For Quick Alerts
ALLOW NOTIFICATIONS  
For Daily Alerts

ರಂಜಾನ್ ಮಾಸದಲ್ಲಿ ತಂಪುಣಿಸುವ ಕಾಮಕಸ್ತೂರಿ ಬೀಜ

By Jaya subramanya
|

ಪವಿತ್ರ ರಂಜಾನ್ ಮಾಸ ಈಗಾಗಲೇ ಆರಂಭವಾಗಿದ್ದು ಮುಸ್ಲಿಂ ಸಮುದಾಯದವರು ಈ ತಿಂಗಳು ಪೂರ್ತಿ ಉಪವಾಸವಿದ್ದು ನಿರ್ದಿಷ್ಟ ಸಮಯದಲ್ಲಿ ಆಹಾರವನ್ನು ಸೇವಿಸುತ್ತಾ ದೇವರನ್ನು ನೆನೆಯುತ್ತಾರೆ. ಪ್ರಾತಃ ಕಾಲದಲ್ಲಿ ಆಹಾರವನ್ನು ಸೇವಿಸಿದ ಮೇಲೆ ನಂತರ ಜಲಪಾನವನ್ನು ಸೇವಿಸುವುದು ಸಂಜೆಯ ಮಸೀದಿ ಪ್ರಾರ್ಥನೆಯ ಬಳಿಕವೇ. ಈ ರೀತಿ ಉಪವಾಸ ಮಾಡುವಾಗ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆಯುಂಟಾಗುವುದು ಸಹಜವಾಗಿದೆ. ಅದಕ್ಕಾಗಿ ಸೂಕ್ತ ರೀತಿಯ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ರಂಜಾನ್ ಪಥ್ಯ- ಕಷ್ಟವಾದರೂ, ಇಷ್ಟಪಟ್ಟು ಅನುಸರಿಸಿ

ಆಹಾರ ಸೇವನೆಯಲ್ಲಿ ಮತ್ತು ಜೀವನ ಕ್ರಮದಲ್ಲಿ ಉಂಟಾಗುವ ಬದಲಾವಣೆ ಅಶಕ್ತರ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ. ಅಂತೆಯೇ ಅವರ ದೈನಂದಿನ ಚಟುವಟಿಕೆಗಳ ಮೇಲೂ ಇದು ಕೆಟ್ಟ ಪರಿಣಾಮವನ್ನು ಬೀರಿ ನಿಸ್ತೇಜಗೊಳಿಸಬಹುದು. ಈ ನಿಶ್ಯಕ್ತಿಯನ್ನು ಪರಿಹರಿಸುವುದಕ್ಕಾಗಿಯೇ ಪ್ರಕೃತಿಯ ವರದಾನವೊಂದಿದ್ದು ಇದು ಚೈತನ್ಯಶೀಲರನ್ನಾಗಿಸಲು ಉಪಕಾರಿಯಾಗಿದೆ.

Amazing Health Benefits Of Basil Seeds During Ramzan

ತುಳಸಿ ಬೀಜಗಳಂತೆ ಕಾಣುವ ಕಾಮ ಕಸ್ತೂರಿಗೆ 'ಸಬ್ಜಾ' ಅಥವಾ 'ತುಕ್‎ಮಾರಿಯಾ ಸೀಡ್ಸ್' ಎಂಬ ಹೆಸರೂ ಇದೆ. ಈ ಬೀಜ ಬಣ್ಣದಲ್ಲಿ ಕಪ್ಪಾಗಿರುತ್ತದೆ ಇದನ್ನು ಸಿಹಿ ತುಳಸಿ ಸಸಿಗಳಿಂದ ಸಂಗ್ರಹಿಸಲಾಗುತ್ತದೆ. ಬೀಜಗಳನ್ನು ನೀರಿನಲ್ಲಿ ನೆನೆಸಿ ನಂತರ ತೆಗೆದುಕೊಳ್ಳಲಾಗುತ್ತದೆ ಕೆಲವೊಂದು ಸಂದರ್ಭಗಳಲ್ಲಿ ಹಾಲಿನೊಂದಿಗೂ ಇದನ್ನು ಸೇವಿಸಬಹುದು.


ಅಷ್ಟೇ ಅಲ್ಲದೆ ಸಲಾಡ್, ಮೊಸರು ಮತ್ತು ಸೂಪ್ ಜೊತೆಗೂ ಇದನ್ನು ಸೇವಿಸಬಹುದು. ಬನ್ನಿ ಇಂದಿನ ನಮ್ಮ ಲೇಖನದಲ್ಲಿ ಕಾಮಕಸ್ತೂರಿ ಬೀಜಗಳ ಇನ್ನಷ್ಟು ಮಹತ್ತರ ಕೊಡುಗೆಗಳನ್ನು ನಾವು ತಿಳಿಸಲಿದ್ದು, ಮುಂದೆ ಓದಿ.....

ದೇಹದ ರೋಗನಿರೋಧಕ ಶಕ್ತಿ ಹೆಚ್ಚಳ
ಫ್ಲೇವನಾಯ್ಡ್ಸ್ ಅಂಶವನ್ನು ಇದು ಒಳಗೊಂಡಿದ್ದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ, ಆಹಾರ ತೆಗೆದುಕೊಳ್ಳುವ ಪ್ರಮಾಣ ಕಡಿಮೆಯಾಗಿರುವುದರಿಂದ ದುರ್ಬಲ ಸ್ಥಿತಿ ಇರುತ್ತದೆ. ಈ ಬೀಜಗಳನ್ನು ನೀರಿನೊಂದಿಗೆ ಮಿಶ್ರ ಮಾಡಿಕೊಳ್ಳಬಹುದು; ಇದು ಜೆಲ್ ರೂಪದಲ್ಲಿ ಪರಿವರ್ತನೆಗೊಳ್ಳುತ್ತದೆ. ಹಣ್ಣುಗಳು ಮತ್ತು ಜ್ಯೂಸ್ ರೂಪದಲ್ಲಿ ಇದನ್ನು ಸೇವಿಸಬಹುದಾಗಿದೆ. ರಂಜಾನ್ ಮಾಸದಲ್ಲಿ ಖರ್ಜೂರಕ್ಕೆ ಏಕೆ ಅಷ್ಟೊಂದು ಮಹತ್ವ?

ಆಸಿಡಿಟಿ ಮತ್ತು ಮಲಬದ್ಧತೆ ನಿವಾರಣೆ
ರಂಜಾನ್ ಸಮಯದಲ್ಲಿ, ಉಪವಾಸ ಇರುವವರಲ್ಲಿ ಆಸಿಡಿಟಿ ಮತ್ತು ಮಲಬದ್ಧತೆ ಹೆಚ್ಚು ಸಾಮಾನ್ಯವಾಗಿರುತ್ತದೆ. ಕಾಮಕಸ್ತೂರಿ ಬೀಜಗಳು ಹೊಟ್ಟೆಗೆ ತಂಪನ್ನು ನೀಡುತ್ತದೆ. ಒಂದು ಚಮಚದಷ್ಟು ಬೀಜಗಳನ್ನು ಹಾಲಿನಲ್ಲಿ ಬೆರೆಸಿಕೊಂಡು ಸೇವಿಸಬೇಕಾಗುತ್ತದೆ. ಇದು ಆಸಿಡಿಟಿಯಿಂದ ನಿಮಗೆ ನಿರಾಳತೆಯನ್ನು ನೀಡುತ್ತದೆ. ಆಹಾರ ಕ್ರಮದಲ್ಲಿ ಮತ್ತು ಸೇವನೆ ಸಮಯದಲ್ಲಿ ಉಂಟಾಗುವ ಬದಲಾವಣೆಯಿಂದ ಮಲಬದ್ಧತೆ ಸಮಸ್ಯೆ ತಲೆದೋರುತ್ತದೆ. ಇದಕ್ಕೂ ಒಂದು ಕಪ್ ಹಾಲಿನೊಂದಿಗೆ ಬೀಜಗಳನ್ನು ಸೇರಿಸಿ ಸೇವಿಸುವುದರಿಂದ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.

ದೇಹಕ್ಕೆ ತಂಪಿನ ಅನುಭವವನ್ನು ನೀಡಿ ಹೈಡ್ರೇಟ್ ಮಾಡುತ್ತದೆ
ತುಳಸಿ ಬೀಜಗಳು ಹೆಚ್ಚು ತಂಪಿನ ಗುಣಗಳನ್ನು ಒಳಗೊಂಡಿದೆ. ಇದು ದೇಹದ ಉಷ್ಣತೆಯನ್ನು ಹೀರಿ ದೇಹಕ್ಕೆ ತ್ವರಿತ ತಂಪನ್ನು ನೀಡುತ್ತದೆ. ಜ್ಯೂಸ್ ಮತ್ತು ಇತರ ಹಣ್ಣುಗಳೊಂದಿಗೆ ಇದನ್ನು ಸೇವನೆ ಮಾಡಬಹುದಾಗಿದೆ. ದ್ರವರೂಪದಲ್ಲಿ ಇದನ್ನು ಸೇವನೆ ಮಾಡಬಹುದಾಗಿದೆ. ಇದಕ್ಕಾಗಿ ನೀರಿನಲ್ಲಿ ಸ್ವಲ್ಪ ಕಾಲ ಇದನ್ನು ನೀವು ನೆನೆಸಿಡಬೇಕಾಗುತ್ತದೆ. ಇದು ಜೆಲ್ಲಿ ರೂಪದಲ್ಲಿ ಬಂದಾಗ, ಈ ಮಿಶ್ರಣವನ್ನು ಸೇವಿಸಿ. ಇದು ದೇಹಕ್ಕೆ ಅತ್ಯುತ್ತಮ ತಂಪಿನ ಅನುಭವವನ್ನು ನೀಡಿ ನಿಮ್ಮನ್ನು ದೀರ್ಘಸಮಯದವರೆಗೆ ಹೈಡ್ರೇಟ್ ಆಗಿ ಇರಿಸುತ್ತದೆ.

ಹಸಿವು ನಿಗ್ರಹ
ಕಾಮಕಸ್ತೂರಿ ಬೀಜಗಳನ್ನು ನೆನೆಸಿ ಮತ್ತು ಉಪವಾಸವನ್ನು ಮುಗಿಸುವ ಸಮಯದಲ್ಲಿ ಸೇವಿಸಿ ತದನಂತರ ಊಟಕ್ಕೂ ಮುನ್ನ 15-20 ನಿಮಿಷಗಳ ವಿರಾಮವನ್ನು ನೀಡಿ. ಇದರಿಂದ ಹೆಚ್ಚು ತಿನ್ನುವುದನ್ನು ನಿಯಂತ್ರಿಸಿ ಹೊಟ್ಟೆ ಭರ್ತಿಯಾದ ಅನುಭವವನ್ನು ನಿಮ್ಮಲ್ಲಿ ಮೂಡಿಸುತ್ತದೆ. ಈ ಬೀಜವನ್ನು ಮೊಸರು, ಹಣ್ಣುಗಳು ಅಥವಾ ಜ್ಯೂಸ್‎ನೊಂದಿಗೆ ಸೇರಿಸಿಕೊಂಡು ಸೇವಿಸಬಹುದಾಗಿದೆ. ನಿಮ್ಮ ಹಸಿವನ್ನು ನಿಗ್ರಹಿಸಿಕೊಳ್ಳಲು ಜೆಲ್ಲಿ ರೂಪದ ಬೀಜಗಳ ಮಿಶ್ರಣವನ್ನು ಸೇವಿಸಬಹುದು ಇದು ಅತಿಯಾಗಿ ತಿನ್ನುವುದನ್ನು ನಿಯಂತ್ರಿಸುತ್ತದೆ. ರಂಜಾನ್ ಉಪವಾಸಕ್ಕಾಗಿ ತಂಪುಣಿಸುವ ಬಾದಾಮಿ ಹಾಲು

English summary

Amazing Health Benefits Of Basil Seeds During Ramzan

The holy month of Ramzan is here, and this calls for a month-long fasting for people among the Muslim community from across the globe. Fasting from sunrise till the dusk and then eating food at odd hours, one would naturally tend to feel dehydrated and weak. Change in the food timings and lifestyle, all at once, for a month can definitely take a toll on those who are weak and feeble. It also tends to affect their day-to-day activities.
Story first published: Tuesday, June 21, 2016, 20:19 [IST]
X
Desktop Bottom Promotion