For Quick Alerts
ALLOW NOTIFICATIONS  
For Daily Alerts

'ಪಾದಗಳ ಊತದ' ಸಮಸ್ಯೆಯೇ? ಇನ್ನು ಚಿಂತೆ ಬಿಡಿ!

By Super Admin
|

ಇಡೀ ದೇಹದ ಭಾರವನ್ನು ಹೊತ್ತುಕೊಳ್ಳುವ ಪಾದಗಳು ಯಾವಾಗಲೂ ಆರೋಗ್ಯವಾಗಿರಬೇಕು. ಪಾದಗಳಿಗೆ ಏನಾದರೂ ಸಮಸ್ಯೆಯಾದರೆ ಅದು ಸಂಪೂರ್ಣ ದೇಹದ ಮೇಲೆ ಪರಿಣಾಮ ಬೀರುವುದು. ಕೆಲವೊಮ್ಮೆ ಪಾದವು ತನ್ನಷ್ಟಕ್ಕೆ ಊದಿಕೊಳ್ಳುವುದು. ದೇಹದ ಕೋಶಗಳಲ್ಲಿ ನೀರು ಹೆಚ್ಚಾಗಿ ಶೇಖರಣೆಯಾಗುವುದೇ ಇದಕ್ಕೆ ಕಾರಣ. ಮಧುಮೇಹಿಗಳಿಗೆ ಪಾದಗಳ ಊತ ಕಡಿಮೆಗೊಳಿಸಿಕೊಳ್ಳಲು 7 ಟಿಪ್ಸ್

ಈ ಸಮಸ್ಯೆಯು ಆಗಾಗ ಕಂಡುಬಂದರೆ ಏನಾದರೂ ಆರೋಗ್ಯ ಸಮಸ್ಯೆಯಿದೆ ಎಂದರ್ಥ. ಇದಕ್ಕೆ ನೀವು ತಕ್ಷಣ ವೈದ್ಯರನ್ನು ಭೇಟಿಯಾಗಿ ಅವರಿಂದ ಚಿಕಿತ್ಸೆ ಪಡೆದುಕೊಳ್ಳಬೇಕು. ರಕ್ತದ ಒತ್ತಡ ಹೆಚ್ಚಿರುವವರು ಮತ್ತು ಗರ್ಭಿಣೆಯರಲ್ಲಿ ಪಾದದಲ್ಲಿ ಊತ ಕಾಣಿಸಿಕೊಳ್ಳುವುದು. ಗರ್ಭಾವಸ್ಥೆಯಲ್ಲಿ ಪಾದಗಳ ಊತ- ಇಲ್ಲಿದೆ ಫಲಪ್ರದ ಟಿಪ್ಸ್

ಇದು ಜೀವಕ್ಕೆ ಏನೂ ತೊಂದರೆ ಮಾಡದಿದ್ದರೂ ಇದರ ನೋವು ಮಾತ್ರ ಸಹಿಸಲು ಸಾಧ್ಯವಿಲ್ಲದಂತದ್ದಾಗಿದೆ. ಊತಿಕೊಂಡಿರುವ ಪಾದಗಳಿಗೆ ಹಿಂದಿನಿಂದಲೂ ಮಾಡಿಕೊಂಡು ಬಂದಿರುವಂತಹ ನೈಸರ್ಗಿಕ ಚಿಕಿತ್ಸೆ ಬಗ್ಗೆ ಬೋಲ್ಡ್ ಸ್ಕೈ ವಿವರಿಸಲಿದೆ. ಆದರೆ ನೀವು ಯಾವುದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳಿ. ಪಾದದ ಊತ ಕಡಿಮೆ ಮಾಡಿಕೊಳ್ಳಲು ಲೇಖನವನ್ನು ಮುಂದಕ್ಕೆ ಓದಿಕೊಳ್ಳಿ.

ಸಾರಭೂತ ತೈಲದಿಂದ ಮಸಾಜ್ ಮಾಡಿ

ಸಾರಭೂತ ತೈಲದಿಂದ ಮಸಾಜ್ ಮಾಡಿ

ಭಾದಿತ ಜಾಗಕ್ಕೆ ಲ್ಯಾವೆಂಡರ್ ಅಥವಾ ಪುದೀನಾ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಇದು ಆ ಪ್ರದೇಶದಲ್ಲಿ ರಕ್ತ ಪರಿಚಲನೆಯನ್ನು ಉತ್ತಮಪಡಿಸಿ ಉರಿಯೂತವನ್ನು ಕಡಿಮೆ ಮಾಡುವುದು.

ಆಪಲ್ ಸೀಡರ್ ವಿನೇಗರ್

ಆಪಲ್ ಸೀಡರ್ ವಿನೇಗರ್

ಪೊಟಾಶಿಯಂನಿಂದ ಸಮೃದ್ಧವಾಗಿರುವ ಆಪಲ್ ಸೀಡರ್ ವಿನೇಗರ್ ಪಾದದ ಊತವನ್ನು ಕಡಿಮೆ ಮಾಡುವ ನೈಸರ್ಗಿಕ ಔಷಧಿಯಾಗಿದೆ. ಇದನ್ನು ನೀರು ಅಥವಾ ಜೇನಿನೊಂದಿಗೆ ಮಿಶ್ರಣ ಮಾಡಿಕೊಂಡು ಸ್ವಚ್ಛ ಬಟ್ಟೆಯನ್ನು ಈ ಮಿಶ್ರದಲ್ಲಿ ಅದ್ದಿ ಅದನ್ನು ಭಾದಿತ ಜಾಗಕ್ಕೆ ಕಟ್ಟಬೇಕು.

ಲಿಂಬೆ ಮತ್ತು ಜೇನು

ಲಿಂಬೆ ಮತ್ತು ಜೇನು

ಸ್ವಲ್ಪ ಬೆಚ್ಚಗಿರುವ ಒಂದು ಲೋಟ ನೀರಿಗೆ ಒಂದು ಚಮಚ ಲಿಂಬೆರಸ ಮತ್ತು ಒಂದು ಚಮಚ ಜೇನನ್ನು ಹಾಕಿ ಮಿಶ್ರಣ ಮಾಡಿ ಇದನ್ನು ದಿನಪೂರ್ತಿ ಕುಡಿಯುತ್ತಾ ಇರಿ. ಇದರಲ್ಲಿರುವ ಉರಿಯೂತ ಶಮನಕಾರಿ ಗುಣವು ಪಾದದ ಊತವನ್ನು ಕಡಿಮೆ ಮಾಡುವುದು ಮತ್ತು ನೋವನ್ನು ಶಮನ ಮಾಡುವುದು.

ಕೊತ್ತಂಬರಿ ಬೀಜಗಳು

ಕೊತ್ತಂಬರಿ ಬೀಜಗಳು

ಪಾದದಲ್ಲಿ ಕಾಣಿಸಿಕೊಂಡ ಊತ ಹಾಗೂ ನೋವಿನಿಂದ ಶಮನಕ್ಕಾಗಿ ಹಿಂದಿನ ಕಾಲದಿಂದಲೂ ಕೊತ್ತಂಬರಿ ಬೀಜಗಳನ್ನು ಬಳಸುತ್ತಿದ್ದರು. ಒಂದು ಪಾತ್ರೆಯಲ್ಲಿ ಕೊತ್ತಂಬರಿ ಬೀಜಗಳನ್ನು ಹಾಕಿ ಬೇಯಿಸಿ ಮತ್ತು ಅದರ ನೀರನ್ನು ದಿನಪೂರ್ತಿ ಕುಡಿದರೆ ಊತ ಹಾಗೂ ನೋವು ಶಮನವಾಗುವುದು.

ಕಲ್ಲು ಉಪ್ಪು

ಕಲ್ಲು ಉಪ್ಪು

ಊತ ಮತ್ತು ನೀರು ತುಂಬಿಕೊಂಡಿರುವುದನ್ನು ಕಡಿಮೆ ಮಾಡಲು ನೀರಿನಲ್ಲಿ ಕಲ್ಲುಉಪ್ಪು ಹಾಕಿ ಅದರಲ್ಲಿ ಪಾದವನ್ನು ಇಡಬೇಕು. ಒಂದು ಟಬ್‌ಗೆ ಬಿಸಿ ನೀರು ಹಾಕಿ ಅದಕ್ಕೆ ಎರಡು ಚಮಚ ಕಲ್ಲುಉಪ್ಪು ಹಾಕಿ. ಇದರಲ್ಲಿ ಸುಮಾರು 15-20 ನಿಮಿಷಗಳ ಕಾಲ ಪಾದವನ್ನು ಇಡಿ. ಇದು ಊತವನ್ನು ಕಡಿಮೆ ಮಾಡುವುದು ಮತ್ತು ನೋವು ಶಮನವಾಗುತ್ತದೆ.

English summary

Got Swollen Feet? Then, Try These Effective Home Remedies

Today at Boldsky, we're letting you know about some of the age-old remedies to get relief from swollen feet. Other than being safe and natural, these remedies are inexpensive and easily available. Then, try these incredibly effective home remedies to get ... Swelling in the feet usually occurs when there is a build-up of fluids in ... at Boldsky, we're letting you know about some of the age-old remedies to ...
X
Desktop Bottom Promotion