Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅತಿರೇಕದ ತಿನ್ನುವ ಬಯಕೆ, ಯಾವುದರ ಮುನ್ಸೂಚನೆ?
ನಮ್ಮಲ್ಲಿ ಬಸುರಿಯ ಬಯಕೆಗಳನ್ನು ತೀರಿಸುವುದಕ್ಕಾಗಿ ಸಮಾರಂಭಗಳನ್ನು ಏರ್ಪಡಿಸಿ, ಆಕೆ ಬಯಸುವ ತಿಂಡಿ-ತೀರ್ಥಗಳನ್ನೆಲ್ಲ ಮಾಡಿ ತಿನ್ನಿಸುತ್ತಾರೆ. ಆಕೆ ತೃಪ್ತಳಾದರೆ, ಅವಳ ಮತ್ತು ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ ಎಂಬ ನಂಬುಗೆ ನಮ್ಮದು. ಏನಿದರ ಹಿಂದಿರುವ ವಿಜ್ಞಾನ?
ನಿಜವಾಗಿ ನೋಡಿದರೆ, ನಮ್ಮ ಶರೀರದಲ್ಲಿ ಯಾವ ಸತ್ವಾಂಶದ ಕೊರತೆ ಇರುವುದೋ, ಆ ಅಂಶವುಳ್ಳ ತಿನಿಸನ್ನು ತಿನ್ನುವ ಬಯಕೆ ಬರುತ್ತದೆ! ಈ ವಿಷಯ ಶ್ರೀ ಸಮಾನ್ಯನಿಗೂ ಅನ್ವಯಿಸುತ್ತದೆ. ಆ ಕೊರತೆ ಅತಿಯಾದಾಗ ಬರಬಹುದಾದ ಯಾವುದೋ ಕಾಯಿಲೆಯ ಸೂಚನೆಯೂ ಇದಾಗಿರಬಹುದು!

ಕೆಲವು ಗರ್ಭಿಣಿಯರು ಅಥವಾ ಮಕ್ಕಳು ಮಣ್ಣು ತಿನ್ನುವುದನ್ನು ನೀವು ಗಮನಿಸಿರಬಹುದು. ಶರೀರದಲ್ಲಿ ಖನಿಜಾಂಶದ ಕೊರತೆ ಉಂಟಾದಾಗ ಅವರು ಹೀಗೆ ಮಾಡುತ್ತಾರೆ! ಆ ಸತ್ವವುಳ್ಳ ಆಹಾರವನ್ನು ನೀಡಿದಾಗ, ಈ ಬಯಕೆ ತನ್ನಿಂದ ತಾನೇ ನಿಲ್ಲುವುದು.
ಈ ಮಾತಿಗೆ ಅಪವಾದವೂ ಇರಬಹುದೆನ್ನಿ! ಮಕ್ಕಳು ಚಾಕಲೇಟ್ ತಿನ್ನುವುದಕ್ಕೆ ಇಚ್ಚಿಸುತ್ತಾರಾದರೆ, ಅದು ಸಹಜವೇ ಹೊರತು, ಅವರಿಗೆ ಮೆಗ್ನೇಶಿಯಂ ಮತ್ತು ಬಿ' ಜೀವಸತ್ವದ ಕೊರತೆ ಇದೆ ಎಂದರ್ಥವಲ್ಲ. ಒಂದು ವೇಳೆ ಪ್ರಬುದ್ಧರಿಗೆ ಈ ಸಮಸ್ಯೆ ಕಾಡಿದರೆ, ಆಗ ಹೀಗೆ ಅರ್ಥ ಮಾಡಿಕೊಳ್ಳಬಹುದಾಗಿದೆ.
ಕೆಲವರು ಖಾದ್ಯದಲ್ಲಿ ಹೆಚ್ಚುವರಿ ಉಪ್ಪನ್ನು ಇಷ್ಟ ಪಡುತ್ತಾರೆ. ಮತ್ತೆ ಕೆಲವರು ಉಪ್ಪನ್ನು ನೇರವಾಗಿ ಬಾಯಿಗೆ ಇರಿಸಿಕೊಳ್ಳುತ್ತಾರೆ! ಇದು ಅತಿರೇಕದ ಬಯಕೆ ಅಲ್ಲದೆ ಮತ್ತೇನು? ಅಡ್ರಿನಲ್ ಗ್ರಂಥಿಯು ಹಾರ್ಮೋನುಗಳನ್ನು ಉತ್ಪಾದಿಸಲು ಸೋತಾಗ, ' ಅಡಿಸನ್ಸ್ ಏಲ್ಮೆಂಟ್' ಎನ್ನುವ ಸಮಸ್ಯೆ ತಲೆದೋರುವುದು. ಇಂಥವರಲ್ಲೂ ಉಪ್ಪಿನ ಬಯಕೆ ಮೂಡುವುದು. ಸಿಹಿ ತಿನ್ನುವ ಅದಮ್ಯ ಬಯಕೆ-ಕೊಂಚ ಮಿತವಾಗಿರಲಿ!
ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕಲ್ಲ? ಅದು ಸಹಜ. ಆದರೆ, ಪ್ರತಿ ಕೆಲವು ನಿಮಿಷಗಳಿಗೊಮ್ಮೆ ನೀರಡಿಕೆಯಾಗುವುದು ಮತ್ತು ಮೂತ್ರವಿಸರ್ಜನೆಗೆ ಪ್ರಚೋದನೆ ಉಂಟಾದರೆ, ಅದರ ಬಯಕೆ ಅತಿಯಾದರೆ, ಅದು ಯಾವುದರ ಸೂಚನೆ? ಆಟ, ಪಾಠ, ಓಡಾಟ, ನಡೆದಾಟ, ಬಿಸಿಲಿನ ಬೇಗೆ, ಮಾನಸಿಕ ಒತ್ತಡ, ಇಡ್ಲಿ-ದೋಸೆಯಂತಹ ತಿಂಡಿಯ ಅನಂತರ ಬಹಳ ನೀರಡಿಕೆ ಯಾಗುವುದು ಸಹಜವೆ.
ಆದರೆ ಪ್ರತಿ ಕೆಲವು ನಿಮಿಷಗಳಿಗೊಮ್ಮೆ ಬಾಯಿಯ ಪಸೆ ಒಣಗುತ್ತಿದ್ದರೆ, ಅದು ಮಧುಮೇಹದ ಸೂಚನೆಯಾಗಿರುವ ಸಾಧ್ಯತೆಯೂ ಇದೆ! ಇಂತಹವರ ರಕ್ತದಲ್ಲಿ ಸೇರುವ ಹೆಚ್ಚುವರಿ ಸಕ್ಕರೆ ಅಂಶವನ್ನು ನಿಗ್ರಹಿಸುವುದಕ್ಕಾಗಿ ಅವರ ಕಿಡ್ನಿ ಸತತ ಹೋರಾಡುತ್ತದೆ. ಅದು ಸೋತಾಗ, ಸಕ್ಕರೆ ಅಂಶ ಮೂತ್ರದ ಮೂಲಕ ಹೊರ ಹೋಗುತ್ತದೆ. ನೀರಡಿಕೆ ಉಂಟಾಗುತ್ತದೆ... ಆಹಾರದ ಬಯಕೆಯನ್ನು ಯೋಗದ ಮೂಲಕ ನಿಯಂತ್ರಿಸಿ
ಗರ್ಭಿಣಿ ಸ್ತ್ರೀಯರ ಆರೋಗ್ಯಕ್ಕೆ ಒಮೆಗಾ 3 ಮತ್ತು ಫ್ಯಾಟಿ ಆಸಿಡ್‌ನ ಅವಶ್ಯಕತೆ ಇರುತ್ತದೆ. ಆದ್ದರಿಂದಲೇ ಕರಿದ ತಿನಿಸುಗಳನ್ನು ಮಾಡಿ ಬಡಿಸುತ್ತಾರೆ. ಹಾಗೆಯೇ ಕರಿದ ತಿನಿಸಿನ ಬಯಕೆಯು, ಶರೀರದಲ್ಲಿ ಆಯಾ ಸತ್ವಾಂಶಗಳ ಕೊರತೆಯನ್ನು ಸೂಚಿಸುವ ರೀತಿಯೂ ಹೌದು. ಯಾವ ಬಯಕೆಯೂ ಅತಿಯಾಗಿರದೆ ನಿಗ್ರಹದ ಮುಷ್ಟಿಯೊಳಗಿದ್ದು, ಪೋಷಕಾಂಶಗಳನ್ನೊಳಗೊಂಡ ಸಮತೋಲಿತ ಆಹಾರ ಸೇವನೆಯು ಎಲ್ಲ ವಯೋಮಾನದವರಿಗೂ ಶ್ರೇಯಸ್ಕರ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



