ವಿಪರೀತ ಗಂಟಲು ನೋವೇ? ಇಲ್ಲಿದೆ ನೋಡಿ ಮನೆಮದ್ದು...

By: manu
Subscribe to Boldsky

ಮನುಷ್ಯನ ದೇಹವು ಪ್ರತಿಯೊಂದು ಹವಾಮಾನಕ್ಕೂ ಹೊಂದಿಕೊಳ್ಳುವಂತಹ ಸಾಮರ್ಥ್ಯವನ್ನು ಹೊಂದಿದ್ದರೂ ಹವಾಮಾನ ಬದಲಾವಣೆಯಾದಾಗ ಸಾಮಾನ್ಯವಾಗಿ ಶೀತ ಹಾಗೂ ಗಂಟಲು ನೋವು ಕಾಡುವುದು ಸಹಜ. ಇದರಿಂದ ತಕ್ಷಣ ಮುಕ್ತಿ ಪಡೆಯಬೇಕೆಂದು ಬಯಸುತ್ತೇವೆ. ಯಾಕೆಂದರೆ ಶೀತ ಹಾಗೂ ಗಂಟಲು ನೋವಿದ್ದಾಗ ದ್ರವ ಆಹಾರವನ್ನು ಸೇವಿಸಲು ಸಾಧ್ಯವಾಗುವುದಿಲ್ಲ. ಗಂಟಲು ಬೇನೆಯ ಕಿರಿಕಿರಿಗೆ-ಇಲ್ಲಿದೆ ನೋಡಿ ಮನೆಮದ್ದು

ಇಂತಹ ಪರಿಸ್ಥಿತಿಯನ್ನು ಪ್ರತಿಯೊಬ್ಬರು ಎದುರಿಸಿರಬಹುದು. ಇದರಿಂದ ಮುಕ್ತಿ ಪಡೆಯಲು ಕೆಲವೊಂದು ಮನೆಮದ್ದನ್ನು ಬಳಸಿಕೊಂಡರೆ ಒಳ್ಳೆಯದು. ಅತಿಯಾಗಿ ಬೊಬ್ಬೆ ಹಾಕುವುದು, ಅಲರ್ಜಿ, ಪ್ರದೂಷಣೆ, ಸೋಂಕು, ವೈರಸ್, ಬ್ಯಾಕ್ಟೀರಿಯಾ ಗಂಟಲು ನೋವಿಗೆ ಪ್ರಮುಖ ಕಾರಣವಾಗಿದೆ. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಮಾತ್ರೆಗಳು ಹಾಗೂ ಸಿರಫ್ ಸಿಗುತ್ತಿದ್ದರೂ ಇದನ್ನು ಪದೇ ಪದೇ ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ಬಿಸಿಬಿಸಿ ಅರಿಶಿನ ಹಾಲು-ಗಂಟಲು ಕೆರೆತ ಮಂಗಮಾಯ!

ಇಂತಹ ಪರಿಸ್ಥಿತಿಯಲ್ಲಿ ಮನೆಮದ್ದನ್ನು ಬಳಸುವುದೇ ಉತ್ತಮ. ಮನೆಮದ್ದನ್ನು ಸೇವಿಸುವುದರೊಂದಿಗೆ ತಿನ್ನುವಂತಹ ಆಹಾರದ ಬಗ್ಗೆ ಕೂಡ ಎಚ್ಚರ ವಹಿಸಬೇಕು. ಗಂಟಲು ನೋವಿನಿಂದ ಬಳಲುತ್ತಾ ಇರುವವರು ತಂಪು ಪಾನೀಯ, ತಂಪಾಗಿರುವ ಆಹಾರ ಮತ್ತು ಖಾರವಾಗಿರುವ ಆಹಾರದಿಂದ ದೂರವಿರಬೇಕು. ಗಂಟಲು ನೋವನ್ನು ನಿವಾರಿಸುವಂತಹ ಮನೆಮದ್ದುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಇದನ್ನು ಬಳಸಿಕೊಂಡು ಅದರ ಲಾಭವನ್ನು ಪಡೆಯಿರಿ....       

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬ್ಯಾಕ್ಟೀರಿಯಾ ವಿರೋಧಿ ಹಾಗೂ ನಂಜುನಿರೋಧಕ ಗುಣವನ್ನು ಹೊಂದಿರುವಂತಹ ಬೆಳ್ಳುಳ್ಳಿಯು ಗಂಟಲು ನೋವನ್ನು ನಿವಾರಿಸುತ್ತದೆ. ಬೆಳ್ಳುಳ್ಳಿಯಲ್ಲಿರುವಂತಹ ಅಲಿಸಿನ್ ಎನ್ನುವಂತಹ ಅಂಶವು ಬ್ಯಾಕ್ಟೀರಿಯಾವನ್ನು ಕೊಂದು ಗಂಟಲು ನೋವನ್ನು ನಿವಾರಿಸುತ್ತದೆ. ಹಸಿ ಬೆಳ್ಳುಳ್ಳಿ ಅಥವಾ ಆಹಾರದಲ್ಲಿ ಇದನ್ನು ಬಳಸುವ ಮೂಲಕ ಸೇವಿಸಬಹುದು.

ಲಿಂಬೆ

ಲಿಂಬೆ

ಒಂದು ಲೋಟ ಬಿಸಿ ನೀರಿಗೆ ಒಂದು ಲಿಂಬೆಯ ರಸವನ್ನು ಹಿಂಡಿಕೊಳ್ಳಿ. ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ದಿನದಲ್ಲಿ ಎರಡು ಸಲ ಈ ನೀರನ್ನು ಕುಡಿಯಿರಿ. ಇದು ನಿಮಗೆ ನೆರವಾಗುವುದು.

ಜೇನುತುಪ್ಪ

ಜೇನುತುಪ್ಪ

ಬ್ಯಾಕ್ಟೀರಿಯಾ ವಿರೋಧಿ ಹಾಗೂ ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವ ಜೇನುತುಪ್ಪವನ್ನು ಹಿಂದಿನ ಕಾಲದಿಂದಲೂ ಸೇವಿಸುತ್ತಾ ಇದ್ದರು. ಒಂದು ಕಪ್ ಬಿಸಿ ನೀರಿಗೆ ಒಂದರಿಂದ ಎರಡು ಚಮಚ ಜೇನುತುಪ್ಪನ್ನು ಹಾಕಿ ದಿನದಲ್ಲಿ ಎರಡರಿಂದ ಮೂರು ಸಲ ಕುಡಿಯಿರಿ ಅಥವಾ ಮಲಗುವ ಮೊದಲು ಒಂದು ಚಮಚ ಜೇನುತುಪ್ಪನ್ನು ನೇರವಾಗಿ ಸೇವಿಸಬಹುದು.

ಅರಿಶಿನ

ಅರಿಶಿನ

ನಂಜು ನಿರೋಧಕ ಹಾಗೂ ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವಂತಹ ಅರಿಶಿನವು ಗಂಟಲು ನೋವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಚಿಟಿಕೆ ಅರಶಿನವನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ಮೆಂತೆ

ಮೆಂತೆ

ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವಂತಹ ಮೆಂತೆಯು ಗಂಟಲು ನೋವಿಗೆ ಪರಿಹಾರವನ್ನು ಒದಗಿಸುತ್ತದೆ. ಎರಡರಿಂದ ಮೂರು ಚಮಚ ಮೆಂತೆಯನ್ನು ನೀರಿಗೆ ಹಾಕಿಕೊಂಡು ಅದನ್ನು ಸರಿಯಾಗಿ ಕುದಿಸಿ. ಅದನ್ನು ಗಾಳಿಸಿಕೊಂಡು ಬಳಿಕ ತಣ್ಣಗಾಗಲು ಬಿಡಿ. ಈ ನೀರಿನಿಂದ ಬಾಯಿ ಮುಕ್ಕಳಿಸಿಕೊಳ್ಳಿ.

ಲವಂಗ

ಲವಂಗ

ಎರಡು ಲವಂಗವನ್ನು ಬಾಯಿಗೆ ಹಾಕಿಕೊಂಡು ಅದು ಮೆತ್ತಗೆ ಆಗುವ ತನಕ ಜಗಿಯುತ್ತಾ ಇರಿ. ಜಗಿದ ಬಳಿಕ ಇದನ್ನು ನುಂಗಿ. ಗಂಟಲು ನೋವಿಗೆ ಇದು ತುಂಬಾ ಪರಿಣಾಮಕಾರಿ.

English summary

Effective Home Remedies For Sore Throat

Sore throat is caused by bacteria, virus, infection, pollution, allergic reaction and other things like excessive shouting. There are a lot of pills that are available over the counter that will help in treating the symptoms. But popping a pill every time you get sore throat, is it healthy? Definitely not. Hence, it is always better to take up home remedies for a condition like this.
Story first published: Friday, December 9, 2016, 10:39 [IST]
Please Wait while comments are loading...
Subscribe Newsletter