For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಒಳ ಉಡುಪು ಧರಿಸದಿರುವುದೇ ಒಳ್ಳೆಯದಂತೆ!

By Super
|

ಬೇಸಿಗೆಯಲ್ಲಿ ತಾಳಲಾರದ ಸೆಖೆ, ಬೆವರುಸಾಲೆ, ಉರಿ ಮೊದಲಾದ ಕಾರಣಗಳಿಂದ ತೆಳ್ಳಗಿನ ಮತ್ತು ಹತ್ತಿಯ ಬಟ್ಟೆಗಳನ್ನೇ ಉಡುವುದು ಉತ್ತಮ. ಏಕೆಂದರೆ ಬೆವರನ್ನು ಹೀರಿಕೊಳ್ಳಲು ಮತ್ತು ಸಾಕಷ್ಟು ಗಾಳಿಯಾಡುವಂತೆ ಮಾಡಲು ಈ ಉಡುಪುಗಳೇ ಅತ್ಯುತ್ತಮ. ಆದರೆ ಒಳ ಉಡುಪುಗಳು? ಇವು ಹತ್ತಿಯದ್ದೇ ಆಗಿದ್ದಷ್ಟೂ ಉತ್ತಮವೇ, ಆದರೆ ಬೇಸಿಗೆಯಲ್ಲಿ ಮೈಗೆ ಅಪ್ಪಿಕೊಂಡಿರುವ ಈ ಉಡುಪುಗಳು ಜನನಾಂಗಗಳ ಬಳಿ ಸೆಖೆಯ ಪ್ರಭಾವ ಕಡಿಮೆಯಾಗದಿರಲು ಅಡ್ಡಿಯಾಗುತ್ತವೆ. ಸಾಕಷ್ಟು ಗಾಳಿಯಾಡದೇ ಇರುವ ಕಾರಣ ಇನ್ನಷ್ಟು ಬಿಸಿಯಾಗಿ ಕೆಲವು ತೊಂದರೆಗಳಿಗೂ ಕಾರಣವಾಗಬಲ್ಲವು.

ಹಿಂದೆಲ್ಲಾ ಬೇಸಿಗೆಯ ಸಮಯದಲ್ಲಿ ಒಳ ಉಡುಪು ಧರಿಸುವ ಮಾತೇ ಇರಲಿಲ್ಲ. ಇಂದಿಗೂ ಎಷ್ಟೋ ಕಡೆ ಮನೆಯಲ್ಲಿ ಪುರುಷರು ಸೊಂಟದ ಮೇಲೆ ಏನನ್ನೂ ತೊಡುವುದಿಲ್ಲ. ಸೊಂಟದ ಕೆಳಗೆ ಮಾತ್ರ ತೆಳ್ಳಗಿನ ಲುಂಗಿಯೊಂದನ್ನು ಸುತ್ತಿಕೊಳ್ಳುತ್ತಾರೆ. ಇದೇ ರೀತಿ ಸೆಖೆ ಹೆಚ್ಚಿರುವ, ವಿಶೇಷವಾಗಿ ಕರಾವಳಿಯ ಕಡೆಯಲ್ಲಿ ಮನೆಯಲ್ಲಿದ್ದಾಗ ಮಹಿಳೆಯರೂ ಕೇವಲ ಹೊರ ಉಡುಪುಗಳನ್ನು ಮಾತ್ರ ತೊಡುತ್ತಾರೆ. ಆದರೆ ಇಂದಿನ ಜನರು ಒಳ ಉಡುಪನ್ನು ತೊಡದೇ ಇರುವುದು ಅನಾಗರಿಕ ಲಕ್ಷಣ ಎಂದು ಭಾವಿಸಿದ್ದಾರೆ. ವಾಸ್ತವವಾಗಿ ಬೇಸಿಗೆಯಲ್ಲಿ ಒಳ ಉಡುಪುಗಳನ್ನು ಸಾಧ್ಯವಾದಷ್ಟು ಧರಿಸದೇ ಇರುವುದು ಆರೋಗ್ಯಕರ ಅಭ್ಯಾಸವಾಗಿದೆ.

ಆದರೆ ಸಂದರ್ಭಕ್ಕೆ ಅನುಸಾರವಾಗಿ ಹೊರ ಉಡುಪುಗಳಂತೆಯೇ ಒಳ ಉಡುಪುಗಳೂ ಅನಿವಾರ್ಯವಾಗಿದ್ದು ಸೂಕ್ತವಾದ ಉಡುಪುಗಳನ್ನು ತೊಟ್ಟು ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಉತ್ತಮ. ಆದರೆ ಮನೆಗೆ ಬಂದ ಬಳಿಕ ತಮ್ಮ ಖಾಸಗಿ ಸಮಯ ಮತ್ತು ಸ್ಥಳದಲ್ಲಿ ಒಳ ಉಡುಪು ಇಲ್ಲದಿರುವುದೇ ಉತ್ತಮ. ಕೆಲ ಸಂದರ್ಭಗಳಲ್ಲಿ ಒಳ ಉಡುಪು ತೊಡುವುದು ಅತ್ಯಂತ ಅಗತ್ಯ. ಉದಾಹರಣೆಗೆ ಪುರುಷರು ವ್ಯಾಯಾಮ ಮಾಡುವಾಗ, ಓಟದ ಸಮಯ, ದೈಹಿಕ ಶ್ರಮದ ಕೆಲಸ, ನಡಿಗೆ ಮೊದಲಾದ ಸಮಯದಲ್ಲಿ ಒಳ ಉಡುಪು ಅನಿವಾರ್ಯ.

ಈ ಸಂದರ್ಭದಲ್ಲಿ ಸೆಖೆ ಎಂದು ಒಳ ಉಡುಪು ತೊಡದೇ ಕೆಲಸದ ಸಮಯದಲ್ಲಿ ಆಯಕಟ್ಟಿನ ಜಾಗಕ್ಕೆಲ್ಲಾದರೂ ತೊಂದರೆಯಾದರೆ ಆಸ್ಪತ್ರೆ ಸೇರಬೇಕಾದೀತು. ಅಷ್ಟೇ ಅಲ್ಲ, ಕಾರ್ಯನಿಮಿತ್ತ ಹಲವು ಜನರನ್ನು ಭೇಟಿಯಾಗುವ ವೇಳೆ, ಅಥವಾ ನಿಮ್ಮನ್ನು ಭೇಟಿಯಾಗಲು ಇತರರು ನಿಮ್ಮ ಮನೆಗೆ ಆಗಮಿಸಿದ ಸಂದರ್ಭ, ಒಟ್ಟಾರೆ ನಾಲ್ಕು ಜನರ ನಡುವೆ ಇರುವ ಯಾವುದೇ ಸಂದರ್ಭದಲ್ಲಿ ಒಳ ಉಡುಪನ್ನು ಖಂಡಿತಾ ತೊಡಬೇಕು. ಆದರೆ ಮನೆಯಲ್ಲಿದ್ದ ಸಮಯದಲ್ಲಿ, ವಿಹಾರ, ಖಾಸಗಿ ಸಮಯ ಮತ್ತು ಖಾಸಗಿ ಸ್ಥಳಗಳಲ್ಲಿದ್ದಷ್ಟೂ ಹೊತ್ತು ಒಳ ಉಡುಪು ತೊಡದೇ ಸಡಿಲವಾದ ಬಟ್ಟೆಗಳನ್ನು ತೊಡುವುದು ಆರೋಗ್ಯಕರ ಅಭ್ಯಾಸವಾಗಿದೆ. ಅದರಲ್ಲೂ ಮಹಿಳೆಯರಿಗೆ ಇದು ಪುರುಷರಿಗಿಂತ ಹೆಚ್ಚು ಅವಶ್ಯವಾಗಿದೆ. ಇದು ಏಕೆ ಅವಶ್ಯ ಎಂಬ ನಿಮ್ಮ ಅನುಮಾನವನ್ನು ಕೆಳಗಿನ ಸ್ಲೈಡ್ ಶೋ ನಿವಾರಿಸಲಿದೆ, ಮುಂದೆ ಓದಿ...

ಪುರುಷರಿಗೆ

ಪುರುಷರಿಗೆ

ಸೆಖೆಯ ಸಮಯದಲ್ಲಿ ಜನನಾಂಗಗಳಿಗೆ ಹೆಚ್ಚಿನ ಗಾಳಿ ಮತ್ತು ತಂಪು ಬೇಕಾಗುತ್ತದೆ. ವಾಸ್ತವವಾಗಿ ವೀರ್ಯದ ಉತ್ಪಾದನೆಗೆ ಶರೀರಕ್ಕಿಂತ ಕೊಂಚ ಕಡಿಮೆ ತಾಪಮಾನದ ಅಗತ್ಯವಿದ್ದು ಇದೇ ಕಾರಣಕ್ಕೆ ವೃಷಣಗಳು ದೇಹದಿಂದ ಹೊರಗೆ ಚಾಚಿಕೊಂಡಿವೆ. ಆದ್ದರಿಂದ ದಿನದ ಇಪ್ಪತ್ತನಾಲ್ಕೂ ಗಂಟೆ, ವರ್ಷಪೂರ್ತಿ ಒಳ ಉಡುಪನ್ನು ತೊಟ್ಟೇ ಇರುವುದು ಮಾತ್ರ ಸರ್ವಥಾ ಆರೋಗ್ಯಕರವಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪುರುಷರಿಗೆ

ಪುರುಷರಿಗೆ

ಇದು ವೃಷಣಗಳ ತಾಪಮಾನವನ್ನು ಹೆಚ್ಚಿಸಿ ಪೌರುಷ ಮತ್ತು ವೀರ್ಯಾಣುಗಳ ಸಂಖ್ಯೆ, ಗುಣಮಟ್ಟವನ್ನು ಕುಂದಿಸುತ್ತದೆ. ಒಳ ಉಡುಪು ಇಲ್ಲದಿದ್ದಾಗ ರಕ್ತಸಂಚಾರ ಉತ್ತಮಗೊಂಡು ಜನನಾಂಗಗಳ ಕ್ಷಮತೆ ಉತ್ತಮವಾಗಿರುತ್ತದೆ.

ಮಹಿಳೆಯರಿಗೆ

ಮಹಿಳೆಯರಿಗೆ

ದಿನದ ಸಾಕಷ್ಟು ಸಮಯ ಒಳ ಉಡುಪು ಧರಿಸದೇ ಇರುವ ಮೂಲಕ ಜನನಾಂಗಗಳ ಸುತ್ತಲ ಮಾಂಸಖಂಡಗಳು ಸಡಿಲಗೊಂಡು ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ಸ್ವಚ್ಛಗೊಳ್ಳಲು ನೆರವಾಗುತ್ತದೆ. ತಂಪಾದ ಗಾಳಿಯಾಡುವ ಮೂಲಕ ಕೆಳಹೊಟ್ಟೆಯ ಭಾಗವೂ ಒಣ ಮತ್ತು ತಂಪಾಗಿದ್ದು ದೇಹಕ್ಕೆ ಆರಾಮವೂ ದೊರಕುತ್ತದೆ. ವಾಸ್ತವವಾಗಿ ರಾತ್ರಿ ಮಲಗುವಾಗ ಒಳ ಉಡುಪುರಹಿರತರಾಗಿರುವುದೇ ಉತ್ತಮ ಎಂದು ತಜ್ಞರು ಸಲಹೆ ಮಾಡುತ್ತಾರೆ.

ಪುರುಷರ ವೀರ್ಯಾಣುಗಳು ಉತ್ತಮವಾಗಿರುತ್ತವೆ

ಪುರುಷರ ವೀರ್ಯಾಣುಗಳು ಉತ್ತಮವಾಗಿರುತ್ತವೆ

ವೃಷಣಗಳನ್ನು ಸದಾ ಒಳ ಉಡುಪಿನಲ್ಲಿ ಕೈದಿಯಂತೆ ಇಡುವ ಮೂಲಕ ವೃಷಣಗಳ ತಾಪಮಾನ ಹೆಚ್ಚಿ ಒಳಗೆ ಉತ್ಪತ್ತಿಯಾಗುವ ವೀರ್ಯಾಣುಗಳ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ವೀರ್ಯಾಣುಗಳ ಸಂಖ್ಯೆಯಲ್ಲಿ ಇಳಿಕೆ, ಗುಣಮಟ್ಟದಲ್ಲಿ ಇಳಿಕೆ ಹಾಗೂ ಕೆಲವೊಮ್ಮೆ ಉದ್ರೇಕಗೊಳ್ಳದ ತೊಂದರೆಯೂ ಎದುರಾಗಬಹುದು.

ಪುರುಷರ ವೀರ್ಯಾಣುಗಳು ಉತ್ತಮವಾಗಿರುತ್ತವೆ

ಪುರುಷರ ವೀರ್ಯಾಣುಗಳು ಉತ್ತಮವಾಗಿರುತ್ತವೆ

ಆದ್ದರಿಂದ, ವಿಶೇಷವಾಗಿ ತಂದೆಯಾಗಬಯಸುವವರಿಗೆ ಈ ಅಭ್ಯಾಸ ಭಾರೀ ಹಿನ್ನಡೆ ನೀಡುತ್ತದೆ. ಪುರುಷರು ಸಾಧ್ಯವಿದ್ದಷ್ಟು ದಿನದ ಸಮಯದಲ್ಲಿ ಹಾಗೂ ರಾತ್ರಿ ಮಲಗುವ ಸಮಯದಲ್ಲಿ ಒಳ ಉಡುಪು ತೊಡದೇ ಇರುವುದೇ ಆರೋಗ್ಯಕರ.

ಸಂಧಿಗಳಲ್ಲಿ ಉರಿ, ಗೀರುಗಳು ಇಲ್ಲವಾಗುತ್ತವೆ

ಸಂಧಿಗಳಲ್ಲಿ ಉರಿ, ಗೀರುಗಳು ಇಲ್ಲವಾಗುತ್ತವೆ

ಸಾಮಾನ್ಯವಾಗಿ ಒಳ ಉಡುಪುಗಳು ದೇಹವನ್ನು ಬಿಗಿಯಾಗಿ ಅಪ್ಪಿ ಹಿಡಿದಿರುತ್ತವೆ. ಹಿಂದೆ ಪಟಾಪಟ್ಟಿ ಚಡ್ಡಿ ಸಡಿಲವಾಗಿದ್ದುದು ಇಂದು ಯಾರಿಗೂ ಬೇಡವಾಗಿದೆ. ಮೈಯನ್ನು ಅಪ್ಪಿ ಹಿಡಿದಿರುವ ಕಾರಣ ವಿಶೇಷವಾಗಿ ಸಂಧಿಗಳಲ್ಲಿ ಸೂಕ್ಷ್ಮವಾದ ಗೀರುಗಳು ಬಿದ್ದು ಉರಿ ಪ್ರಾರಂಭವಾಗುತ್ತದೆ. ವಿಶೇಷವಾಗಿ ನಡೆಯುವಾಗ ಎರಡೂ ತೊಡೆಗಳು ಘಾರ್ಷಿಸುವಲ್ಲಿ ಮತ್ತು ಜನನಾಂಗದ ಪಕ್ಕದ ವಿ. ಆಕಾರದ ಸಂದುಗಳಲ್ಲಿ ಈ ಪ್ರಮಾಣ ಅತ್ಯಧಿಕವಾಗಿರುತ್ತದೆ. ಒಳ ಉಡುಪು ಇಲ್ಲದೇ ಇದ್ದಾಗ ಈ ಗೀರುಗಳು ತುಂಬಿಕೊಳ್ಳಲು ಸಮಯಾವಕಾಶ ಸಿಗುತ್ತದೆ.

ಸೋಂಕುಗಳಿಂದ ರಕ್ಷಣೆ

ಸೋಂಕುಗಳಿಂದ ರಕ್ಷಣೆ

ಕೆಲವು ಕ್ರಿಮಿಗಳಿಗೆ ಕೊಂಚವೇ ತೇವಾಂಶವಿದ್ದರೂ ಸಾಕು, ಅಲ್ಲಿಯೇ ಬೀಡು ಬಿಟ್ಟು ಮನೆ ಮಾಡಿ ಸಂತಾನ ಅಭಿವೃದ್ಧಿಗೆ ತೊಡಗಿಯೇ ಬಿಡುತ್ತವೆ. ಅಲ್ಪಕಾಲದಲ್ಲಿಯೇ ಬಹಳವಾಗಿ ವೃದ್ಧಿಸಿ ಚರ್ಮಕ್ಕೆ ಸೋಂಕು ಉಂಟುಮಾಡುತ್ತವೆ. ಬೆವರನ್ನು ಹೀರಿರುವ ಒಳ ಉಡುಪು ಈ ಕ್ರಿಮಿಗಳಿಗೆ ಅತ್ಯಂತ ಸಮರ್ಪಕ ತಾಣವಾಗಿದೆ. ಇದನ್ನು ತೊಟ್ಟೇ ಇಡಿಯ ದಿನ ಇದ್ದರೆ ಈ ಕ್ರಿಮಿಗಳು ಸೋಂಕು ಹರಡಿ ಹಬ್ಬ ಹುಡಿ ಹಾರಿಸುತ್ತವೆ. ಈ ಕ್ರಿಮಿಗಳಿಗೆ ಸೋಲುವ ಬದಲು ಒಳ ಉಡುಪು ತೆಗೆದಿಡುವುದು ಜಾಣತನದ ಕ್ರಮ. ಕೆಲವರಲ್ಲಿ ಒಂದೇ ಒಳ ಉಡುಪನ್ನು ಒಂದಕ್ಕಿಂತ ಹೆಚ್ಚು ದಿನ ಧರಿಸುವ ಅಭ್ಯಾಸವಿರುತ್ತದೆ. ಇವರಿಗೆ ಸೋಂಕು ಹರಡುವ ಸಾಧ್ಯತೆ ಅತ್ಯಂತ ಹೆಚ್ಚು.

ಲೈಂಗಿಕ ಜೀವನ ಸುಖಕರವಾಗಿರುತ್ತದೆ

ಲೈಂಗಿಕ ಜೀವನ ಸುಖಕರವಾಗಿರುತ್ತದೆ

ಒಳ ಉಡುಪನ್ನು ದಿನದ ಕೆಲಹೊತ್ತು ತೊಡದೇ ಇದ್ದಾಗ ಪುರುಷರ ಲೈಂಗಿಕ ಸಾಮರ್ಥ್ಯ ಹೆಚ್ಚಿರುವುದು ಕಂಡುಬಂದಿದೆ. ಮಹಿಳೆಯರಲ್ಲಿಯೂ ಇದೇ ಬಗೆಯ ಪರಿಣಾಮವನ್ನು ಕಂಡುಕೊಳ್ಳಲಾಗಿದ್ದು ಸಂತೃಪ್ತ ಲೈಂಗಿಕ ಜೀವನಕ್ಕೆ ಒಳ ಉಡುಪು ತೊಡದೇ ಇರುವುದು ಶ್ರೇಯಸ್ಕರ ಎಂದು ತಜ್ಞರು ತಿಳಿಸುತ್ತಾರೆ.

ತುರಿಕೆ ಇಲ್ಲವಾಗುತ್ತದೆ

ತುರಿಕೆ ಇಲ್ಲವಾಗುತ್ತದೆ

ಜನನಾಂಗಗಳಲ್ಲಿ ಯಾವುದಾದರೂ ಕಾರಣಕ್ಕೆ ತುರಿಕೆಯುಂಟಾದರೆ ಸಾರ್ವಜನಿಕವಾಗಿ ತುರಿಸಿಕೊಳ್ಳುವುದು ಅತ್ಯಂತ ಮುಜುಗರ ತರಿಸುವ ಕ್ರಿಯೆಯಾಗಿದೆ. ಒಳ ಉಡುಪು ಧರಿಸದೇ ಇದ್ದರೆ ತುರಿಕೆಗೆ ಕಾರಣವಾಗುವ ಸಾಧ್ಯತೆಗಳೂ ಕಡಿಮೆಯಾಗಿ ಈ ಮುಜುಗರದಿಂದ ತಪ್ಪಿಸಿಕೊಳ್ಳಬಹುದು.

ನೆಚ್ಚಿನ ಉಡುಪು ತೊಡಲು ನೆರವಾಗುತ್ತದೆ

ನೆಚ್ಚಿನ ಉಡುಪು ತೊಡಲು ನೆರವಾಗುತ್ತದೆ

ಕೆಲವು ಮಹಿಳೆಯರಿಗೆ ತಮ್ಮ ನೆಚ್ಚಿನ ವಿನ್ಯಾಸದ ಉಡುಪು ತೊಡಲು ಹೆಚ್ಚಿನ ಆಸಕ್ತಿ ಇದ್ದರೂ ಒಳ ಉಡುಪಿನ ಅಂಚುಗಳು ಈ ವಿನ್ಯಾಸದ ಬಟ್ಟೆಯಲ್ಲಿ ಸ್ಪಷ್ಟವಾಗಿ ಗೋಚರಿಸುವ ಕಾರಣ ಇದನ್ನು ತೊಡದೇ ಹೋಗುತ್ತಾರೆ. ಆದರೆ ಒಳ ಉಡುಪು ಇಲ್ಲದೇ ಇದ್ದಾಗ ಈ ತೊಂದರೆ ಇರುವುದಿಲ್ಲ. ಇದರಿಂದ ತಮ್ಮ ಮೆಚ್ಚಿನ ಉಡುಪನ್ನೇ ತೊಟ್ಟು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ.

English summary

Benefits Of Not Wearing Underwear

Yes, in summer, an underwear could literally suffocate and fry your privates. At the same time, all of us are so used to wearing them throughout the year that we are scared what would happen if we don't wear them. Also, there are certain misconceptions that make us think twice before going commando. Firstly, remember that not wearing anything inside isn't good for all occasions. Sometimes, wearing an underwear surely serves its purpose and sometimes, it doesn't.
Story first published: Saturday, April 9, 2016, 17:40 [IST]
X
Desktop Bottom Promotion