Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಊಹೆಗೂ ನಿಲುಕದ ಬಾಳೆ ಹೂವಿನ ಆರೋಗ್ಯಕರ ಗುಣಗಳು
ಬಾಳೆಹಣ್ಣು ಯಾರಿಗೆ ಇಷ್ಟವಿಲ್ಲ? ಸರ್ವಕಾಲಕ್ಕೂ, ಅಗ್ಗವಾಗಿ ಎಲ್ಲೆಡೆ ದೊರೆಯುವ ಹಣ್ಣು ಎಂದರೆ ಇದು. ಹಣ್ಣಿನಂತೆಯೇ ಇದರ ಹೂವು ದಿಂಡುಗಳೂ ಆರೋಗ್ಯಕ್ಕೆ ಉತ್ತಮವಾಗಿವೆ. ಬಾಳೆ ಎಲೆಯಲ್ಲಿ ಊಟ ಮಾಡುವುದು ದಕ್ಷಿಣ ಭಾರತದ ಒಂದು ಸಂಪ್ರದಾಯವೇ ಆಗಿದೆ. ಬಾಳೆದಿಂಡಿನ ಸೇವನೆ ತೂಕ ಶೀಘ್ರವಾಗಿ ಇಳಿಸಲು ನೆರವಾಗುತ್ತದೆ. ಬಾಳೆಹೂವನ್ನು ಹೆಚ್ಚಾಗಿ ಬೆಳೆಗಾರರು ಗೊಂಚಲಿನಿಂದ ಕತ್ತರಿಸಿ ಎಸೆದುಬಿಡುತ್ತಾರೆ. ವಾಸ್ತವವಾಗಿ ಬಾಳೆಹೂವಿನಲ್ಲಿಯೂ ಉತ್ತಮ ಪೋಷಕಾಂಶಗಳಿವೆ. ಒಂದರ್ಥದಲ್ಲಿ ಹಣ್ಣು, ಎಲೆ ಮತ್ತು ದಿಂಡುಗಳಲ್ಲಿರುವ ಎಲ್ಲಾ ಪೋಷಕಾಂಶಗಳು ಈ ಹೂವಿನಲ್ಲಿವೆ. ಪುಷ್ಪಿತಾ-ಬಾಳೆ ಹೂವಿನ ಖಾದ್ಯ
ಸಾಮಾನ್ಯವಾಗಿ ಮಹಾರಾಷ್ಟ ರಾಜ್ಯದಲ್ಲಿ ಈ ಹೂವನ್ನು ಎಸೆಯದೇ ವಿವಿಧ ಖಾದ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದನ್ನು ಆಲು ಮತ್ತಿತರ ತರಕಾರಿಗಳೊಂದಿಗೆ ಪಲ್ಯ ಅಥವಾ ಸಬ್ಜಿಯ ರೂಪದಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ. ಕೆಲವರು ಈ ಹೂವುಗಳನ್ನು ಕೊಂಚ ಕಡ್ಲೆಹಿಟ್ಟು ಕಾರಪುಡಿ ಹಾಕಿ ಹುರಿದು ಒಣಮೀನಿನ ಬದಲಿಗೆ ನೆಂಜಿಕೊಳ್ಳಲು ಬಳಸುವುದೂ ಇದೆ. ಇದರ ರುಚಿ ಹಪ್ಪಳ, ಒಣಮೀನಿಗಿಂತಲೂ ರುಚಿಯಾಗಿದೆ. ಮೆಂತೆ ಸೊಪ್ಪು ಹಾಗೂ ಬಾಳೆ ದಿಂಡಿನ ರುಚಿಕರ ಪಲ್ಯ
ಇದರ ಏಕಮಾತ್ರ ತೊಂದರೆ ಎಂದರೆ ಇದನ್ನು ಬಿಡಿಸಲು ಕೊಂಚ ಹೆಚ್ಚು ಹೊತ್ತೆ ತೆಗೆದುಕೊಳ್ಳುವುದು. ಸಿಪ್ಪೆ ಸುಲಿಯಲು ಕೊಂಚ ಕೌಶಲವೂ ಅಗತ್ಯ. ಇದು ಬಿಟ್ಟರೆ ಬೇರೆಲ್ಲಾ ರೀತಿಯಲ್ಲಿ ಬಾಳೆಹೂವು ಒಂದು ಅತ್ಯುತ್ತಮವಾದ ಆರೋಗ್ಯಕರ ಆಹಾರವಾಗಿದೆ. ಬನ್ನಿ, ಇದರ ಆರೋಗ್ಯಕರ ಗುಣಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಕರಗದ ನಾರು ಹೆಚ್ಚಿನ ಪ್ರಮಾಣದಲ್ಲಿದೆ
ನಮ್ಮ ಆಹಾರದಲ್ಲಿ ಕರಗುವ ಮತ್ತು ಕರಗದ ನಾರು ಎರಡೂ ಇರುವಂತಿರಬೇಕು. ಅಕ್ಕಿ, ಹಣ್ಣುಗಳಲ್ಲಿ ಕರಗುವ ನಾರು ಹೆಚ್ಚಿದ್ದರೆ ಗೋಧಿ, ಹಸಿತರಕಾರಿಗಳಲ್ಲಿ ಕಗರದ ನಾರು ಹೆಚ್ಚಿರುತ್ತದೆ. ಆದರೆ ನಾವು ಗೋಧಿಯ ನಾರನ್ನು ನಿವಾರಿಸಿ ಮೈದಾ ರೂಪದಲ್ಲಿ ಬಳಸುವ ಮೂಲಕ ಅಗತ್ಯವಿರುವ ನಾರನ್ನು ಪಡೆಯದೇ ಹೋಗುತ್ತೇವೆ. ಇದರಿಂದ ಮಲಬದ್ಧತೆ ಪ್ರಾರಂಭವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕರಗದ ನಾರು ಹೆಚ್ಚಿನ ಪ್ರಮಾಣದಲ್ಲಿದೆ
ಮಾರುಕಟ್ಟೆಯಲ್ಲಿ ಲಭ್ಯವಿರುವ ನೋಡಲು ಸುಂದರವಾಗಿರುವ ಆಹಾರಗಳೆಲ್ಲವೂ ಈ ನಾರಿನಿಂದ ವಂಚಿತವಾಗಿರುವ ಕಾರಣ ಮಲಬದ್ದತೆ ಹೆಚ್ಚುತ್ತದೆ. ಬಾಳೆಹೂವಿನಲ್ಲಿ ಕರಗದ ನಾರು ಅತಿ ಹೆಚ್ಚಿನ ಪ್ರಮಾಣದಲ್ಲಿದ್ದು ಸುಲಭ ಜೀರ್ಣಕ್ರಿಯೆ ಮತ್ತು ವಿಸರ್ಜನೆಯಲ್ಲಿ ನೆರವಾಗುತ್ತದೆ.

ಆಂಟಿ ಆಕ್ಸಿಡೆಂಟುಗಳು ಹೇರಳವಾಗಿವೆ
ಬಾಳೆಹೂವಿನಲ್ಲಿ ಪಾಲಿಫೆನಾಲ್ ಎಂಬ ಕಣಗಳಿದ್ದು ಇವುಗಳು ಉತ್ತಮ ಆಂಟಿ ಆಕ್ಸಿಡೆಂಟುಗಳಂತೆ ಕಾರ್ಯನಿರ್ವಹಿಸುತ್ತವೆ. ವಿಶೇಷವಾಗಿ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡಬಹುದಾದ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡಿ ವಿವಿಧ ಕ್ಯಾನ್ಸರ್‌ಗಳಿಂದ ರಕ್ಷಿಸುತ್ತದೆ ಹಾಗೂ ಒತ್ತಡದ ಮೂಲಕ ಎದುರಾಗಬಹುದಾದ ತೊಂದರೆಗಳಿಂದಲೂ ರಕ್ಷಿಸುತ್ತದೆ.

ಮಧುಮೇಹದ ಹತೋಟಿಗೆ ನೆರವಾಗುತ್ತದೆ
ಬಾಳೆಹೂವಿನಲ್ಲಿರುವ ಪೋಷಕಾಂಶಗಳು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು(glycemic index) ಹೊಂದಿದೆ. ಅಂದರೆ ಇದು ಹೊಟ್ಟೆಯಲ್ಲಿ ಜೀರ್ಣವಾಗಿ ಸಕ್ಕರೆ ಮತ್ತು ಇತರ ಪೋಷಕಾಂಶಗಳನ್ನು ರಕ್ತದಲ್ಲಿ ಸೇರಿಸಲು ಬಹಳ ಹೆಚ್ಚಿನ ಹೊತ್ತು ತೆಗೆದುಕೊಳ್ಳುತ್ತದೆ. ಈ ಗುಣ ಮಧುಮೇಹಿಗಳಿಗೆ ಹೇಳಿ ಮಾಡಿಸಿದಂತಿದೆ. ಇದಕ್ಕೆ ಬಾಳೆಹೂವಿನಲ್ಲಿರುವ ಹೆಚ್ಚಿನ ಪ್ರಮಾಣದ ನಾರು ಮತ್ತು ಆಂಟಿಆಕ್ಸಿಡೆಂಟುಗಳೇ ಕಾರಣ. ಮಧುಮೇಹಿಗಳ ರಕ್ತದಲ್ಲಿ ಅತಿ ಸಾವಕಾಶವಾಗಿ ಸಕ್ಕರೆ ರಕ್ತಕ್ಕೆ ಬರುವ ಕಾರಣ ಇದನ್ನು ನಿಭಾಯಿಸಲು ದೇಹಕ್ಕೆ ಹೆಚ್ಚಿನ ಸಮಯಾವಕಾಶ ದೊರಕುತ್ತದೆ. ಇದರಿಂದ ಮಧುಮೇಹದ ಮೇಲೆ ಹತೋಟಿ ಸಾಧಿಸಲು ಸುಲಭವಾಗುತ್ತದೆ.

ಅತಿಸಾರ ಮತ್ತು ಆಮಶಂಕೆಯನ್ನು ನಿಲ್ಲಿಸುತ್ತದೆ
Asian Journal of Pharmaceutical and Clinical Research ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ವಿವಿಧ ಕಾರಣಗಳಿಂದ, ವಿಶೇಷವಾಗಿ ಜಂತುಗಳಿಂದ ಉಂಟಾದ ಆಮಶಂಕೆ, ಅತಿಸಾರದ ತೊಂದರೆಗಳು ಬಾಳೆಹೂವಿನ ಸೇವನೆಯಿಂದ ಶೀಘ್ರವಾಗಿ ಕಡಿಮೆಯಾಗುತ್ತದೆ.

ತಿಂಗಳ ಸಮಯದ ಅತಿಸ್ರಾವದಿಂದ ರಕ್ಷಿಸುತ್ತದೆ
ಮಹಿಳೆಯರ ಮಾಸಿಕ ದಿನಗಳ ಸ್ರಾವದ ಪ್ರಮಾಣ ಒಂದು ವೇಳೆ ಸಾಮಾನ್ಯಕ್ಕಿಂತಲೂ ಅತಿ ಹೆಚ್ಚಾಗಿದ್ದರೆ (menorrhagia) ಬಾಳೆಹೂವಿನ ಸೇವನೆ ಇದನ್ನು ಕಡಿಮೆಗೊಳಿಸಿ ಸಾಮಾನ್ಯ ಪ್ರಮಾಣಕ್ಕೆ ಇಳಿಸಲು ಸಮರ್ಥವಾಗಿವೆ.



Click it and Unblock the Notifications









