Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನೋವು ನಿವಾರಕ ಎಣ್ಣೆಗಳು-ಕಡಿಮೆ ಖರ್ಚು ಅಧಿಕ ಲಾಭ!
ಆಲಿವ್, ಕೊಬ್ಬರಿ ಎಣ್ಣೆಗಳ ಔಷಧೀಯ ಗುಣಗಳು ನಾವೆಲ್ಲರೂ ತಿಳಿದುಕೊಂಡಿದ್ದೇವೆ. ಆದರೆ ಹೆಚ್ಚಿನವರ ಅವಗಣನೆಗೆ ಒಳಗಾಗಿರುವ ಎಣ್ಣೆಗಳಲ್ಲಿಯೂ ಹಲವು ಔಷಧೀಯ ಗುಣಗಳಿವೆ ಎಂಬುದು ನಿಮಗೆ ಗೊತ್ತಿತ್ತೇ? ಪರಿಣಾಮಕಾರಿಯಾದ 9 ನೋವು ನಿವಾರಕ ಎಣ್ಣೆಗಳು
ಬನ್ನಿ, ಸಾಮಾನ್ಯ ತೊಂದರೆಗಳಿಗೆ ಈ ಎಣ್ಣೆಗಳನ್ನು ಕೊಂಚ ಅವಶ್ಯಕ ತೈಲ ಬೆರೆಸಿದರೆ ಯಾವ ರೀತಿಯ ಗುಣಗಳನ್ನು ಪಡೆಯಬಹುದು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ....

ತಲೆನೋವಿಗೆ ಪುದೀನಾ ಎಣ್ಣೆ
ಎರಡು ಮೂರು ಹನಿ ಪುದೀನಾ ಎಣ್ಣೆಯನ್ನು ನಯವಾಗಿ ಹಣೆಯ ಪಕ್ಕ ಹಚ್ಚಿ ಮಸಾಜ್ ಮಾಡಿ. ಇದರ ಸೆಳೆತನಿವಾರಕ ಗುಣ ನರಗಳ ಸೆಳೆತವನ್ನು ನಿವಾರಿಸಿ ನೋವನ್ನು ಇಲ್ಲವಾಗಿಸುತ್ತದೆ. ವಿಶೇಷವಾಗಿ ಕುಹರ ಅಥವಾ ಸೈನಸ್ ಮೂಲಕ ಎದುರಾಗಿರುವ ತಲೆನೋವನ್ನೂ ಶಮನಗೊಳಿಸುತ್ತದೆ. ಸೈನಸ್ ಸಮಸ್ಯೆಯನ್ನು ಸರಳವಾಗಿ ಮೈನಸ್ ಮಾಡಿ!

ಗಂಟುನೋವಿಗೆ ಹರಳೆಣ್ಣೆ

ಹಲ್ಲುನೋವಿಗೆ ಲವಂಗದ ಎಣ್ಣೆ
ಆರೋಗ್ಯ ತಜ್ಞರ ಪ್ರಕಾರ ಲವಂಗದ ಎಣ್ಣೆಯಲ್ಲಿರುವ ಯೂಗ್ಲೋನಾಲ್ ಎಂಬ ಪೋಷಕಾಂಶ ಒಂದು ನೈಸರ್ಗಿಕ ನೋವುನಿವಾರಕ ಹಾಗೂ ಪ್ರತಿಜೀವಕವಾಗಿದ್ದು ವಿಶೇಷವಾಗಿ ಹಲ್ಲುನೋವನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ಹಲ್ಲುನೋವಿಗೆ ಲವಂಗದ ಎಣ್ಣೆ
ಅಲ್ಲದೇ ಇದರ ಬ್ಯಾಕ್ಟೀರಿಯಾ ನಿವಾರಕ ಗುಣ ಒಸಡುಗಳ ಸೋಂಕನ್ನು ಇಲ್ಲವಾಗಿಸುತ್ತದೆ. ಹಲ್ಲುನೋವಿದ್ದರೆ ಹತ್ತಿಯುಂಡೆಯೊಂದನ್ನು ಲವಂಗದ ಎಣ್ಣೆಯಲ್ಲಿ ಮುಳುಗಿಸಿ ನೋವಿರುವಲ್ಲಿ ಒತ್ತಿ ಇರುವಂತೆ ಇರಿಸಿ. ಕೊಂಚ ಸಮಯದಲ್ಲಿ ನೋವು ಕಡಿಮೆಯಾಗುತ್ತದೆ. ಲವಂಗದಲ್ಲಿದೆ ನಾನಾ ಔಷಧೀಯ ಗುಣಗಳು!

ಕಿವಿನೋವಿಗೆ ಬೆಳ್ಳುಳ್ಳಿ ಎಣ್ಣೆ
ಬೆಳ್ಳುಳ್ಳಿ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ನಿವಾರಕ ಮತ್ತು ಉರಿಯೂತ ನಿವಾರಕ ಗುಣಗಳಿವೆ. ಕಿವಿನೋವಿದ್ದರೆ ಕೊಂಚ ಬೆಳ್ಳುಳ್ಳಿಯ ಎಣ್ಣೆಯನ್ನು ಕೊಂಚವೇ ಬಿಸಿ ಮಾಡಿ ಕಿವಿಗೆ ಬಿಡಬೇಕು. ಇದರಿಂದ ಕಿವಿನೋವು ತಕ್ಷಣ ಇಲ್ಲವಾಗುತ್ತದೆ.

ಕಿವಿನೋವಿಗೆ ಬೆಳ್ಳುಳ್ಳಿ ಎಣ್ಣೆ
ಶೀತ ನೆಗಡಿಯ ಕಾರಣದಿಂದಾಗಿ ಮೂಗು ಮತ್ತು ಕಿವಿಯ ನಡುವೆ ಇರುವ ಯೂಸ್ಟೇಷಿಯನ್ ಟ್ಯೂಬ್ ಎಂಬ ನಳಿಗೆ ತುಂಬಿಕೊಂಡಿದ್ದುದು ತೆರೆದು ಸೋಂಕು ಇಲ್ಲವಾಗುತ್ತದೆ. ಪರಿಣಾಮವಾಗಿ ನೋವು ಸಹಾ ಇಲ್ಲವಾಗುತ್ತದೆ.

ಬೆನ್ನು ನೋವಿಗೆ ಲ್ಯಾವೆಂಡರ್ ಎಣ್ಣೆ
ದಿನದ ಹೆಚ್ಚು ವೇಳೆ ಕುಳಿತೇ ಇರುವ ಮೂಲಕ ಎದುರಾದ ಬೆನ್ನುನೋವನ್ನು ಕಡಿಮೆಗೊಳಿಸಲು ಲ್ಯಾವೆಂಡರ್ ಎಣ್ಣೆಯನ್ನು ಹಚ್ಚಿ ನಯವಾಗಿ ಮಸಾಜ್ ಮಾಡಿ. ಇದರ ನೋವು ನಿವಾರಕ ಗುಣ ಬೆನ್ನಿನ ಸ್ನಾಯು ಮತ್ತು ನರಗಳನ್ನು ನಿರಾಳಗೊಳಿಸಿ ನೋವಿಗೆ ಶಮನ ನೀಡುತ್ತದೆ. ಇದೇ ಕಾರಣಕ್ಕೆ ಹೆಚ್ಚಿನ ವೃತ್ತಿಪರ ಸ್ಪಾ ಮತ್ತು ಮಸಾಜ್ ಸೆಂಟರ್ ಗಳಲ್ಲಿ ಲ್ಯಾವೆಂಡರ್ ಎಣ್ಣೆಯನ್ನು ಬಳಸುತ್ತಾರೆ. ಬೆನ್ನು ನೋವಿನ ಉಪಶಮನಕ್ಕೆ ಸರಳ ಸೂತ್ರ



Click it and Unblock the Notifications
