ಅಂತಾರಾಷ್ಟ್ರೀಯ ಯೋಗ ದಿನ: ಆರೋಗ್ಯಕ್ಕಾಗಿ 16 ಯೋಗಾಸನಗಳು

ಯೋಗ ಎನ್ನುವುದು ನಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿರುವಂತಹ ಅತ್ಯಂತ ಪ್ರಾಚೀನ ಕಲೆ. ಇದು ಆಧುನಿಕ ವಿಜ್ಞಾನ ಮತ್ತು ಋಷಿಮುನಿಗಳ ಜ್ಞಾನದ ಸಂಯೋಜನೆ. ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಾವು ಮಾಡಲೇಬೇಕಾದ ಕೆಲವೊಂದು ಆಸನಗಳಿದ್ದು, ಇವುಗಳನ್ನು ಪ್ರಯತ್ನಿಸಿದರೆ ಇದು ನಿಮ್ಮನ್ನು ಆರೋಗ್ಯವಾಗಿಡಲು ಮತ್ತು ದೀರ್ಘಾವಧಿ ಜೀವನ ನಡೆಸಲು ನೆರವಾಗಲಿದೆ.

ಹೌದು ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ವಿಶೇಷ ಮಹತ್ವ ಪಡೆದುಕೊಂಡಿದ್ದ ಯೋಗವು ತೂಕ ಇಳಿಸಿಕೊಳ್ಳಲು ಹಾಗೂ ದೇಹವನ್ನು ಸದೃಢವಾಗಿಡಲು ವ್ಯಾಯಾಮಕ್ಕಿಂತಲೂ ಹೆಚ್ಚು ಪರಿಣಾಮಕಾರಿ. ಆಧುನಿಕ ವಿಜ್ಞಾನದೊಂದಿಗೆ ನಿಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ಇದು ಇತರ ವಿಧದ ವ್ಯಾಯಾಮಕ್ಕಿಂತ ಹೆಚ್ಚಿನ ಆರೋಗ್ಯ ಲಾಭ ನೀಡುತ್ತದೆ. ಯಾವುದೇ ಹೊಸ ವಿದ್ಯೆಯನ್ನು ಕಲಿಯುವಾಗ ಪ್ರಾರಂಭದಲ್ಲಿ ತೋರುವ ಉತ್ಸಾಹವನ್ನು ಮುಂದಿನ ದಿನಗಳಲ್ಲಿ ತೋರುವುದಿಲ್ಲ.

ಯೋಗಾಭ್ಯಾಸದಲ್ಲಿಯೂ ಹಾಗೇ, ಏಕೆಂದರೆ ಕೆಲವೊಂದು ಆಸನಗಳಿಗೆ (ಪದ್ಮಾಸನ, ಹಾಲಾಸನ) ಸ್ವಲ್ಪ ಕಷ್ಟಪಡಬೇಕಾಗಿರುವುದರಿಂದ ಜನರು ನಿಧಾನವಾಗಿ ಈ ತಂಟೆಯೇ ಬೇಡವೆಂದು ಯೋಗಾಸನದಿಂದ ವಿಮುಖರಾಗುತ್ತಾರೆ. ಆದರೆ ಯಾವುದೇ ಒಳ್ಳೆಯ ಕಾರ್ಯವಾಗಬೇಕಾದರೆ ಕೊಂಚ ಕಷ್ಟಪಡಬೇಕಾದುದು ಸಹಜ ಅಲ್ಲವೇ? ಬನ್ನಿ ಯೋಗಾಭ್ಯಾಸದ ಆರೋಗ್ಯಕಾರಿ ಪ್ರಯೋಜನಗಳೇನು ಎಂಬುದನ್ನು ನೋಡೋಣ...

1. ವೃಕ್ಷಾಸನ

1. ವೃಕ್ಷಾಸನ

ಮೆದುಳಿಗೆ ಯೋಗದ ಲಾಭವಾಗಲು ನೇರವಾಗಿ ನಿಂತುಕೊಳ್ಳಿ. ಬಲಕಾಲನ್ನು ಬಗ್ಗಿಸಿ, ಇದು ಎಡತೊಡೆಯ ಮೇಲಿರಲಿ ಮತ್ತು ಕಾಲ್ಬೆರಳುಗಳು ಕೆಳಮುಖವಾಗಿರಲಿ. ಕೈಗಳನ್ನು ತಲೆಯ ಮೇಲೆ ಕೊಂಡುಹೋಗಿ ನಮಸ್ಕಾರ ಮಾಡುವ ಭಂಗಿಯಲ್ಲಿರಲಿ.

2. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಯೋಗ ಮುದ್ರಾ

2. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಯೋಗ ಮುದ್ರಾ

ಯೋಗ ಮುದ್ರಾವು ರೋಗನಿರೋಧಕ ಶಕ್ತಿಯನ್ನು ಸುಧಾರಿಸಿ, ದೃಷ್ಟಿಯನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಆಯಾಸವನ್ನು ಹೋಗಲಾಡಿಸಿ ಹೆಚ್ಚು ಉಲ್ಲಾಸದಿಂದ ಇರಲು ನೆರವಾಗುತ್ತದೆ.

3. ಸೂರ್ಯ ನಮಸ್ಕಾರ

3. ಸೂರ್ಯ ನಮಸ್ಕಾರ

ಸೂರ್ಯ ನಮಸ್ಕಾರ ಎನ್ನುವುದು ಸುಮಾರು 12 ಯೋಗಾಸನಗಳನ್ನು ಒಳಗೊಂಡಿರುವ ಒಂದು ಭಂಗಿ. ಪ್ರತಿಯೊಂದು ಭಂಗಿಯೂ ನಿಮ್ಮ ದೇಹದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಹಿಂದೆ ಮತ್ತು ಮುಂದೆ ಬಾಗುವಿಕೆ ಹಿಗ್ಗುವಿಕೆಗೆ ನೆರವಾಗುತ್ತದೆ. ಈ ವೇಳೆ ದೀರ್ಘ ಉಸಿರಾಟ ತೆಗೆದುಕೊಳ್ಳುವುದರಿಂದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಅಲ್ಲದೆ ಸೂರ್ಯನ ಪ್ರಭಾತ ಕಿರಣಗಳಿಗೆ ಮೈಯೊಡ್ಡಿ ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ನಿಮಗೆ ಮಾನಸಿಕ ನೆಮ್ಮದಿ ದೊರೆತು ಮನ ಪ್ರಫುಲ್ಲಗೊಳ್ಳುತ್ತದೆ.

4. ಕೂದಲು ಉದುರಿವಿಕೆ ಸಮಸ್ಯೆಗೆ ರಾಮಬಾಣ ವಜ್ರಾಸನ

4. ಕೂದಲು ಉದುರಿವಿಕೆ ಸಮಸ್ಯೆಗೆ ರಾಮಬಾಣ ವಜ್ರಾಸನ

ಈ ಭಂಗಿಯಲ್ಲಿ ಕುಳಿತಾಗ ಮೈಕಟ್ಟು ವಜ್ರದಂತೆ ಗೋಚರಿಸುವುದರಿಂದ ಈ ಹೆಸರು ಬಂದಿದೆ. ಎರಡೂ ಪಾದಗಳ ಮೇಲೆ ನಿತಂಬ ನೇರವಾಗಿ ಬರುವಂತೆ ಕುಳಿತು, ಬೆನ್ನನ್ನು ನೆಟ್ಟಗೆ ಮಾಡಿ, ತಲೆಯನ್ನು ಬೆನ್ನು ಮೂಳೆಯ ನೇರಕ್ಕೆ ನಿಲ್ಲಿಸಿ ಕೈಗಳನ್ನು ತೊಡೆಗಳ ಮೇಲಿಟ್ಟು ದೀರ್ಘವಾದ ಉಸಿರನ್ನೆಳೆದುಕೊಂಡು ಆದಷ್ಟು ಹೊತ್ತು ಕಟ್ಟಿಕೊಂಡು ನಿಧಾನವಾಗಿ ಉಸಿರು ಬಿಡಬೇಕು. ಬಾಬಾ ರಾಮ್‌ದೇವ್ ರವರೇ ರೂಪಿಸಿದ ಈ ಆಸನದಿಂದ ಜೀರ್ಣಾಂಗಳ ಕಾರ್ಯಕ್ಷಮತೆ ಹೆಚ್ಚುತ್ತದೆ, ಕೂದಲು ಉದುರಿವಿಕೆಗೆ ಕಾರಣವಾಗುವ ಅಂಶಗಳು ಕಡಿಮೆಯಾಗುತ್ತದೆ. ಈ ಆಸನದಲ್ಲಿ ಕನಿಷ್ಟ ಒಂದು ನಿಮಿಷವಾದರೂ ಇರಬೇಕು. ಕಾಲಕ್ರಮೇಣ ಎರಡು ನಿಮಿಷಗಳಿಗೆ ಈ ಅವಧಿಯನ್ನು ವಿಸ್ತರಿಸಬಹುದು. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಎಷ್ಟು ಸಾರಿಯಾದರೂ ಪ್ರತಿದಿನ ಮಾಡಬಹುದು.

5. ಜೀರ್ಣಕ್ರಿಯೆ ಹೆಚ್ಚಿಸುವ ಪಾವನ್ಮುಕ್ತಾಸನ

5. ಜೀರ್ಣಕ್ರಿಯೆ ಹೆಚ್ಚಿಸುವ ಪಾವನ್ಮುಕ್ತಾಸನ

ಇದು ದೇಹದಲ್ಲಿ ಗ್ಯಾಸ್ ಕಡಿಮೆ ಮಾಡಿ ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ಬೆನ್ನಿನ ಸ್ನಾಯುಗಳಿಗೆ ಬಲ ನೀಡುತ್ತದೆ. ಅಷ್ಟೇ ಅಲ್ಲದೆ ಸೊಂಟ ಮತ್ತು ಹೊಟ್ಟೆಯ ಕೊಬ್ಬನ್ನು ನಿಯಂತ್ರಿಸುವುದರ ಜೊತೆಗೆ, ಜೀರ್ಣಕ್ರಿಯೆ ಸಮತೋಲನ ಹೆಚ್ಚಿಸಿ ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

6. ಹಾಲಾಸನ

6. ಹಾಲಾಸನ

ಈ ಆಸನವು ಯಾರು ದೀರ್ಘಕಾಲದವರೆಗೆ ಕುಳಿತು ಕೆಲಸ ಮಾಡುತ್ತಾರೋ ಅಂತಹವರಿಗೆ ಸಾಕಷ್ಟು ಸಹಾಯಕವಾಗಿದೆ. ಇದು ಥೈರಾಯ್ಡ್ ಗ್ರಂಥಿಗಳು, ಪ್ಯಾರಾಥೈರಾಯ್ಡ್ ಗ್ರಂಥಿಗಳು , ಶ್ವಾಸಕೋಶದ ಮತ್ತು ಕಿಬ್ಬೊಟ್ಟೆಯ ಭಾಗದ ಅಂಗಗಳನ್ನು ಪ್ರಚೋದಿಸುತ್ತದೆ. ಮುಖದಲ್ಲಿ ಮತ್ತು ತಲೆಯಲ್ಲಿ ರಕ್ತದ ಸಮಾನದ ಹಂಚಿಕೆಯನ್ನು ಕಾಯ್ದುಕೊಳ್ಳುವಂತೆ ಮಾಡುತ್ತದೆ. ಹಾಗೂ ಜೀರ್ಣಕ್ರಿಯೆಗೆ ಮತ್ತು ಹಾರ್ಮೋನ್ ಬದಲಾವಣೆಯ ನಿಯಂತ್ರಣಕ್ಕೆ ಈ ಭಂಗಿ ಸಹಾಯಕ. ನೆನಪಿನಲ್ಲಿಡಬೇಕಾದ ಅಂಶಗಳು: ನೀವು ಅಧಿಕ ರಕ್ತದೊತ್ತಡ, ಅತಿಸಾರ, ಯಕೃತ್ತಿನ ಅಸ್ವಸ್ಥತೆಯಿಂದ ಬಳಲುತ್ತಿದ್ದರೆ ಅಥವಾ ಕುತ್ತಿಗೆ ನೋವನ್ನು ಅನುಭವಿಸುತ್ತಿದ್ದರೆ ಈ ಆಸನವನ್ನು ಮಾಡಬೇಡಿ.

7. ಕುತ್ತಿಗೆ ಹಾಗೂ ಬೆನ್ನಿನ ಸ್ನಾಯುಗಳಿಗೆ ಸಹಾಯವಾಗುವ ಮತ್ಸ್ಯಾಸನ

7. ಕುತ್ತಿಗೆ ಹಾಗೂ ಬೆನ್ನಿನ ಸ್ನಾಯುಗಳಿಗೆ ಸಹಾಯವಾಗುವ ಮತ್ಸ್ಯಾಸನ

ಈ ಆಸನವು ನಿಮ್ಮ ಮುಖದ ಮೂಳೆಯ ವಿಶ್ರಾಂತಿಗೆ ಮತ್ತು ಕುತ್ತಿಗೆ ಮತ್ತು ಬೆನ್ನಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ಮುಖದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಜೊತೆಗೆ ರಕ್ತದಲ್ಲಿ ಆಮ್ಲನಜನಕದ ಪ್ರಮಾಣವನ್ನೂ ಹೆಚ್ಚಿಸುತ್ತದೆ.

8. ಕುಳಿತು ಮುಂದಕ್ಕೆ ಬಾಗುವುದು (ಪಶ್ಚಿಮೋತ್ತಾಸನ)

8. ಕುಳಿತು ಮುಂದಕ್ಕೆ ಬಾಗುವುದು (ಪಶ್ಚಿಮೋತ್ತಾಸನ)

ಪಶ್ಚಿಮೋತ್ತಾಸನವನ್ನು ಮಾಡಲು ಕಾಲುಗಳನ್ನು ನೇರವಾಗಿಟ್ಟುಕೊಂಡು ಕುಳಿತುಕೊಳ್ಳಿ, ಕೈಗಳು ನಿಮ್ಮ ದೇಹದ ಜೊತೆಗಿರಲಿ. ದೇಹವನ್ನು ಮುಂದಕ್ಕೆ ಬಗ್ಗಿಸಿ. ಮೂಳೆತುದಿಯನ್ನು ಉದ್ದವಾಗಿಸಿ ಮತ್ತು ಕಾಲ್ಬೆರಳುಗಳ ಕಡೆಪಶ್ಚಿಮೋತ್ತಾಸನವನ್ನು ಮಾಡಲು ಕಾಲುಗಳನ್ನು ನೇರವಾಗಿಟ್ಟುಕೊಂಡು ಕುಳಿತುಕೊಳ್ಳಿ, ಕೈಗಳು ನಿಮ್ಮ ದೇಹದ ಜೊತೆಗಿರಲಿ. ದೇಹವನ್ನು ಮುಂದಕ್ಕೆ ಬಗ್ಗಿಸಿ. ಮೂಳೆತುದಿಯನ್ನು ಉದ್ದವಾಗಿಸಿ ಮತ್ತು ಕಾಲ್ಬೆರಳುಗಳ ಕಡೆ ನಿಮ್ಮ ಕೈಗಳನ್ನು ವಿಸ್ತರಿಸಿ ನಿಮ್ಮ ಕೈಗಳನ್ನು ವಿಸ್ತರಿಸಿ

9. ಬೆನ್ನು ನೋವಿಗೆ ಯೋಗಾಸನ(ಬಿತಿಲಾಸನ)

9. ಬೆನ್ನು ನೋವಿಗೆ ಯೋಗಾಸನ(ಬಿತಿಲಾಸನ)

ನೆಲದಲ್ಲಿ ನೇರವಾಗಿ ಮಲಗಿ ಮತ್ತು ಕೈಗಳನ್ನು ನಿಧಾನವಾಗಿ ಮೇಲಕ್ಕೆತ್ತಿ. ನಿಮ್ಮ ಕೈಗಳು ನೇರವಾಗಿರುವ ತನಕ ನಿಮ್ಮ ದೇಹದ ಮೇಲ್ಭಾಗವನ್ನು ಮೇಲಕ್ಕೆತ್ತಿ ಮತ್ತು ಮೊಣಕಾಲಿನ ನೆರವು ಪಡೆದುಕೊಳ್ಳಿ.

10. ತೂಕ ಇಳಿಸಲು ಯೋಗಾಸನ(ಕುಂಡಿಲಿನಿ)

10. ತೂಕ ಇಳಿಸಲು ಯೋಗಾಸನ(ಕುಂಡಿಲಿನಿ)

ಈ ಯೋಗಾಸನವು ಸೊಂಟ ಮತ್ತು ತೊಡೆಯ ಬೊಜ್ಜನ್ನು ಕರಗಿಸುತ್ತದೆ. ದೃಢವಾದ ತೊಡೆ ಮತ್ತು ಸುಂದರ ಸೊಂಟ ಪಡೆಯಲು ಈ ಯೋಗಾಸನವು ನೆರವಾಗುತ್ತದೆ.

11. ಸುಂದರ ಸ್ತನಗಳಿಗಾಗಿ ಯೋಗಾಸನ(ಶಿರ್ಸಾಸನ)

11. ಸುಂದರ ಸ್ತನಗಳಿಗಾಗಿ ಯೋಗಾಸನ(ಶಿರ್ಸಾಸನ)

ಶಿರ್ಸವೆಂದರೆ ತಲೆ ಎಂದರ್ಥ. ಈ ಯೋಗಾಸನಕ್ಕಾಗಿ ವ್ಯಕ್ತಿಯು ತನ್ನ ತಲೆಯ ಮೇಲೆ ನಿಂತುಕೊಳ್ಳಬೇಕಾಗಿದೆ. ಈ ರೀತಿಯ ಭಂಗಿಯಲ್ಲಿ ಸ್ತನಗಳು ಗುರುತ್ವಾಕರ್ಷಣೆ ವಿರುದ್ಧದ ದಿಕ್ಕಿನಲ್ಲಿರುತ್ತದೆ. ಇದು ಸಾಮಾನ್ಯ ಭಂಗಿಗಿಂತ ಭಿನ್ನವಾಗಿರುತ್ತದೆ.

12. ಮಗುವಿನ ಜನನದ ಬಳಿಕ ತೂಕ ಕಳಕೊಳ್ಳಲು ಯೋಗಾಸನ (ಬ್ರಹ್ಮನ ಮಗನ ಭಂಗಿ)

12. ಮಗುವಿನ ಜನನದ ಬಳಿಕ ತೂಕ ಕಳಕೊಳ್ಳಲು ಯೋಗಾಸನ (ಬ್ರಹ್ಮನ ಮಗನ ಭಂಗಿ)

ನಿಮ್ಮ ಹೊಟ್ಟೆಯ ಸ್ನಾಯುಗಳಲ್ಲಿ ನೋವಿದ್ದರೆ ಇಂತಹ ಆಸನ ನಿಮಗೆ ನೆರವಾಗುತ್ತದೆ. ನಿಮ್ಮ ಕಾಲುಗಳನ್ನು ಉದ್ದಕ್ಕೆ ಚಾಚಿಕೊಂಡು ಕುಳಿತುಕೊಳ್ಳಿ. ಈಗ ಒಂದು ಕಾಲನ್ನು ಮಡಚಿ ಮತ್ತು ಕೈಗಳ ಒಳಗಿಡಿ. ನಿಮ್ಮ ಕೈಗಳನ್ನು ಹಿಂದಕ್ಕೆ ಕೊಂಡೊಹೋಗಿ ಬೆರಳುಗಳನ್ನು ಪರಸ್ಪರ ಎದುರುಬದುರಾಗಿಸಿ. ಸುಮಾರು 30 ನಿಮಿಷಗಳ ತನಕ ಹಾಗೆ ಇಡಿ ಮತ್ತು ಈ ಭಂಗಿಯನ್ನು ಮತ್ತೊಂದು ಭಂಗಿಯೊಂದಿಗೆ ಹಾಗೆ ಮುಂದುವರಿಸಿ.

13. ಗರ್ಭಾವಸ್ಥೆ ವೇಳೆ ಯೋಗಾಸನ

13. ಗರ್ಭಾವಸ್ಥೆ ವೇಳೆ ಯೋಗಾಸನ

ಗರ್ಭಾವಸ್ಥೆಯಲ್ಲಿ ಯೋಗ ನೀವು ಗರ್ಭಿಣಿಯಾಗಿದ್ದು ದೇಹರಚನೆ ಫಿಟ್ ಆಗಿರ ಬಯಸಿದರೆ ಯೋಗ ನಿಮಗೆ ಸಹಾಯ ಮಾಡಬಲ್ಲದು. ಗರ್ಭಾವಸ್ಥೆಯಲ್ಲಿ ಯೋಗ ಮಾಡುವುದರಿಂದ ದೇಹ ಹೆಚ್ಚು ಬಲಯುತವಾಗುವುದು.ಪ್ರತೀದಿನ ಯೋಗ ಮಾಡುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು, ಜೊತೆಗೆ ಆಂತರಿಕವಾಗಿ ಒಳ್ಳೆಯ ರಕ್ತ ಸಂಚಲನವಾಗುತ್ತದೆ. ಜೀರ್ಣಕ್ರಿಯೆ ಸುಲಭವಾಗುತ್ತದೆ, ಉಸಿರಾಟ ಮತ್ತು ನರಗಳ ನಿಯಂತ್ರಣವನ್ನು ಹತೋಟಿಯಲ್ಲಿಡುತ್ತದೆ. ಅಷ್ಟೇ ಅಲ್ಲದೆ ಗರ್ಭಾವಸ್ಥೆಯಲ್ಲಿ ಕಂಡುಬರುವ ನಿದ್ರಾಹೀನತೆ, ಬೆನ್ನು ನೋವು, ಅಜೀರ್ಣ ಕ್ರಿಯೆ, ಕಾಲು ಊದಿಕೊಳ್ಳುವುದನ್ನು ತಡೆಯುತ್ತದೆ. ಆದರೂ ತೊಡಕುಗಳನ್ನು ತಡೆಯಲು ಯೋಗ ಮಾಡುವ ಮೊದಲು ನಿಮ್ಮ ವೈದ್ಯರನ್ನೊಮ್ಮೆ ಕೇಳಿ ಸಲಹೆ ಪಡೆಯುವುದು ಒಳಿತು.

14. ಮಧುಮೇಹಿಗಳಿಗೆ ಯೋಗಾಸನ: ನವಿಲಿನ ಭಂಗಿ(ಮಯೂರಾಸನ)

14. ಮಧುಮೇಹಿಗಳಿಗೆ ಯೋಗಾಸನ: ನವಿಲಿನ ಭಂಗಿ(ಮಯೂರಾಸನ)

ಮಧುಮೇಹಿಗಳಿಗಾಗಿ ಇರುವ ಯೋಗಾಸನಗಳಲ್ಲಿ ಇದು ಒಂದು ಪ್ರಾಮುಖ್ಯ ಆಸನವಾಗಿದೆ. ಈ ಯೋಗ ಭಂಗಿ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತಮಪಡಿಸುತ್ತದೆ. ನಿಮ್ಮ ಕಣ್ಣಿನ ಶಕ್ರಿಯನ್ನು ಹೆಚ್ಚಿಸಿ, ಬೊಜ್ಜಿನ ವಿರುದ್ಧ ಹೋರಾಡಲು ಶಕ್ತಿಯುತವಾಗಿಸುತ್ತದೆ.

15. ತಲೆನೋವಿಗೆ ಯೋಗಾಸನ(ಪ್ರಾಸರಿತ ಪದೋತ್ಥಾಸನ)

15. ತಲೆನೋವಿಗೆ ಯೋಗಾಸನ(ಪ್ರಾಸರಿತ ಪದೋತ್ಥಾಸನ)

ಕಾಲುಗಳನ್ನು ಅಗಲವಾಗಿಸಿಕೊಳ್ಳುವ ಈ ಭಂಗಿಯು ನಿಮ್ಮ ರಕ್ತದ ಪರಿಚಲನೆಗೆ ನೆರವಾಗುತ್ತದೆ. ಕಾಲನ್ನು ಅಗಲವಾಗಿಸಿಕೊಂಡು ನಿಂತುಕೊಳ್ಳಿ. ಮೊಣಕಾಲುಗನ್ನು ಮಡಚಿ ತಲೆಯನ್ನು ನೆಲಕ್ಕೆ ತಾಗಿಸಿ.

16. ಪದ್ಮಾಸನ

16. ಪದ್ಮಾಸನ

ಪದ್ಮಾಸನದಿಂದ ಮೊಣಗಂಟಿನ ನೋವನ್ನೇ ಪ್ರಮುಖವಾಗಿ ಕಂಡವರು ಇದರ ಇತರ ಸದ್ಗುಣಗಳನ್ನು ನೋಡೇ ಇರಲಿಲ್ಲ. ಹಿಂದಿನ ಕಾಲದಲ್ಲಿ ಋಷಿಮುನಿಗಳು ಪದ್ಮಾಸನದಲ್ಲಿ ಕುಳಿತೇ ತಪಸ್ಸು ಮಾಡುತ್ತಾ ವರ್ಷಗಟ್ಟಲೆ ದಿನ ಕಳೆಯುತ್ತಿದ್ದರು. ಅವರ ದೇಹವನ್ನು ಸುಸ್ಥಿತಿಯಲ್ಲಿಡಲು ಪದ್ಮಾಸನ ನೆರವಾಗಿತ್ತು. ಈ ಸದ್ಗುಣಗಳನ್ನು ಅರಿತ ಯೋಗ ಶಿಕ್ಷಕರು ಪ್ರತಿದಿನ ನಿರಂತರವಾಗಿ ಕೊಂಚಕಾಲಕ್ಕಾದರೂ ಈ ಆಸನವನ್ನು ಅಭ್ಯಾಸ ಮಾಡಲು ತಿಳಿಸುತ್ತಾರೆ.

X
Desktop Bottom Promotion