For Quick Alerts
ALLOW NOTIFICATIONS  
For Daily Alerts

ಆಲಿವ್ ಎಲೆಗಳ ಟೀ- ಸ್ವಾದದ ಜೊತೆಗೆ, ಆರೋಗ್ಯದ ಭಾಗ್ಯ

By Manu
|

ನಮ್ಮ ತೆಂಗಿನ ಮರದಂತೆ ಆಲಿವ್ ಮರವೂ ಒಂದು ರೀತಿಯಲ್ಲಿ ಕಲ್ಪವೃಕ್ಷವೇ. ಇದರ ಹಣ್ಣು, ಎಣ್ಣೆ, ಎಲೆಗಳೆಲ್ಲಾ ಅತ್ಯುತ್ತಮ ಆರೋಗ್ಯವರ್ಧಕಗಳಾಗಿವೆ. ಈಗ ಈ ಸಾಲಿಗೆ ಇನ್ನೊಂದು ಸೇರ್ಪಡೆ ಎಂದರೆ ಆಲಿವ್ ಎಲೆಗಳನ್ನು ಒಣಗಿಸಿ ಪುಡಿಮಾಡಿ ತಯಾರಿಸಿದ ಟೀ. ಇಂದು ಆಲಿವ್ ಎಲೆಗಳಿಂದ ತಯಾರಿಸಲ್ಪಟ್ಟ ಟೀ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದರ ಆರೋಗ್ಯರಕ ಪ್ರಯೋಜನಗಳನ್ನು ನಾವೂ ಪಡೆಯಲು ಸಾಧ್ಯವಾಗಿದೆ.

ಈ ಎಲೆಗಳಲ್ಲಿ ಬ್ಯಾಕ್ಟೀರಿಯಾ ನಿವಾರಕ ಮತ್ತು ವಿವಿಧ ವೈರಸ್‌ಗಳ ವಿರುದ್ಧ ಹೋರಾಡುವ ಕ್ಷಮತೆ ಇದೆ. ಇದರಿಂದ ದೇಹಕ್ಕೆ ಎದುರಾಗುವ ಹಲವಾರು ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ಅಲ್ಲದೇ ದೇಹಕ್ಕೆ ಧಾಳಿಯಿಟ್ಟ ವೈರಸ್ಸುಗಳನ್ನು ಇನ್ನಷ್ಟು ಹರಡುವುದನ್ನು ತಪ್ಪಿಸುತ್ತದೆ ಹಾಗೂ ಇವುಗಳ ವಂಶಾಭಿವೃದ್ಧಿಯನ್ನೂ ತಡೆಯುತ್ತದೆ. ಆಲಿವ್ ಎಣ್ಣೆ-ತಲೆಹೊಟ್ಟಿನ ಸಮಸ್ಯೆಗೆ ರಾಮಬಾಣ

ನಿತ್ಯವೂ ಆಲಿವ್ ಎಲೆಗಳ ಟೀ ಕುಡಿಯುವುದರಿಂದ ನಿರಾಳತೆ, ಶಾಂತತೆ ಮತ್ತು ಒಟ್ಟಾರೆ ಆರೋಗ್ಯ ಉತ್ತಮಗೊಳ್ಳುತ್ತದೆ. ಅಲ್ಲದೇ ಮೂತ್ರಕೋಶ ಮತ್ತು ಮೂತ್ರನಾಳದ ಸೋಂಕು, ಹೊಟ್ಟೆಯಲ್ಲಿ ಹುಣ್ಣು, ಮಲೇರಿಯಾ, ಅಥೆರೋಸ್ಕ್ಲೆರೋಸಿಸ್, ಹರ್ಪಿಸ್, ಹೆಪಟೈಟಿಸ್ ಬಿ, ಮೆನಿಂಜೈಟಿಸ್, ಇನ್ಫ್ಲೂಯೆಂಜಾ, ಕ್ಷಯ ಮತ್ತು ಗೋನೋರಿಯಾದಂತಹ ಮಾರಕ ರೋಗಗಳಿಂದ ರಕ್ಷಣೆ ನೀಡುತ್ತದೆ. ದೇಹಕ್ಕೆ ವರದಾನವಾಗಿರುವ ಆಲೀವ್ ಎಣ್ಣೆಯ ವಿಶೇಷತೆ ಏನು?

ಟೀ ಪುಡಿಯನ್ನು ತಯಾರಿಸಲು ಆಲಿವ್ ಎಲೆಗಳನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಬೇಕು. ಸುಮಾರು ಒಂದು ಚಮಚದಷ್ಟು ಪುಡಿಯನ್ನು ಸುಮಾರು ಮುನ್ನೂರು ಮಿಲಿಲೀ. ನೀರಿನಲ್ಲಿ ಹನ್ನೆರಡು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು. ಬಳಿಕ ತಣಿಸಿ ಸಾಧ್ಯವಾದರೆ ಹಾಗೇ ಇಲ್ಲದಿದ್ದರೆ ಕೊಂಚವೇ ಸಕ್ಕರೆ ಸೇರಿಸಿ ಕುಡಿಯಬೇಕು. ಇದರ ಪರಿಣಾಮವನ್ನು ಅರಿಯಲು ಕನಿಷ್ಠ ಹದಿನೈದು ದಿನಗಳ ಕಾಲ ಇದರ ಸೇವನೆ ಅಗತ್ಯ. ಈ ಟೀ ಕುಡಿಯುವುದರ ಪ್ರಯೋಜನಗಳನ್ನು ಈಗ ನೋಡೋಣ: ಸೌಂದರ್ಯ ಮತ್ತು ಆರೋಗ್ಯಕ್ಕೆ ಕೀಲಿಕೈ ಆಲೀವ್

ಪ್ರಯೋಜನ #1

ಪ್ರಯೋಜನ #1

ಈ ಟೀ ಕುಡಿಯುವ ಮೂಲಕ ಹಸಿವಾಗುವುದು ಕಡಿಮೆಯಾಗಿ ತೂಕ ಕಡಿಮೆಯಾಗಲು ನೆರವಾಗುತ್ತದೆ.

ಪ್ರಯೋಜನ #2

ಪ್ರಯೋಜನ #2

ಕೆಲವು ಸಂಶೋಧನೆಗಳ ಪ್ರಕಾರ ಆಲಿವ್ ಎಲೆಗಳ ಟೀ ಕುಡಿಯುವುದರಿಂದ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ಟೊಳ್ಳಾಗುವ osteoporosis ಎಂಬ ಸ್ಥಿತಿಯಿಂದ ರಕ್ಷಣೆ ದೊರಕುತ್ತದೆ.

ಪ್ರಯೋಜನ #3

ಪ್ರಯೋಜನ #3

ಈ ಟೀ ಯಲ್ಲಿ ಹಲವು ಕ್ಯಾನ್ಸರ್ ಗಳನ್ನು ಬರದಂತೆ ತಡೆಯುವ ಗುಣವಿದೆ.

ಪ್ರಯೋಜನ #4

ಪ್ರಯೋಜನ #4

ಇದರ ಶಿಲೀಂಧ್ರ ನಿವಾರಕ ಗುಣದ ಕಾರಣ ಕಾಲುಗಳಲ್ಲಿ ಆಣಿ, ಬೆರಳುಸಂಧುಗಳಲ್ಲಿ ಸೋಂಕು, chlamydia ಎಂಬ ಬ್ಯಾಕ್ಟೀರಿಯಾದಿಂದ ಬರುವ ಕಣ್ಣಿನ ತೊಂದರೆ ಮೊದಲಾದ ತೊಂದರೆಗಳನ್ನು ನಿವಾರಿಸುತ್ತದೆ.

ಪ್ರಯೋಜನ #5

ಪ್ರಯೋಜನ #5

ಒಂದು ವೇಳೆ ಮೂಗಿನ ಮೇಲಿನ ಕುಹರ ಅಥವಾ ಸೈನಸ್ ನಲ್ಲಿ ಸೋಂಕು ಉಂಟಾಗಿದ್ದು ಇದರಿಂದ ಗಂಟಲ ಬೇನೆ, ನ್ಯುಮೋನಿಯಾ ಜ್ವರ ಬಂದಿದ್ದರೆ ಆಲಿವ್ ಎಲೆಗಳ ಟೀ ಸೇವನೆ ಅತ್ಯುತ್ತಮ ಪರಿಹಾರವಾಗಿದೆ.

ಪ್ರಯೋಜನ #6

ಪ್ರಯೋಜನ #6

ನಿತ್ಯವೂ ಕುಡಿಯುವುದರಿಂದ ಅತಿಯಾಗಿ ಆವರಿಸುವ ಸುಸ್ತು, ಶೀತ, ಸಂಧಿವಾತ ಮತ್ತು ಸೋರಿಯಾಸಿಸ್ ನಂತಹ ಕೆಲವು ಚರ್ಮರೋಗಗಳನ್ನೂ ಬರದಂತೆ ನೋಡಿಕೊಳ್ಳಬಹುದು.

ಪ್ರಯೋಜನ #7

ಪ್ರಯೋಜನ #7

ಈ ಟೀ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಹತ್ತು ಹಲವು ದೈಹಿಕ ತೊಂದರೆ ಮತ್ತು ರೋಗಗಳು ಬಾರದಂತೆ ನೋಡಿಕೊಳ್ಳಬಹುದು.

ಪ್ರಯೋಜನ #8

ಪ್ರಯೋಜನ #8

ಸಾಮಾನ್ಯವಾಗಿ ಋತುಮಾನದಲ್ಲಿ ಆಗುವ ಬದಲಾವಣೆಯಿಂದ ಎದುರಾಗುವ ಫ್ಲೂ ಜ್ವರ ಮತ್ತು ಇತರ ತೊಂದರೆಗಳಿಂದ ರಕ್ಷಿಸುತ್ತದೆ.

English summary

Benefits Of Olive Leaf Tea

We use olive oil but even olive leaves contain medicinal properties. And yes, olive leaf extract is available in the market. This extract contains amazing medicinal qualities. Olive leaves are antibacterial and have the potential to fight viral infections. The leaf extract can deactivate vital action in your body. It also halts the spread of virus and breeding of their cells.
X
Desktop Bottom Promotion