For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಬೆನ್ನೇರಿ ಕಾಡುವ 'ಷೇಫಿಂಗ್' ಸಮಸ್ಯೆ!

By Manu
|

ಷೇಫಿಂಗ್ ಎಂದರೇನು? ಎಂಬ ಸಂದೇಹ ನಿಮ್ಮನ್ನು ಕಾಡುತ್ತಿದೆಯೇ? ಎಂತಹ ಬಿಸಿಲು ಹೊರಗೆ, ಮತ್ತು ಮನೆಯ ಒಳಗೆ ಅದೆಂತಹ ಹಬೆ ಅಲ್ಲವೇ, ಇಂತಹ ಬಿರು ಬೇಸಿಗೆಯಲ್ಲಿ ನಾವು ಸುಮ್ಮನೆ ನಡೆದಾಡಿದರು ಸಹ ಬೆವರಿನ ಸಣ್ಣ ಝರಿ ನಮ್ಮ ದೇಹದಿಂದ ಹೊರ ಚಿಮ್ಮುತ್ತದೆ. ಇಂತಹ ಬೇಸಿಗೆಯಲ್ಲಿ ಬೆವರು ಮುಂತಾದ ಸಮಸ್ಯೆಗಳು ಒಂದು ಕಡೆಯಾದರೆ, ನಾವು ಹಾಕುವ ಬಟ್ಟೆಯಿಂದ ಮತ್ತೊಂದು ಸಮಸ್ಯೆ ಉಂಟಾಗುತ್ತದೆ.

ನಮ್ಮ ದೇಹದ ಆಯಕಟ್ಟಿನ ಸ್ಥಳಗಳಿಗೆ ಈ ಬಟ್ಟೆಯು ಉಜ್ಜಿ, ಉಜ್ಜಿ, ಬೊಬ್ಬೆಗಳು ಉಂಟಾಗುತ್ತವೆ, ಇದನ್ನೇ ಷೇಫಿಂಗ್ ಎಂದು ಕರೆಯುತ್ತಾರೆ. ಇದು ನೋಡಲು ಸಾಧಾರಣ ಸಮಸ್ಯೆ ಎಂದೆನಿಸಿದರು ಕಿರಿಕಿರಿಯ ಜೊತೆಗೆ ನೋವನ್ನು ಸಹ ಉಂಟು ಮಾಡುತ್ತದೆ. ಬೇಸಿಗೆಯಲ್ಲಿ ಈ ಸಮಸ್ಯೆಯು ತನ್ನ ಉತ್ತುಂಗವನ್ನು ತಲುಪುತ್ತದೆ. ಆಗ ನೀವು ಹೆಚ್ಚಾಗಿ ಬೆವರುತ್ತಿರುತ್ತೀರಿ.

ನಿಮ್ಮ ದೇಹದಲ್ಲಿ ಶೇಖರಗೊಂಡಿರುವ ಅಧಿಕ ಕೊಬ್ಬು, ದೇಹಕ್ಕೆ ಒಂದು ಬಗೆಯ ಘರ್ಷಣೆಯನ್ನು ನೀಡುತ್ತದೆ. ನಿಮ್ಮ ತೊಡೆ ಸಂದುಗಳು, ತೊಡೆ, ಕತ್ತು, ಕಂಕುಳು, ಮಹಿಳೆಯರಲ್ಲಿನ ಸ್ತನದ ತೊಟ್ಟುಗಳು ಸಹ ಈ ಸಮಸ್ಯೆಗೆ ಗುರಿಯಾಗುತ್ತವೆ. ಒಂದು ವೇಳೆ ನಿಮ್ಮ ತ್ವಚೆಯು ಸೂಕ್ಷ್ಮವಾಗಿದ್ದಲ್ಲಿ, ಅಥವಾ ನೀವು ಅಧಿಕ ಭಾರವನ್ನು ಹೊಂದಿದ್ದಲ್ಲಿ ಈ ಸಮಸ್ಯೆ ನಿಮ್ಮನ್ನು ಕಾಡಬಹುದು. ಬನ್ನಿ ಇದರ ಲಕ್ಷಣಗಳು ಹೇಗೆ ಇರುತ್ತವೆ ಎಂದು ನೋಡೋಣ. ಬೊಬ್ಬೆಗಳು, ಉರಿ, ತುರಿಕೆ, ಮತ್ತು ನೋವು ಇದರ ಗುಣಲಕ್ಷಣಗಳು.

ಮೊದಲು ಈ ಸಮಸ್ಯೆಗೆ ಇರುವ ಮೂಲ ಕಾರಣವನ್ನು ತಿಳಿದುಕೊಳ್ಳೋಣ ಬನ್ನಿ. ಅಧಿಕ ಬೆವರು, ಅಥವಾ ಅಧಿಕ ಓಡಾಟ, ಬಿಗಿಯಾದ ಉಡುಪುಗಳು, ಯಾವುದು ನಿಮ್ಮ ಈ ಸಮಸ್ಯೆಗೆ ಕಾರಣ ಎಂದು ಮೊದಲು ತಿಳಿದುಕೊಳ್ಳಿ. ಸಡಿಲವಾದ ಬಟ್ಟೆಗಳನ್ನು ಧರಿಸಿ, ಬೀಟಾ ಕೆರೋಟಿನ್, ಸತು, ವಿಟಮಿನ್ ಸಿ ಮುಂತಾದ ಅಂಶಗಳು ಇರುವ ತರಕಾರಿ, ಹಣ್ಣುಗಳನ್ನು ಸೇವಿಸಿ. ಷೇಫಿಂಗ್ ತೀವ್ರಗೊಂಡಾಗ ಅದು ತ್ವಚೆಯ ಇನ್‌ಫೆಕ್ಷನ್‌ಗೆ ಕಾರಣವಾಗಬಹುದು. ಇದನ್ನು ಗುಣಪಡಿಸಲು ನಮಗೆ ಮನೆಯಲ್ಲಿಯೇ ಕೆಲವೊಂದು ಮದ್ದುಗಳು ದೊರೆಯುತ್ತವೆ, ಬನ್ನಿ ಅವು ಯಾವುದು ಎಂದು ನೋಡೋಣ.

ಟೀ ಟ್ರೀ ಆಯಿಲ್

ಟೀ ಟ್ರೀ ಆಯಿಲ್

ಹಲವು ಬಗೆಯ ತ್ವಚೆಯ ತುರಿಕೆಗೆ ರಾಮಬಾಣ ಟೀ ಟ್ರೀ ಆಯಿಲ್. ಇದರಲ್ಲಿರುವ ಆಂಟಿ ಮೈಕ್ರೋಬೈಯಲ್ ಅಂಶಗಳಿಂದಾಗಿ ಇದಕ್ಕೆ ಈ ಸತ್ವ ಬಂದಿರುತ್ತದೆ. ಈ ಎಣ್ಣೆಯನ್ನು ನೀರಿನಲ್ಲಿ ಬೆರೆಸಿಕೊಂಡು ತುರಿಕೆಯಿರುವ ಭಾಗಕ್ಕೆ ಹಚ್ಚಿ, ಈ ಸಮಸ್ಯೆಯಿಂದ ನಿವಾರಣೆಯನ್ನು ಪಡೆಯಿರಿ.

ಅರಿಶಿನ

ಅರಿಶಿನ

ಅರಿಶಿನದಲ್ಲಿ ಉರಿಬಾವು ನಿರೋಧಕ ಮತ್ತು ಬ್ಯಾಕ್ಟೀರಿಯಾ ನಿರೋಧಕ ಗುಣಗಳು ಇರುತ್ತವೆ. ಅರಿಶಿನದ ಪೇಸ್ಟ್ ಮಾಡಿಕೊಂಡು ಅದನ್ನು ಸಮಸ್ಯೆ ಇರುವ ಭಾಗಕ್ಕೆ ಲೇಪಿಸುವ ಮೂಲಕ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು. ಆದರೆ ಈ ಪೇಸ್ಟ್ ಲೇಪಿಸಿದ ನಂತರ 25 ನಿಮಿಷ ತೊಳೆಯಬೇಡಿ.

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ ಸಹ ಉಪಶಮನಕಾರಿ ಗುಣಗಳನ್ನು ಹೊಂದಿರುತ್ತದೆ. ಇದು ಸಹ ಷೇಫಿಂಗ್ ಆದ ತ್ವಚೆಗೆ ಒಳ್ಳೆಯ ಪರಿಹಾರವನ್ನು ಒದಗಿಸುತ್ತದೆ. ಇದಕ್ಕಾಗಿ ಒಂದು ಚಿಟಿಕೆ ಬೇಕಿಂಗ್ ಸೋಡಾಕ್ಕೆ 3 ಚಮಚ ನೀರು ಬೆರೆಸಿಕೊಳ್ಳಿ. ಇದನ್ನು ಮೃದುವಾಗಿ ಮಿಶ್ರಣ ಮಾಡಿಕೊಂಡು, ನಿಮಗೆ ಸಮಸ್ಯೆಯನ್ನು ಉಂಟು ಮಾಡಿರುವ ಭಾಗಕ್ಕೆ ಲೇಪಿಸಿ, ಐದು ನಿಮಿಷದ ನಂತರ ತೊಳೆದುಕೊಳ್ಳಿ.

ಆಲೀವ್ ಎಣ್ಣೆ

ಆಲೀವ್ ಎಣ್ಣೆ

ಸಮಸ್ಯೆ ಇರುವ ಭಾಗಕ್ಕೆ ನೀವು ಆಲೀವ್ ಎಣ್ಣೆಯಿಂದ ಸಹ ಮಸಾಜ್ ಮಾಡಿಕೊಳ್ಳಬಹುದು. ಇದು ನಿಮ್ಮ ತ್ವಚೆಗೆ ಪೋಷಕಾಂಶಗಳನ್ನು ಒದಗಿಸಿ, ಅದರಲ್ಲಿರುವ ಸಮಸ್ಯೆಯನ್ನು ಬಗೆಹರಿಸುತ್ತದೆ. ಇದನ್ನು ನೀವು ಮಲಗುವ ಮುನ್ನ ಸಹ ಮಾಡಬಹುದು.

ಓಟ್ ಮೀಲ್

ಓಟ್ ಮೀಲ್

ಓಟ್ ಮೀಲ್ ಸಹ ನಿಮ್ಮ ತ್ವಚೆಗೆ ಒಳ್ಳೆಯ ಆರೈಕೆಯನ್ನು ನೀಡುತ್ತದೆ. ಬಿಸಿ ನೀರಿಗೆ ಸ್ವಲ್ಪ ಓಟ್ ಮೀಲ್ ಹಾಕಿ, ಅದನ್ನು ನೆನೆಯಲು ಬಿಡಿ. ನಂತರ ಅದರಿಂದ ನಿಮ್ಮ ಮುಖವನ್ನು ಮಸಾಜ್ ಮಾಡಿ, ಸ್ವಲ್ಪ ಸಮಯ ಬಿಟ್ಟು ತೊಳೆಯಿರಿ.

ಅಲೋವಿರಾ ಜೆಲ್

ಅಲೋವಿರಾ ಜೆಲ್

ಎಲ್ಲಿ ಷೇಫಿಂಗ್ ಸಮಸ್ಯೆ ಕಂಡುಬರುತ್ತದೆಯೋ, ಅಲ್ಲಿ ಅಲೋವಿರಾ ಜೆಲ್ ಅನ್ನು ಲೇಪಿಸಿ. ನಮಗೆಲ್ಲಾ ತಿಳಿದಿರುವಂತೆ ಅಲೋವಿರಾ ಜೆಲ್ ಎನ್ನುವುದು ತ್ವಚೆಯ ಸಮಸ್ಯೆಗಳಿಗೆ ಸಂಜೀವಿನಿ ಇದ್ದಂತೆ. ಇದನ್ನು ಬಳಸಿದರೆ ಷೇಫಿಂಗ್ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.

ಐಸ್ ಕ್ಯೂಬ್‍ಗಳು

ಐಸ್ ಕ್ಯೂಬ್‍ಗಳು

ಕೆಲವು ಐಸ್ ಕ್ಯೂಬ್‌ಗಳನ್ನು ತೆಗೆದುಕೊಳ್ಳಿ. ಅದನ್ನು ಬಟ್ಟೆಯಲ್ಲಿ ಸುತ್ತಿ, ನಿಮಗೆ ಸಮಸ್ಯೆ ಕಂಡುಬಂದಿರುವ ಭಾಗದಲ್ಲಿ ಇರಿಸಿ. ಇದನ್ನು ಐದು ನಿಮಿಷಗಳ ಕಾಲ ಮಾಡಿ, ನಂತರ 30 ನಿಮಿಷಗಳ ನಂತರ ಪುನರಾವರ್ತಿಸಿ...

English summary

7 Remedies To Treat Chafing In Summer

What's chafing? Well, when your clothes rub against your sensitive skin, that too repeatedly, your skin tends to get irritated and red. And of course, chafing is painful too. In summers, this problem will get worse as you tend to sweat more. When you have excess body fat, the problem gets aggravated as the friction would be more.
X
Desktop Bottom Promotion