Latest Updates
-
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ!
ಉಗುರು ಬೆಚ್ಚನೆಯ ನೀರು, ಆಯಸ್ಸು ನೂರು!
ನೀರು, ನಮ್ಮ ಆರೋಗ್ಯಕ್ಕೆ ಅತ್ಯಂತ ಅವಶ್ಯವಾದ ಆಹಾರವಾಗಿದೆ. ದಿನನಿತ್ಯ ಎಂಟು ಲೋಟ ನೀರು ಕುಡಿಯಬೇಕೆಂದು ವೈದ್ಯರು ಸಲಹೆ ಮಾಡುತ್ತಾರೆ. ಆದರೆ ಈ ನೀರು ತಣ್ಣಗಿರಬೇಕೋ, ಬಿಸಿ ಇರಬೇಕೋ, ಉಗುರು ಬೆಚ್ಚನೆ ಇರಬೇಕೋ ಎಂಬುದನ್ನು ಎಲ್ಲಿಯೂ ವಿವರಿಸಿಲ್ಲ.
ಹಾಗಾಗಿ ನಾವೆಲ್ಲಾ ಚಿಕ್ಕಂದಿನಿಂದಲೂ ಸುಲಭವಾಗಿ ಕೈಗೆ ದೊರಕುವ ತಣ್ಣೀರನ್ನೇ ಕುಡಿಯುತ್ತಾ ಬಂದಿದ್ದೇವೆ.ಆದರೆ ಆಯುರ್ವೇದದ ಪ್ರಕಾರ ತಣ್ಣೀರನ್ನು ನೇರವಾಗಿ ಕುಡಿಯುವುದರಿಂದ ದೇಹಕ್ಕೆ ಒಳ್ಳೆಯದಾಗುವುದಕ್ಕಿಂತ ಕೆಟ್ಟದಾಗುವುದೇ ಹೆಚ್ಚು! ಬೆಚ್ಚಿಬಿದ್ದಿರಾ? ಲಿಂಬೆಯುಕ್ತ ನೀರಿನ ಅದ್ಭುತ ಆರೋಗ್ಯಕಾರಿ ಪ್ರಯೋಜನಗಳು
ಹೌದು ಈ ವಿಷಯದ ಬಗ್ಗೆ ಖಚಿತವಾದ ಮಾಹಿತಿ ದೊರಕುವವರೆಗೆ ಎಲ್ಲರೂ ಹೀಗೇ ತಿಳಿದಿದ್ದರು. ಅದರಲ್ಲೂ ಉಗುರುಬೆಚ್ಚನೆಯ ನೀರನ್ನು ನಿತ್ಯದ ಅಗತ್ಯಗಳಿಗೆ ಉಪಯೋಗಿಸುವುದರಿಂದ ತೂಕ ಇಳಿಸುವಲ್ಲಿ, ನೋವು ನಿವಾರಿಸುವಲ್ಲಿ, ಕಾಯಿಲೆಗಳಿಂದ ದೇಹವನ್ನು ರಕ್ಷಿಸಿಕೊಳ್ಳುವಲ್ಲಿ ಮುಂತಾದ ಹಲವು ಪ್ರಯೋಜನಗಳನ್ನು ದೇಹ ತಣ್ಣೀರಿಗಿಂತಲೂ ಹೆಚ್ಚು ಕ್ಷಮತೆಯನ್ನು ಹೊಂದುತ್ತದೆ. ಏಕಾಗಿ ಆಯುರ್ವೇದ ಉಗುರುಬೆಚ್ಚನೆಯ ನೀರನ್ನು ಕುಡಿಯಲು ಶಿಫಾರಸ್ಸು ಮಾಡುತ್ತದೆ ಎಂಬುದನ್ನು ಸಾಬೀತುಪಡಿಸುವ ಆರು ವಿಷಯಗಳನ್ನು ಇಲ್ಲಿ ನೀಡಲಾಗಿದೆ.

ತೂಕ ಇಳಿಸಲು ನೆರವಾಗುತ್ತದೆ
ಸ್ಥೂಲಕಾಯ ನಿಮ್ಮನ್ನು ಆವರಿಸುತ್ತಿದ್ದು ತೂಕ ಕಳೆದುಕೊಳ್ಳಲು ಯೋಜನೆ ಹಾಕಿಕೊಂಡಿದ್ದರೆ ಈ ನಿಟ್ಟಿನಲ್ಲಿ ಉಗುರುಬೆಚ್ಚನೆಯ ನೀರನ್ನು ಕುಡಿಯುವುದು ಉತ್ತಮವಾಗಿದೆ. ನೀರಿನ ಈ ತಾಪಮಾನ ನಿಮ್ಮ ದೇಹದ ತಾಪಮಾನವನ್ನು ಬಳಸಿಕೊಂಡು ಕೊಂಚವಾಗಿ ಏರಿಸುತ್ತದೆ. ಈ ಬಿಸಿ ದೇಹದ ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಈ ಕ್ರಿಯೆ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಬಳಸುವುದರಿಂದ ತೂಕ ಇಳಿಸಲು ನೆರವಾಗುತ್ತದೆ.

ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ
ನಮ್ಮ ಆಹಾರವನ್ನು ಜೀರ್ಣಗೊಳಿಸುವಾಗ ಹಲವು ವಿಷಕಾರಿ ದ್ರವ ಮತ್ತು ಘನ ತ್ಯಾಜ್ಯಗಳು ಉತ್ಪತ್ತಿಯಾಗುತ್ತವೆ. ಇವನ್ನು ಕಾಲಕಾಲಕ್ಕೆ ದೇಹದಿಂದ ಹೊರಹಾಕುತ್ತಲೇ ಇರಬೇಕು. ಈ ಕ್ರಿಯೆ ಬೆವರು, ಮೂತ್ರ ಮತ್ತು ಮಲವಿಸರ್ಜನೆಯ ಮೂಲಕ ನಡೆಯುತ್ತದೆ. ಈ ಕ್ರಿಯೆಗಳಿಗೆ ತಣ್ಣೀರಿಗಿಂತಲೂ ಉಗುರುಬೆಚ್ಚನೆಯ ನೀರು ಹೆಚ್ಚು ಉಪಯುಕ್ತವಾಗಿದೆ. ತ್ಯಾಜ್ಯಗಳನ್ನು ಹೊರಹಾಕಲು ಈ ನೀರು ಕೊಂಚ ಬೆಚ್ಚಗಿರಬೇಕು. (ಬೆವರು ಮತ್ತು ಮೂತ್ರ ಸಾಮಾನ್ಯವಾಗಿ ಬಿಸಿಯಾಗಿರುತ್ತವೆ). ಉಗುರುಬೆಚ್ಚನೆಯ ನೀರು ಈ ಅಗತ್ಯವನ್ನು ಪೂರೈಸುವುದರಿಂದ ತಣ್ಣೀರಿಗಿಂತಲೂ ಹೆಚ್ಚು ಉಪಯುಕ್ತವಾಗಿದೆ.

ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ
ಉಗುರುಬೆಚ್ಚನೆಯ ನೀರನ್ನು ಸೇವಿಸುವುದರಿಂದ, ಅದರಲ್ಲೂ ವಿಶೇಷವಾಗಿ ಊಟದ ಸಮಯದಲ್ಲಿ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.ಈ ಬಿಸಿ ಜಠರದಲ್ಲಿ ಆಹಾರವನ್ನು ಕರಗಿಸಲು ಜಠರರಸಕ್ಕೆ ಸಹಕಾರ ನೀಡುವುದರಿಂದ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ. ಜೊತೆಗೇ ದೇಹದಲ್ಲಿ ಖನಿಜಗಳ ಮತ್ತು ಎಲೆಕ್ಟ್ರೋಲೈಟುಗಳ ಸಂತುಲತೆಯನ್ನು ಕಾಪಾಡುತ್ತದೆ. ಏಕೆಂದರೆ ತಣ್ಣೀರಿಗಿಂತಲೂ ಬಿಸಿನೀರಿನಲ್ಲಿ ಖನಿಜಗಳು ಸುಲಭವಾಗಿ ಕರಗುತ್ತವೆ.

ಅವಧಿಗೂ ಮುನ್ನ ವೃದ್ಧಾಪ್ಯ ಆವರಿಸುವುದರಿಂದ ತಡೆಯುತ್ತದೆ
ವರ್ಷಾಗಳು ಕಳೆದಂತೆ ಚರ್ಮದ ಸೆಳೆತ ಕಡಿಮೆಯಾಗುವುದರಿಂದ ನೆರಿಗೆಗಳು ಬೀಳುತ್ತಾ ಹೋಗುತ್ತವೆ. ಇದು ವೃದ್ದಾಪ್ಯವನ್ನು ಸೂಚಿಸುತ್ತದೆ. ಕೂದಲು ನೆರೆತು ವಯಸ್ಸನ್ನು ಹೆಚ್ಚಿಸುತ್ತವೆ. ಉಗುರುಬೆಚ್ಚನೆಯ ನೀರನ್ನು ಸೇವಿಸುವುದರಿಂದ ಚರ್ಮದ ಸೆಳೆತೆ ಬಹುಕಾಲ ಉಳಿಯುತ್ತದೆ ಹಾಗೂ ವೃದ್ಧಾಪ್ಯದ ಲಕ್ಷಣಗಳು ಚಿಕ್ಕ ವಯಸ್ಸಿನಲ್ಲಿಯೇ ತೋರುವುದರಿಂದ ತಡೆಯುತ್ತದೆ. ಜೊತೆಗೇ ಒಣಚರ್ಮ, ಕಪ್ಪುಕಲೆಗಳಾಗುವುದನ್ನೂ ತಡೆಯುತ್ತದೆ.

ಶೀತ ಕೆಮ್ಮುಗಳನ್ನು ಶೀಘ್ರವೇ ಗುಣವಾಗಿಸಲು ಸಹಕರಿಸುತ್ತದೆ
ಯಾವುದೇ ಸೂಕ್ಷ್ಮ ಕ್ರಿಮಿಗಳು ದೇಹವನ್ನು ಸೇರಿಕೊಂಡಾಗ ದೇಹದ ರಕ್ಷಣಾ ವ್ಯವಸ್ಥೆ ಪ್ರಕಟಿಸುವ ಶೀತ ಮತ್ತು ಕೆಮ್ಮು ಈ ಕ್ರಿಮಿಗಳ ವಿರುದ್ಧ ಹೋರಾಡುವ ತಂತ್ರವಾಗಿದೆ. ಬಿಸಿನೀರಿನ ಸೇವನೆಯಿಂದ ದೇಹದ ರಕ್ಷಣಾ ವ್ಯವಸ್ಥೆಗೆ ಕ್ರಿಮಿಗಳ ವಿರುದ್ಧ ಹೋರಾಡಲು ಹೆಚ್ಚಿನ ಬಲ ದೊರಕುವಂತಾಗುತ್ತದೆ. ಪರಿಣಾಮವಾಗಿ ಶೀತ, ಕೆಮ್ಮು ಮೊದಲಾದ ತೊಂದರೆ ಮೂಲದಿಂದಲೇ ನಿವಾರಣೆಯಾಗುತ್ತದೆ.

ರೋಗಗಳಿಂದ ಮುಕ್ತಿ
ಹಿಂದೆ ಬೇರೆ ಊರಿನಿಂದ ಯಾವುದೇ ಅತಿಥಿಗಳ ಆಗಮನದ ಮರುದಿನ ಅವರಿಗೆ ಶೀತವಾಗುವುದು ಮಾಮೂಲಿಯಾಗಿತ್ತು. ಏಕೆಂದರೆ ಅವರ ದೇಹದಲ್ಲಿ ನಿಮ್ಮ ಊರಿನ ಬಾವಿಯ ತಣ್ಣೀರಿನಲ್ಲಿರುವ ಸೂಕ್ಷ್ಮಾಣುಗಳ ವಿರುದ್ಧ ಹೋರಾಡುವ ವ್ಯವಸ್ಥೆ ಇರುವುದಿಲ್ಲ. ಇದೇ ಕಾರಣಕ್ಕೆ ಪ್ರಯಾಣದಲ್ಲಿರುವವರು ಇಂದಿನ ದಿನಗಳಲ್ಲಿ ಬಾಟಲಿ ನೀರನ್ನೇ ಅವಲಂಬಿಸುತ್ತಾರೆ. ಈ ಸ್ಥಿತಿಯಿಂದ ಪಾರಾಗಲು ತಣ್ಣೀರನ್ನು ಕುದಿಸಿ ಉಗುರುಬೆಚ್ಚನೆಯ ಬಿಸಿಯಷ್ಟು ತಣಿದ ಬಳಿಕ ಕುಡಿಯುವುದರಿಂದ ಈ ಎಲ್ಲಾ ಅಪಾಯದಿಂದ ಪಾರಾಗಬಹುದು.



Click it and Unblock the Notifications