ರಾತ್ರಿ ಪಾಳಿ ಕೆಲಸದವರಿಗೆ ಆರೋಗ್ಯ ಸಲಹೆಗಳು

By Poornima Heggade

ಇಂದಿನ ಜಾಗತೀಕರಣ ಸನ್ನಿವೇಶದಲ್ಲಿ ಪಾಳಿಗಳಲ್ಲಿ ಕೆಲಸ ಮಾಡುವ ಅಗತ್ಯ ಬಹಳ ಇದೆ. ಬೇರೆ ದೇಶಗಳ ಜೊತೆಗೆ ಸೇರಿ ಕೆಲಸ ಮಾಡುವಾಗ ಆ ದೇಶದ ಸಮಯದ ಪ್ರಕಾರವಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಕಾರ್ಮಿಕರಿಗೆ ಬಂದೇ ಬರುತ್ತದೆ. ಜಾಗತೀಕರಣ ಮಾತ್ರವಲ್ಲದೆ ಇನ್ನೂ ಕೆಲವೊಂದು ಕ್ಷೇತ್ರದಲ್ಲಿ ರಾತ್ರಿ ಪಾಳಿಯ ಕೆಲಸಗಳು ಅಗತ್ಯವಾಗುತ್ತವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೊಟ್ಟೆ ನೋವು, ಅಜೀರ್ಣಕ್ಕೆ ಇಲ್ಲಿದೆ ಮನೆಮದ್ದು

ಈ ಪಾಳಿಗಳಲ್ಲಿ ಕೆಲಸ ಮಾಡುವಾಗ ನಿದ್ರಾಹೀನತೆ ಅಥವಾ ಬದಲಾದ ಸಮಯದಲ್ಲಿ ನಿದ್ದೆ ಮಾಡುವುದರಿಂದ ನಿದ್ರೆಗೆ ಸಂಬಂಧಿಸಿದ ಅನಾರೋಗ್ಯಗಳು ಸಾಮಾನ್ಯ. ಎಷ್ಟೇ ಬೇಡ ಎಂದರೂ ನಿಮ್ಮ ಆರೋಗ್ಯ ಈ ಪಾಳಿಗಳ ಕೆಲಸಗಳಲ್ಲೇ ಬೆರೆತು ಹಾಳಾಗಿರುತ್ತದೆ. ಹಾಗೂ ಇಂತಹ ಪಾಳಿಗಳ ಕೆಲಸಗಳು ಜಾಸ್ತಿ ಆದ ಕಾರಣದಿಂದಲೇ ಕಾರ್ಮಿಕರು ರಜೆ ಮಾಡುವುದು ಹಾಗೂ ಅಪಘಾತಗಳು ಹೆಚ್ಚಾಗಿವೆ.

Healthy tips for night shift workers

ಇದರ ಜೊತೆಗೆ ಮರೆವು ಹಾಗೂ ಯಾವುದಾದರೂ ವಿಷಯದ ಬಗ್ಗೆ ಹೆಚ್ಚಿನ ಗಮನ ಕೊಡಲು ಆಗದೇ ಇರುವ ಸನ್ನಿವೇಶಗಳನ್ನು ನೀವೂ ಎದುರಿಸಿರಬಹುದು. ಇಂತಹ ಪಾಳಿ ಕೆಲಸಗಳಿಂದ ನಿಮ್ಮ ಒಟ್ಟಾರೆ ಬದುಕಿನಲ್ಲಿಯೇ ವಿಚಿತ್ರ ಘಟನೆಗಳು ನಡೆಯುತ್ತವೆ ಹಾಗೂ ನಿಮಗೆ ಇದರಿಂದ ಹೊರ ಬರುವ ದಾರಿಗಳು ತಿಳಿದಿರುವುದಿಲ್ಲ.

ರಾತ್ರೆ ಪಾಳಿ ಕೆಲಸಗಳಿರುವಾಗ ಹೆಚ್ಚಿನ ಸಂದರ್ಭಗಳಲ್ಲಿ ಈ ಪಾಳಿಗಳು ಬದಲಾಗುತ್ತಾ ಇರುತ್ತವೆ ಹಾಗೂ ಇದಕ್ಕೆ ನಮ್ಮ ದೇಹವನ್ನು ಹೊಂದಾಣಿಕೆ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಇದರಿಂದ ನಮ್ಮ ನಿದ್ರೆಗೆ ಭಂಗ ಬರುವ ಜೊತೆಗೆ ಅಲ್ಸರ್ಸ್, ಇನ್ಸುಲಿನ್ ನಿರೋಧಕತೆ ಮತ್ತು ಹೃದಯ ಸಂಬಂಧೀ ಕಾಯಿಲೆಗಳು ಬರಬಹುದು. ಇವುಗಳನ್ನು ಬಾರದಂತೆ ನೋಡಲು ಅಥವಾ ಈಗಾಗಲೇ ಇಂತಹ ಸಮಸ್ಯೆಗಳಿಂದ ನೀವು ನರಳುತ್ತಿದ್ದರೆ ಹೇಗೆ ಹೊರಬರಬೇಕು ಎನ್ನುವುದಕ್ಕಾಗಿ ಕೆಲವು ಉಪಾಯಗಳನ್ನು ಇಲ್ಲಿ ಕೊಡಲಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವಯಸ್ಸಾದವರಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳು

ದೇಹದ ಗಡಿಯಾರ ಬದಲಾಗಲಿ
ನಿಮ್ಮ ದೇಹ ಸಹಜವಾಗಿ ದಿನವಿಡಿ ಕೆಲಸ ಮಾಡಿ ರಾತ್ರಿಯ ಹೊತ್ತು ನಿದ್ದೆ ಮಾಡುವ ಅಭ್ಯಾಸವನ್ನು ತನ್ನಷ್ಟಕ್ಕೇ ಬೆಳೆಸಿಕೊಂಡಿದೆ. ಆದರೆ ಈಗ ರಾತ್ರಿಯ ಪಾಳಿ ಕೆಲಸಗಳು ಇವೆ ಎಂದಾದರೆ ಆ ಸಮಯಕ್ಕೆ ಮೊದಲು ಹೊಂದಿಕೊಳ್ಳಲು ಪ್ರಯತ್ನಿಸಿ. ನಿದ್ದೆ ಜೋರಾಗಿ ಬಂದರೂ ನಿಮ್ಮ ಸಮಯದ ತನಕ ಮಲಗದಿರಿ ಹಾಗೂ ದಿನದ ಅವಧಿಯಲ್ಲಿ ಎಚ್ಚರವಾಗಿರಬೇಡಿ. ಹೀಗೆ ಮಾಡಿದಾಗ ನಿಮ್ಮ ದೇಹ ಸಾಮಾನ್ಯವಾಗಿ ರಾತ್ರಿಯ ಹೊತ್ತು ನಿದ್ದೆಗೆ ಅಣಿಯಾಗುವಂತೆ ಮುಂದೆ ದಿನದ ಹೊತ್ತಲ್ಲಿ ನಿದ್ದೆಗೆ ಶರಣಾಗುತ್ತದೆ.

ಆಹಾರ ಕ್ರಮಗಳನ್ನು ಬದಲಾಯಿಸಿಕೊಳ್ಳಿ:
ರಾತ್ರಿಯ ಪಾಳಿಯ ಕೆಲಸದ ಸಂದರ್ಭದಲ್ಲಿ ನೀವು ಎರಡೆರಡು ಬಾರಿ ಊಟ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದರೆ ಅದನ್ನು ಬಿಟ್ಟು ಬಿಡಿ. ರಾತ್ರಿ ಎಂಟು ಗಂಟೆಯ ಹೊತ್ತಿಗೆ ಸರಿಯಾಗಿ ಊಟ ಮಾಡಿ ಹಾಗೂ ಮಧ್ಯರಾತ್ರಿ 12 ಹಾಗೂ ಬೆಳಗ್ಗಿನ ಜಾವ 6 ಕ್ಕೆ ಪೋಷಕಾಂಶಯುಕ್ತ ಆಹಾರವನ್ನು ಸ್ವಲ್ಪವಾಗಿ ಸೇವಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ:ಜೀರ್ಣಕ್ರಿಯೆ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ?

ಬದಲಾವಣೆಗಳಿಗೆ ಹೊಂದಿಕೊಳ್ಳಿ:
ಪ್ರತಿ ವಾರ ಪಾಳಿಗಳನ್ನು ಬದಲಾಯಿಸಿದರೆ ಹೊಂದಾಣಿಕೆ ಮಾಡಿಕೊಳ್ಳುವುದು ಬಹಳ ಕಷ್ಟ. ಹಾಗಾಗಿ ಒಂದು ಪಾಳಿಯನ್ನು ಕೆಲವು ತಿಂಗಳುಗಳ ಕಾಲವಾದರೂ ಮುಂದೂಡಲು ಪ್ರಯತ್ನಿಸಿ. ಹೀಗೆ ಮಾಡಿದಾಗ ನಿಮ್ಮ ದೇಹ ಹೊಂದಿಕೊಂಡ ಒಂದು ಸಮಯಕ್ಕೆ ಸ್ವಲ್ಪ ದಿನಗಳಾದರೂ ಇರಲು ಸಹಾಯ ಆಗುತ್ತದೆ. ಹೀಗೆ ನಿಗದಿತ ಬದಲಾವಣೆಗಳು ಇದ್ದಾಗ ನಿಮಗೆ ಆಹಾರ ಸೇವಿಸಲು ನಿದ್ದೆ ಮಾಡಲು ಮತ್ತು ನಿಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಅಗತ್ಯ ಸಮಯ ಸಿಗುತ್ತಾ ಹೋಗುತ್ತದೆ.

ಎನರ್ಜಿ ಪಾನೀಯಗಳ ಮೊರೆ ಹೋಗದಿರಿ:
ಶಕ್ತಿ ಪಾನೀಯಗಳು ಅಥವಾ ಎನರ್ಜಿ ಡ್ರಿಂಕ್ಸ್ ಗಳಲ್ಲಿ ಬಹಳ ಹೆಚ್ಚಿನ ಪ್ರಮಾಣದ ಕೆಫೇನ್ ಇರುತ್ತದೆ. ಇದು ನಿಮಗೆ ರಾತ್ರಿಯ ಹೊತ್ತು ಬಹಳ ಹೆಚ್ಚಿನ ಸಮಯ ಎಚ್ಚರವಾಗಿರಲು ಸಹಾಯ ಮಾಡಬಹುದು ಆದರೆ ನಿಮ್ಮ ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ಇದು ಖಂಡಿತ ಒಳ್ಳೆಯದಲ್ಲ. ಎನರ್ಜಿ ಡ್ರಿಂಕ್ಸ್ ಬದಲಾಗಿ ಕಾಫಿ ಅಥವಾ ಚಹಾವನ್ನು ಸೇವಿಸಿ. ಇದಕ್ಕೂ ಬದಲಾಗಿ ರಾತ್ರಿ ಪಾಳಿಯಲ್ಲಿ ಎಚ್ಚರವಾಗಿರಲು ಬಹಳ ನೀರು ಕುಡಿಯಿರಿ ಇದರಿಂದಾಗಿ ನಿರ್ಜಲೀಕರಣ ಸಮಸ್ಯೆಯೂ ಬರುವುದಿಲ್ಲ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ:ಜೀರ್ಣಕ್ರಿಯೆ ಸುಧಾರಿಸುವ ಉತ್ತಮ ಆಹಾರಗಳು

ಹೆಚ್ಚು ತಿಂಡಿ ಬೇಡ:
ರಾತ್ರಿ ಪಾಳಿಯ ಕೆಲಸದಲ್ಲಿರುವವರು ಹೆಚ್ಚಿನ ತಿಂಡಿ ತಿನ್ನುವತ್ತ ಆಕರ್ಷಿತರಾಗುತ್ತಾರೆ. ರಾತ್ರಿ ಎಚ್ಚರವಾಗಿರಬೇಕು ಎಂದು ಚಿಪ್ಸ್ ತಿನ್ನುವುದು ಅಥವಾ ಇನ್ಯಾವುದೇ ತಿಂಡಿಯನ್ನು ತಿನ್ನುವುದನ್ನು ಮಾಡಬೇಡಿ. ಮೊದಲನೆಯದಾಗಿ ರಾತ್ರಿಯ ಪಾಳಿಯ ಕೆಲಸವೇ ನಿಮ್ಮ ದೇಹದ ಮೇಲೆ ದೊಡ್ಡ ಒತ್ತಡ ತರುತ್ತದೆ ಇದರ ಜೊತೆಗೆ ಅಂತಹ ಆಹಾರವನ್ನು ಜೀರ್ಣ ಮಾಡುವ ಶಕ್ತಿ ದೇಹಕ್ಕಿರದು. ಹಾಗೂ ಇದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯ ಆಹಾರವಲ್ಲ. ಇದರ ಬದಲಾಗಿ ಹಣ್ಣುಗಳು ಅಥವಾ ಕಲವು ಬೀಜಗಳನ್ನು ತಂದು ತಿಂದರೆ ಒಳ್ಳೆಯದು.

ಕೆಲಸದ ಭಂಗಿಗಳು:
ಹೆಚ್ಚಿನ ಜನರು ಈ ವಿಷಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳುವುದಿಲ್ಲ. ಉತ್ತಮ ಆಹಾರಕ್ಕಾಗಿ ಒಳ್ಳೆಯ ಭಂಗಿಗಳೂ ಬಹಳ ಅಗತ್ಯ. ಕಂಪ್ಯೂಟರ್ ಮುಂದೆ ಕೆಲಸ ಮಾಡುವವರಾಗಿದ್ದರೆ ಪ್ರತಿ ಅರ್ಧ ಗಂಟೆಗೊಮ್ಮೆಯಾದರೂ ನೀವು ಕಂಪ್ಯೂಟರ್ ಪರದೆಯಿಂದ ದೂರಕ್ಕೆ ನೋಡುತ್ತೀರಿ ಎಂದು ಖಾತರಿ ಮಾಡಿಕೊಳ್ಳಿ. ಬೆನ್ನಿಗೆ ಸರಿಯಾದ ಆಧಾರ ಇರಲಿ. ಸಾಧ್ಯವಾದರೆ ಒಂದು ಗಂಟೆಯ ಕೆಲಸದ ಬಳಿಕ ಒಮ್ಮೆ ಹೊರಗಡೆ ಅಡ್ಡಾಡಿ ಬನ್ನಿ. ಕೂರುವ ಜಾಗದಲ್ಲೂ ಕುಷನ್ ಇರಲಿ, ಇದರಿಂದ ನಿಮ್ಮ ಬೆನ್ನಿಗೆ ಬಹಳ ಬೆಂಬಲ ದೊರೆಯುತ್ತದೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

Story first published: Sunday, February 2, 2014, 12:02 [IST]
X
Desktop Bottom Promotion