Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಂಬಾಕು ಜಗಿಯುವ ಮೊದಲು ಎರಡೆರಡು ಬಾರಿ ಯೋಚಿಸಿ!
ಇಂದಿನ ದಿನಗಳಲ್ಲಿ ತಂಬಾಕು ಅಥವಾ ಗುಟ್ಕಾ ತಿನ್ನುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಕ್ಯಾನ್ಸರ್ ಬರುತ್ತದೆ ಎಂದು ಪ್ಯಾಕೆಟ್ಟಿನ ಮೇಲೆಯೇ ರೋಗಗ್ರಸ್ತ ಮುಖದ ಫೋಟೋ ಮುದ್ರಿಸಿದ್ದರೂ ಮಾರಾಟ ಭರ್ಜರಿಯಾಗಿದೆ. ಸಾಮಾನ್ಯವಾಗಿ ಧೂಮಪಾನ ಬಿಡಲು ಬಯಸುವವರು ಗುಟ್ಕಾ ತಂಬಾಕಿಗೆ ಮರುಳಾಗಿ ಕ್ರಮೇಣ ಇದಕ್ಕೇ ದಾಸರಾಗಿಬಿಟ್ಟಿರುತ್ತಾರೆ.
ಸಾಮಾನ್ಯ ತಿನ್ನುವ ತಂಬಾಕು, ಪಾನ್ ಮಸಾಲಾ, ಜರ್ದಾ ಗುಟ್ಕಾ ಮೊದಲಾದವುಗಳೆಲ್ಲಾ ತಂಬಾಕನ್ನು ಪ್ರಮುಖ ಪರಿಕರವಾಗಿ ಬಳಸಿರುವ ಮಾದಕಪದಾರ್ಥಗಳಾಗಿವೆ.

ಈ ಉತ್ಪನ್ನಗಳನ್ನು ಬಾಯಿಗೆ ಹಾಕಿಕೊಂಡಾಗ ಹಲವು ರೀತಿಯ ಬ್ಯಾಕ್ಟೀರಿಯಾಗಳು ತಂಬಾಕಿನಲ್ಲಿ ತಣ್ಣಗೆ ನಿದ್ದೆ ಮಾಡುತ್ತಿದ್ದ ಬ್ಯಾಕ್ಟೀರಿಯಾಗಳೆಲ್ಲಾ ನಿದ್ದೆಯಿಂದೆದ್ದು ಸುಖನಿದ್ದೆ ಕೆಡಿಸಿದವ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸತೊಡಗುತ್ತವೆ.ಪರಿಣಾಮವಾಗಿ ಕ್ಯಾನ್ಸರ್, ಶ್ವಾಸಕೋಶದ ಸೋಂಕು, ಆಮಶಂಕೆ ಮತ್ತು ವಾಂತಿ ಮೊದಲಾದ ತೊಂದರೆಗಳನ್ನು ತಂದೊಡ್ಡುತ್ತವೆ. ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್
ತಂಬಾಕಿನ ವ್ಯಸನದ ಬಗ್ಗೆ ನಡೆಯ ಅಧ್ಯಯನಗಳಲ್ಲಿ ಆಘಾತಕಾರಿಯಾದ ಹಲವು ಮಾಹಿತಿಗಳು ಹೊರಬಂದಿವೆ. ಪ್ರಮುಖವಾಗಿ ಬ್ಯಾಸಿಲಸ್ ಲಿಚೆನಿಫಾರ್ಮಿಸ್ ಮತ್ತು ಬ್ಯಾಸಿಲಸ್ ಪ್ಯೂಮಿಲಸ್ ಎಂಬ ಎರಡು ಬ್ಯಾಕ್ಟೀರಿಯಾಗಳು ತಂಬಾಕಿನಲ್ಲಿ ಇರುವುದು ಪತ್ತೆಯಾಗಿದ್ದು ಇವೆರಡರ ಕಿಲಾಡಿ ಜೋಡಿ ಶ್ವಾಸಕೋಶದ ಸೋಂಕು ಮತ್ತು ಇತರ ಸೊಂಕುಗಳನ್ನು ಉಂಟುಮಾಡಲು ಸಮರ್ಥವಾಗಿವೆ.
ಅಮೇರಿಕಾದ ಆಹಾರ ಮತ್ತು ಔಷಧಿ ಸಚಿವಾಲಯದ National Centre for Toxicological Research ಎಂಬ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ. ಸ್ಟೀವನ್ ಫೋಲೆಯವರು ನೀಡಿರುವ ಮಾಹಿತಿಯಂತೆ ಕೆಲವು ವಿಧದ ತಂಬಾಕಿನಲ್ಲಿ ಹಲವು ಕಾಯಿಲೆಗಳಿಗೆ ಪ್ರಚೋದನೆ ನೀಡುವ ಕಣಗಳಿದ್ದು ಇವುಗಳ ಪ್ರಭಾವದಿಂದ ಆಮಶಂಕೆ ಮತ್ತು ವಾಂತಿಯ ತೊಂದರೆ ಎದುರಾಗುತ್ತದೆ.
ಪ್ರತಿಬಾರಿಯ ತಂಬಾಕಿನ ಸೇವನೆಯಿಂದ ಕೊಂಚವೇ ವಿಷಕಾರಿ ವಸ್ತುಗಳು ಉತ್ಪತ್ತಿಯಾಗುತ್ತವೆ. ಇದು ದೇಹದಲ್ಲಿ ಕೊಂಚಕೊಂಚವಾಗಿ ಸಂಗ್ರಹವಾಗುತ್ತಾ ಕೊನೆಗೊಂದು ದಿನ ಭಾರಿ ಆಘಾತ ನೀಡುತ್ತದೆ.
ಇದು ಕ್ಯಾನ್ಸರ್ ಸಹಿತ ಹಲವು ಪ್ರಾಣಾಂತಿಕ ತೊಂದರೆಗಳನ್ನು ತಂದೊಡ್ಡುತ್ತದೆ. ಇದೇ ಕಾರಣಕ್ಕೆ ತಂಬಾಕು ತಿನ್ನುವವರಿಗೆ ಎಷ್ಟೋ ಕಾಲದವರೆಗೆ ಯಾವುದೇ ತೊಂದರೆಯಾಗದೇ ಒಮ್ಮೆಲೇ ಮುಖದ ಚರ್ಮವೇ ಹರಿದುಬರುವಷ್ಟು ಮಟ್ಟಿಗೆ ಕ್ಯಾನ್ಸರ್ ಆವರಿಸಿಬಿಡುತ್ತದೆ. ಮೌನ ಕೊಲೆಗಾರ ಮೇದೋಜೀರಕ ಕ್ಯಾನ್ಸರ್‌ನ ಲಕ್ಷಣಗಳು
ತಂಬಾಕಿನಲ್ಲಿರುವ ಕೆಲವು ಬಗೆಯ ಬ್ಯಾಸಿಲಸ್ ಬ್ಯಾಕ್ಟೀರಿಯಾ, stapphylococcus epidermidis ಮತ್ತು staphylococcus hominis ಎಂಬ ಕ್ರಿಮಿಗಳು ನಮ್ಮ ದೇಹದಲ್ಲಿರುವ ನೈಟ್ರೇಟುಗಳನ್ನು ನೈಟ್ರೈಟುಗಳನ್ನಾಗಿ ಬದಲಿಸುತ್ತವೆ. ಇದು ಕ್ಯಾನ್ಸರ್‌ಗೆ ಮೂಲ ಕಾರಣವಾಗಿದೆ. ತಂಬಾಕಿನಲ್ಲಿರುವ ನಿಕೋಟಿನ್ ರಕ್ತಕ್ಕೆ ಸೇರಿಸಲು ತಂಬಾಕು ವ್ಯಸನಿಗಳು ತಂಬಾಕು ಉತ್ಪನ್ನಗಳನ್ನು ಬಾಯಿಯಲ್ಲಿಯೇ ಇರಿಸಿ ಪೂರ್ಣವಾಗಿ ನೀರಾದ ಬಳಿಕ ಉಗಿಯುತ್ತಾರೆ.
ಆದರೆ ಜೊಲ್ಲಿನ ಮೂಲಕ ನಿಕೋಟಿನ್ ರಕ್ತ ಪ್ರವೇಶಿಸುತ್ತದೆ. ಅಲ್ಲದೇ ಬಾಯಿ, ಒಸಡು, ಹಲ್ಲು, ನಾಲಿಗೆ, ಗಂಟಲುಗಳಲ್ಲಿಯೂ ಕ್ಯಾನ್ಸರ್ ಉಂಟುಮಾಡಲು ಕಾರಣವಾಗುತ್ತದೆ. ತಂಬಾಕಿನ ಪ್ರಭಾವ ಅತಿ ಹೆಚ್ಚಾಗಿ ಒಸಡುಗಳ ಮೇಲೆ ಬೀಳುತ್ತದೆ.
ಒಸಡುಗಳು ಶಿಥಿಲವಾಗಿ ರಕ್ತ ಸುರಿಯುವುದು, ಹಲ್ಲುಗಳು ಉದುರುವುದು, ಖಾರ, ಹುಳಿಗಳನ್ನು ತಿನ್ನಲು ಸಾಧ್ಯವಾಗದಿರುವುದು ಮೊದಲಾದ ತೊಂದರೆ ಪ್ರಾರಂಭವಾಗುತ್ತದೆ.
ಹಿಂದಿನ ಸಂಶೋಧನೆಗಳಲ್ಲಿ ತಂಬಾಕಿನಲ್ಲಿರುವ Staphylococci ಎಂಬ ಬ್ಯಾಕ್ಟೀರಿಯಾ ನೇರವಾಗಿ ಹೃದಯದ ಕವಾಟಗಳಿಗೇ ಸೋಂಕು ಉಂಟು ಮಾಡುತ್ತದೆ. ಮದ್ಯಪಾನದಿಂದ ಸ್ತನ ಕ್ಯಾನ್ಸರ್ ಬರುವುದು ನಿಶ್ಚಿತ...
ಒಸಡುಗಳು ಶಿಥಿಲವಾಗುತ್ತಿದ್ದಂತೆಯೇ ಇತರ ಬಾಯಿಯ ಒಳಭಾಗ ಮತ್ತು ನಾಲಿಗೆ, ಕಿರುನಾಲಿಗೆ ಮೊದಲಾದ ಅಂಗಗಳೂ ರೋಗಗ್ರಸ್ತವಾಗುತ್ತವೆ. ಮಲಿನಗೊಂಡ ರಕ್ತ ಹತ್ತು ಹಲವು ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಒಂದು ವೇಳೆ ನಿಮಗೆ ತಂಬಾಕಿನ ಸೇವನೆಯ ಅಭ್ಯಾಸವಿದ್ದರೆ ತಕ್ಷಣ ತ್ಯಜಿಸುವ ನಿರ್ಧಾರಕ್ಕೆ ಬನ್ನಿ. ಇದರಿಂದ ಕೇವಲ ಅನಾರೋಗ್ಯವೇ ಹೊರತು ಮತ್ತೇನೂ ದೊರಕಲಾರದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












