For Quick Alerts
ALLOW NOTIFICATIONS  
For Daily Alerts

ಉಸಿರಾಟದ ತೊಂದರೆ ಕಂಡುಬಂದರೆ, ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ

By Arshad
|

ನಮ್ಮ ದೇಹ ಅನೈಚ್ಛಿಕವಾಗಿ ನಡೆಸುವ ಕಾರ್ಯಗಳಲ್ಲಿ ಉಸಿರಾಟವೂ ಒಂದು. ಸಾಮಾನ್ಯ ಸ್ಥಿತಿಯಲ್ಲಿ ಉಸಿರಾಟ ಸಾಮಾನ್ಯವಾಗಿರುತ್ತದೆ. ಹೆಚ್ಚು ಶಕ್ತಿ ವ್ಯಯವಾಗುವ ಚಟುವಟಿಕೆಯಲ್ಲಿ (ಉದಾಹರಣೆಗೆ ಓಟ) ಅಥವಾ ಕೆಲವು ಸಂದರ್ಭಗಳಲ್ಲಿ (ಭಯ, ಉದ್ವೇಗ) ಉಸಿರಾಟ ಹೆಚ್ಚಾಗುತ್ತದೆ.

ಅಂದರೆ ಈ ಹೊತ್ತಿನಲ್ಲಿ ರಕ್ತಕ್ಕೆ ಹೆಚ್ಚಿನ ಆಮ್ಲಜನಕದ ಅವಶ್ಯಕತೆ ಇದ್ದು ಉಸಿರಾಟವನ್ನು ತೀವ್ರಗೊಳಿಸುವ ಮೂಲಕ ಇದನ್ನು ಪಡೆಯಬಹುದು. ಕೆಲವೊಮ್ಮೆ ಉಸಿರಾಟ ತೀವ್ರಗೊಳಿಸಿದರೂ ಅವಶ್ಯಕತೆಗೆ ಬೇಕಾದಷ್ಟು ಆಮ್ಲಜನಕ ಸಿಗದೇ ಉಸಿರುಗಟ್ಟುವಂತಾಗುತ್ತದೆ. ಇದನ್ನೇ breathlessness ಎಂದು ಕರೆಯುತ್ತಾರೆ. ಅಚ್ಚರಿ ಆದರೂ ಸತ್ಯ- ಉಸಿರಾಟದ ಮೂಲಕ ಆರೋಗ್ಯವೃದ್ಧಿಸಿ!

ಈ ಸ್ಥಿತಿಗೆ ಕನ್ನಡದಲ್ಲಿ ಸೂಕ್ತ ಪದವಿಲ್ಲ. ಉಸಿರುಗಟ್ಟುವುದು ಎಂದು ಸ್ಥೂಲವಾಗಿ ಹೇಳಬಹುದಾದರೂ ಉಸಿರಾಟ ಕಷ್ಟವಾಗುವುದಕ್ಕೆ ಉಸಿರುಗಟ್ಟುವುದು ಎನ್ನುತ್ತಾರೆ. ಆದರೆ ಈ ಸ್ಥಿತಿಯಲ್ಲಿ ಉಸಿರೆಳೆದುಕೊಳ್ಳಲು ಸಾಧ್ಯವಾದರೂ ಗಾಳಿಯಿಂದ ಆಮ್ಲಜನಕ ಹೀರಿಕೊಳ್ಳುವ ಕ್ಷಮತೆ ಕಡಿಮೆಯಾಗಿರುವ ಕಾರಣ ಯಾವುದೇ ದೈಹಿಕ ಕೆಲಸಗಳನ್ನು ಮಾಡಲು ತ್ರಾಣ ಸಾಲದೇ ಹೋಗಬಹುದು.

ನಿತ್ಯಜೀವನದ ಚಟುವಟಿಕೆಗಳಿಗೆ ಸಾಮಾನ್ಯ ಉಸಿರಾಟವೇ ಸಾಕಾಗುವುದರಿಂದ ಈ ಸ್ಥಿತಿಗೆ ಒಳಗಾಗಿರುವ ವ್ಯಕ್ತಿಗಳಿಗೆ ತಮಗೆ ಈ ತೊಂದರೆ ಇದೆ ಎಂಬುವುದೇ ಗೊತ್ತಿರುವುದಿಲ್ಲ. ಇದು ಗೊತ್ತಾಗಬೇಕಾದರೆ ಒಮ್ಮೆ ಅನಿವಾರ್ಯವಾಗಿ ಕೊಂಚ ದೂರ ಓಡಿ ನಿಂತ ಬಳಿಕ ಉಸಿರು ಮತ್ತೆ ಸರಿಯಾಗಲು ಹೆಚ್ಚು ಹೊತ್ತು ತೆಗೆದುಕೊಂಡಾಗಲೇ ಇದರ ಇರುವಿಕೆಯ ಬಗ್ಗೆ ಗೊತ್ತಾಗುತ್ತದೆ. ಆದರೆ ಇದರ ಇರುವಿಕೆಯನ್ನು ದೇಹ ಕೆಲವು ಸೂಕ್ಷ್ಮ ಸೂಚನೆಗಳ ಮೂಲಕವೂ ನೀಡುತ್ತದೆ. ಹಾಗಾಗಿ ಓಡಿ ದಣಿಯುವ ಬದಲು ಕೆಳಗೆ ನೀಡಿರುವ ಸೂಚನೆಗಳನ್ನು ಗಮನಿಸಿದರೆ ಸಾಕು.....


ಅಸ್ತಮಾ

ಅಸ್ತಮಾ

ಶ್ವಾಸಕೋಶದ ನಾಳಗಳು ಕಿರಿದಾಗುವುದು ಮತ್ತು ಶ್ವಾಸಕೋಶಗಳ ಒಳಗಣ ಜೀವಕೋಶಗಳು ಸೋಂಕಿಗೆ ತುತ್ತಾಗಿರುವ ಮೂಲಕ ಅಸ್ತಮಾ ಎದುರಾಗುತ್ತದೆ. ಮೊದಲ ಕಾರಣ ಹೆಚ್ಚು ಅಪಾಯಕರವಲ್ಲದಿದ್ದರೂ ಎರಡನೆಯ ಕಾರಣ ಮಾತ್ರ ಅಪಾಯಕಾರಿಯಾಗಿದೆ. ಇವೆರಡೂ ಕಾರಣದಿಂದ ಎದುರಾಗಿರುವ ಅಸ್ತಮಾ ಉಸಿರೆಳೆದುಕೊಳ್ಳಲು ಕಷ್ಟವಾಗಿಸುತ್ತದೆ.

COPD

COPD

Chronic Obstructive Pulmonary Disease (COPD) ಎಂಬ ಖಾಯಿಲೆ ಧೂಮಪಾನಿಗಳಿಗೆ ಹೆಚ್ಚು ಆವರಿಸುವ ಕಾಯಿಲೆಯಾಗಿದ್ದು ಇದರ ಮೂಲಕ ಶ್ವಾಸನಾಳದ ಒಳಗೆ ದಪ್ಪನೆಯ ಜಿಡ್ಡು ಅಂಟಿಕೊಂಡು ಇದನ್ನು ನಿವಾರಿಸಲು ಹೆಚ್ಚು ಕೆಮ್ಮಿದಷ್ಟೂ ಹೆಚ್ಚು ಗಾಢವಾಗುತ್ತಾ ಹೋಗುತ್ತದೆ. ಇದನ್ನೇ ನಿರಂತರ ಹೆಚ್ಚುವ (progressive) ಕಾಯಿಲೆ ಎಂದು ಕರೆಯಲಾಗುತ್ತದೆ. ಸತತವಾಗಿ ಹೆಚ್ಚುವ ಜಿಡ್ಡು ಉಸಿರಾಟವನ್ನು ಕಷ್ಟಕರವಾಗಿಸುತ್ತಾ ಹೋಗುತ್ತದೆ.

ಉದ್ವೇಗ

ಉದ್ವೇಗ

ಉದ್ವೇಗದ ಸಮಯದಲ್ಲಿ ನಮ್ಮ ದೇಹದಲ್ಲಿ ಅಡ್ರಿನಲಿನ್ ಎಂಬ ರಸದೂತ ಸ್ರವಿತಗೊಳ್ಳುತ್ತದೆ. ಇ ರಸದೂತ ಹೃದಯದ ಬಡಿತ ಹೆಚ್ಚಿಸುವ ಜೊತೆಗೇ ಉಸಿರಾಟವನ್ನೂ ವೇಗಗೊಳಿಸುತ್ತದೆ. ಈ ಸಮಯದಲ್ಲಿ ಉಸಿರು ಸಿಗದೇ ಇದ್ದಾಗ breathlessness ಇದೆ ಎಂದು ಗೊತ್ತಾಗುತ್ತದೆ.

ಹೃದಯದ ತೊಂದರೆಗಳು

ಹೃದಯದ ತೊಂದರೆಗಳು

ಹೃದಯ ಸಂಬಂಧಿ ತೊಂದರೆಗಳು ಯಾವುದೇ ಇದ್ದರೂ ಇದರ ಪರಿಣಾಮವನ್ನು ನರಗಳ ಮೇಲೆ ಸ್ಪಷ್ಟವಾಗಿ ಕಾಣಬಹುದು. ಮೊದಲಿಗೆ ರಕ್ತದ ಒತ್ತಡ ಹೆಚ್ಚುವುದನ್ನು ನರಗಳು ತೋರಿಸುತ್ತವೆ. ಹೆಚ್ಚಿನ ರಕ್ತದ ಒತ್ತಡ ಎಂದರೆ ಹೆಚ್ಚು ಆಮ್ಲಜನಕದ ಅವಶ್ಯಕತೆಯನ್ನು ಶ್ವಾಸಕೋಶಗಳು ನೀಡಬೇಕಾಗಿರುವ ಕಾರಣ ಸಾಮಾನ್ಯ ಉಸಿರಾಟವೂ ಕೊಂಚ ವೇಗದಿಂದ ನಡೆಯುತ್ತಿರುತ್ತದೆ.

ಅಲರ್ಜಿಯ ಕಾರಣ ಉಂಟಾಗುವ ಪ್ರತಿಕ್ರಿಯೆಗಳು

ಅಲರ್ಜಿಯ ಕಾರಣ ಉಂಟಾಗುವ ಪ್ರತಿಕ್ರಿಯೆಗಳು

ಕೆಲವರಿಗೆ ಧೂಳು, ಹೂವಿನ ಪರಾಗ, ಗಾಳಿಯಲ್ಲಿನ ಹೊಗೆಕಣ ಮೊದಲಾದ ಸೂಕ್ಷ್ಮಕಣಗಳು ಅಲರ್ಜಿಕಾರಕವಾಗಿರುತ್ತವೆ. ಯಾವಾಗ ಗಾಳಿಯಲ್ಲಿ ಈ ಕಣಗಳು ಕಂಡುಬರುತ್ತವೆಯೋ ಆಗ ಉಸಿರಾಡಲು ಇವರಿಗೆ ಕಷ್ಟವಾಗತೊಡಗುತ್ತದೆ.

ಸ್ಥೂಲಕಾಯ

ಸ್ಥೂಲಕಾಯ

ತಮ್ಮ ಎತ್ತರಕ್ಕ ತಕ್ಕ ತೂಕಕ್ಕಿಂತಲೂ ಹೆಚ್ಚು ತೂಕ ಹೊಂದಿರುವ ವ್ಯಕ್ತಿಗಳು ಸಹಾ ಈ ತೊಂದರೆಗೆ ಸುಲಭವಾಗಿ ತುತ್ತಾಗುತ್ತಾರೆ. ತೂಕ ಹೆಚ್ಚುತ್ತಾ ಹೋದಂತೆ ಎದೆಗೂಡಿನ ಸ್ನಾಯುಗಳು ಹಿಗ್ಗಲು ಸ್ಥೂಲದೇಹವೇ ಅಡ್ಡಿಯಾಗಿದ್ದು ಉಸಿರಾಟಕ್ಕೆ ತೊಂದರೆಯಾಗುತ್ತದೆ.

ಕೆಲವು ಶಸ್ತ್ರಚಿಕಿತ್ಸೆ ಮತ್ತು ವಿಕಿರಣಗಳು

ಕೆಲವು ಶಸ್ತ್ರಚಿಕಿತ್ಸೆ ಮತ್ತು ವಿಕಿರಣಗಳು

ಕೆಲವು ರೋಗಿಗಳಿಗೆ ಹಿಂದೆ ಆಗಿರುವ ಶ್ವಾಸಕೋಶದ ಶಸ್ತ್ರಚಿಕಿತ್ಸೆಯಿಂದ ಪೂರ್ಣಪ್ರಮಾಣದ ಚೇತರಿಕೆ ಕಾಣದ ಮೂಲಕವೂ ಈ ತೊಂದರೆ ಎದುರಾಗಬಹುದು. ಕೆಲವು ರೋಗಗಳ ಚಿಕಿತ್ಸೆಗಾಗಿ ವಿಕಿರಣವನ್ನು ಬಳಸುವ ಸಂದರ್ಭದಲ್ಲಿ ಅತಿ ಸೂಕ್ಷ್ಮ ಅಂಗವಾದ ಶ್ವಾಸಕೋಶದ ಜೀವಕೋಶಗಳು ಹೆಚ್ಚು ಬಾಧೆಗೊಳಗಾಗುವ ಮೂಲಕ ಉಸಿರಾಟದ ತೊಂದರೆಗೆ ಒಳಗಾಗಬಹುದು.

English summary

Causes Of Breathlessness That You Might Not Be Aware Of

If you have difficulty in breathing or suffer from shortness of breath following certain physical activities like running or climbing up the stairs, then it could be ok. But if you are continuously suffering from breathlessness problem even while you are sitting at one place or the problem is occurring frequently then it is a cause of concern. So Today at Boldsky we have listed a few of the common causes of breathlessness. Take a look.
X
Desktop Bottom Promotion