Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಬಿಸಿಬಿಸಿ ಅರಿಶಿನ ಹಾಲು-ಗಂಟಲು ಕೆರೆತ ಮಂಗಮಾಯ!
ಬಿಟ್ಟುಬಿಟ್ಟು ಬರುವ ಮಳೆ, ಆಗಾಗ ಬದಲಾಗುತ್ತಿರುವ ಹವಾಮಾನದಿಂದ ಹಲವಾರು ರೀತಿಯ ಅನಾರೋಗ್ಯಗಳು ನಮ್ಮನ್ನು ಕಾಡಲು ಆರಂಭಿಸುತ್ತದೆ. ಅದರಲ್ಲೂ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿದ್ದರೆ ಆಗ ಜ್ವರ, ಶೀತ, ನೆಗಡಿ, ಕೆಮ್ಮು ಬೇಗನೆ ಬಂದು ವಕ್ಕರಿಸಿಕೊಳ್ಳುತ್ತದೆ. ಜ್ವರ ಕಾಣಿಸಿಕೊಂಡರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ.
ಆದರೆ ಗಂಟಲು ಕೆರೆತ ಸಮಸ್ಯೆ ಕಾಣಿಸಿಕೊಂಡರೆ ಆಗ ಮನೆ ಹಾಗೂ ಕಚೇರಿಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಗಂಟಲು ಕೆರೆತ ಕಾಣಿಸಿಕೊಂಡಾಗ ಮನೆಮದ್ದನ್ನು ಬಳಸಿದರೆ ಅದರಿಂದ ಮುಕ್ತಿ ಪಡೆಯಬಹುದು. ಅರಿಶಿನ ಹಾಕಿದ ಹಾಲನ್ನು ದಿನದಲ್ಲಿ 2-3 ಸಲ ಕುಡಿಯುವುದರಿಂದ ಗಂಟಲು ಕೆರೆತ ನಿವಾರಿಸಬಹುದು.

ಅರಿಶಿನದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಹಾಗೂ ಉರಿಯೂತ ಶಮನಕಾರಿ ಗುಣಗಳಿವೆ. ಇದು ಬ್ಯಾಕ್ಟೀರಿಯಾ ಬೆಳೆಯುವುದನ್ನು ತಡೆದು ಉರಿಯೂತವನ್ನು ಶಮನಗೊಳಿಸುತ್ತದೆ. ಇದರಿಂದ ಗಂಟಲಿನಲ್ಲಿನ ಕೆರೆತ ಕಡಿಮೆಯಾಗುತ್ತದೆ. ನುಂಗುವಾಗ ಉಂಟಾಗುವ ಬಿಸಿಯಾಗುವ ಅನುಭವ, ನೋವು, ಊತವನ್ನು ನಿಯಂತ್ರಿಸುತ್ತದೆ. ಶೀತ, ಗಂಟಲು ಕೆರೆತ ಸಮಸ್ಯೆಗೆ, ಜೀರಿಗೆ ಕಷಾಯ ಸಾಕು
ಗಂಟಲಿನಲ್ಲಿ ಅಂಟಿರುವಂತಹ ಲೋಳೆಯನ್ನು ಕಡಿಮೆ ಮಾಡಲು ನೀವು ಬಿಸಿಯಾಗಿರುವ ಅರಿಶಿನ ಹಾಲನ್ನು ಕುಡಿದರೆ ತುಂಬಾ ಒಳ್ಳೆಯದು. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ಅರಿಶಿನ ಹಾಕಿದ ಹಾಲು ದೇಹದ ಪ್ರತಿರೋಧಕ ವ್ಯವಸ್ಥೆಯನ್ನು ಸುಧಾರಿಸುವ ಕಾರಣದಿಂದ ಬೇಗನೆ ಚೇತರಿಸಿಕೊಳ್ಳಲು ನೆರವಾಗುತ್ತದೆ. ಗಂಟಲು ನೋವಿನ ಕಿರಿಕಿರಿಯೇ? ಹಾಗಾದರೆ ಇನ್ನು ಚಿಂತೆ ಬಿಡಿ!
ತಯಾರಿಸುವುದು ಹೇಗೆ?
*ಒಂದು ಕುಟ್ಟಾಣಿಯನ್ನು ತೆಗೆದುಕೊಂಡು ಅದಕ್ಕೆ ಸುಮಾರು 6-7 ಕರಿಮೆಣಸನ್ನು ಹಾಕಿ ಹುಡಿ ಮಾಡಿಕೊಳ್ಳಿ. ಈಗ ಒಂದು ಲೋಟ ಹಾಲನ್ನು ತೆಗೆದುಕೊಂಡು 5-10 ನಿಮಿಷ ಕುದಿಸಿ.
*ಹಾಲು ಕುದಿಯುತ್ತಿರುವಂತೆ ಅರ್ಧ ಚಮಚ ಅರಿಶಿನ ಮತ್ತು ಸ್ವಲ್ಪ ಹುಡಿ ಮಾಡಿದ ಕರಿಮೆಣಸಿನ ಹುಡಿಯನ್ನು ಹಾಕಿ.
*ಹಾಲಿಗೆ ಒಂದು ಚಮಚ ಸಕ್ಕರೆ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಬಳಿಕ ಗ್ಯಾಸ್ ಒಲೆ ಆಫ್ ಮಾಡಿ
*ಬಿಸಿಯಾಗಿರುವಾಗಲೇ ಈ ಮಿಶ್ರಣವನ್ನು ಕುಡಿಯಿರಿ.
*ಬೆಳಿಗ್ಗೆ ಉಪಹಾರ ಸೇವಿಸಿದ ಬಳಿಕ ಮತ್ತು ರಾತ್ರಿ ನಿದ್ರಿಸುವ ಮೊದಲು ಇದನ್ನು ಸೇವಿಸಿ. ಇದು ಗಂಟಲು ಕೆರೆತವನ್ನು ನಿವಾರಿಸುತ್ತದೆ. ಈ ಮನೆಮದ್ದನ್ನು ಪ್ರಯತ್ನಿಸಿ ಫಲಿತಾಂಶ ಸಿಕ್ಕಿದೆಯಾ ಎಂದು ನಮಗೆ ಹೇಳಿ. ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



