Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿದ್ದೆ ಅತಿಯಾದರೂ ಆರೋಗ್ಯಕ್ಕೆ ಮಾರಕ, ನೆನಪಿರಲಿ....
ಅತಿಯಾಗಿ ತಿಂದರೆ ಅಮೃತವೂ ವಿಷವಂತೆ. ಈ ಮಾತು ಸಾರ್ವಕಾಲಿಕವಾಗಿದ್ದು ಬಹುತೇಕ ಎಲ್ಲಾ ವಿಷಯಗಳಿಗೂ ಅನ್ವಯಿಸುತ್ತದೆ. ಹಣ, ಅಧಿಕಾರ, ಆಹಾರ, ನಿದ್ದೆ ಎಲ್ಲವೂ ಒಂದು ಮಿತಿಯಲ್ಲಿದ್ದರೇ ಒಳ್ಳೆಯದು. ನಮ್ಮ ಆರೋಗ್ಯಕ್ಕೆ ನಿದ್ದೆ ಅಗತ್ಯವಾಗಿ ಬೇಕು. ಆದರೆ ದಿನಕ್ಕೆ ಆರರಿಂದ ಎಂಟು ಗಂಟೆ ಬೇಕಾದಷ್ಟಾಯಿತು. ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಕಾರಣ ತಿಳಿದುಕೊಳ್ಳಿ
ಅತಿಯಾದ ಆಯಾಸ ಅಥವಾ ದೈಹಿಕ ಶ್ರಮ ಅಥವಾ ಮಾನಸಿಕವಾಗಿ ಬಳಲಿದ್ದರೆ ಇದು ಹತ್ತು ಗಂಟೆಗಳವರೆಗೆ ಇರಬಹುದು, ಆದರೆ ಪ್ರತಿದಿನವಲ್ಲ. ಆದರೆ ದಿನಕ್ಕೆ ಹತ್ತು ಗಂಟೆಗೂ ಹೆಚ್ಚು ನಿದ್ರಿಸಿದರೆ ಮಾತ್ರ ಆರೋಗ್ಯಕ್ಕೆ ಮಾರಕ. ಮಲಗಿದರೆ ನಿದ್ದೆ ಬರುತ್ತದಲ್ಲಾ, ಸುಖವಾದ ನಿದ್ದೆಯನ್ನು ಸವಿಯುವುದರಲ್ಲೇನು ತಪ್ಪು ಎಂದು ಕೊಂಕು ನುಡಿಯುವವರಿಗೆ ಸರಿಯಾದ ಉತ್ತರ ನೀಡಿದ್ದೇವೆ ಮುಂದೆ ಓದಿ....

ಹೃದಯ ಸಂಬಂಧಿ ತೊಂದರೆಗಳು
ಅಮೇರಿಕಾದ American Academy of Sleep Medicine ಎಂಬ ಸಂಸ್ಥೆಯ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ ಅಗತ್ಯಕ್ಕೂ ಹೆಚ್ಚಿನ ನಿದ್ದೆಯಿಂದ ಹೃದಯ ಸಂಬಂಧಿ ತೊಂದರೆಗಳ ಸಾಧ್ಯತೆ ಹೆಚ್ಚುತ್ತದೆ. ಒಂದು ಸಂಶೋಧನೆಯಲ್ಲಿ ದಿನಕ್ಕೆ ಒಂಬತ್ತರಿಂದ ಹನ್ನೊಂದು ಗಂಟೆ ನಿದ್ರಿಸುವ ಮಹಿಳೆಯರ ಆರೋಗ್ಯದ ಅಂಕಿ ಅಂಶಗಳನ್ನು ಪರಿಗಣಿಸಿದಾಗ ಇವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಇತರರಿಗಿಂತ 38% ಹೆಚ್ಚು ಇರುವುದು ಪತ್ತೆಯಾಗಿದೆ.

ಸ್ಥೂಲಕಾಯ
ಸುಖನಿದ್ದೆಗೂ ಸ್ಥೂಲಕಾಯಕ್ಕೂ ನೇರವಾದ ಸಂಬಂಧವಿದೆ. ಹೆಚ್ಚು ನಿದ್ದೆ ಎಂದರೆ ಕಡಿಮೆ ವ್ಯಾಯಾಮ ಹಾಗೂ ಕಡಿತಗೊಂಡ ದೈಹಿಕ ಮತ್ತು ಮೆದುಳಿನ ಚಟುವಟಿಕೆ. ಇದರಿಂದ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗದೇ ಸ್ಥೂಲಕಾಯ ಶೀಘ್ರವಾಗಿ ಆವರಿಸುವುದು ಮಾತ್ರವಲ್ಲ, ನಿಧಾನವಾಗಿ ಏರುತ್ತಲೂ ಹೋಗುತ್ತದೆ.

ಬೆನ್ನು ನೋವು
ಸಾಮಾನ್ಯವಾಗಿ ನಾವೆಲ್ಲರೂ ಬೆನ್ನ ಮೇಲೆ ಮಲಗುತ್ತೇವೆ. ನಿದ್ದೆಯ ಹೊತ್ತಿನಲ್ಲಿ ನಮ್ಮ ಸ್ನಾಯುಗಳು ಸಡಿಲವಾಗಿರುವ ಕಾರಣ ಬೆನ್ನಮೂಳೆ ಅತಿ ಹೆಚ್ಚು ಬಾಗುವ ಸಂಭವವಿದೆ. ಇದನ್ನು ತಡೆಯಲು ಅಲ್ಲಿನ ಸ್ನಾಯುಗಳು ಪೆಡಸಾಗುತ್ತವೆ. ಹೆಚ್ಚು ಮಲಗುವ ಮೂಲಕ ಬೆನ್ನಿನ ಮೇಲಿನ ಒತ್ತಡವೂ ಹೆಚ್ಚಾಗುತ್ತದೆ. ಇದೇ ಕಾರಣಕ್ಕೆ ಹೆಚ್ಚು ಮಲಗಿ ಎದ್ದಾಗ ಬೆನ್ನಿನ ಕೆಳಭಾಗ ಸುಲಭವಾಗಿ ಏಳಲು ಅಸಾಧ್ಯವಾಗಿಸುತ್ತದೆ. ಬೆನ್ನು ಮೂಳೆಯ ನಡುವಣ ನರವೂ ಘಾಸಿಗೊಳ್ಳುವ ಸಾಧ್ಯತೆ ಇದೆ. ಇದು ಬೆನ್ನುನೋವಿಗೆ ಕಾರಣವಾಗುತ್ತದೆ.

ಮಧುಮೇಹ
ಹೆಚ್ಚಿನ ನಿದ್ದೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸಬಹುದು. PLoS One ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ನಿಯಮಿತವಾಗಿ ದಿನಕ್ಕೆ ಒಂಬತ್ತು ಗಂಟೆಗಳಿಗೂ ಹೆಚ್ಚು ಕಾಲ ನಿದ್ರಿಸುವವರಲ್ಲಿ ಮಧುಮೇಹ ಆವರಿಸುವ ಸಾಧ್ಯತೆ ಸೂಕ್ತ ನಿದ್ದೆಯನ್ನು ಪಡೆಯುವವರಿಗಿಂತ ಹೆಚ್ಚಾಗಿರುತ್ತದೆ.

ಖಿನ್ನತೆ
PLoS One ನಿಯತಕಾಲಿಕೆಯ ಇನ್ನೊಂದು ವರದಿಯ ಪ್ರಕಾರ ಹೆಚ್ಚು ಕಾಲ ನಿದ್ದೆ ಮಾಡಿರುವವರು ಒತ್ತಡಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿರುತ್ತದೆ. ಏಕೆಂದರೆ ಮಲಗಿ ಎದ್ದ ಬಳಿಕ ಮೆದುಳಿಗೆ ಹರಿಯುವ ರಕ್ತದ ಪ್ರಮಾಣ ಸೂಕ್ತಮಟ್ಟಕ್ಕೇರಲು ಕೊಂಚ ಕಾಲ ಬೇಕು. ಹೆಚ್ಚಿನ ನಿದ್ದೆಯ ಕಾರಣ ಮೆದುಳಿನಲ್ಲಿ ರಕ್ತ ಬಹಳವೇ ಕಡಿಮೆ ಇರುತ್ತದೆ. ಈ ಸಮಯದಲ್ಲಿ ಎದುರಾಗುವ ಯಾವುದೇ ಸಮಸ್ಯೆಗೆ ಮೆದುಳು ಸೂಕ್ತವಾಗಿ ಪ್ರತಿಕ್ರಿಯಿಸದೇ ಒತ್ತಡಕ್ಕೆ ಒಳಗಾಗುತ್ತದೆ. ಆದ್ದರಿಂದ ಮೆದುಳಿನ ಕ್ಷಮತೆ ಸೂಕ್ತಮಟ್ಟದಲ್ಲಿರಬೇಕಾದರೆ ನಿದ್ದೆಯೂ ಸೂಕ್ತಮಟ್ಟದಲ್ಲಿಯೇ ಇರುವುದು ಅನಿವಾರ್ಯ.



Click it and Unblock the Notifications
