Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಸಹನೀಯ ತೇಗಿನ ಸಮಸ್ಯೆಗೆ ಪರಿಣಾಮಕಾರಿ ಮನೆಮದ್ದುಗಳು
ಮಾನವನಿಗೆ ರೋಗಗಳು ಹೇಳಿ ಕೇಳಿ ಬರುವುದಿಲ್ಲ ಅಂತೆಯೇ ನಮ್ಮ ನಿತ್ಯ ಜೀವನದಲ್ಲಿ ನಮ್ಮನ್ನು ಹಲವಾರು ರೋಗಗಳು ಕಾಡುತ್ತವೆ. ಹೆಚ್ಚು ಕಡಿಮೆ ಈ ರೋಗಗಳು ಬರುವುದೇ ನಾವು ಸೇವಿಸುವ ಆಹಾರಗಳಿಂದಾಗಿದೆ. ಆರೋಗ್ಯಪೂರ್ಣ ಆಹಾರಗಳನ್ನು ನಾವು ಸೇವಿಸಿಲ್ಲ ಎಂದಾದಲ್ಲಿ ನಮಗೆ ರೋಗಗಳು ಕಾಡುತ್ತಲೇ ಇರುತ್ತದೆ. ಹೆಚ್ಚಿನ ಮಸಾಲೆ ಭರಿತ ಆಹಾರಗಳು, ಆಮ್ಲವಿರುವ ಆಹಾರಗಳನ್ನು ಸೇವಿಸುವುದರಿಂದ ಕೂಡ ನಮ್ಮನ್ನು ಹಿಂಡಿ ಹಿಪ್ಪೆ ಮಾಡುವ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗಿಲ್ಲದ ಸಂದರ್ಭದಲ್ಲಿ ಕಾಡುವ ಕಾಯಿಲೆಯಾಗಿದೆ ತೇಗುವಿಕೆ.
ನಾವು ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗಿಲ್ಲದ ಸಂದರ್ಭದಲ್ಲಿ ಅಂತೆಯೇ ಆಹಾರವನ್ನು ಸೇವಿಸುತ್ತಿರುವ ಸಮಯದಲ್ಲಿ ಮಿತಿಮೀರಿದ ಗಾಳಿ ಬಾಯಿಂದ ಹೊರಬರುವುದನ್ನು ತೇಗು ಎಂದೇ ಕರೆಯುತ್ತೇವೆ. ತೇಗು ಅನಾರೋಗ್ಯಕರ ಚಟುವಟಿಕೆಯಾಗಿರುವುದರಿಂದ ಹೊಟ್ಟೆಯ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಇದು ಬಹಿರಂಗ ಪಡಿಸುತ್ತದೆ.
ಮದ್ಯಪಾನ ಸೇವನೆ, ಕಾರ್ಬೋನೇಟ್ ಉಳ್ಳ ಆಹಾರಗಳನ್ನು ಸೇವಿಸುವುದು, ಪಿತ್ತಕೋಶದ ಕಲ್ಲುಗಳು, ಜಠರ ಹುಣ್ಣು ಮೊದಲಾದವು ತೇಗಿಗೆ ಕಾರಣವಾಗಿದೆ. ತೇಗುವುದು ಒಂದು ಸ್ವಾಭಾವಿಕ ಪ್ರಕ್ರಿಯೆಯಾಗಿದ್ದು, ಇದು ಇತರೆ ರೋಗಗಳಾದ ಜಠರದುರಿತ, ಜಠರ ಹುಣ್ಣು, ಲ್ಯಾಕ್ಟೋಸ್ ಅಸಹಿಷ್ಣುತೆ ಮತ್ತು ಉದರದ ಸಮಸ್ಯೆಗಳನ್ನು ಒಳಗೊಂಡಿದೆ. ಇನ್ನು ತೇಗುವಿಕೆಯ ಇತರೆ ಲಕ್ಷಣಗಳೆಂದರೆ ಹೊಟ್ಟೆ ಉಬ್ಬರಿಸುವುದು, ಆಮ್ಲತೆ, ಹೊಟ್ಟೆಯುರಿ ಮೇಲಿನ ಹೊಟ್ಟೆಯಲ್ಲಿ ನಿರಂತರ ನೋವು, ಆಗಾಗ್ಗೆ ಹಸಿವಾಗುವುದು, ವಾಕರಿಕೆ, ಬಾಯಿಯಲ್ಲಿ ಕಹಿ ರುಚಿ, ವಾಂತಿ ಮತ್ತು ಹಸಿವಾಗದಿರುವುದಾಗಿದೆ.
ತೇಗುವಿಕೆಯನ್ನು ಹೋಗಲಾಡಿಸಲು ಗಿಡಮೂಲಿಕೆಗಳ ಪರಿಹಾರಗಳನ್ನು ನಾವು ಬಳಸಬೇಕಾಗುತ್ತದೆ. ಹಾಗಿದ್ದರೆ ಗಿಡಮೂಲಿಕಾಯುಕ್ತ ಮನೆಯಲ್ಲೇ ತಯಾರಿಸಬಹುದಾದ ಕಡಿಮೆ ದರದ ಮದ್ದುಗಳನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಇವುಗಳ ಪ್ರಯೋಜವನ್ನು ಪಡೆದುಕೊಂಡು ತೇಗುವಿಕೆಯನ್ನು ನಿಯಂತ್ರಿಸಬಹುದಾಗಿದೆ.

ಏಲಕ್ಕಿ
ಹೊಟ್ಟೆಯ ಜೀರ್ಣ ದ್ರವ್ಯಗಳನ್ನು ಉತ್ಪಾದನೆಯನ್ನು ಹೆಚ್ಚಿಸಲು ಏಲಕ್ಕಿ ಸಹಾಯ ಮಾಡುತ್ತದೆ ಅಂತೆಯೇ ಆಮ್ಲದ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಜೀರ್ಣ ಕ್ರಿಯೆಗೆ ಇದು ಸಹಾಯ ಮಾಡುತ್ತದೆ ಮತ್ತು ತೇಗುವುದನ್ನು ಇದು ಕಡಿಮೆ ಮಾಡುತ್ತದೆ. ದಿನದಲ್ಲಿ 2-3 ಬಾರಿಯಾದರೂ ಏಲಕ್ಕಿಯನ್ನು ಜಗಿಯುತ್ತಿರಿ.

ಬೆಳ್ಳುಳ್ಳಿ
ಬೆಳ್ಳುಳ್ಳಿ ಮೊಗ್ಗನ್ನು ನುಂಗಿ ಮತ್ತು ಇದರ ಬಳಿಕ ಒಂದು ಲೋಟ ನೀರು ಕುಡಿಯಿರಿ. ಖಾಲಿ ಹೊಟ್ಟೆಯನ್ನು ಇದನ್ನು ಸೇವಿಸಿದರೆ ಅದು ತುಂಬಾ ಒಳ್ಳೆಯದು. ಬೆಳ್ಳುಳ್ಳಿ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ನೈಸರ್ಗಿಕವಾಗಿ ತೇಗುವಿಕೆಗೆ ಉಪಶಮನ ನೀಡುತ್ತದೆ.

ಇಂಗು
ಇಂಗು ಭಾರತೀಯ ಅಡುಗೆ ಮನೆಯಲ್ಲಿ ಹೆಚ್ಚು ಬಳಕೆಯಾಗುವ ಅಡುಗೆ ಪದಾರ್ಥವಾಗಿದ್ದು ತೇಗಿನ ಸಮಸ್ಯೆಗೂ ರಾಮಬಾಣವಾಗಿದೆ. ಆಮ್ಲತೆಯಿಂದ ಉಂಟಾಗುವ ತೇಗಿನ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಹೊಟ್ಟೆಯಲ್ಲಿ ಆಮ್ಲದಿಂದ ಉತ್ಪಾದನೆಯಾಗಿರುವ ಹೊಟ್ಟೆ ನೋವನ್ನು ಇದು ನಿವಾರಿಸುತ್ತದೆ. ಉಗುರು ಬೆಚ್ಚನೆಯ ನೀರಿಗೆ ಸ್ವಲ್ಪ ಇಂಗನ್ನು ಹಾಕಿರಿ. ನಂತರ ದಿನದಲ್ಲಿ ಸ್ವಲ್ಪ ಸೇವಿಸುತ್ತಿರಿ. ಇದು ಖಂಡಿತ ಪ್ರಯೋಜನಕಾರಿಯಾಗಿದೆ.

ಶುಂಠಿ
ಅತಿಯಾದ ಅನಿಲವನ್ನು ನಿಯಂತ್ರಿಸಲು ಶುಂಠಿ ಸಹಾಯಕವಾಗಿದೆ. ತೇಗುವಿಕೆ ಮತ್ತು ಹೊಟ್ಟೆಯುಬ್ಬರವನ್ನು ತಡೆಯುವ ಮೂಲಕ ಜಠರಗರುಳಿನ ಸ್ನಾಯುಗಳನ್ನು ಗುಣಪಡಿಸುವ ಅಂಶವನ್ನು ಶುಂಠಿ ಹೊಂದಿದೆ. ಹೊಟ್ಟೆ ನೋವನ್ನು ಗುಣಪಡಿಸುವ ಮೂಲಕ ಜೀರ್ಣಕ್ರಿಯೆಯನ್ನು ಇದು ಸುಧಾರಿಸುತ್ತದೆ. 2-3 ಕಪ್‌ನಷ್ಟು ಶುಂಠಿ ಚಹಾವನ್ನು ಸೇವಿಸುವುದರಿಂದ ತೇಗುವಿಕೆ ನಿಯಂತ್ರಣಕ್ಕೆ ಬರುತ್ತದೆ.

ಪುದೀನಾ ಚಹಾ
ತೇಗುವಿಕೆಯನ್ನು ನಿವಾರಿಸಲು ಪುದೀನಾ ಇನ್ನೊಂದು ನೈಸರ್ಗಿಕ ಪರಿಹಾರವಾಗಿದೆ. ಪಿತ್ತರಸದ ಹರಿವನ್ನು ಸುಧಾರಿಸಿ ಜೀರ್ಣಕ್ರಿಯೆಯನ್ನು ಇದು ಸುಧಾರಿಸುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಪುದೀನಾ ಚಹಾವನ್ನು ದಿನದಲ್ಲಿ ಸಾಕಷ್ಟು ಬಾರಿ ಸೇವಿಸಿ.

ಕ್ಯಾಮೊಮೈಲ್ ಚಹಾ
ತೇಗುವುನ್ನು ನಿಯಂತ್ರಿಸಲು ಕ್ಯಾಮೊಮೈಲ್ ಚಹಾ ಪರಿಣಾಮಕಾರಿ ಚಿಕಿತ್ಸೆಯಾಗಿದೆ, ನಿತ್ಯವೂ ಈ ಚಹಾವನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ನೋವುಗಳು ನಿವಾರಣೆಯಾಗುತ್ತದೆ.

ಪಪ್ಪಾಯಿ
ತೇಗುವಿಕೆಯನ್ನು ಕಡಿಮೆ ಮಾಡಲು ಅತ್ಯಂತ ಆರೋಗ್ಯಕಾರಿ ವಿಧಾನವೆಂದರೆ ಸಲಾಡ್ ರೂಪದಲ್ಲಿ ಪಪ್ಪಾಯಿ ತಿನ್ನುವುದು. ಪಪ್ಪಾಯಿಯಲ್ಲಿರುವ ಪಪೈನ್ ಎನ್ನುವ ಕಿಣ್ವವು ತೇಗುವಿಕೆ ಉಂಟುಮಾಡುವ ಗ್ಯಾಸ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಪಪ್ಪಾಯವನ್ನು ದಿನಾಲೂ ತಿನ್ನಿ.

ಮೊಸರು
ಭಾರತದ ಊಟದ ಪದ್ದತಿಯಲ್ಲಿ ಒಂದು ಪಿಂಗಾಣಿ ಮೊಸರನ್ನು ತಿನ್ನಲಾಗುತ್ತದೆ. ಇದಕ್ಕೆ ಕಾರಣವೆಂದರೆ ಮೊಸರು ಜೀರ್ಣಕ್ರಿಯೆಗೆ ನೆರವಾಗುತ್ತದೆ. ಇದರಲ್ಲಿರುವ ಜೀವಂತ ಬ್ಯಾಕ್ಟೀರಿಯಾ ಎಲ್ಲಾ ರೀತಿಯ ಹೊಟ್ಟೆಯ ಹಾಗೂ ಕರುಳಿನ ಸಮಸ್ಯೆ ನಿವಾರಿಸುತ್ತದೆ. ಲ್ಯಾಕ್ಟೋಸ್ ಸಹಿಸಲು ಸಾಧ್ಯವಿಲ್ಲವೆಂದಾದರೆ ಆಗ ನೀವು ಮಜ್ಜಿಗೆಯನ್ನು ಬದಲಿಯಾಗಿ ಬಳಸಿ.



Click it and Unblock the Notifications
