ಅಚ್ಚರಿಯಾದರೂ ನಿಜ-ತೂಕ ಇಳಿಸಲು 'ಬಾಳೆಹಣ್ಣಿನ ಡಯಟ್'!

By CM Prasad

ಬಾಳೆಹಣ್ಣಿನ ಬಗ್ಗೆ ಯಾರಿಗೆ ತಾನೆ ತಿಳಿದಿಲ್ಲ. ಇಷ್ಟು ದಿನ ಜೀರ್ಣಕ್ರಿಯೆ ಹೆಚ್ಚಾಗಲು ಹಾಗೂ ಬಾಯಿರುಚಿಗೆ ಬಾಳೆಹಣ್ಣನ್ನು ಹೆಚ್ಚು ಜನ ಸೇವಿಸುತ್ತಿದ್ದರು. ಆದರೆ ಹಿಟೊಶಿ ವಾಟನೇಬ್ ಎಂಬ ಹೆಸರಿನ ಜಪಾನಿನ ಪ್ರಜೆಯೊಬ್ಬ ಬಾಳೆ ಹಣ್ಣನ್ನು ಉಪಯೋಗಿಸಿ 18ಕೆಜಿಗೂ ಹೆಚ್ಚಿಗೆ ದೇಹದ ತೂಕವನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾನೆ. ಈತನ ಪದ್ಧತಿಯನ್ನು ಅರಿತ ಅನೇಕರು ಈಗ ಬಾಳೆಹಣ್ಣಿನ ಆಹಾರ ಪದ್ಧತಿಗೆ ಮುಗಿಬೀಳುತ್ತಿದ್ದಾರೆ.

ಆದ್ದರಿಂದಲೇ ಬೋಲ್ದ್ ಸ್ಕೈ ತಾಣವು ಸಹ ಬಾಳೆಹಣ್ಣಿನ ಆಹಾರ ಪದ್ಧತಿಯ ನೈಜ ಸಂಗತಿಗಳನ್ನು ತನ್ನ ನೆಚ್ಚಿನ ಓದುಗರಿಗಾಗಿ ಬಿತ್ತರಿಸುತ್ತಿದೆ. ದೇಹದ ತೂಕ ಇಳಿಸಲು ಜನರು ನಾನಾ ರೀತಿಯ ಅವೈಜ್ಞಾನಿಕ ಪದ್ಧತಿಯನ್ನು ಅನುಸರಿಸಿ ವಿಫಲರಾಗುತ್ತಿದ್ದು, ಹಿಟೊಶಿ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದ್ದಾನೆ. ಪ್ರತಿದಿನ ತಮ್ಮ ಭಾರಯುಕ್ತ ದೇಹವನ್ನು ಕನ್ನಡಿಯಲ್ಲಿ ದಿನನಿತ್ಯ ನೋಡಿಕೊಂಡು ಕಂಗಾಲಾಗಿರುವವರು ಈ ಪದ್ಧತಿಯನ್ನು ಒಮ್ಮೆ ನೋಡಲೇಬೇಕು. ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!

ಹಿಂದಿನ ಕಾಲದಲ್ಲಿ ಪ್ರತಿ ಊಟಾನಂತರ ಬಾಳೆಹಣ್ಣುನ್ನು ಎಲ್ಲರೂ ಸೇವಿಸುತ್ತಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ತಜ್ಞರು ಹೇಳುವ ಪ್ರಕಾರ, ಅದರಲ್ಲಿ ಸೋಡಿಯಂ ಹಾಗೂ ಕೊಬ್ಬಿನ ಸತ್ವ ಇರುವ ಕಾರಣ ಹೆಚ್ಚಿನವರು ಅದನ್ನು ಸೇವಿಸಲು ಹಿಂಜರಿಯುತ್ತಿದ್ದಾರೆ. ಆದರೆ ಆಹಾರ ತಜ್ಞರು ಮಾತ್ರ ಬಾಳೆಹಣ್ಣು ದೇಹದ ತೂಕ ಇಳಿಸುವ ನಿಜವಾಗಲೂ ಉತ್ತಮ ಆಹಾರವೆಂದು ಖಚಿತಪಡಿಸಿದ್ದಾರೆ. ಈ ಪದ್ಧತಿಯಯಿಂದ ಅನ್ಯ ಆಹಾರ ಅಥವಾ ಇತರೆ ಪಾನೀಯವನ್ನು ಸೇವಿಸುವ ಅವಶ್ಯಕತೆಯಿಲ್ಲ. ಇದು ನಿಜಕ್ಕೂ ಸರಳ ವಿಧಾನವಾಗಿದ್ದು ಈಗಿನ ಆಧುನಿಕ ಜಗತ್ತಿನ ಪುರುಷ ಮತ್ತು ಮಹಿಳೆಯರಿಗೆ ಹೆಚ್ಚು ಸೂಕ್ತವಾಗಿದೆ.

ನೀವು ಈ ಪದ್ಧತಿಯ ವಿಧಾನವನ್ನು ಅನುಸರಿಸಬೇಕೆಂದಿದ್ದಲ್ಲಿ, ನಾವು ನೀಡಿರುವ ಕೆಲವು ಸಲಹೆಗಳನ್ನು ಗಮನದಲ್ಲಿರಿಸಿ. ಬಾಳೆಹಣ್ಣಿನ ಜೊತೆಜೊತೆಗೆ ನಿಯಮಿತವಾಗಿ ನೀರನ್ನು ಕುಡಿಯುವುದು ಅವಶ್ಯಕ. ಏಕೆಂದರೆ, ಬಾಳೆಹಣ್ಣಿನಲ್ಲಿರುವ ನಾರಿನ ಅಂಶದಿಂದ ಸಲುವಾಗಿ ಅಜೀರ್ಣದಿಂದ ದಿನಪೂರ್ತಿ ಅಹಿತದಿಂದ ಇರಬೇಕಾಗುತ್ತದೆ. ಬಾಳೆಹಣ್ಣಿನಿಂದ ನಿಮ್ಮ ದೇಹದ ತೂಕವನ್ನು ಕಡಿಮೆಗೊಳಿಸಲು ನೆರವಾಗುವ ಸರಳ ವಿಧಾನಗಳನ್ನು ನಿಮಗಾಗಿ ನೀಡಲಾಗಿದೆ. ಮುಂದೆ ಓದಿ..

ಬಾಳೆಹಣ್ಣನ್ನು ಬೆಳಗಿನ ಉಪಹಾರವಾಗಿ ಬಳಸಿ

ಬಾಳೆಹಣ್ಣನ್ನು ಬೆಳಗಿನ ಉಪಹಾರವಾಗಿ ಬಳಸಿ

ಬೆಳಗಿನ ಲಘು ಉಪಹಾರ ಆ ದಿನದ ಬಹು ಮುಖ್ಯ ಆಹಾರವಾಗಿರುವುದರಿಂದ, ಗುಣಮಟ್ಟ ಹಾಗೂ ಪೌಷ್ಟಿಕಾಂಶದಿಂದ ಕೂಡಿರುವ ಆಹಾರವನ್ನು ಬೆಳಗಿನ ಸಮಯದಲ್ಲಿ ಸೇವಿಸುವುದು ಸೂಕ್ತ. ಕೇವಲ 2 ಬಾಳೆಹಣ್ಣು ಸೇವನೆಯಿಂದ ನಿಮ್ಮ ದಿನವನ್ನು ಪ್ರಾರಂಭಿಸಿ. ನಂತರವೂ ನಿಮಗೆ ಹಸಿವಾದಲ್ಲಿ ಮತ್ತೊಂದು ಬಾಳೆಹಣ್ಣು ಮತ್ತು ಸಿಹಿ ಮುಕ್ತವಾದ ಓಟ್ಸ್ ಅನ್ನು ಸೇವಿಸಬಹುದು. ಇದಾದ ನಂತರ ಜೀರ್ಣಕ್ರಿಯೆ ಹೆಚ್ಚಾಗಲು ಅಗತ್ಯದಷ್ಟು ನೀರನ್ನು ಕುಡಿಯಲೇಬೇಕು. ದೇಹದ ತೂಕವನ್ನು ಇಳಿಸಿಲು ಇದು ಸರಳ ಹಾಗೂ ಸುಲಭದ ವಿಧಾನ.

ಮಧ್ಯಾಹ್ನದ ಭೋಜನಕ್ಕೆ ಬಾಳೆಹಣ್ಣು

ಮಧ್ಯಾಹ್ನದ ಭೋಜನಕ್ಕೆ ಬಾಳೆಹಣ್ಣು

ಮಧ್ಯಾಹ್ನದ ಊಟದಲ್ಲಿ ಬಾಳೆಹಣ್ಣಿನ ಸತ್ವವಿರುವ ಆಹಾರವನ್ನು ಹೆಚ್ಚು ಸೇವಿಸಲು ಪ್ರಯತ್ನಿಸಿ. ಅವಶ್ಯವಿದ್ದಲ್ಲಿ ಬಾಳೆಹಣ್ಣಿನ ರಸಾಯನ ಅಥವಾ ಪಾನೀಯವನ್ನು ಬಳಸಬಹುದು. ನಿಮ್ಮ ಮಧ್ಯಾಹ್ನದ ಊಟದ ಜೊತೆಗೆ ಕನಿಷ್ಠ 4 ರಿಂದ 5 ಬಾಳೆಹಣ್ಣಾದರೂ ಇರುವಂತೆ ನೋಡಿಕೊಳ್ಳಿ. ಅದರಲ್ಲೂ ಪುಟ್ಟ ಬಾಳೆಹಣ್ಣನ್ನು ಹೆಚ್ಚು ಸೇವಿಸುವುದು ಉತ್ತಮ ಏಕೆಂದರೆ ಅದರಲ್ಲಿ ಕ್ಯಾಲೊರೀಸ್ ಕಡಿಮೆ ಇದ್ದು, ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ನೆರವಾಗುತ್ತದೆ.

ರಾತ್ರಿ ಊಟಕ್ಕೆ ಬಾಳೆಹಣ್ಣು ಸೇವಿಸುವಿಕೆ

ರಾತ್ರಿ ಊಟಕ್ಕೆ ಬಾಳೆಹಣ್ಣು ಸೇವಿಸುವಿಕೆ

ರಾತ್ರಿ ಊಟವನ್ನು ಸಮಯ 7.3೦ ರೊಳಗೆ ಸೇವಿಸುವುದು ಅತೀ ಮುಖ್ಯ. ನಿಮ್ಮ ರಾತ್ರಿ ಊಟವು ಎರಡು ರೋಟಿ ಅಥವಾ ಒಂದು ಕಪ್ ಸಬ್ಬಕ್ಕಿಯ ಅನ್ನವಿದ್ದರೆ ಸಾಕು. ಹಳೆಯ ಶೈಲಿಯ ಕಾಳಿನ ಗೊಜ್ಜನ್ನು ಪಕ್ಕಕ್ಕಿರಿಸಿ ಮಾಗಿದ ಬಾಳೆಹಣ್ಣನ್ನು ರೋಟಿಯೊಂದಿಗೆ ಸೇವಿಸಲು ಪ್ರಾರಂಭಿಸಿ. ಅನ್ನಕ್ಕೆ ಒಂದು ಚಮಚ ಮೊಸರನ್ನು ಬೆರೆಸಿ ಅದಕ್ಕೆ ಬಾಳೆಹಣ್ಣಿನ ಹೋಳುಗಳನ್ನು ಸೇರಿಸಿ ಸೇವಿಸಿ. ಕೊನೆಯಲ್ಲಿ ಅವಶ್ಯಕ್ಕೆ ತಕ್ಕಷ್ಟು ನೀರನ್ನು ಕುಡಿಯಲು ಮರೆಯದಿರಿ.

ನೀರಿನ ಅಂಶದ ಬಳಕೆ

ನೀರಿನ ಅಂಶದ ಬಳಕೆ

ಈ ಬಾಳೆಹಣ್ಣಿನ ಆಹಾರ ಪದ್ಧತಿಯಲ್ಲಿ ನೀರು ಅತಿ ಮುಖ್ಯ ಸತ್ವವಾಗಿದೆ. ಬಾಳೆಹಣ್ಣನ್ನು ಹೊರತುಪಡಿಸಿ ನೀರನ್ನು ಮಾತ್ರ ಹೆಚ್ಚು ಸೇವಿಸಬೇಕು. ಕುಡಿಯುವ ನೀರು ಸಾಮಾನ್ಯ ತಾಪಮಾನದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಒಂದು ಮುಖ್ಯವಾದ ಸಂಗತಿಯೆಂದರೆ ನೀರನ್ನು ರಭಸವಾಗಿ ಕುಡಿಯದೆ ನಿಧಾನವಾಗಿ ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

ಲಘು ಆಹಾರ ಬಳಕೆ

ಲಘು ಆಹಾರ ಬಳಕೆ

ದಿನದ ಮಧ್ಯೆ ನಿಮಗೆ ಹಸಿವಾದಲ್ಲಿ, ಆರೋಗ್ಯಯುತ ಕಡಿಮೆ ಕ್ಯಾಲೋರಿ ಹೊಂದಿರುವ ಪೌಷ್ಠಿಕಾಂಶಯುಕ್ತ ಲಘು ಆಹಾರವನ್ನು ಆಯ್ದುಕೊಳ್ಳಿ. ತಾಜಾ ಹಣ್ಣುಗಳು ಮತ್ತು ಬೇಯಿಸಿದ ತರಕಾರಿಗಳು ಉತ್ತಮ ಆಯ್ಕೆ. ಈ ಬಾಳೆಹಣ್ಣಿನ ಆಹಾರ ಪದ್ಧತಿಯನ್ನು ಅನುಸರಿಸುವವರು, ಉಪ್ಪುರಹಿತ ಹುರಿದ ಜೋಳವನ್ನು ಸೇವಿಸುವುದರಿಂದ ಹೆಚ್ಚು ಪರಿಣಾಮಕಾರಿಯಾಗುತ್ತದೆ.

ಮಲಗುವ ವೇಳೆಯ ನಿಯಮಗಳು

ಮಲಗುವ ವೇಳೆಯ ನಿಯಮಗಳು

ದಿನಕ್ಕೆ ಕನಿಷ್ಠ 8 ಗಂಟೆಗಳ ಕಾಲ ನಿದ್ರಿಸುವುದನ್ನು ಮರೆಯದಿರಿ. ನಿಮ್ಮ ಉತ್ತಮ ಆರೋಗ್ಯಕ್ಕೆ ಹಾಗೂ ದೇಹದ ತೂಕ ಕಡಿಮೆಗೊಳಿಸಲು ಅವಶ್ಯಕವಿದ್ದಷ್ಟು ನಿದ್ರಿಸುವುದು ತುಂಬಾ ಮುಖ್ಯವಾದ ಅಂಶ. ನಿಮ್ಮ ರಾತ್ರಿ ಊಟದ ಸಮಯಕ್ಕೂ ಹಾಗೂ ಮಲಗುವ ಸಮಯಕ್ಕೂ ಕನಿಷ್ಠ 4 ಗಂಟೆಗಳ ಅಂತರವಿದ್ದರೆ ಒಳ್ಳೆಯದು.

ವ್ಯಾಯಮ ನಿಮಗೆ ಅಗತ್ಯವೇ?

ವ್ಯಾಯಮ ನಿಮಗೆ ಅಗತ್ಯವೇ?

ಈ ಆಹಾರ ಪದ್ಧತಿಯಲ್ಲಿ ಹೆಚ್ಚಿನ ವ್ಯಾಯಮದ ಅಗತ್ಯವಿಲ್ಲ. ನಿಮ್ಮ ದೇಹದ ಸಾಮರ್ಥ್ಯವನ್ನು ಆಧರಿಸಿ ವ್ಯಾಯಮ ಮಾಡುವ ಬಗ್ಗೆ ನೀವು ನಿರ್ಧರಿಸಬಹುದು ಅಥವಾ ವ್ಯಾಯಮ ಮಾಡದೆಯೇ ಇರಬಹುದು.

Story first published: Sunday, December 6, 2015, 8:03 [IST]
X
Desktop Bottom Promotion