Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಳೆಗಾಲದಲ್ಲಿ ಆರೋಗ್ಯಕರ ಆಹಾರದ ಕಡೆ ನಿಗಾ ಇರಲಿ
ಮಳೆಗಾಗಿ ಇಳೆಯ ಸಕಲ ಜೀವಸಂಕುಲ ಹಂಬಲಿಸುತ್ತದೆ. ಬರಡಾಗಿದ್ದ ಭೂಮಿ ಹಸಿರುತೊಟ್ಟು ಕಂಗೊಳಿಸುತ್ತಾಳೆ. ಕೃಷಿಕರ ಮೊಗದಲ್ಲಿ ನಗು ಮೂಡುತ್ತದೆ. ಮುಂದಿನ ದಿನಗಳಲ್ಲಿ ಉತ್ತಮ ಬೆಳೆಯಾಗುವ ನಿರೀಕ್ಷೆಯಿಂದ ಹಿರಿಯರು ದೇವರಿಗೆ ನಮಿಸುತ್ತಾರೆ. ಆದರೆ ಮಳೆಗಾಲ ಸೊಗಸಾದರೂ ಅದು ಉಂಟುಮಾಡುವ ಫಜೀತಿ, ರೋಗ ರುಜಿನಗಳ ಭೀತಿ, ಕೊಚ್ಚೆ, ಕೆಸರು ಹೀಗೆ ಸಮಸ್ಯೆಗಳ ಸರಮಾಲೆ ಕಣ್ಮುಂದೆ ಬಂದು ಸುಳಿಯುತ್ತದೆ. ಮಳೆಗೆ ಅರಳುವ ರಂಗು ರಂಗಿನ ಕೊಡೆಗಳು
ಹೌದು, ಕೆಲವೊಂದು ವೈರಲ್ ಫೀವರ್, ಅಂಟು ರೋಗಗಳು, ಅಲರ್ಜಿ ಮತ್ತು ಇತರ ಮಳೆಗಾಲದಲ್ಲಿ ಕಾಡುವ ಸಮಸ್ಯೆಗಳು ಹೆಚ್ಚು ಕಿರಿಕಿರಿಯನ್ನು ತರುವುದು. ಅದರಲ್ಲೂ ಮಳೆಗಾಲ ಬಂತೆಂದರೆ ಸಾಕು, ಕೆಲವರಿಗಂತೂ ಶೀತ, ಜ್ವರ ಕಟ್ಟಿಟ್ಟ ಬುತ್ತಿ..! ಕೊಂಚ ಗಮನಿಸಿ ನೋಡಿ, ಹಿಂದಿನ ಕಾಲದ ಹಿರಿಯರಿಗೆ ಶೀತವಾಗುವುದು ಕಡಿಮೆ. ಆದರೆ ಇಂದು ಕಿರಿಯರು, ಹಿರಿಯರು ಎನ್ನುವ ಭೇದಭಾವವಿಲ್ಲದೆ ಅದರಲ್ಲೂ ಮಕ್ಕಳಿಗೆ ಬಹುಬೇಗನೇ ಶೀತ ಹಿಡಿಯುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಸ್ವಲ್ಪ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ನಮ್ಮ ಆಹಾರ ಕ್ರಮದತ್ತ ಗಮನಹರಿಸಿದರೆ ತೊಂದರೆಯನ್ನು ದೂರಮಾಡಬಹುದು. ಹಾಗಾಗಿ ನೀವು ಈ ಮಳೆಗಾಲವನ್ನು ಆನಂದದಿಂದ ಮತ್ತು ಆರೋಗ್ಯದಿಂದ ಕಳೆಯಬೇಕು ಎಂದಾದಲ್ಲಿ ಈ ಕೆಳಗೆ ನೀಡಿರುವ ಸಲಹೆಗಳನ್ನು ತಪ್ಪದೆ ಪಾಲಿಸಿ. ಅತ್ಯಂತ ಅಪಾಯಕರ ಮಳೆಗಾಲದ 10 ಕಾಯಿಲೆಗಳು

ಎಣ್ಣೆ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡಿ
ದಿನನಿತ್ಯ ಆಹಾರಕ್ರಮದಲ್ಲಿ ತುಪ್ಪ, ಆಲೀವ್ ಎಣ್ಣೆ, ಜೋಳದ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಆಹಾರ ತಯಾರಿಸಲು ಬಳಸಿ. ಇವು ಲಘು ಎಣ್ಣೆಗಳು ಆರೋಗ್ಯಕ್ಕೆ ಉತ್ತಮ. ಸಾಸಿವೆ ಎಣ್ಣೆ, ಬೆಣ್ಣೆ, ಕಡಲೆ ಕಾಳು ಎಣ್ಣೆ ಮತ್ತು ಇನ್ನಿತರ ಭಾರವಾದ ಎಣ್ಣೆಗಳನ್ನು ಬಳಸಬೇಡಿ. ಈ ಎಣ್ಣೆಗಳು ಉಷ್ಣಕಾರಕ ಗುಣಗಳನ್ನು ಹೊಂದಿರುತ್ತವೆ.

ರಸ್ತೆ ಬದಿಯ ಆಹಾರದಿಂದ ದೂರವಿರಿ
ನೀವು ಆಹಾರವನ್ನು ಸೇವಿಸುವ ಪರಿಸರವು ಶುಚಿಯಾಗಿ ಮತ್ತು ಆರೋಗ್ಯಕರವಾಗಿದೆಯೇ ಎಂಬುದನ್ನು ಗಮನಿಸಿ. ತೆರೆದಿಟ್ಟ ಆಹಾರವನ್ನು ಯಾವುದೇ ಕಾರಣಕ್ಕು ಸೇವಿಸಲು ಹೋಗಬೇಡಿ. ಅದರಲ್ಲೂ ರಸ್ತೆ ಬದಿಯ ವ್ಯಾಪಾರಿಗಳ ಬಳಿ ಬೇಡವೇ ಬೇಡ. ಮಳೆಗಾಲದಲ್ಲಿ ರಸ್ತೆ ಬದಿಯ ಆಹಾರ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬುದನ್ನು ಮಾತ್ರ ಮರೆಯಬೇಡಿ.

ಕಹಿ ಪದಾರ್ಥಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿ
ಸಾಮಾನ್ಯವಾಗಿ ಕಹಿ ಪದಾರ್ಥಗಳು ದೇಹದಲ್ಲಿರುವ ಪಿತ್ತವನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿ ಹಾಗಲಕಾಯಿ, ಬೇವು, ಫೆನುಗ್ರೀಕ್ ಇವುಗಳನ್ನು ದಿನನಿತ್ಯ ನಿಮ್ಮ ಆಹಾರ ಪದಾರ್ಥಗಳಲ್ಲಿ ಸೇರಿಸಿ ಹಾಗೂ ಇನ್‍ಫೆಕ್ಷನ್‍ಗಳಿಂದ ದೂರವಿರಿ.

ಹಣ್ಣು ಮತ್ತು ತರಕಾರಿಯನ್ನು
ಚೆನ್ನಾಗಿ ತೊಳೆದುಕೊಳ್ಳಿ ಹಣ್ಣು ಮತ್ತು ತರಕಾರಿಯನ್ನು ಮೊದಲು ಚೆನ್ನಾಗಿ ತೊಳೆದು ನಂತರವಷ್ಟೇ ಬಳಸಿ.

ನೇರಳೆ ಹಣ್ಣು
ಮಳೆಗಾಲ ಪ್ರಾರಂಭವಾಗುವುದಕ್ಕೆ ಮುನ್ನ ಮರದಲ್ಲಿ ಕಪ್ಪುಕಪ್ಪು ತೂಗುವ ನೇರಳೆ ಹಣ್ಣನ್ನು ಸಂಗ್ರಹಿಸಿ ಫ್ರಿಜ್ಜಿನಲ್ಲಿ ಶೇಖರಿಸಿಟ್ಟು ಮಳೆಗಾಲದಲ್ಲಿ ಕೊಂಚಕೊಂಚವಾಗಿ ಸೇವಿಸುವುದು ಒಳ್ಳೆಯದು. ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇದ್ದರೂ ಕಬ್ಬಿಣದ ಅಂಶ, ಫೋಲೇಟ್ (ಜೀವಕೋಶಗಳ ಅಭಿವೃದ್ದಿಗೆ ಅಗತ್ಯವಿರುವ ವಿಟಮಿನ್ ಬಿ), ಪೊಟ್ಯಾಸಿಯಂ ಹೇರಳವಾಗಿರುವುದರಿಂದ ಮಳೆಗಾಲದಲ್ಲಿ ಸೇವಿಸಲು ಅತ್ಯುತ್ತಮವಾಗಿದೆ.

ಶುಚಿತ್ವಕ್ಕೆ ಆದ್ಯತೆ ನೀಡಿ
ತರಕಾರಿ ಕತ್ತರಿಸಲು ಬಳಸುವ ಮನೆಗಳನ್ನು ಉಪಯೋಗಿಸುವ ಮೊದಲು ಸರಿಯಾಗಿ ತೊಳೆದುಕೊಳ್ಳಿ. ಏನನ್ನಾದರೂ ತಿನ್ನುವ ಮೊದಲು ಸರಿಯಾಗಿ ಕೈ ತೊಳೆದುಕೊಳ್ಳಿ.



Click it and Unblock the Notifications
