For Quick Alerts
ALLOW NOTIFICATIONS  
For Daily Alerts

ರಾತ್ರಿ ಪಾಳಿಯ ಕೆಲಸವೇ? ಹಾಗಾದರೆ ಒಮ್ಮೆ ಈ ಲೇಖನ ಓದಿ....

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಕೆಲವರಿಗೆ ಕಡ್ಡಾಯ. ಹೀಗಾಗಿ ನಾವು ನಮ್ಮ ಆಹಾರ ಅಭ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರ ಮೂಲಕ ನಮ್ಮ ತೂಕವನ್ನು ಹೇಗೆ ನಿಯಂತ್ರಣದಲ್ಲಿ ಇಡುವುದು ತಿಳಿದುಕೊಳ್ಳೋಣ.

By Manasa K M
|

ನೈಟ್ ಶಿಫ್ಟ್ ಎಂದೊಡನೆ ಕಾಲ್ ಸೆಂಟರ್, ಐ ಟಿ ಉದ್ಯೋಗಿಗಳು ನೆನಪಿಗೆ ಬರುತ್ತಾರೆ. ಯುಎಸ್, ಯುಕೆ ಹಾಗೂ ಇತರ ಅನೇಕ ಪಾಶ್ಚಿಮಾತ್ಯ ದೇಶಗಳಿಗೆ ಕೆಲಸ ಮಾಡುವಾಗ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಅನಿವಾರ್ಯ. ಕೆಲವರಿಗೆ ನಿತ್ಯ ಇದೆ ಗೋಳಾದರೆ ಕೆಲವರಿಗೆ ವಾರಕ್ಕೆ ಎರಡು ಮೂರು ಸರ್ತಿ. ನೈಟ್ ಶಿಫ್ಟ್ಗೂ ಬೊಜ್ಜಿಗೂ ಏನು ಸಂಬಂಧ ಅಂತೀರಾ. ಕೂತು ಮಾಡುವ ಕೆಲಸಕ್ಕಿಂತ ಹೆಚ್ಚು ಸಮಸ್ಯೆಯನ್ನು ರಾತ್ರಿ ಪಾಳಿ ತಂದಿಡುತ್ತದೆ.

 night shift workers

ಅಧ್ಯಯನಗಳ ಪ್ರಕಾರ ರಾತ್ರಿ ಪಾಳಿಯಲ್ಲಿ ತುಂಬಾ ಕಡಿಮೆ ಕ್ಯಾಲೋರಿಗಳು ಖರ್ಚಾಗುತ್ತವೆ. ನಿದ್ರೆ ಇಲ್ಲದಿರುವಿಕೆ ಕೂಡ ಒಳ್ಳೆಯದಲ್ಲವಲ್ಲ. ಇದರಿಂದ ಒತ್ತಡ ಹೆಚ್ಚುತ್ತದೆ. ಬಹಳ ಜನ ರಾತ್ರಿ ನಿದ್ದೆ ತಡೆಯಲು ಧೂಮಪಾನ ರೂಢಿ ಮಾಡಿ ಕೊಂಡಿರುತ್ತಾರೆ. ಇನ್ನೊಂದು ಮುಖ್ಯ ಕಾರಣವೆಂದರೆ, ನಮ್ಮ ಜೈವಿಕ ಗಡಿಯಾರ ಏರುಪೇರಾಗುವುದು.

ಮಾನವರು ಕೂಡಿ ಬಹಳಷ್ಟು ಜೀವ ರಾಶಿಗಳೆಲ್ಲ ರಾತ್ರಿ ಮಲಗಿದ್ದು, ಬೆಳಗಿನ ಹೊತ್ತು ಅನೇಕ ರೀತಿಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತೇವೆ, ಇದು ನಿಸರ್ಗ ನಿಯಮ. ಮಾನವರು ಈ ನಿಯಮವನ್ನು ಬಲವಂತವಾಗಿ ಬದಿಗಿಟ್ಟು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಇದರಿಂದ ನಮಗೆ ತಿಳಿಯದೆಯೇ ನಾವು ಸಮಯದ ಅರಿವೇ ಇಲ್ಲದಂತೆ ತಿನ್ನುತ್ತಿರುತ್ತೇವೆ. ದೇಹದ ಜೀರ್ಣಶಕ್ತಿಗೂ ನಿಲುಕದಂತೆ ಹೀಗೆ ತಿನ್ನುವುದು ಬೊಜ್ಜಿಗೆ ಬಹು ಮುಖ್ಯ ಕಾರಣ. ರಾತ್ರಿ ಪಾಳಿ ಕೆಲಸದವರಿಗೆ ಆರೋಗ್ಯ ಸಲಹೆಗಳು

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಕೆಲವರಿಗೆ ಕಡ್ಡಾಯ. ಹೀಗಾಗಿ ನಾವು ನಮ್ಮ ಆಹಾರ ಅಭ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರ ಮೂಲಕ ನಮ್ಮ ತೂಕವನ್ನು ಹೇಗೆ ನಿಯಂತ್ರಣದಲ್ಲಿ ಇಡುವುದು ತಿಳಿದುಕೊಳ್ಳೋಣ.

ಮೊಳಕೆ ಕಾಳುಗಳು
ಮೊಳಕೆ ಕಾಳುಗಳು ಗಮನಾರ್ಹವಾದ ಪ್ರೋಟೀನ್, ವಿಟಮಿನ್ ಹಾಗೂ ಇತರ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಇವು ನಮ್ಮ ಆರೋಗ್ಯಕ್ಕೆ ಬಹು ಉಪಯುಕ್ತ. ಕುಳಿತಲ್ಲಿ ತಿನ್ನುವಂತಹ ಕುರುಕಲು ತಿಂಡಿ/ಸ್ನ್ಯಾಕ್ಸ್ ಆಗಿಯೂ ಬಳಸಬಹುದು. ಮನೆಯಲ್ಲಿ ಅಡುಗೆಮಾಡಲು ಸಮಯ ಅಭಾವ ಅಥವಾ ಹಾಸ್ಟೆಲ್ ಅಥವಾ ಪಿಜಿ ಯಲ್ಲಿ ಅನಾನುಕೂಲ. ಆದ್ದರಿಂದ ನೆನೆಸಿಟ್ಟು ಬಳಸಬಹುದಾದ ಮೊಳಕೆ ಕಾಳುಗಳು ಈ ಜೆನೇರೇಶನ್ನ ಮಿತ್ರ. ಆರೋಗ್ಯದ ಖಜಾನೆ ಮೊಳಕೆ ಕಟ್ಟಿದ ಕಾಳುಗಳು

ತರಕಾರಿ ಸಲಾಡ್

ಹಲವು ತರಕಾರಿಗಳನ್ನು ಬಳಸಿ ತಯಾರಿಸಬಹುದಾದ ಸಲಾಡ್ಗಳು ಊಟದ ಬದಲಿಗೆ ಅಥವಾ ಜೊತೆಗೆ ಬಳಸಬಹುದಾದ ಪ್ರಮುಖ ಅಂಶ. ತರಕಾರಿ ಸಲಾಡ್ ನಲ್ಲಿ ಎಲ್ಲ ತರಕಾರಿಗಳ ಅನೇಕ ಪೋಷಕಾಂಶಗಳು ದೊರೆಯುತ್ತವೆ. ತರಕಾರಿ ಸಲಾಡ್ ನಲ್ಲಿ ಬಳಸಬಹುದಾದ ತರಕಾರಿಗಳೆಂದರೆ ಕ್ಯಾರೆಟ್ / ಗಜ್ಜರಿ, ಎಲೆ ಕೋಸು, ಕ್ಯಾಪ್ಸಿಕಂ, ಸೌತೆಕಾಯಿ, ಬೇಯಿಸಿದ ಕಾಳುಗಳು, ಬೀಟ್ರೂಟ್, ಇನ್ನೂ ಅನೇಕ. ಸರಳ ಮತ್ತು ಆರೋಗ್ಯಪೂರ್ಣ ಸಲಾಡ್ ರೆಸಿಪಿ

ಸೂಪ್

ತರಕಾರಿಗಳನ್ನು ಬಳಸಿ ಸೂಪ್ ತಯಾರಿಸಿಕೊಳ್ಳುವುದು ಕೂಡ ಸುಲಭ ಹಾಗೂ ಆರೋಗ್ಯಕರ. ಈ ಸೂಪ್ ಗಳಿಗೆ ಪಾಲಕ್ ಅಥವಾ ಮೆಂತೆ ಹೀಗೆ ಸೊಪ್ಪುಗಳನ್ನು ಕೂಡ ಬಳಸಬಹುದು. ಸೂಪ್ ತಯಾರಿಕೆಗೆ ಸ್ವಲ್ಪ ಸಮಯ ಹಿಡಿದರು ಸೇವಿಸಲು ಸುಲಭ ಹಾಗೂ ರುಚಿಕರವಾಗಿರುತ್ತದೆ.

ಬ್ರೌನ್ ರೈಸ್


ಪಾಲಿಶ್ ಮಾಡಿದ ಬಿಳಿ ಅಕ್ಕಿಗಿಂತ ಬ್ರೌನ್ ರೈಸ್ ತೂಕ ಕಳೆಯುವ ಆಲೋಚನೆ ಇರುವವರಿಗೆ ಉತ್ತಮ. ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುವ ಬ್ರೌನ್ ರೈಸ್ ಬಹಳಷ್ಟು ನಾರಿನಂಶ ಹೊಂದಿದ್ದು ಕಡಿಮೆ ಕ್ಯಾಲೋರಿ ಯನ್ನು ಹೊಂದಿದೆ. ಹಸಿವು ನೀಗಿಸುತ್ತದೆ ಆದರೆ ತೂಕವನ್ನು ನಿಯಂತ್ರಣದಲ್ಲಿ ಇಡುತ್ತದೆ.

ಹಣ್ಣುಗಳು
ಹಣ್ಣುಗಳ ಪ್ರಾಮುಖ್ಯತೆಯನ್ನು ಹೇಳಬೇಕಿದೆಯೇ? ಹಣ್ಣುಗಳು ಪ್ರಕೃತಿ ನಮಗೆ ನೀಡಿದ ವರ. ಅದರಲ್ಲೂ ಹಣ್ಣಿನ ರಸ ವಲ್ಲದೆ ಹಣ್ಣನು ಪೂರ್ತಿಯಾಗಿ ಸೇವಿಸಿ. ಅದರಲ್ಲಿನ ನಾರಿನಂಶ ಜೀರ್ಣಶಕ್ತಿಗೆ ಬಹು ಉಪಯೋಗಿ. ಆಪಲ್, ಬಾಳೆಹಣ್ಣು, ಆರೆಂಜ್, ಪಪ್ಪಾಯಿ, ಕಲ್ಲಂಗಡಿ, ಕಿವಿ, ಸ್ಟ್ರಾಬೆರ್ರಿ, ಹೇಗೆ ಅನೇಕಾನೇಕ ಆಯ್ಕೆಗಳಿವೆ. ನಿಮ್ಮ ರುಚಿಗೆ ಹಾಗೂ ಕಾಲಕ್ಕೆ ತಕ್ಕಂತೆ ಆಯ್ದು ಸೇವಿಸಿ. ಹಣ್ಣುಗಳನ್ನು ಸೇವಿಸುವ ಮುನ್ನ, ಒಮ್ಮೆ ಈ ಲೇಖನ ಓದಿ....

ಬಾದಾಮಿ ಅಂಜೂರ ಹಾಗೂ ಇತರ ಡ್ರೈ ಫ್ರುಟ್ಸ್

ಡ್ರೈ ಫ್ರುಟ್ಸ್ ಕೆಲಸ ಮಾಡುವಾಗ ಅಥವಾ ಪ್ರಯಾಣಿಸುವಾಗ ತಿನ್ನ ಬಹುದಾದ ಅತ್ಯುತ್ತಮ ಲಘು ಆಹಾರ. ಇದು ತಿನ್ನಲು ರುಚಿಯಾಗಿಯೂ ಇರುತ್ತದೆ. ಹಾಗಂತ ಡ್ರೈ ಫ್ರುಟ್ಸ್ ಅನ್ನು ಹೆಚ್ಚಾಗಿ ತಿನ್ನದೆ, ದಿನವೂ ಒಂದು ಹಿಡಿಯಷ್ಟು ಅಳತೆಯಲ್ಲಿ ಮಿಕ್ಸ್ ಮಾಡಿ ಸೇವಿಸಿ. ಅದರಲ್ಲೂ ಬಾದಾಮಿ ಹಾಗೂ ಅಂಜೂರದ ಪೋಷಕಾಂಶಗಳು ಬಹಳ ಅಮೂಲ್ಯ. ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

ಮೊಸರು
ಯೋಗರ್ಟ್ ಎಂಬ ಮೊಸರು ನಮಗೆ ಈಗ ಎಲ್ಲ ಅಂಗಡಿಗಳಲ್ಲೂ ದೊರಕುತ್ತದೆ. ಇದು ಬಹಳಷ್ಟು ರುಚಿಗಳಲ್ಲೂ ಸಿಗುತ್ತದೆ. ಇದನ್ನು ನಮ್ಮ ಊಟದ ಮುಖ್ಯ ಭಾಗವಾಗಿ ಸೇರಿಸಿಕೊಳ್ಳಬೇಕು. ಪ್ರತಿ ದಿನ ಮೊಸರು ಸೇವಿಸಿದರೆ ಖಂಡಿತ ಮೋಸವಿಲ್ಲ ಓಟ್ಸ್

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನಪ್ರಿಯತೆ ಗೆದ್ದ ಆಹಾರ ಈ ಓಟ್ಸ್. ಈಗ ಅನೇಕರ ಮನೆಯಲ್ಲಿ ಓಟ್ಸ್ ಅನ್ನು ದಿನನಿತ್ಯದ ಆಹಾರವಾಗಿ ಬಳಸುತ್ತಾರೆ. ಓಟ್ಸ್ ಕೂಡ ದೇಹದ ತೂಕದ ನಿಯಂತ್ರಣಕ್ಕೆ ಸಹಕಾರಿ. ಓಟ್ಸ್ ಅನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಿ. ಒಳ್ಳೆಯ ಆಹಾರ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಒಳ್ಳೆಯ ಜೀವನ ಶೈಲಿಯನ್ನು ನಿಮ್ಮದಾಗಿಸಿಕೊಳ್ಳಿ.

ರಾತ್ರಿ ನಿದ್ದೆಗೆ ಪರ್ಯಾಯವಾಗಿ ಒಳ್ಳೆಯ ನಿದ್ದೆ ಮಾಡಿ. ವ್ಯಾಯಾಮ ಅಥವಾ ವಾಕ್ ಮಾಡಿ. ಬರ್ಗರ್, ಪೀಜ಼, ರೋಲ್ಸ್, ಹಾಟ್ ಡಾಗ್ಸ್ ಹೀಗೆ ಕ್ಯಾಂಟೀನ್ ನಲ್ಲಿ ಸಿಗುವ ಇಂತಹ ಜಂಕ್ ಫುಡ್ ಗಳನ್ನು ನಿದ್ದೆ ತಡೆಯಲು, ರಾತ್ರಿ ಕಳೆಯಲು ತಿನ್ನುವುದನ್ನು ನಿಲ್ಲಿಸಬೇಕು. ಇವುಗಳ ಬದಲು ಮೇಲೆ ತಿಳಿಸಿದ ಆರೋಗ್ಯಕರ ಆಹಾರಗಳನ್ನು ಬಳಸುವ ಅಭ್ಯಾಸ ಮಾಡಿಕೊಳ್ಳಿ. ರಾತ್ರಿ ಪಾಳಿಯ ಕೆಲಸ ನಿಮ್ಮ ಆರೋಗ್ಯವನ್ನು ಹಾಳು ಮಾಡದೆ ಇರುವಂತೆ ಕಾಪಾಡಿಕೊಳ್ಳಿ.

English summary

Foods that help prevent obesity among night shift workers

Lack of proper sleep, improper food timings and more indulgence in snacks and junk food are a few of the major causes of obesity. And this has been the major problem among those working in night shift. Several researches and studies have also confirmed that those working in night shifts are more obese than those working in day shift.
Story first published: Wednesday, November 2, 2016, 19:44 [IST]
X
Desktop Bottom Promotion