Latest Updates
-
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಜೀವಕ್ಕೆ ಅಪಾಯವಾಗದಂತೆ ತಡೆಯಲು ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಬಿಸಿಲ ಬೇಗೆಯಲ್ಲಿ ದಂಪತಿಗಳ ನಡುವೆ ಹೆಚ್ಚಿದ ಕಿರಿಕಿರಿ: ಸಂಬಂಧ ಹಾಳಾಗದಂತೆ ತಡೆಯಲು ಈ ಟಿಪ್ಸ್ ಪಾಲಿಸಿ -
ಬಿಸಿಗಾಳಿಯ ಆರ್ಭಟಕ್ಕೆ ಹೆದರಬೇಡಿ: ಎಸಿ ಇಲ್ಲದಿದ್ದರೂ ನಿಮ್ಮ ಮನೆಯನ್ನು ಐಸ್ನಂತೆ ತಂಪಾಗಿರಿಸುವ ಅದ್ಭುತ ಟ್ರಿಕ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ ತಡೆಯಲು ಈ ಆಹಾರಗಳೇ ನಿಮ್ಮ ಬೆಸ್ಟ್ ಫ್ರೆಂಡ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರವಿರಲಿ! -
ಬಿಸಿಲ ಬೇಗೆಯಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ ಸಣ್ಣ ಬದಲಾವಣೆಗಳನ್ನು ಮಿಸ್ ಮಾಡ್ಬೇಡಿ! -
ಬಾಡಿಗೆ ಮನೆಯಲ್ಲಿ ಬಿಸಿಲಿನ ಬೇಗೆಯಿಂದ ಪಾರಾಗುವುದು ಹೇಗೆ? ಕರೆಂಟ್ ಬಿಲ್ ಉಳಿಸುವ ಸೀಕ್ರೆಟ್ ಟಿಪ್ಸ್ ಇಲ್ಲಿದೆ! -
ಬಿಸಿಲ ಬೇಗೆಯಲ್ಲಿ ಮಧುಮೇಹಿಗಳ ಪರದಾಟ: ಸಕ್ಕರೆ ಮಟ್ಟ ಏರಿಕೆಯಾಗದಂತೆ ತಂಪಾಗಿರಲು ಈ ಪಾನೀಯಗಳೇ ಮದ್ದು! -
ಇಂದೇ ಮ್ಯೂಸಿಯಂಗೆ ಹೋಗಿ: ಉಚಿತ ಪ್ರವೇಶದ ಜೊತೆಗೆ ಫೋಟೋಶೂಟ್ಗೆ ಸಿಗಲಿದೆ ಸುವರ್ಣಾವಕಾಶ, ಮಿಸ್ ಮಾಡ್ಬೇಡಿ! -
ಶಾಖದ ಅಲೆ ಎಚ್ಚರಿಕೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ, ಇಲ್ಲಿದೆ ಸುರಕ್ಷಿತ ಮಾರ್ಗ!
ಬೆಳ್ಳಂ ಬೆಳಿಗ್ಗೆ ಎದ್ದ ತಕ್ಷಣ ಲಿಂಬೆರಸ ಸೇರಿಸಿದ ನೀರು ಕುಡಿಯಲು ಮರೆಯದಿರಿ!
ಆಯುರ್ವೇದದಲ್ಲಿ ಬೆಳಿಗ್ಗೆದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಲಿಂಬೆರಸ ಸೇರಿಸಿದ ನೀರನ್ನು ಕುಡಿಯುವುದನ್ನು ಒಂದು ಚಿಕಿತ್ಸೆಯ ರೂಪದಲ್ಲಿ ನೀಡಲಾಗುತ್ತದೆ. ಲಿಂಬೆರಸ ಆಮ್ಲೀಯವಾಗಿದ್ದರೂ (ಸಿಟ್ರಿಕ್ ಆಮ್ಲ) ತನ್ನ ಬ್ಯಾಕ್ಟ್ರೀರಿಯಾಗಳ ವಿರುದ್ಧ ಹೋರಾಡುವ ಗುಣದಿಂದಾಗಿ ಆರೋಗ್ಯಕ್ಕೆ ಉತ್ತಮವಾಗಿದೆ.
ಇದರಲ್ಲಿ ಪ್ರಮುಖವಾಗಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೇ ತೂಕ ಇಳಿಸಲು, ಯಕೃತ್ ನಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲೂ ನೆರವಾಗುತ್ತವೆ. ಹಾಲು-ಅರಿಶಿನದ ಜೋಡಿ ಮಾಡಲಿದೆ ಕಮಾಲಿನ ಮೋಡಿ!
ಲಿಂಬೆರಸದಲ್ಲಿ ಮೆಗ್ನೀಶಿಯಂ, ಕ್ಯಾಲ್ಸಿಯಂ, ಪೆಕ್ಟಿನ್, ಬಯೋಫ್ಲವನಾಯ್ಡ್ ಮತ್ತು ಲಿಮೋನಿನ್ ಮೊದಲಾದ ಪ್ರಮುಖ ಪೋಷಕಾಂಶಗಳಿವೆ. ಇವೆಲ್ಲವೂ ಉತ್ತಮ ಆರೋಗ್ಯಕ್ಕೆ ಪೂರಕವಾಗಿವೆ. ಇದರ ಪ್ರಭಾವವನ್ನು ಪೂರ್ಣಪ್ರಮಾಣದಲ್ಲಿ ಪಡೆಯಲು ಸ್ವಲ್ಪ ಉಗುರುಬೆಚ್ಚನೆಯ ನೀರಿನಲ್ಲಿ ಬೆಳಿಗ್ಗೆದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಕುಡಿಯುವುದು ಉತ್ತಮ. ಒಂದು ಲೋಟ ನೀರಿಗೆ ಚಿಕ್ಕ ಲಿಂಬೆಯಾದರೆ ಒಂದು, ದೊಡ್ಡದಾದರೆ ಅರ್ಧ ಲಿಂಬೆಯ ರಸ ಸಾಕು. ಇದರ ಪ್ರಯೋಜನಗಳನ್ನು ಇಲ್ಲಿ ವಿವರಿಸಲಾಗಿದೆ. ಹಚ್ಚ ಹಸಿರು ಬೀನ್ಸ್‌ನಲ್ಲಿ ಅಡಗಿದೆ ತೂಕ ಇಳಿಸುವ ರಹಸ್ಯ!

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
ಲಿಂಬೆಯಲ್ಲಿ ಪ್ರಮುಖವಾಗಿರುವ ವಿಟಮಿನ್ ಸಿ ಮತ್ತು ಪೊಟ್ಯಾಶಿಯಂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಶೀತ ಕೆಮ್ಮು ಮೊದಲದವುಗಳು ಕಡಿಮೆಯಾಗಲು ನೆರವಾಗುತ್ತದೆ. ಜೊತೆಗೇ ನರಮಂಡಲದ ವ್ಯವಸ್ಥೆಯನ್ನು ಉದ್ದೀಪನಗೊಳಿಸುವ ಮೂಲಕ ರಕ್ತಪರಿಚಲನೆ ಸುಗಮಗೊಂಡು ರಕ್ತದೊತ್ತಡ ಕಡಿಮೆಯಾಗುತ್ತದೆ. ವಿಟಮಿನ್ ಸಿ ಯಲ್ಲಿರುವ ಉರಿಯೂತನಿವಾರಕ (anti-inflammatory) ಗುಣದಿಂದ ಶ್ವಾಸಸಂಬಂಧಿ ರೋಗಗಳಾದ ಅಸ್ತಮಾ ಮತ್ತಿತರ ರೋಗಗಳು ಕಡಿಮೆಯಾಗುತ್ತದೆ.

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ
ಲಿಂಬೆರಸ ಸೇರಿಸಿದ ನೀರನ್ನು ಪ್ರಥಮವಾಗಿ ಕುಡಿಯುವುದರಿಂದ ಜೀರ್ಣಾಂಗಗಳಲ್ಲಿ ಜೀರ್ಣಿಸಿಕೊಳ್ಳುವ ಕ್ಷಮತೆ ಹೆಚ್ಚುತ್ತದೆ. ಇದರಲ್ಲಿರುವ ವಿವಿಧ ಖನಿಜಗಳು ಮತ್ತು ವಿಟಮಿನ್ನುಗಳು ದೇಹಕ್ಕೆ ಅಗತ್ಯವಾದ ಶಕ್ತಿ ಮತ್ತು ಪೋಷಕಾಂಶಗಳನ್ನು ನೀಡಿ ಬೆಳಗ್ಗಿನ ಅಗತ್ಯವನ್ನು ಪೂರೈಸುತ್ತವೆ. ಜೊತೆಗೇ ಕಳೆದ ದಿನದ ಆಹಾರ ಜೀರ್ಣಿಸಿಕೊಳ್ಳುವಾಗ ಉದ್ಭವವಾಗಿದ್ದ ವಾಯುಪ್ರಕೋಪ, ಹೊಟ್ಟೆ ಉಬ್ಬಿಕೊಳ್ಳುವುದು, ಹೊಟ್ಟೆಯಲ್ಲಿ ಉರಿ ಮೊದಲಾದ ತೊಂದರೆಯನ್ನು ನಿವಾರಿಸುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ
ಲಿಂಬೆರಸದಲ್ಲಿರುವ ಪೆಕ್ಟಿನ್ ಎಂಬ ಪೋಷಕಾಂಶ ವಾಸ್ತವವಾಗಿ ಒಂದು ಕರಗುವ ನಾರು ಆಗಿದ್ದು ರಾತ್ರಿ ನಿದ್ದೆಯ ಸಮಯದಲ್ಲಿ ಹೊಟ್ಟೆ ಬಿಗಿದುಕೊಂಡಿರುವುದನ್ನು ಸಡಿಲಗೊಳಿಸುತ್ತದೆ. ಇದರಿಂದಾಗಿ ಹೊಟ್ಟೆ ಮುಂದೆ ಬರುವ ಆಹಾರವನ್ನು ಇನ್ನಷ್ಟು ಶೀಘ್ರವಾಗಿ ಅರಗಿಸಿಕೊಳ್ಳಲು ಶೇಖರವಾಗಿದ್ದ ಕೊಬ್ಬನ್ನು ಬಳಸಿಕೊಳ್ಳುತ್ತದೆ. ಪರಿಣಾಮವಾಗಿ ತೂಕ ಇಳಿಯುತ್ತದೆ. ವಿಶೇಷವಾಗಿ ಕ್ಷಾರೀಯ ಆಹಾರಗಳನ್ನು ಸೇವಿಸಿದಾಗ ಈ ಪರಿಣಾಮ ಇನ್ನಷ್ಟು ಹೆಚ್ಚುವುದರಿಂದ ತೂಕ ಬೇಗನೇ ಇಳಿಯುತ್ತದೆ.

ಪಿಎಚ್ ಮಟ್ಟವನ್ನು ನಿಯಂತ್ರಿಸುತ್ತದೆ
ನಮ್ಮ ಜಠರರಸ ಆಮ್ಲೀಯವಾಗಿದ್ದು ಆಹಾರ ಸಾಕಷ್ಟು ಕ್ಷಾರೀಯವಾಗಿದ್ದರೆ ಮಾತ್ರ ಜೀರ್ಣಕ್ರಿಯೆಯ ಬಳಿಕ ದ್ರವ ನಿರಪಾಯಕವಾಗಿರುತ್ತದೆ. ಒಂದು ವೇಳೆ ಆಹಾರವೂ ಆಮ್ಲೀಯವಾಗಿದ್ದರೆ ಅಥವಾ ಕ್ಷಾರೀಯವಾಗಿದ್ದರೆ ಜೀರ್ಣವಾದ ಆಹಾರವೂ ಆಮ್ಲೀಯ ಅಥವಾ ಕ್ಷಾರೀಯವಾಗಿರುತ್ತದೆ. ಲಿಂಬೆಯಲ್ಲಿರುವ ವಿವಿಧ ಖನಿಜಗಳು ಈ ಆಮ್ಲೀಯತೆ ಅಥವಾ ಕ್ಷಾರೀಯತೆಯನ್ನು ತಟಸ್ಥಗೊಳಿಸಿವುದುದರಿಂದ ಅರಗಿದ ಆಹಾರ ನಿಧಾನವಾಗಿ ಸಾಮಾನ್ಯಮಟ್ಟದ ಪಿಎಚ್ ಮಟ್ಟವನ್ನು ಪಡೆಯಲು ಸಾಧ್ಯವಾಗುತ್ತದೆ. ಹೊಟ್ಟೆಯಲ್ಲಿ ಆಹಾರ ಆಮ್ಲೀಯ ಅಥವಾ ಕ್ಷಾರೀಯವಾಗುವುದರಿಂದ ಹೊಟ್ಟೆಯಲ್ಲಿ ಉರಿ, ನೋವು ಹುಳಿತೇಗು, ಹೊಟ್ಟೆಯುಬ್ಬರ ಮೊದಲಾದ ತೊಂದರೆಗಳು ಎದುರಾಗುತ್ತವೆ. ಬೆಳಗ್ಗಿನ ಲಿಂಬೆರಸದ ಸೇವನೆ ಈ ತೊಂದರೆಗಳಿಂದ ಮುಕ್ತಿ ನೀಡುತ್ತದೆ.

ಅಡ್ರಿನಲ್ ಮತ್ತು ಥೈರಾಯ್ಡ್ ಗ್ರಂಥಿಗಳ ಸುಗಮ ಸ್ರವಿಕೆಗೆ ನೆರವಾಗುತ್ತದೆ
ಲಿಂಬೆರಸವು ದುಗ್ಧಗ್ರಂಥಿಗಳ ಕಾರ್ಯನಿರ್ವಹಣೆಗೆ ನೆರವಾಗುವುದರಿಂದ ಅಗತ್ಯಪಮಾಣಕ್ಕಿಂತಲೂ ಕಡಿಮೆ ಇರುವ ದ್ರವವನ್ನು ಪೂರೈಸಲು ನೆರವಾಗುತ್ತದೆ. ಇದರಿಂದಾಗಿ ದುಗ್ದಗ್ರಂಥಿಗಳು ಪೂರ್ಣಕ್ಷಮತೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಪರಿಣಾಮವಾಗಿ ಅಡ್ರಿನಲ್ ಮತ್ತು ಥೈರಾಯ್ಡ್ ಗ್ರಂಥಿಗಳು ಅಗತ್ಯಪ್ರಮಾಣದಲ್ಲಿ ಹಾರ್ಮೋನುಗಳನ್ನು ಸ್ರವಿಸಿ ಉತ್ತಮ ಆರೋಗ್ಯ ಮತ್ತು ಶಕ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ.

ಚರ್ಮದ ಕಾಂತಿ ಹೆಚ್ಚುತ್ತದೆ
ಲಿಂಬೆರಸ ಉತ್ಕರ್ಷಣ ನಿರೋಧಕ (antioxidant) ಗುಣವನ್ನು ಹೊಂದಿರುವುದರಿಂದ ಚರ್ಮ ಸ್ವಾಭಾವಿಕ ಸೆಳೆತದಲ್ಲಿರಲು ನೆರವಾಗುತ್ತದೆ. ಇದರಿಂದ ಚರ್ಮದಲ್ಲಿ ನೆರಿಗೆಗಳು ಮೂಡುವುದು ಕಡಿಮೆಯಾಗುತ್ತದೆ ಹಾಗೂ ಕಾಂತಿಯೂ ಹೆಚ್ಚುತ್ತದೆ. ಆಹಾರದಲ್ಲಿರುವ ಕ್ಷಾರೀಯ ದ್ರವ ರಕ್ತದಲ್ಲಿ ಸೇರಿದರೆ ಮುಖದ ಚರ್ಮದಲ್ಲಿ ಬ್ಯಾಕ್ಟೀರಿಯಾಗಳು ಆಕ್ರಮಣ ನಡೆಸಿ ಮೊಡವೆಗಳು ಉಂಟಾಗುತ್ತದೆ. ಲಿಂಬೆರಸದ ಸೇವೆನೆಯಿಂದ ಪ್ರಥಮ ಹಂತದಲ್ಲಿಯೇ ಆಹಾರದ ಕ್ಷಾರೀಯ ದ್ರವ ತನ್ನ ಪ್ರಭಾವ ಕಳೆದುಕೊಳ್ಳುವುದರಿಂದ ಈ ತೊಂದರೆಗೆ ಸಿಲುಕಿಕೊಳ್ಳುವುದು ತಪ್ಪುತ್ತದೆ. ಇದರ ಪರಿಣಾಮವನ್ನು ಒಂದು ತಿಂಗಳಿನಲ್ಲಿಯೇ ಗಮನಿಸಬಹುದು.

ಬಾಯಿ ಮತ್ತು ದವಡೆಗಳು ಸುಸ್ಥಿತಿಯಲ್ಲಿರುತ್ತವೆ
ಲಿಂಬೆರಸದಲ್ಲಿರುವ ಅಸ್ಕಾರ್ಬಿಕ್ ಆಮ್ಲ ಬಾಯಿಯ ದುರ್ವಾಸನೆಗೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದರಿಂದ ದುರ್ವಾಸನೆಯ ತೊಂದರೆ ಕಡಿಮೆಯಾಗುತ್ತದೆ. ಜೊತೆಗೇ ಹಲ್ಲುನೋವು ಮತ್ತು ಪರಿದಂತದ (gingivitis) ತೊಂದರೆಯಿಂದಲೂ ಮುಕ್ತಿ ಪಡೆಯಬಹುದು. ಆದರೆ ಲಿಂಬೆರಸ ಆಮ್ಲೀಯವಾದುದರಿಂದ ಒಸಡುಗಳು ಶೀಘ್ರವಾಗಿ ಸವೆಯುತ್ತದೆ. ಇದಕ್ಕಾಗಿ ಹೆಚ್ಚು ಕಾಲ ಈ ನೀರನ್ನು ಬಾಯಲಿಟ್ಟುಕೊಳ್ಳದೇ ಶೀಘ್ರವಾಗಿ ಕುಡಿಯಬೇಕು.

ಕರುಳನ್ನು ಸ್ವಚ್ಛವಾಗಿಸುತ್ತದೆ
ಅನಿಯಮಿತ ಕರುಳಿನ ಚಲನೆಗಳಿಗೆ ಲಿಂಬೆ ನೀರನ್ನು ಸೇವಿಸುವುದು ನೈಸರ್ಗಿಕ ಪರಿಹಾರವಾಗಿದೆ. ಜೀರ್ಣಕ್ರಿಯೆಗೆ ಸಹಕಾರಿಯಾಗಿರುವ ಇದು ವಿಷಕಾರಿ ಅಂಶಗಳನ್ನು ನಿವಾರಿಸುತ್ತದೆ ಮತ್ತು ಕರುಳಿನ ಚಲನೆಯನ್ನು ನಿಯಮಿತವಾಗಿಸುತ್ತದೆ.

ಹಾನಿಕಾರಕ ರಾಸಾಯನಿಕಗಳನ್ನು ನಾಶಮಾಡುತ್ತದೆ
ಲಿಂಬೆಯಲ್ಲಿರುವ ಸಿಟ್ರಸ್ ಅಂಶ ದೇಹವನ್ನು ನೈಸರ್ಗಿಕವಾಗಿ ಸ್ವಚ್ಛಮಾಡುತ್ತದೆ. ಇದು ವಿಟಮಿನ್ ಸಿ ಭರಿತವಾಗಿದ್ದು ಹಾನಿಕಾರಕ ರಾಸಾಯನಿಕಗಳನ್ನು ನಾಶಮಾಡುತ್ತದೆ.

ಫೈಬರ್ ಮತ್ತು ಇತರ ಆರೋಗ್ಯಕರವಾದ ಹಣ್ಣು
ಫೈಬರ್ ಮತ್ತು ಇತರ ಆರೋಗ್ಯಕರ ವಿಟಮಿನ್ ಲಿಂಬೆ ಹಣ್ಣಿನಲ್ಲಿ ಅಧಿಕವಾಗಿದ್ದು, ನಿಯಮಿತವಾಗಿ ಇದರ ಸೇವನೆ ಆರೋಗ್ಯಕ್ಕೆ ಉತ್ತಮ.

ಕೊಲೆಸ್ಟ್ರಾಲ್ ಅನ್ನು ದೂರವಿರುಸುತ್ತದೆ
ಕೊಲೆಸ್ಟ್ರಾಲ್ ಅನ್ನು ದೇಹದಿಂದ ಹೊರಹಾಕುವಲ್ಲಿ ಸಹಕಾರಿ. ದೇಹದಿಂದ ಹಾನಿಕಾರಿ ವೈರಸ್‌ಗಳನ್ನು ಹೊರದಬ್ಬಿ ರಕ್ತವನ್ನು ಕರುಳನ್ನು ಸ್ವಚ್ಛಮಾಡುವಲ್ಲಿ ಸಹಕಾರಿಯಾಗಿದೆ.



Click it and Unblock the Notifications