Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೂತ್ರದ ಸಮಸ್ಯೆಯೇ? ಬಾರ್ಲಿಯ ಮೊರೆಹೋದರೆ ಫಲ ಖಂಡಿತ
ಪ್ರತಿದಿನ ಎಷ್ಟು ಬಾರಿ ಮೂತ್ರಕ್ಕೆ ಹೋಗಬೇಕು? ಇದಕ್ಕೆ ಖಚಿತವಾದ ಉತ್ತರ ದೊರಕುವುದಿಲ್ಲ. ಏಕೆಂದರೆ ಸಂದರ್ಭಕ್ಕೆ ಅನುಸರಿಸಿ ಆರರಿಂದ ಎಂಟು ಬಾರಿ ವಿಸರ್ಜಿಸುವುದು ಆರೋಗ್ಯಕರ. ನೀರು ಹೆಚ್ಚು ಕುಡಿದರೆ ದಿನಕ್ಕೆ ಹತ್ತು ಬಾರಿಯಾದರೂ ಹೋಗಬೇಕು. ಆದರೆ ಇದಕ್ಕೂ ಕಡಿಮೆ ಅಥವಾ ಹೆಚ್ಚಾದರೆ ಇದು ಕೆಲವು ತೊಂದರೆಯ ಮುನ್ಸೂಚನೆ ಇರಬಹುದು. ಉದಾಹರಣೆಗೆ ಪದೇ ಪದೇ ಅವಸರವಾಗುವುವುದು ಮಧುಮೇಹ, ಮೂತ್ರನಾಳದ ಸೋಂಕು, ಮೂತ್ರಪಿಂಡದ ತೊಂದರೆ ಮೊದಲಾದವುಗಳನ್ನು ಪ್ರಕಟಿಸಿದರೆ ಅಗತ್ಯಕ್ಕಿಂತಲೂ ಕಡಿಮೆಯಾದರೆ ಬೇರೆಯೇ ತೊಂದರೆ ಇರಬಹುದು.

ಶೌಚಾಲಯದ ಅನುಕೂಲತೆ ಇಲ್ಲದವರಿಗೆ ಬಲವಂತವಾಗಿ ಮೂತ್ರವನ್ನು ತಡೆದು ಹಿಡಿದುಕೊಳ್ಳುವ ಪ್ರಮೇಯವನ್ನು ಇಲ್ಲಿ ಪರಿಗಣಿಸಲಾಗದು. ನೀರು ಕುಡಿದರೂ ಬಹಳಹೊತ್ತಿನವರೆಗೆ ಮೂತ್ರವಾಗದೇ ಇರುವುದು ದೇಹದಲ್ಲಿ, ವಿಶೇಷವಾಗಿ ರಕ್ತದಲ್ಲಿ ಉಪ್ಪಿನ ಅಂಶ ಹೆಚ್ಚಾಗಿರುವ ಸಂಕೇತವನ್ನು ನೀಡುತ್ತದೆ. ಇದಕ್ಕೆ ಉತ್ತಮ ಪರಿಹಾರವೆಂದರೆ ನೀರು ಹೆಚ್ಚು ಕುಡಿಯುವುದು ಮತ್ತು ಉಪ್ಪು ಕಡಿಮೆ ಮಾಡುವುದು. ನೀರು ಹೆಚ್ಚು ಕುಡಿಯಬಹುದು ಸರಿ, ಆದರೆ ಉಪ್ಪಿಲ್ಲದ ಆಹಾರ ಲಭ್ಯವೇ ಇಲ್ಲದಿದ್ದಾಗ ಏನು ಮಾಡುವುದು? ಇದಕ್ಕೆ ಉತ್ತರ: ಸೂಕ್ತ ಮೂತ್ರವರ್ಧಕ (diuretic) ದ್ರವಗಳನ್ನು ಸೇವಿಸುವುದು.
ಜಗತ್ತಿನಲ್ಲಿ ಅತ್ಯಂತ ಉತ್ತಮ ಮೂತ್ರವರ್ಧಕವೆಂದರೆ ಎಳನೀರು. ಆದರೆ ಎಳನೀರಿಗೆ ಸರಿಸಮನಾದ ಇನ್ನೊಂದು ಮೂತ್ರವರ್ಧಕವಿದೆ. ಅದೇ ಬಾರ್ಲಿ. ಇದರಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ ಇರುವ ಕಾರಣ ಮೂತ್ರದ ಹೆಚ್ಚಳಕ್ಕೆ ನೆರವಾಗುತ್ತದೆ. ಕೆಲವು ಸಂದರ್ಭಗಳಲ್ಲಿ ದೇಹದ ಜೀವಕೋಶ ಮತ್ತು ಅಂಗಾಂಶಗಳಲ್ಲಿಯೂ ನೀರು ತುಂಬಿಕೊಳ್ಳುವ (edema) ತೊಂದರೆಯನ್ನೂ ಬಾರ್ಲಿ ನಿವಾರಿಸುತ್ತದೆ. ಎಳನೀರಿನಲ್ಲಿರುವ ಸಕ್ಕರೆಯ ಅಂಶ ಮಧುಮೇಹಿಗಳಿಗೆ ಸೂಕ್ತವಲ್ಲದ ಕಾರಣ ಬಾರ್ಲಿ ಮಧುಮೇಹಿಗಳಿಗೆ ಹೆಚ್ಚು ಫಲಪ್ರದವಾಗಿದೆ. ಬನ್ನಿ, ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ಮುಂದೆ ಓದಿ...
ಬಾರ್ಲಿ ಹೇಗೆ ಮೂತ್ರ ಹೆಚ್ಚಿಸುತ್ತದೆ?
ಎಳನೀರು ಅತ್ಯುತ್ತಮ ಮೂತ್ರವರ್ಧಕವಾಗಿದ್ದು ಕುಡಿದ ಕೆಲವೇ ನಿಮಿಷಗಳಲ್ಲಿ ಅವಸರವಾಗುತ್ತದೆ. ಆದರೆ ಬಾರ್ಲಿ ನಿಧಾನವಾಗಿ ಮೂತ್ರವನ್ನು ಹೆಚ್ಚಿಸಲು ಪ್ರಚೋದನೆ ನೀಡಿ ದೇಹದ ವಿಷಕಾರಿ ಅಂಶಗಳನ್ನು ತನ್ನೊಂದಿಗೆ ಕರಗಿಸಿಕೊಂಡು ಹೋಗಲು ನೆರವಾಗುತ್ತದೆ. ಅದರಲ್ಲೂ ಲಿಂಬೆರಸ ಸೇರಿಸಿದ ಬಾರ್ಲಿಯ ನೀರು ವಿಷಕಾರಿ ವಸ್ತುಗಳನ್ನು ಹೊರಹಾಕಲು ಅತಿ ಸಮರ್ಥವಾಗಿದೆ. ಇದರಿಂದ ಮೂತ್ರಪಿಂಡಗಳಲ್ಲಿ ಕಲ್ಲಾಗುವುದನ್ನು ತಡೆದಂತಾಗುತ್ತದೆ.
ಬಾರ್ಲಿಯಲ್ಲಿರುವ ಮೆಗ್ನೀಶಿಯಂ ಕಲ್ಲುಗಳನ್ನು ಕರಗಿಸುವ ಜೊತೆಗೇ ಮೂತ್ರವನ್ನೂ ಹೆಚ್ಚಿಸುತ್ತದೆ. ಅಲ್ಲದೇ ಮೂತ್ರಪಿಂಡಗಳಲ್ಲಿ ಮುಂದೆ ಕಲ್ಲುಗಳಾಗದಂತೆಯೂ ತಡೆಯುತ್ತದೆ. ಇದರಲ್ಲಿರುವ ಕರಗದ ನಾರು ಮಲಬದ್ಧತೆಯಾಗದಂತೆ ತಡೆಯುವ ಜೊತೆಗೇ ಪಿತ್ತದ ಕಲ್ಲು (gallstone) ಆಗದಂತೆ ರಕ್ಷಿಸುತ್ತದೆ. ದೇಹದ ಜೀವಕೋಶ ಮತ್ತು ಅಂಗಾಂಶಗಳಲ್ಲಿಯೂ ನೀರು ತುಂಬಿಕೊಳ್ಳುವ (edema) ತೊಂದರೆಗೆ ಆಯುರ್ವೇದದಲ್ಲಿ ಬಾರ್ಲಿಯನ್ನು ಸೇವಿಸುವಂತೆ ಸಲಹೆ ಮಾಡಲಾಗಿದೆ.
ಬಾರ್ಲಿ ನೀರನ್ನು ತಯಾರಿಸುವುದು ಹೇಗೆ?
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

