Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ಆರೋಗ್ಯಕ್ಕೆ ಸಿಹಿ ಈ ಕೆಂಪು ದ್ರಾಕ್ಷಿ...
ಕೆಂಪು ದ್ರಾಕ್ಷಿ ಎಂದಾಕ್ಷಣ ಹೆಚ್ಚಿನವರು ಇದನ್ನು ಕೊಳ್ಳಲು ಹಿಂದೇಟು ಹಾಕುತ್ತಾರೆ. ವೈನ್ ಮತ್ತು ಮಾದಕ ಪಾನೀಯಗಳನ್ನು ಇದರಿಂದ ಮಾಡಲಾಗುತ್ತದೆ ಎಂಬ ಕಾರಣದಿಂದ ಕೆಂಪು ದ್ರಾಕ್ಷಿ ಅವಗಣನೆಗೆ ಒಳಗಾಗಿದೆ. ವಾಸ್ತವವಾಗಿ ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಕೆಂಪುದ್ರಾಕ್ಷಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಏಕೆಂದರೆ ಹಸಿರು ದ್ರಾಕ್ಷಿಗಿಂತಲೂ ಇವು ಆರೋಗ್ಯಕ್ಕೆ ಹೆಚ್ಚು ಉತ್ತಮವಾಗಿವೆ. ಹಸಿರು ದ್ರಾಕ್ಷಿಗಿಂತಲೂ
ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ಉತ್ತಮ ಪ್ರಮಾಣದ ವಿಟಮಿನ್ ಎ. ಸಿ, B6, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಕಬ್ಬಿಣ, ಫೋಲೇಟ್, ಮೆಗ್ನೀಶಿಯಂ ಹಾಗೂ ಸೆಲೆನಿಯಂಗಳಂತಹ ಧಾತುಗಳಿವೆ. ಅಲ್ಲದೇ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಒಟ್ಟಾರೆ ಆರೋಗ್ಯಕ್ಕೆ ಹಲವು ರೀತಿಯಲ್ಲಿ ನೆರವು ನೀಡುತ್ತವೆ. ಪಟ್ಟಿ ಮಾಡ ಹೊರಟರೆ ದೊಡ್ಡ ಪಟ್ಟಿಯೇ ಬೇಕಾದೀತು.
ನಿತ್ಯವೂ ಕೊಂಚ ಕೆಂಪುದ್ರಾಕ್ಷಿಯನ್ನು ಸೇವಿಸುತ್ತಾ ಬಂದರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೇ ಚರ್ಮದ ಕಾಂತಿಯನ್ನೂ ಹೆಚ್ಚಿಸುತ್ತದೆ. ಇದರ ಆಂಟಿ ಆಕ್ಸಿಡೆಂಟುಗಳು ಚರ್ಮದ ಸೆಳೆತವನ್ನು ಬಹುಕಾಲದವರೆಗೆ ಕಾಪಾಡಿಕೊಳ್ಳಲು ಸಮರ್ಥವಾಗಿದ್ದು ವೃದ್ಧಾಪ್ಯವನ್ನು ದೂರಾಗಿಸುತ್ತವೆ. ಬನ್ನಿ, ಇದರ ಆರೋಗ್ಯಕರ ಗುಣಗಳಲ್ಲಿ ಪ್ರಮುಖವಾದುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ
ಕೆಂಪು ದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಇವು ವಿಶೇಷವಾಗಿ ಕಣ್ಣಿನ ಸ್ನಾಯು ಮತ್ತು ಅಂಗಾಂಶಗಳು ಕ್ಷಮತೆ ಕಳೆದುಕೊಳ್ಳಲು ನೆರವಾಗುವ ಕಿಣ್ವಗಳಿಗೆ ವಿರುದ್ದವಾಗಿ ತಡೆ ನೀಡುವ ಮೂಲಕ ಕಣ್ಣಿನ ಆರೋಗ್ಯವನ್ನು ರಕ್ಷಿಸುತ್ತವೆ.

ಹೃದಯಕ್ಕೂ ಉತ್ತಮ
ಕೆಂಪು ದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದ ರೆಸ್ವರೆಟಾಲ್ (resveratrol) ಮತ್ತು ಫ್ಲೇವನಾಯ್ಡು ಗಳೆಂಬ ಕಣಗಳಿದ್ದು ಇವು ಹೃದಯದ ತೊಂದರೆಯನ್ನು ನಿವಾರಿಸಲು ಉತ್ತಮವಾಗಿವೆ. ವಿಶೇಷವಾಗಿ ಹೆಚ್ಚಿನ ಕೊಲೆಸ್ಟ್ರಾಲ್ ತೊಲಗಿಸುವ ಮೂಲಕ ಹಾಗೂ ರಕ್ತ ಹೆಪ್ಪುಗಟ್ಟಲು ತಡೆಯೊಡ್ಡುವ ಮೂಲಕ ಹೃದಯ ಸ್ತಂಭನದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತವೆ.

ಕ್ಯಾನ್ಸರ್ ತಡೆಯುತ್ತದೆ
ಇದರಲ್ಲಿರುವ ರೆಸ್ವರೆಟಾಲ್ (resveratrol) ಕ್ಯಾನ್ಸರ್ ತಡೆಯಲೂ ಸಕ್ಷಮವಾಗಿವೆ. ಅಲ್ಲದೇ ಚರ್ಮಕ್ಕೆ ಹಾನಿ ಎಸಗುವ ಅತಿನೇರಳೆ ಕಿರಣಗಳಿಂದಲೂ ರಕ್ಷಿಸುತ್ತದೆ. ತನ್ಮೂಲಕ ಚರ್ಮವನ್ನು ಚರ್ಮದ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.

ತೂಕ ಇಳಿಸಲು ನೆರವಾಗುತ್ತದೆ
ತೂಕ ಇಳಿಸುವವರಿಗೆ ಕೆಂಪು ದ್ರಾಕ್ಷಿ ಸೂಕ್ತ ಆಹಾರವಾಗಿದೆ. ಇದು ವಿಶೇಷವಾಗಿ ಇತರ ಆಹಾರಗಳ ಮೂಲಕ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಪ್ಪಿಸಿ ಸ್ಥೂಲಕಾಯ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತದೆ.

ಅಸ್ತಮಾದಿಂದ ರಕ್ಷಿಸುತ್ತದೆ
ಕೆಂಪು ದ್ರಾಕ್ಷಿಯಲ್ಲಿ ಹಲವಾರು ಔಷಧೀಯ ಗುಣಗಳಿದ್ದು ಅವು ಅಸ್ತಮಾ ರೋಗವನ್ನು ಗುಣಪಡಿಸಲೂ ಸಮರ್ಥವಾಗಿವೆ. ಪರಿಣಾಮವಾಗಿ ಶ್ವಾಸಕೋಶದ ಒಳಭಾಗದಲ್ಲಿ ಆರ್ದತೆ ಹೆಚ್ಚಿಸಿ ಉಸಿರು ಒಳಬರಲು ಅನುವು ಮಾಡಿಕೊಡುತ್ತದೆ. ಇದರಿಂದ ಮುಚ್ಚಿಹೋಗಿದ್ದ ಶ್ವಾಸನಾಳಗಳ ತುದಿಭಾಗ ತೆರೆದು ಸುಲಭ ಶ್ವಾಸ ಲಭಿಸಿ ಅಸ್ತಮಾ ದೂರವಾಗುತ್ತದೆ.

ಮೂತ್ರಪಿಂಡದ ತೊಂದರೆಗಳಿಂದ ರಕ್ಷಿಸುತ್ತದೆ
ದೇಹದ ದ್ರವದಲ್ಲಿ ಸಂಗ್ರಹವಾಗಿದ್ದ ಯೂರಿಕ್ ಆಮ್ಲವನ್ನು ನಿಷ್ಕ್ರಿಯಗೊಳಿಸಲು ಕೆಂಪು ದ್ರಾಕ್ಷಿ ಸಕ್ಷಮವಾಗಿದೆ. ಇದರಿಂದ ಮೂತ್ರಪಿಂಡಗಳು ಈ ಯೂರಿಕ್ ಆಮ್ಲವನ್ನು ನಿವಾರಿಸಲು ಪಡಬೇಕಾಗಿದ್ದ ಒತ್ತಡ ನಿವಾರಣೆಯಾಗುತ್ತದೆ, ತನ್ಮೂಲಕ ಮೂತ್ರಪಿಂಡಗಳ ತೊಂದರೆಯಿಂದ ರಕ್ಷಿಸುತ್ತದೆ.

ಅಲ್ಝೈಮರ್ ಕಾಯಿಲೆಗೆ ಉತ್ತಮ
ಮೆದುಳಿನ ಕ್ಷಮತೆಯನ್ನು ಕಡಿಮೆಗೊಳಿಸುವ ಅಲ್ಝೈಮರ್ ಕಾಯಿಲೆ ಅಥವಾ ಮರೆಗುಳಿತನಕ್ಕೆ ಕೆಂಪು ದ್ರಾಕ್ಷಿ ಉತ್ತಮ. ದ್ರಾಕ್ಷಿಯಲ್ಲಿರುವ ಪೋಷಕಾಂಶಗಳು ನರವ್ಯವಸ್ಥೆಯನ್ನು ತೊಂದರೆಗೊಳಿಸುವ ಕಾಯಿಲೆಗಳ ಪ್ರಭಾವವನ್ನು ಕಡಿಮೆಗೊಳಿಸುವ ಮೂಲಕ ಕಾಯಿಲೆ ಬರದಂತೆ ಅಥವಾ ಈಗಾಗಲೇ ಇರುವ ಕಾಯಿಲೆಯನ್ನು ಮತ್ತಷ್ಟು ಉಲ್ಬಣಿಸದಂತೆ ತಡೆಯುತ್ತದೆ. ಆದ್ದರಿಂದ ಪ್ರತಿನಿತ್ಯ ಕೆಲವು ಕೆಂಪುದ್ರಾಕ್ಷಿಗಳನ್ನು ತಿನ್ನುವ ಮೂಲಕ ಈ ಕಾಯಿಲೆಯಿಂದ ದೂರವಿರಬಹುದು.



Click it and Unblock the Notifications