Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಊಟದ ರುಚಿಯನ್ನು ಹೆಚ್ಚಿಸುವ ಉಪ್ಪಿನಕಾಯಿ ಆರೋಗ್ಯಕ್ಕೆ ಮಾರಕವೇ?
ಮನಸ್ಸಿಗೆ ಅತ್ಯಂತ ತಟ್ಟುವ ಊಟವೆಂದರೆ ಯಾವುದೆಂದು ಹೇಳಬಲ್ಲಿರಾ? ಪಂಚತಾರಾ ಹೋಟೇಲಿನ ಬಫೆ, ಕಾಮತ್ ಹೋಟೆಲಿನ ಪ್ಲೇಟ್ ಊಟ, ಸುಖ್ ಸಾಗರ್ ನ ಉತ್ತರ ಭಾರತೀಯ ಅಡುಗೆ, ಆಂಧ್ರ ಸ್ಟೈಲ್ ಫುಲ್ ಮೀಲ್ಸ್, ತಾಜ್ ಹೋಟೆಲಿನ ಬಿರಿಯಾನಿ..... ಇನ್ನು ಎಷ್ಟು ಊಟಗಳನ್ನು ಬೇಕಾದರೂ ಪ್ರಸ್ತಾಪಿಸಿ.
ಮೊದಲ ಮಳೆ ಧೋರೆಂದು ಸುರಿಯುತ್ತಿರುವಾಗ ಮನೆಯಲ್ಲಿ ಬೆಚ್ಚಗೆ ಕುಳಿತು ಕುಚ್ಚಲಕ್ಕಿಯ ಬಿಸಿಬಿಸಿ ಗಂಜಿ, ಮೀನಿನ ಸಾರು ಅಥವಾ ಖಾರವಾದ ಸಾಂಬಾರು ಮತ್ತು ನಂಜಿಕೊಳ್ಳಲು ಉಪ್ಪಿನಕಾಯಿ ಈ ಸರಳ ಊಟ ಮೇಲಿನ ಎಲ್ಲಾ ಊಟಗಳಿಗಿಂತಲೂ ಹೆಚ್ಚಿನ ತೃಪ್ತಿ ನೀಡುತ್ತದೆ. ಯಾವುದೇ ಊಟವಾದರೂ ರುಚಿಯನ್ನು ಹೆಚ್ಚಿಸುವುದೇ ಒಂದು ಚಿಕ್ಕ ಚಮಚದಷ್ಟು ಉಪ್ಪಿನಕಾಯಿ. ಊಟಕ್ಕಿಲ್ಲದ ಉಪ್ಪಿನಕಾಯಿ ಎಂಬ ವಿಶೇಷಣವನ್ನು ಪ್ರತಿದಿನವೂ ವೃತ್ತಪತ್ರಿಕೆಗಳಲ್ಲಿ ಓದುತ್ತೇವೆ.
ಅತ್ಯಂತ ಜನಪ್ರಿಯವಾದ ಮಾವಿನ ಉಪ್ಪಿನಕಾಯಿಯಿಂದ ಹಿಡಿದು ಕ್ಯಾರೆಟ್, ಬೀಟ್ರೂಟ್, ನಿಂಬೆ, ನೆಲ್ಲಿಕಾಯಿ, ಶುಂಠಿ, ಬೆಳ್ಳುಳ್ಳಿ, ಬದನೆ ಮೊದಲಾದ ತರಕಾರಿಗಳೂ, ಮೀನಿನ, ಮಾಂಸದ ಉಪ್ಪಿನಕಾಯಿಗಳೂ ಇಂದು ನಮಗೆ ಲಭ್ಯವಿವೆ. ಅಷ್ಟೇ ಏಕೆ, ಸಾಗರ ಉತ್ಪನ್ನಗಳಾದ ಸಿಗಡಿ, ಚಿಪ್ಪು ಮೊದಲಾದವುಗಳಿಂದಲೂ ಉಪ್ಪಿನಕಾಯಿಯನ್ನು ತಯಾರಿಸಿ ಚಪ್ಪರಿಸುತ್ತಿದ್ದೇವೆ.
ಆದರೆ ಈ ಉಪ್ಪಿನಕಾಯಿಯನ್ನು ಉಪ್ಪಿನಕಾಯಿಯಂತೆಯೇ ನೆಂಜಿಕೊಳ್ಳಬೇಕೇ ಹೊರತು ಊಟದಂತೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು. ಏಕೆಂದರೆ ಉಪ್ಪಿನಕಾಯಿ ತಯಾರಿಸಲು ಅಗತ್ಯವಿರುವ ಸಾಮಾಗ್ರಿಗಳಲ್ಲಿ ಉಪ್ಪು, ಎಣ್ಣೆ, ಶಿರ್ಕಾ (ಸಂರಕ್ಷಕವಾಗಿ ಬಳಕೆಯಾಗುತ್ತದೆ), ಇಂಗು ಮೊದಲಾದವು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಹಾಗಲಕಾಯಿ ಜ್ಯೂಸ್‌ನಲ್ಲಿದೆ 15 ಆರೋಗ್ಯಕರ ಪ್ರಯೋಜನಗಳು
ಹೆಚ್ಚು ಉಪ್ಪಿನಕಾಯಿ ತಿಂದಷ್ಟೂ ಈ ವಸ್ತುಗಳೂ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ದೇಹಕ್ಕೆ ಸೇರಿ ಹಾನಿಯುಂಟುಮಾಡುತ್ತವೆ. ಆದ್ದರಿಂದ ಪಂಚಭಕ್ಷ್ಯ ಪರಮಾನ್ನದಲ್ಲಿ ವಿವರಿಸಿದಂತೆ ಒಂದು ಚಮಚದಷ್ಟು ಮಾತ್ರ ಉಪ್ಪಿನಕಾಯಿ ಉತ್ತಮ. ಆದರೂ ಆಹಾರತಜ್ಞರ ಪ್ರಕಾರ ಪ್ರತಿದಿನವೂ ಉಪ್ಪಿನಕಾಯಿಯನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ! ಶಿರ್ಕಾ, ಇಂಗು ಉಪಯೋಗಿಸದ, ಕಡಿಮೆ ಎಣ್ಣೆ ಮತ್ತು ಉಪ್ಪು ಉಪಯೋಗಿಸಿದ ಉಪ್ಪಿನಕಾಯಿ ಆರೋಗ್ಯಕ್ಕೆ ಉತ್ತಮ. ಆದರೆ ರುಚಿಯ ಕಾರಣ ಎಲ್ಲರೂ ಅಪಾಯಕಾರಿಯಾದ ಉಪ್ಪಿನಕಾಯಿಯನ್ನೇ ನೆಂಜಿಕೊಳ್ಳುವ ಖಯಾಲಿಯನ್ನು ತಡೆಯಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಮಧುಮೇಹಕ್ಕೆ ಮಾರಕ
ಉಪ್ಪಿನಕಾಯಿ ದೀರ್ಘಕಾಲ ಕೆಡದಂತೆ ಉಳಿಯಲು ಹಲವು ಸಂರಕ್ಷಕಗಳನ್ನು ಉಪಯೋಗಿಸಲಾಗುತ್ತದೆ. ಈ ಸಂರಕ್ಷಕಗಳು ಮಧುಮೇಹಿಗಳಿಗೆ ಅತ್ಯಂತ ಮಾರಕವಾಗಿವೆ. ಆದುದರಿಂದ ಮಧುಮೇಹಿಗಳು (ಟೈಪ್ 1 ಮತ್ತು ಟೈಪ್ 2 ಎರಡೂ ವಿಧಗಳಿಗೆ ಅನ್ವಯ) ಉಪ್ಪಿನಕಾಯಿಯಿಂದ ದೂರವಿರುವುದೇ ಕ್ಷೇಮ.

ಹೆಚ್ಚುವ ಟ್ರೈಗ್ಲಿಸರೈಡ್ ಮಟ್ಟ-ಆರೋಗ್ಯಕ್ಕೆ ಹಾನಿಕರ
ಉಪ್ಪಿನಕಾಯಿಯನ್ನು ತುಂಬಾಕಾಲ ಕೆಡದಂತಿಡಲು ಹಿಂದೆ ಜಾಡಿಯಲ್ಲಿ ಅತಿಹೆಚ್ಚಿನ ಲಿಂಬೆಹಣ್ಣುಗಳೊಂದಿಗೆ ಇಡಲಾಗುತ್ತಿತ್ತು. ಇಂದು ಅದರ ಬದಲಿಗೆ ಕೃತಕ ರಾಸಾಯನಿಕಗಳನ್ನು ಉಪಯೋಗಿಸಲಾಗುತ್ತಿದೆ. ಈ ರಾಸಾನಯಿಕಗಳು ಉಪ್ಪಿನಕಾಯಿಯನ್ನು ಹೆಚ್ಚುಕಾಲ ಕೆಡದಂತೆ ಇರಿಸಿದರೂ, ದೇಹದಲ್ಲಿ ಉತ್ಪತ್ತಿಯಾಗುವ ಟ್ರೈಗ್ಲಿಸರೈಡ್ ಗಳ ಕಾರಣ ಆರೋಗ್ಯ ಕೆಡುತ್ತದೆ. ಕೆಲವೊಮ್ಮೆ ಅಗ್ಗ ಎಂಬ ಕಾರಣಕ್ಕೆ ಹೆಚ್ಚು ಕೊಲೆಸ್ಟ್ರಾಲ್ ಇರುವ ಎಣ್ಣೆಯನ್ನು ಉಪಯೋಗಿಸಿಯೂ ಆರೋಗ್ಯ ಹಾಳಾಗಬಹುದು.

ಜೀರ್ಣಕ್ರಿಯೆಗೆ ಮಾರಕ
ಒಂದು ವೇಳೆ ಒಂದು ಚಮಚಕ್ಕಿಂತ ಹೆಚ್ಚಿನ ಉಪ್ಪಿನಕಾಯಿಯನ್ನು ಸೇವಿಸಿದರೆ ಜಠರ ಮತ್ತು ಕರುಳುಗಳಲ್ಲಿ ಈ ರಾಸಾಯನಿಕಗಳು ಜೀರ್ಣರಸದೊಡನೆ ಮಿಳಿತಗೊಂಡು ಅವುಗಳನ್ನು ಶಕ್ತಿರಹಿತವಾಗಿಸುತ್ತವೆ. ಬಳಿಕ ಆಹಾರಕ್ಕೆ ಈ ಜೀರ್ಣರಸಗಳು ಸಾಕಾಗದೇ ಅಜೀರ್ಣತೆ ಮತ್ತು ಇದರ ಕಾರಣದಿಂದ ಹಲವು ಇತರ ತೊಂದರೆಗಳು ಉದ್ಭವಿಸುತ್ತವೆ. ಹೊಟ್ಟೆ ಮತ್ತು ಆಸನದಲ್ಲಿ ಉರಿ, ಅತಿಸಾರ, ಕರುಳಿನಲ್ಲಿ ಹುಣ್ಣು ಮೊದಲಾದ ತೊಂದರೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ.

ಹೊಟ್ಟೆ ಉಬ್ಬರಿಕೆಗೆ ಕಾರಣವಾಗುತ್ತದೆ
ಉಪ್ಪಿನಕಾಯಿಯ ಮುಖ್ಯ ಸಾಮಾಗ್ರಿಯಾದ ಉಪ್ಪು ನಮಗೆ ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ ಸಾಕು. ವೈದ್ಯರ ಪ್ರಕಾರ ನಮಗೆ ಅಗತ್ಯವಿರುವುದು 3.75ಗ್ರಾಂ ಉಪ್ಪು. ಅತಿಹೆಚ್ಚು ಅಂದರೆ ಆರು ಗ್ರಾಂ ಸೇವಿಸಬಹುದು (ಅದೂ ಪ್ರತಿದಿನ ಅಲ್ಲ). ಒಂದು ಚಮಚ ಉಪ್ಪಿನಕಾಯಿಯಲ್ಲಿ ಸುಮಾರು ನಾಲ್ಕು ಗ್ರಾಂನಷ್ಟು ಉಪ್ಪು ಇರುತ್ತದೆ. ಇದರ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಲವಣ ನಮ್ಮ ದೇಹವನ್ನು ಸೇರುತ್ತದೆ. ಈ ಸೋಡಿಯಂ ಲವಣವನ್ನು ಕರಗಿಸಲು ನಮ್ಮ ಜಠರಕ್ಕೆ ಹೆಚ್ಚಿನ ನೀರಿನ ಅಗತ್ಯವಿದೆ. (ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂಬ ಗಾದೆಗೆ ಇದೇ ಕಾರಣ).

ಹೊಟ್ಟೆ ಉಬ್ಬರಿಕೆಗೆ ಕಾರಣವಾಗುತ್ತದೆ
ಆಹಾರದ ಮೂಲಕ ಲಭ್ಯವಾದ ನೀರನ್ನು ಈ ಕಾರ್ಯಕ್ಕೆ ಬಳಸಿಕೊಂಡಾಗ ಆಹಾರದ ಪಚನಕ್ರಿಯೆಯಲ್ಲಿ ನೀರಿನ ಕೊರತೆಯುಂಟಾಗಿ ಹಲವು ಪ್ರತ್ಯಾಮ್ಲ ಮತ್ತು ಅನಿಲಗಳು ಬಿಡುಗಡೆಯಾಗುತ್ತವೆ. ಇವು ಹೊಟ್ಟೆಯನ್ನು ಉಬ್ಬರಿಸಿ ಹುಳಿತೇಗು, ಹೊಟ್ಟೆಯಲ್ಲಿ ಉರಿ ಮೊದಲಾದ ತೊಂದರೆಗಳಿಗೆ ಕಾರಣವಾಗುತ್ತವೆ. ಹೆಚ್ಚಿನ ಪ್ರಮಾಣದಲ್ಲಿ ಈ ತೊಂದರೆ ಉಂಟಾದರೆ ವೈದ್ಯರ ಬಳಿ ಹೋಗುವುದು ಅನಿವಾರ್ಯವಾಗುತ್ತದೆ.

ರಕ್ತದೊತ್ತಡ ಹೆಚ್ಚುತ್ತದೆ
ಉಪ್ಪಿನಕಾಯಿಯೊಂದಿಗೆ ದೇಹ ಸೇರುವ ಉಪ್ಪು ರಕ್ತದೊತ್ತಡ ಹೆಚ್ಚಲೂ ಕಾರಣವಾಗಿದೆ. ಆನುವಂಶೀಯವಾಗಿ ಹೆಚ್ಚಿನ ರಕ್ತದೊತ್ತಡದ ತೊಂದರೆ ಇರುವವರು ಉಪ್ಪಿನಕಾಯಿಯ ತಂಟೆಗೇ ಹೋಗದಿರುವುದು ವಾಸಿ.

ಕರುಳಿನ ಹುಣ್ಣು (ಅಲ್ಸರ್) ಉಂಟಾಗಲು ಕಾರಣವಾಗುತ್ತದೆ
ಉಪ್ಪಿನಕಾಯಿಗೆ ಖಾರ ನೀಡಲು ಮೆಣಸಿನ ಕಾಯಿಯನ್ನು ಉಪಯೋಗಿಸಲಾಗುತ್ತದೆ. ಈ ಮೆಣಸು ಶಿರ್ಕಾ ಮತ್ತು ಇಂಗಿನೊಡನೆ ಸಂಯೋಜನೆಗೊಂಡಾಗ ಅತ್ಯಂತ ಖಾರವಾಗುತ್ತದೆ. ಮೆಣಸು ಕರಗಿರುವ ಈ ದ್ರವ ನಮ್ಮ ಜಠರ ಮತ್ತು ಕರುಳುಗಳ ಮೂಲಕ ಹಾದು ಹೋಗುವಾಗ ಒಳಗೋಡೆಗಳಿಗೆ ಧಕ್ಕೆಯುಂಟುಮಾಡಿ ಚಿಕ್ಕ ಚಿಕ್ಕ ಹುಣ್ಣುಗಳಾಗಲು ಪ್ರಾರಂಭವಾಗುತ್ತದೆ.

ಕರುಳಿನ ಹುಣ್ಣು (ಅಲ್ಸರ್) ಉಂಟಾಗಲು ಕಾರಣವಾಗುತ್ತದೆ
ಈ ಹುಣ್ಣುಗಳನ್ನು ನಮ್ಮ ದೇಹದ ರೋಗನಿರೋಧಕ ಶಕ್ತಿ ಶೀಘ್ರವೇ ಮಾಗಿಸುತ್ತದೆ. ಆದರೆ ಪ್ರತಿದಿನವೂ ಉಪ್ಪಿನಕಾಯಿ ತಿನ್ನುತ್ತಲೇ ಇದ್ದರೆ ಇದಕ್ಕೆ ಸಮಯವೇ ಇಲ್ಲದಂತಾಗಿ ಹುಣ್ಣುಗಳು ಬೆಳೆದು ಅಲ್ಸರ್ ಗೆ ಕಾರಣವಾಗುತ್ತದೆ.

ಹಾಗಾದರೆ ಉಪ್ಪಿನಕಾಯಿಯನ್ನು ತಿನ್ನುವುದೇ ತಪ್ಪೇ?
ಉಪ್ಪು ಹುಳಿ ತಿನ್ನುವ ನಮ್ಮ ನಾಲಿಗೆಗಳಿಗೆ ಆರೋಗ್ಯಕ್ಕಿಂತ ರುಚಿಯೇ ಹೆಚ್ಚು ಅಪ್ಯಾನಮಾನವಾಗಿರುವುದರಿಂದ ಉಪ್ಪಿನಕಾಯಿಯನ್ನು ಅಷ್ಟು ಸುಲಭವಾಗಿ ತ್ಯಜಿಸಲು ಸಾಧ್ಯವಿಲ್ಲ. ಆದುದರಿಂದ ಕಡಿಮೆ ಎಣ್ಣೆ, ಉಪ್ಪು ಬಳಸಿದ, ಇಂಗು ಶಿರ್ಕಾ ಬಳಸದೇ ಇರುವ ಮತ್ತು ಯಾವುದೇ ಸಂರಕ್ಷಕವನ್ನು ಸೇರಿಸದ ಉಪ್ಪಿನಕಾಯಿಯನ್ನು ಮನೆಯಲ್ಲಿಯೇ ತಯಾರಿಸಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮವಾಗಿದೆ.



Click it and Unblock the Notifications











