಟೆಯಲ್ಲಿ ಉಳಿದಿದ್ದ ಇತರ ಯಾವುದೇ ವಿಷಕಾರಿ ವಸ್ತುಗಳು ಸಂಪೂರ್ಣವಾಗಿ ಹೊರದಬ್ಬಲ್ಪಡುತ್ತವೆ. ಇದರಿಂದ ಹೊಟ್ಟೆ, ಜೀರ್ಣಾಂಗಗಳಿಗೆ ಈ ವಿಷಕಾರಿ ವಸ್ತುಗಳಿಂದ ಎದುರಾಗಬಹುದಾಗಿದ್ದ ತೊಂದರೆಗಳಿಂದ ಮುಕ್ತಿ ಪಡೆಯುತ್ತವೆ.
ಅಲ್ಲದೇ ಇದರಲ್ಲಿರುವ ರಸಗಳು ಉತ್ತಮ ಮೂತ್ರವರ್ಧಕವೂ ಆಗಿದ್ದು ಮೂತ್ರವನ್ನು ಹೆಚ್ಚಿಸಲು ನೆರವಾಗುತ್ತವೆ. ತನ್ಮೂಲಕ ಮೂತ್ರಪಿಂಡಗಳಲ್ಲಿ ಕಲ್ಲುಗಳಿದ್ದರೆ ಅದನ್ನು ಕರಗಿಸಿ ಗಾತ್ರವನ್ನು ಕಡಿಮೆಯಾಗಿಸಲು ನೆರವಾಗುತ್ತವೆ. ಅಲ್ಲದೇ ದಿಂಡಿನ ನಾರುಗಳು ಹೊಟ್ಟೆಯಲ್ಲಿ ಸುಲಭವಾಗಿ ಕರಗದ ಕಾರಣ ವಿಸರ್ಜನೆಯಲ್ಲಿ ಸಹಕರಿಸಿ ಮಲಬದ್ದತೆಯಿಂದ ರಕ್ಷಿಸುತ್ತದೆ. ಒಟ್ಟಾರೆ ಎಲ್ಲಾ ಜೀರ್ಣಾಂಗಗಳನ್ನು ಹೆಚ್ಚಿನ ಕ್ಷಮತೆಯಲ್ಲಿ ಕೆಲಸ ಮಾಡಲು ಪ್ರೇರೇಪಿಸಿದ ಕಾರಣದಿಂದಾಗಿ ದೇಹದ ಇತರ ವ್ಯವಸ್ಥೆಗಳೂ ಚುರುಕುಗೊಳ್ಳುತ್ತವೆ. ತನ್ಮೂಲಕ ರೋಗ ನಿರೋಧಕ ವ್ಯವಸ್ಥೆಯೂ ಉತ್ತಮಗೊಳ್ಳುತ್ತದೆ.
ಬಾಳೆದಿಂಡಿನ ಬಳಕೆ ಹೇಗೆ?
ಬಾಳೆಯ ಕಾಂಡದ ಹೊರಪದರಗಳನ್ನು ನಿವಾರಿಸಿದ ಬಳಿಕ ನಟ್ಟನಡುವೆ ಟ್ಯೂಬ್ ಲೈಟಿನಂತಹ ಅಚ್ಚಬಿಳಿಯ ಅಥವಾ ದಂತದಬಣ್ಣದ ದಂಡು ದೊರಕುತ್ತದೆ. ಇದೇ ಬಾಳೆದಿಂಡು. ಇದನ್ನು ಚಿಕ್ಕದಾಗಿ ಕೊಚ್ಚಿ ಮಿಕ್ಸಿಯಲ್ಲಿ ಕೊಂಚ ನೀರಿನೊಂದಿಗೆ ಚೆನ್ನಾಗಿ ಅರೆದು ಸೋಸಿದಾಗ ಬಾಳೆದಿಂಡಿನ ರಸ ಸಿಗುತ್ತದೆ. ಆದರೆ ಇದು ಅತಿ ಕಹಿಯಾಗಿರುವ ಕಾರಣ ನೇರವಾಗಿ ಕುಡಿಯಲು ಸಾಧ್ಯವಿಲ್ಲ. ಆದ್ದರಿಂದ ಇದಕ್ಕೆ ಕೊಂಚ ಲಿಂಬೆ ಮತ್ತು ಜೇನು ಸೇರಿಸಿ ಕುಡಿಯಬಹುದು. ಈ ರುಚಿಯೂ ಇಷ್ಟವಾಗಲಿಲ್ಲ ಎಂದರೆ ಒಂದೆರಡು ಬಾಳೆಹಣ್ಣನ್ನು ಮಿಕ್ಸಿಯಲ್ಲಿ ಹಾಕಿ ಮತ್ತೊಮ್ಮೆ ಈ ನೀರಿನೊಂದಿಗೆ ಗೊಟಾಯಿಸಿ ಕುಡಿಯಬಹುದು.
ಇನ್ನೊಂದು ವಿಧಾನವೆಂದರೆ ಬಾಳೆದಿಂಡನ್ನು ಕೊಚ್ಚಿ ಒಂದು ಜಗ್‌ನಲ್ಲಿ ಭರ್ತಿಮಜ್ಜಿಗೆ ತುಂಬಿ ಇಡಿಯ ರಾತ್ರಿ ನೆನೆಸಿಡಬೇಕು. ಮರುದಿನ ಬೆಳಿಗ್ಗೆ ಮಿಕ್ಸಿಯಲ್ಲಿ ಚೆನ್ನಾಗಿ ಗೊಟಾಯಿಸಿ ಸೋಸಿ ಕೊಂಚ ಸಕ್ಕರೆ ಮತ್ತು ದಾಲ್ಚಿನ್ನಿ ಪುಡಿ ಸೇರಿಸಿ ದಿನದ ಪ್ರಥಮ ಆಹಾರವಾಗಿ ಕುಡಿಯಬೇಕು. ಉಳಿದ ಪ್ರಮಾಣವನ್ನು ದಿನದ ಇತರ ಹೊತ್ತಿನಲ್ಲಿ ಕೊಂಚವಾಗಿ ಸೇವಿಸಬೇಕು. ವಾರಕ್ಕೆ ಎರಡು ಮೂರು ದಿನವಾದರೂ ಈ ವಿಧಾನವನ್ನು ಅನುಸರಿಸಿದರೆ ಒಂದೆರಡು ವಾರದಲ್ಲಿಯೇ ತೂಕ ಕಡಿಮೆಯಾಗುತ್ತಿರುವುದನ್ನು ಕಾಣಬಹುದು.
ಇನ್ನು ಸ್ವಲ್ಪ ಸರಳವಾಗಿ ಮಾಡುವ ವಿಧಾನವೆಂದರೆ
ಬಾಳೆದಿಂಡನ್ನು ಚಿಕ್ಕದಾದ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ (ಸುಮಾರು ಅರ್ಧ ಕೇಜಿ)
*ನೀರು-ಸಮಪ್ರಮಾಣದಲ್ಲಿ
*ಬೆಲ್ಲ (ಕಪ್ಪು ಅಥವಾ ಕಂದುಬೆಲ್ಲ) ಅಥವಾ ಜೇನುತುಪ್ಪ-ರುಚಿಗೆ ತಕ್ಕಷ್ಟು
*ಏಲಕ್ಕಿ ಪುಡಿ -ರುಚಿಗೆ ತಕ್ಕಷ್ಟು ವಿಧಾನ: ಮಿಕ್ಸಿಯಲ್ಲಿ ನೀರು ಮತ್ತು ಬಾಳೆದಿಂಡಿನ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಬೆಲ್ಲ ಅಥವ ಜೇನುತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಇನ್ನಷ್ಟು ಗೊಟಾಯಿಸಿ. ಬಳಿಕ ಸ್ವಚ್ಛವಾದ ಬಟ್ಟೆಯಲ್ಲಿ ಸೋಸಿ ದೊಡ್ಡ ನಾರುಗಳನ್ನು ನಿವಾರಿಸಿ. ತಣ್ಣಗಿರುವಂತೆಯೇ ಕುಡಿಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications













