For Quick Alerts
ALLOW NOTIFICATIONS  
For Daily Alerts

ಅರಿಯಿರಿ ಹಳ್ಳಿಯ ಸೊಗಡು 'ರಾಗಿ ಮುದ್ದೆಯ' ಮಹಾತ್ಮೆ

By Manu
|

ನಗರ ಪ್ರದೇಶದವರು ಈ ಲೇಖನವನ್ನು ಒಮ್ಮೆ ಓದಲೇಬೇಕು. ಏಕೆಂದರೆ ಹಿಂದಿನ ಕಾಲಗಳಲ್ಲಿ ಹಳ್ಳಿಗಳಿಗೆ ಭೇಟಿ ಕೊಟ್ಟಾಗ ಅಲ್ಲಿ ಸಿಗುತ್ತಿದ್ದ ಹಾಗೂ ಈಗಲೂ ಸಿಗುತ್ತಿರುವಂತಹ ರುಚಿರುಚಿಯಾದ ಆಹಾರವೆಂದರೆ ರಾಗಿ ಮುದ್ದೆ ಮತ್ತು ಸೊಪ್ಪುಸಾರು. ಹೌದು! ಅದರಲ್ಲೂ ರಾಗಿ ಮುದ್ದೆ ಎಂದರೆ ಹಳ್ಳಿ ಜನರಿಗೆ ಪಂಚಪ್ರಾಣ. ಇತ್ತೀಚೆಗೆ ನಗರ ಪ್ರದೇಶಗಳಲ್ಲಿಯೂ ಸಹ ರಾಗಿ ಮುದ್ದೆಯ ಬಳಕೆ ಗಣನೀಯವಾಗಿ ಏರಿಕೆ ಕಾಣುತ್ತಿದೆ.

ಅದಕ್ಕೆ ಕಾರಣ ರಾಗಿಯಲ್ಲಿರುವ ವಿಶೇಷ ವಿಟಮಿನ್ ಮತ್ತು ಖನಿಜ ಸತ್ವಗಳು. ಹಾಗಾಗಿ ರಾಗಿ ಮುದ್ದೆಯು ಅತ್ಯಂತ ಆರೋಗ್ಯಕರವಾದ ಆಹಾರ ಪದಾರ್ಥಗಳಲ್ಲಿ ಒಂದು ಎನ್ನಬಹುದು. ವಾಸ್ತವವಾಗಿ ವಿಶ್ವದ ಒಟ್ಟೂ ಉತ್ಪಾದನೆಯ 58% ರಷ್ಟು ರಾಗಿಯನ್ನು ಭಾರತವೇ ಬೆಳೆಯುತ್ತಿದ್ದರೂ ಹೆಚ್ಚಿನ ಭಾರತೀಯರಿಗೆ ಈ ರಾಗಿಯ ಅದ್ಭುತ ಆರೋಗ್ಯಕರ ಗುಣಗಳ ಬಗ್ಗೆ ಆರಿವೇ ಇಲ್ಲ. ಒಂದು ವೇಳೆ ನೀವೂ

ರಾಗಿಯ ಬಗ್ಗೆ ಅಸಡ್ಡೆ ಹೊಂದಿದ್ದು ಇದರತ್ತ ನೋಡಲೂ ಕೇಳಲು ಉತ್ಸುಕರಾಗಿರದಿದ್ದಲ್ಲಿ ನೀವೇನು ಇದುವರೆಗೆ ಕಳೆದುಕೊಂಡಿದ್ದೀರಿ ಎಂದು ಸೂಚಿಸಲು ಕೆಳಗಿನ ಸೈಡ್ ಶೋ ಮೂಲಕ ನೀಡಲಾಗಿರುವ ಕಾರಣಗಳನ್ನು ನೋಡುತ್ತಾ ಹೋಗಿ. ಬಳಿಕ ನಿಮ್ಮ ಇದುವರೆಗಿನ ರಾಗಿಯ ಬಗ್ಗೆ ಇದ್ದ ಅಭಿಪ್ರಾಯಗಳು ಬದಲಾಗಬಹುದು....

ಕ್ಯಾಲ್ಸಿಯಂನ ಗಣಿಯಾಗಿದೆ

ಕ್ಯಾಲ್ಸಿಯಂನ ಗಣಿಯಾಗಿದೆ

ಕ್ಯಾಲ್ಸಿಯಂ ಬೇಕೆಂದರೆ ಹಾಲು ಕುಡಿಯಬೇಕು ಎಂಬ ನಂಬಿಕೆ ಇದೆ. ಇದು ಸತ್ಯವಾದರೂ ಹಾಲಿನಲ್ಲಿರುವ ಕ್ಯಾಲ್ಸಿಯಂ ನಾವು ಪಡೆದುಕೊಳ್ಳಬೇಕಾದರೆ ಇದರೊಂದಿಗೆ ಜೇನನ್ನು ಸೇರಿಸಲೇಬೇಕು. ಆಗಲೇ ಕ್ಯಾಲ್ಸಿಯಂ ಮೂಳೆಗಳಿಗೆ ದಕ್ಕುತ್ತದೆ. ಆದರೆ ಜೇನಿನಲ್ಲಿ ಸಕ್ಕರೆ ಅಂಶವೂ ಹೆಚ್ಚಿರುವ ಕಾರಣ ಅನಿವಾರ್ಯವಾಗಿ ಅನಗತ್ಯ ಪ್ರಮಾಣದ ಸಕ್ಕರೆ ದೇಹ ಸೇರುತ್ತದೆ. ಬದಲಿಗೆ ರಾಗಿಯಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದ್ದು ದೇಹ ಸುಲಭವಾಗಿ ಹೀರಿಕೊಳ್ಳುತ್ತದೆ ಹಾಗೂ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ಟೊಳ್ಳಗುವ osteoporosis ನಿಂದ ರಕ್ಷಿಸುತ್ತದೆ. ರಾಗಿಯನ್ನು ತಿನ್ನುತ್ತಾ ಬಂದವರ ಮೂಳೆಗಳು ದೃಢವಾಗಿರಲಿಕ್ಕೆ ಇದೇ ಕಾರಣ. ರಾಗಿ ರೊಟ್ಟಿ, ಮುದ್ದೆ, ಗಂಜಿ, ಮೊದಲಾದ ಯಾವುದೇ ರೂಪದಲ್ಲಿ ಸೇವಿಸಿದರೂ ಕ್ಯಾಲ್ಸಿಯಂ ಸಿಗುವುದು ಮಾತ್ರ ಖಚಿತ.

ತೂಕ ಇಳಿಕೆಯಲ್ಲಿ ನೆರವಾಗುತ್ತದೆ

ತೂಕ ಇಳಿಕೆಯಲ್ಲಿ ನೆರವಾಗುತ್ತದೆ

ಯಾವುದೇ ಧಾನ್ಯದಲ್ಲಿರುವುದಕ್ಕಿಂತಲೂ ಅತಿ ಕಡಿಮೆ, ಹೆಚ್ಚೂ ಕಡಿಮೆ ಇಲ್ಲವೇ ಇಲ್ಲವೆನ್ನುವಷ್ಟು ಕೊಬ್ಬು ರಾಗಿಯಲ್ಲಿದೆ. ಅಲ್ಲದೇ ಈ ಕೊಬ್ಬು ಅಸಂತುಲಿತ ರೂಪದಲ್ಲಿಯೂ ಇರುವ ಕಾರಣ ಕೊಬ್ಬನ್ನು ಹೆಚ್ಚಿಸುವುದಿಲ್ಲ. ಬದಲಿಗೆ ಇದರಲ್ಲಿರುವ ನಾರು ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಅಲ್ಲದೇ ರಾಗಿಯಲ್ಲಿರುವ tryptophan ಎಂಬ ಅಮೈನೋ ಆಮ್ಲ ಹೆಚ್ಚಿನ ಆಹಾರ ಸೇವಿಸಲು ಮನಸ್ಸಾಗುವುದನ್ನು ತಡೆಯುವ ಮೂಲಕ ಅನಗತ್ಯ ಆಹಾರ ಸೇವನೆ ತಡೆದಂತಾಗಿ ಈ ಮೂಲಕ ಏರಬಹುದಾಗಿದ್ದ ತೂಕವನ್ನೂ ತಡೆಯುತ್ತದೆ.

ಹೆಚ್ಚಿನ ನಾರು ಇದೆ

ಹೆಚ್ಚಿನ ನಾರು ಇದೆ

ಅಕ್ಕಿಗೆ ಹೋಲಿಸಿದರೆ ರಾಗಿಯಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದೆ. ರಾಗಿಯನ್ನು ನಮ್ಮ ಜೀರ್ಣಾಂಗಗಳು ಅತಿ ಬೇಗನೂ ಅಲ್ಲ, ಅತಿ ತಡವಾಗಿಯೂ ಅಲ್ಲದ ಸಮಯದಲ್ಲಿ ಜೀರ್ಣಿಸಿಕೊಳ್ಳುತ್ತವೆ. ಇದರಿಂದ ಹೊತ್ತಲ್ಲದ ಹೊತ್ತಿನಲ್ಲಿ ಆಹಾರ ತಿನ್ನುವುದು ತಪ್ಪುತ್ತದೆ ಮತ್ತು ಹೆಚ್ಚು ಕಾಲ ಆಹಾರ ತಿನ್ನದೇ ಚಟುವಟಿಕೆಯಿಂದರಲು ಸಾಧ್ಯವಾಗುತ್ತದೆ. ಇದರಲ್ಲಿರುವ ಅಮೈನೋ ಆಮ್ಲಗಳಾದ ಲಿಸೈಥಿನ್ ಮತ್ತು ಮೀಥಿಯೋನೈನ್ ಗಳು ಯಕೃತ್ ನಲ್ಲಿರುವ ಹೆಚ್ಚಿನ ಕೊಬ್ಬನ್ನು ನಿವಾರಿಸಿ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸಲು ನೆರವಾಗುತ್ತವೆ. ಅಲ್ಲದೇ ಥ್ರಿಯೋನಿನ್ ಎಂಬ ಪೋಷಕಾಂಶ ಯಕೃತ್‌ನಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ. ಈ ನಾರು ಮಲಬದ್ದತೆಯನ್ನೂ ತಡೆಯುತ್ತದೆ.

ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ನಿಯಂತ್ರಿಸುತ್ತದೆ

ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ನಿಯಂತ್ರಿಸುತ್ತದೆ

ರಾಗಿಯಲ್ಲಿ ಉತ್ತಮ ಪ್ರಮಾಣದಲ್ಲಿರುವ ಪಾಲಿಫಿನಾಲುಗಳು ಮತ್ತು ಕರಗದ ನಾರು ಇದರಲ್ಲಿರುವ ಪೋಷಕಾಂಶಗಳನ್ನು ಒಮ್ಮೆಲೇ ರಕ್ತಕ್ಕೆ ಬಿಡುಗಡೆ ಮಾಡದೇ ನಿಧಾನವಾಗಿ, ನಿಯಮಿತವಾಗಿಯೇ ಬಿಡುಗಡೆ ಮಾಡುತ್ತದೆ. ಇದು ಮಧುಮೇಹಿಗಳಿಗೆ ವರದಾನವಾಗಿದೆ. ಆದ್ದರಿಂದ ಮಧುಮೇಹಿಗಳಿಗೆ ರಾಗಿ ಉತ್ತಮವಾದ ಆಹಾರವಾಗಿದ್ದು ದಿನವಿಡೀ ಚಟುವಟಿಕೆಯಿಂದಿರಲು ನೆರವಾಗುತ್ತದೆ.

ರಕ್ತಹೀನತೆಯ ವಿರುದ್ಧ ಹೋರಾಡುತ್ತದೆ

ರಕ್ತಹೀನತೆಯ ವಿರುದ್ಧ ಹೋರಾಡುತ್ತದೆ

ರಾಗಿಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣದ ಅಂಶವಿದೆ. ಇದು ರಕ್ತದಲ್ಲಿರುವ ಹೀಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತದೆ. ಆದ್ದರಿಂದ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ರಾಗಿ ಸೇವನೆ ಉತ್ತಮ ಪರಿಹಾರವಾಗಿದೆ. ಅಲ್ಲದೇ ಇದರಲ್ಲಿರುವ ವಿಟಮಿನ್ ಸಿ ಈ ಕಬ್ಬಿಣವನ್ನು ರಕ್ತ ಹೀರಿಕೊಳ್ಳಲು ನೆರವಾಗುತ್ತದೆ. ಒಂದು ವೇಳೆ ರಾಗಿಯನ್ನು ಮೊಳಕೆ ಬರಿಸಿ ಸೇವಿಸಿದರೆ ಇದರಲ್ಲಿರುವ ವಿಟಮಿನ್ ಸಿ ಪ್ರಮಾಣ ಹೆಚ್ಚುತ್ತದೆ ಹಾಗೂ ಹೆಚ್ಚಿನ ಪ್ರಮಾಣದ ಕಬ್ಬಿಣ ರಕ್ತ ಸೇರಲು ಸಾಧ್ಯವಾಗುತ್ತದೆ.

ರಾಗಿ ಮುದ್ದೆಯ ರೆಸಿಪಿ

ರಾಗಿ ಮುದ್ದೆಯ ರೆಸಿಪಿ

ಸರಳವಾಗಿ ಮಾಡಬಹುದಾದ ರಾಗಿಮುದ್ದೆಯ ರೆಸಿಪಿಗಾಗಿ ಈ ಲೇಖನ ಓದಿ-ಬಿಸಿಬಿಸಿ ರಾಗಿ ಮುದ್ದೆ ಸವಿದವರೇ ಪುಣ್ಯವಂತರು...

English summary

Best Health Benefits of Ragi, which should surprise you

Even though India is the highest producer of finger millet (ragi or nachni), contributing to about 58% of its global production, very few Indians know about its health benefits and nutritional value. If you’re among those who are unaware about the benefits of including nachni in your diet, we give you reasons why you should. have a look
Story first published: Wednesday, March 2, 2016, 19:48 [IST]
X
Desktop Bottom Promotion