Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
World Sleep Day: ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಇಲ್ಲಿದೆ 8 ಟಿಪ್ಸ್
ಒಂದು ವೇಳೆ ಈ ನಿದ್ರಾಹೀನತೆಯನ್ನು ಆರಂಭದಲ್ಲಿಯೇ ನೋಡಿಕೊಳ್ಳದಿದ್ದರೆ, ಮುಂದೆ ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸಿ, ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.
ನಿದ್ರಾಹೀನತೆ ಮನುಷ್ಯನು ಎದುರಿಸುವ ಕೆಟ್ಟ ಸಮಸ್ಯೆಗಳಲ್ಲೊಂದು. ಅಂದರೆ ನಿದ್ರೆ ಬಾರದಿರುವಿಕೆ. ಎಷ್ಟೇ ಪ್ರಯತ್ನ ಪಟ್ಟರೂ ನಿದ್ರೆಬಾರದೇ ಹೋಗುತ್ತದೆ. ಇದರಿಂದಾಗಿ ಸುಸ್ತು, ಆಯಾಸ, ಸಿಡಿಮಿಡಿಗೊಳ್ಳುವ ಮನಸ್ಥಿತಿ, .ಯಾವುದೇ ಕೆಲಸ ತೆಗೆದುಕೊಂಡರೂ ಏಕಾಗ್ರತೆ ಇಲ್ಲದಿರುವಿಕೆ ಮುಂತಾದ ಸಮಸ್ಯೆಗಳು ಆಗುತ್ತವೆ.
ಕಣ್ಣಿಗೆ ಚೆನ್ನಾಗಿ ನಿದ್ದೆ ಹತ್ತಿದರೆ ಮನಸ್ಸಿಗೆ ನೆಮ್ಮದಿ. ಹಾಗಾಗಿ, ನಿದ್ರಾಹೀನತೆಯ ಸಮಸ್ಯೆಯಿಂದ ನೀವು ಹೊರ ಬರಲು ಕೆಳಗೆ ಕೊಟ್ಟಿರುವ 8 ಸಲಹೆಗಳು ನಿಮಗೆ ಸಹಾಯ ಮಾಡಬಹುದು. ಯಾರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಾರೋ, ಅವರುಗಳು ಮೊಟ್ಟಮೊದಲನೆಯದಾಗಿ ಕಂಡುಕೊಳ್ಳುವ ಪರಿಹಾರವೇನೆಂದರೆ, ಹತ್ತಿರದಲ್ಲೇ ಲಭ್ಯವಿರುವ ಔಷಧಿ ಅಂಗಡಿಗಳಲ್ಲಿ ಸುಲಭವಾಗಿ ಗುಳಿಗೆಯನ್ನು ತೆಗೆದುಕೊಂಡು ಬಂದು ಸೇವಿಸುವುದು. ನಿದ್ರಾಹೀನತೆ ಕಾಯಿಲೆಯ ಲಕ್ಷಣಗಳು

ಇದು ಆ ಕ್ಷಣಕ್ಕೆ ಪರಿಹಾರವನ್ನು ಕೊಟ್ಟರೂ, ತಜ್ಞರ ಪ್ರಕಾರ ಇದನ್ನೇ ರೂಢಿಸಿಕೊಂಡು ಹವ್ಯಾಸ ಮಾಡಿಕೊಳ್ಳುವುದು ಸರಿಯಲ್ಲವೆಂದು ಹೇಳಲಾಗಿದೆ. ಒತ್ತಡಭರಿತ ಜೀವನ ಹಾಗು ಜಡ ಜೀವನ ಶೈಲಿ ನಿದ್ರಾಹೀನತೆಗೆ ಪ್ರಮುಖ ಕಾರಣಗಳಾಗಿವೆ. ಆದ್ದರಿಂದ, ಈ ಸಮಸ್ಯೆಗೆ ಕಾರಣವನ್ನು ಕಂಡುಹಿಡಿದು ಅವುಗಳನ್ನು ಹೋಗಲಾಡಿಸಲು ಅದಕ್ಕೆ ತಕ್ಕ ಚಿಕಿತ್ಸೆಯನ್ನು ಕೊಡುವುದು ನಿದ್ರಾಹೀನತೆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳವ ಉತ್ತಮ ವಿಧಾನವಾಗಿದೆ.
ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸಿದರೆ ನಿದ್ರೆಯೂ ಚೆನ್ನಾಗಿ ಬರುತ್ತದೆ ಮತ್ತು ಯಾವುದೇ ವಿಧವಾದ ಅಡ್ಡ ಪರಿಣಾಮವನ್ನೂ ಬೀರುವುದಿಲ್ಲ. ಈ ಕೆಳಗೆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಕೆಲ ವಿಧಾನಗಳನ್ನು ನೀಡಲಾಗಿದೆ. ಒಮ್ಮೆ ನೋಡಿ. ನಿದ್ದೆ ಅತಿಯಾದರೂ ಆರೋಗ್ಯಕ್ಕೆ ಮಾರಕ, ನೆನಪಿರಲಿ....
ಐ ಮಾಸ್ಕ್ (ಕಣ್ಣಿನ ಮುಖವಾಡ)ಬಳಕೆ
ನಿದ್ದೆ ಬರುವ ಗುಳಿಗೆಗಳನ್ನು ತೆಗೆದುಕೊಳ್ಳುವ ಬದಲು, ಹತ್ತಿದರ ಔಷಧಿ ಅಂಗಡಿಗಳಲ್ಲಿ ದೊರೆಯುವ ಬ್ಲಾಕ್ಔಟ್ ಶೇಡ್ಸ್ ಗಳನ್ನು ಪಡೆಯುವುದು ಉತ್ತಮ. ಇದು ನಿಮಗೆ ನಿದ್ರೆಗೆ ಅಡ್ಡಿ ಮಾಡುವ ಬೆಳಕಿಂದ ದೂರವಿರುತ್ತದೆ.
ರಾತ್ರಿಯ ಊಟವನ್ನು ಬೇಗ ಮುಗಿಸುವುದು
ಮತ್ತೊಂದು ಉಪಾಯವೇನೆಂದರೆ ರಾತ್ರಿಯ ಊಟವನ್ನು ಬೇಗ ಮಾಡಿ ಮುಗಿಸುವುದು. ಯಾವಾಗಲೂ ಮಲಗುವ ಮೂರು ತಾಸಿನ ಮುಂಚೆ ಊಟ ಮುಗಿದಿರಬೇಕು. ಇದರಿಂದ ಮಲಗುವ ಹೊತ್ತಿಗೆ ಸೇವಿಸಿದ ಆಹಾರದ ಪಚನವಾಗಿರುತ್ತದೆ.
ಧ್ಯಾನ
ಬೆಳಗಿನ ಜಾವ ಮತ್ತು ರಾತ್ರಿ ಮಲಗುವ ಮುನ್ನ 10-15 ನಿಮಿಷಗಳವರೆಗೆ, ಧ್ಯಾನವನ್ನು ಮಾಡಿದರೆ ಒತ್ತಡವು ನಿವಾರಣೆಯಾಗಿ, ನಿದ್ರೆಯು ಬೇಗ ಬರುತ್ತದೆ. ನಿದ್ರಾಹೀನತೆ ಸಮಸ್ಯೆ ನಿವಾರಿಸುವ ಮನೆಮದ್ದು!
ಲ್ಯಾವೆಂಡರ್ ಆಯಿಲ್
ಈ ಎಣ್ಣೆಯು, ಮನಸ್ಸನ್ನು ಆರಾಮಗೊಳಿಸಿ ನಿದ್ರೆಯನ್ನು ಹೆಚ್ಚಿಸುತ್ತದೆ. ರಾತ್ರಿ ಮಲಗುವ ಮುನ್ನ ಸ್ನಾನದ ನೀರಿಗೆ ಒಂದೆರಡು ಹನಿಯನ್ನು ಹಾಕಿ ಸ್ನಾನ ಮಾಡಬೇಕು. ಹಾಗು, ದಿಂಬಿನ ಕವರಿಗೂ ಈ ಲ್ಯಾವೆಂಡರ್ ಎಣ್ಣೆಯನ್ನು ಒಂದೆರಡು ಹನಿ ಹಾಕಿ ಒಗೆಯಬೇಕು. ಇದರಿಂದ ನಿದ್ರಾಹೀನತೆಯನ್ನು ಹೋಗಲಾಡಿಸಬಹುದು.
ಮಲಗುವ ಮುನ್ನ ವ್ಯಾಯಾಮ ಬೇಡ
ವ್ಯಾಯಾಮ ಮಾಡಿದಾಗ ದೇಹದಲ್ಲಿನ ಚೈತನ್ಯ ಹೆಚ್ಚುತ್ತದೆ. ಆದ್ದರಿಂದ ಮಲಗುವ ಮುನ್ನ ವ್ಯಾಯಾಮವನ್ನು ಮಾಡಬಾರದು. ಸಂಜೆ ಐದು ಗಂಟೆಯ ಒಳಗೆ ಮಾಡಿ ಮುಗಿಸಿದರೆ ಒಳ್ಳೆಯದು ಮತ್ತು ಅದರಿಂದಾಗಿ ನಿದ್ದೆಯೂ ಚೆನ್ನಾಗಿ ಬರುತ್ತದೆ.
ಕ್ಯಾಮೋಮೈಲ್ ಎಣ್ಣೆ
ಈ ಎಣ್ಣೆಗೆ ಮನಸ್ಸನ್ನು ಆರಾಮಗೊಳಿಸಿ ನಿದ್ರೆ ತರಿಸುವ ಶಕ್ತಿ ಹೆಚ್ಚಾಗಿ ಇರುತ್ತದೆ. ರಾತ್ರಿ ಸ್ನಾನ ಮಾಡುವಾಗ ಸ್ವಲ್ಪ ಎಣ್ಣೆಯನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡಬೇಕು. ಇದರಿಂದ ಒಳ್ಳೆ ನಿದ್ರೆ ಬರುತ್ತದೆ.
ಓದುವುದು
ಕಂಪ್ಯೂಟರ್, ಮೊಬೈಲ್ ಮುಂತಾದ ಗ್ಯಾಜೆಟ್ ಗಳ ಜೊತೆ ಕಾಲಕಳೆಯುವ ಬದಲು, ಪುಸ್ತಕ, ಪತ್ರಿಕೆಗಳನ್ನು ಒದುವ ಅಭ್ಯಾಸ ಮಾಡಿಕೊಂಡರೆ ನಿದ್ರಾಹೀನತೆಯನ್ನು ಹೋಗಲಾಡಿಸಿ ಒಳ್ಳೆಯ ನಿದ್ದೆ ಬರುವಂತೆ ಮಾಡುತ್ತದೆ.
ಮಲಗುವ ಮುನ್ನ ಅತಿ ಹೆಚ್ಚು ಮಸಾಲೆಭರಿತ ಆಹಾರವನ್ನು ಸೇವಿಸಬೇಡಿ
ಯಾವ ಆಹಾರಗಳಲ್ಲಿ ಹೆಚ್ಚು ಮಸಾಲೆ ಅಥವಾ ಸಕ್ಕರೆಯ ಅಂಶವಿರುತ್ತದೆಯೋ ಅಂತಹ ಆಹಾರವನ್ನು ಸೇವಿಸತಕ್ಕದ್ದಲ್ಲ. ಇವು ನಿದ್ರೆಯನ್ನು ಹೋಗಲಾಡಿಸುತ್ತದೆ. ಆದ್ದರಿಂದ ಮಲಗುವ ಮುನ್ನ ಲಗುವಾದ ಹಾಗು ಸಮತೋಲನತೆಯುಳ್ಳ ಆಹಾರವನ್ನು ಸೇವಿಸುವುದು ಹೆಟ್ಟು ಸೂಕ್ತ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications







