Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಿಪರೀತ ಕಾಡುವ ಸುಸ್ತು, ಇದು ಮುಪ್ಪಿನ ಲಕ್ಷಣವೇ?
ಒಂದು ಕಥೆಯಲ್ಲಿ ಒಬ್ಬ ಘನಘೋರ ತಪಸ್ಸು ಮಾಡಿ ಭಗವಂತನನ್ನು ಕರೆಸಿಕೊಂಡನಂತೆ. ಈತನ ತಪಸ್ಸಿಗೆ ಮೆಚ್ಚಿದ ದೇವರು ಏನು ವರ ಬೇಕೆಂದು ಕೇಳಿದನಂತೆ. ಅದಕ್ಕೆ ಈತ ತನ್ನ ಕೂದಲು ಎಂದಿಗೂ ನೆರೆಯಕೂಡದು ಎಂದು ಕೇಳಿದನಂತೆ. ತಥಾಸ್ತು ಎಂದು ದೇವರು ಅಂತರ್ಧಾನನಾದನಂತೆ. ಸಂತೋಷದಿಂದ ಜೀವನ ಕಳೆಯುತ್ತಿದ್ದವನಿಗೆ ಮುಪ್ಪು ಆವರಿಸುತ್ತಾ ಬಂದಂತೆ ಕೂದಲು ನೆರೆಯಲೇ ಇಲ್ಲ, ಆದರೆ ಉದುರಲು ಪ್ರಾರಂಭವಾಯಿತಂತೆ.
ಕೆಲವೇ ದಿನಗಳಲ್ಲಿ ತಲೆಗೂದಲೆಲ್ಲಾ ಉದುರಿ ಹಲ್ಲು ಕಳಚಿ, ಮುಖದ ಚರ್ಮ ಜೋತುಬಿದ್ದು, ದೇಹ ಕೃಷವಾಗಿ ಮುಪ್ಪು ಆವರಿಸಿತಂತೆ. ಮತ್ತೊಮ್ಮೆ ತಪಸ್ಸು ಮಾಡಲು ಶಕ್ತಿಯಿಲ್ಲದೇ ದೇವರು ಬಂದಿದ್ದಾಗ ಯೌವನವನ್ನು ಕೇಳದೇ ಕೇವಲ ತಲೆಗೂದಲು ನೆರೆಯದಿರುವಂತೆ ಕೇಳಿಕೊಂಡಿದ್ದಕ್ಕೆ ಹಳಿದುಕೊಂಡನಂತೆ. ನಿಮ್ಮ ಯೌವನ ಕಾಪಾಡುವ ಸೂಪರ್ ಆಹಾರಗಳು
ನಗು ಬರಿಸುವ ಕಥೆಯಾಗಿದ್ದರೂ ಇದರಲ್ಲಿ ಮುಪ್ಪಿನ ಬಗ್ಗೆ ಒಂದು ವಾಸ್ತವವಿದೆ. ನಾವೆಲ್ಲಾ ತಲೆಗೂದಲು ನೆರೆಯುವುದನ್ನೇ ಮುಪ್ಪು ಎಂದು ಭಾವಿಸಿಬಿಟ್ಟಿದ್ದೇವೆ. ಆದರೆ ನಿಜವಾಗಿ ಮುಪ್ಪು ಬರುವುದು ದೇಹಕ್ಕೇ ಹೊರತು ಮನಸ್ಸಿಗಲ್ಲ. ಅದರಲ್ಲೂ ಆರೋಗ್ಯವನ್ನು ಎಷ್ಟು ಚೆನ್ನಾಗಿ ಕಾಪಾಡಿಕೊಂಡಿದ್ದೇವೆ ಎನ್ನುವುದರ ಮೇಲೆ ನಿಜವಾಗಿ ಮುಪ್ಪು ಯಾವಾಗ ಬಂದಿತು ಎಂದು ಹೇಳಬಹುದು. ಆದರೆ ಇಂದಿನ ಯಾಂತ್ರಿಕ ದಿನಗಳಲ್ಲಿ ಇಚ್ಛಿಸಿದರೂ ಶರೀರವನ್ನು ನಾವಂದುಕೊಂಡಷ್ಟು ಆರೋಗ್ಯಕರವಾಗಿ ಇರಿಸಿಕೊಳ್ಳಲು ಸಾಧ್ಯವಿಲ್ಲ. ಮುಪ್ಪನ್ನು ಮುಂದೂಡುವ ಫಾರ್ಮುಲಾ
ನಮ್ಮ ಹತ್ತು ಹಲವು ಅನಾರೋಗ್ಯಕರ ಅಭ್ಯಾಸ, ಆಹಾರ, ಅಸಮರ್ಪಕ ನಿದ್ದೆ ಮೊದಲಾದವುಗಳಿಂದ ಮುಂದೆಂದೋ ಆವರಿಸಬೇಕಾಗಿದ್ದ ಮುಪ್ಪು ಬೇಗನೇ ಆವರಿಸತೊಡಗುತ್ತದೆ. ಇದು ಹೌದು ಎನ್ನುವಂತೆ ದೇಹವೇ ಕೆಲವು ಸೂಚನೆಗಳನ್ನು ನೀಡುತ್ತದೆ. ಆ ಸೂಚನೆಗಳು ಯಾವುವು ಎಂಬ ಕುತೂಹಲ ಮೂಡಿತೇ? ಕೆಳಗಿನ ಸ್ಲೈಡ್ ಶೋ ನಿಮ್ಮ ಕುತೂಹಲ ತಣಿಸಬಲ್ಲುದು..

ಮೆಟ್ಟಿಲು ಹತ್ತುವಾಗ ಸುಸ್ತು ಕಾಣಿಸಿಕೊಳ್ಳುತ್ತದೆ
ನಿಮ್ಮ ವಯಸ್ಸು ಸುಮಾರು ಮೂವತ್ತರ ಆಸುಪಾಸಿನಲ್ಲಿದ್ದು ಒಂದೆರಡು ಮಹಡಿಯನ್ನು ಮೆಟ್ಟಿಲ ಮೂಲಕ ಹತ್ತಬೇಕಾದರೂ ನಿಮಗೆ ಸುಸ್ತು ಆವರಿಸುತ್ತಿದೆಯೇ? ಇದು ನಿಮ್ಮ ಜೀವನಶೈಲಿಯಲ್ಲಿ ಸಾಕಷ್ಟು ವ್ಯಾಯಾಮ ಇಲ್ಲ ಎಂದು ಸೂಚಿಸುತ್ತಿದೆ. ಕೂಡಲೇ ಕ್ರಮ ಕೈಗೊಳ್ಳಿ ಅಥವಾ ನಲವತ್ತರಲ್ಲಿಯೇ ಅರವತ್ತರಂತೆ ಕಾಣಲು ಸಿದ್ಧರಾಗಿ.

ಸಂಗಾತಿಯೊಡನ ಖಾಸಗಿ ಸಮಯ ಕಡಿಮೆಯಾಗುತ್ತದೆ
ಸಂಗಾತಿಯೊಡನ ಆಪ್ತ ಕ್ಷಣಗಳನ್ನು ಕಳೆಯಲು ಮೊದಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದುದು ಈಗ ಕೆಲವು ನಿಮಿಷಗಳಿಗೆ ಇಳಿದಿದ್ದರೆ ಅದು ನಿಮ್ಮ ದೇಹದಲ್ಲಿ ಸಾಕಷ್ಟು ಟೆಸ್ಟೋಸ್ಟೆರೋನ್ ಎಂಬ ರಸದೂತ ಇಲ್ಲ ಎಂಬುದನ್ನು ಪ್ರಕಟಿಸುತ್ತಿದೆ. ಇದಕ್ಕೆ ಬೇರೆ ಕಾರಣಗಳಿರಲೂಬಹುದು. ತಕ್ಷಣ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳುವುದು ಮುಖ್ಯ.

ಶೀತ ಕಡಿಮೆಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ
"ಶೀತವಾಯಿತೇ ಮಾತ್ರೆ ತೆಗೊಳ್ಳಿ ಒಂದೇ ವಾರದಲ್ಲಿ ಕಡಿಮೆಯಾಗುತ್ತದೆ. ತೆಗೆದುಕೊಳ್ಳದಿದ್ದರೆ ಏಳು ದಿನ ಬೇಕು ನೋಡಿ" ಎಂದು ವೈದ್ಯರೇ ತಮಾಷೆ ಮಾಡುತ್ತಾರೆ. ಏಕೆಂದರೆ ಶೀತವಾಗುವುದು ವೈರಸ್ ಧಾಳಿಯಿಂದ. ಇದುವರೆಗೂ ವೈರಸ್ಸಿಗೆ ಯಾವುದೇ ಸಿದ್ದೌಷಧವಿಲ್ಲ. ಔಷಧಿಗಳೇನಿದ್ದರೂ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಷ್ಟೇ. ಒಂದು ವೇಳೆ ಶೀತವಾಗಿದ್ದು ವಾರಕ್ಕೂ ಹೆಚ್ಚು ಸಮಯ ಕಾಡಿದರೆ ನಿಮ್ಮ ರೋಗ ನಿರೋಧಕ ಶಕ್ತಿ ಕುಂಠಿತಗೊಂಡಿದೆ, ತನ್ಮೂಲಕ ಮುಪ್ಪನ್ನು ಹತ್ತಿರ ಕರೆಯುತ್ತಿದೆ ಎಂದು ತಿಳಿದುಕೊಳ್ಳಬೇಕು.

ಕೂದಲು ಉದುರಲು ತೊಡಗುತ್ತದೆ
ಕೂದಲು ಉದುರಲು, ಅದರಲ್ಲೂ ಒಂದು ವಿನ್ಯಾಸದಲ್ಲಿಯೇ ಉದುರಲು ಏನು ಕಾರಣ ಎಂದು ಇದುವರೆಗೆ ತಿಳಿಯಲು ಸಾಧ್ಯವಾಗಿಲ್ಲ. ಆದರೂ ನಿಮ್ಮ ಎಣಿಕೆಗೂ ಮೊದಲೇ ನಿಮ್ಮ ತಲೆಗೂದಲು ಉದುರಲು ಪ್ರಾರಂಭವಾದರೆ ನಿಮ್ಮ ಜೀವನಶೈಲಿಯನ್ನು ಒರೆಹಚ್ಚುವುದು ಅಗತ್ಯ.

ನೆರಿಗೆಗಳು ಸ್ಪಷ್ಟವಾಗಿ ಕಾಣಿಕೊಳ್ಳತೊಡಗುತ್ತವೆ
ಸದಾ ನಗುವುದರಿಂದ ಏನು ಲಾಭ ಎಂದು ಕೇಳಿದರೆ ನೆರಿಗೆಗಳು ಎಲ್ಲಿ ಬೀಳುತ್ತವೆ ಎಂದು ಗೊತ್ತಾಗುತ್ತದೆ ಎಂಬುದೊಂದು ಕುಹಕ. ಆದರೆ ನಗದಿದ್ದರೂ ನೆರಿಗೆ ಕಾಣುವಂತಿದ್ದರೆ ಚರ್ಮ ಸಡಿಲವಾಗಿರುವ ಲಕ್ಷಣವಾಗಿದ್ದು ಇದು ಮುಪ್ಪು ಹತ್ತಿರ ಬರುತ್ತಿರುವ ಸ್ಪಷ್ಟ ಸೂಚನೆಯನ್ನು ನೀಡುತ್ತದೆ. ಇದನ್ನು ಉಳಿಸಿಕೊಳ್ಳಲು ಚರ್ಮದ ಆರೈಕೆ ಮತ್ತು ಪೌಷ್ಟಿಕ ಆಹಾರ ಅಗತ್ಯ.

ಮೈಕೈನೋವು ಬಾಧಿಸುತ್ತದೆ
ನಿತ್ಯದ ಸಾಮಾನ್ಯ ಚಟುವಟಿಕೆಗಳ ಬಳಿಕ ದೇಹ ಅತೀವವಾಗಿ ಆಯಾಸಗೊಂಡು ಮೈ ಕೈ ನೋವು ಬಾಧಿಸುತ್ತಿದ್ದರೆ, ಪ್ರತಿದಿನವೂ ಈ ನೋವು ಮರುಕಳಿಸುತ್ತಿದ್ದರೆ ನಿಮ್ಮ ದೇಹ ಶಿಥಿಲಗೊಳ್ಳುತ್ತಿದೆ ಎಂಬುದರ ಸೂಚನೆಯಾಗಿದೆ.

ಕೆಲಸದ ಒತ್ತಡ ನಿಮ್ಮನ್ನು ಕುಗ್ಗಿಸುತ್ತದೆ
ಹಿಂದೆ ಎಷ್ಟು ಕೆಲಸದ ಒತ್ತಡವಿದ್ದರೂ ಲೀಲಾಜಾಲವಾಗಿ ನಿಭಾಯಿಸುತ್ತಿದ್ದ ನಿಮಗೆ ಈಗ ಅದಕ್ಕೂ ಕಡಿಮೆ ಒತ್ತಡವಿದ್ದರೂ ಸಹಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಕೆಲಸದ ಒತ್ತಡ ಕಿರಿಕಿರಿ ಎನಿಸುತ್ತಿದ್ದರೆ ಮುಪ್ಪು ಆವರಿಸುತ್ತಿದೆ ಎಂದು ತಿಳಿದುಕೊಳ್ಳಬಹುದು.

ಹಗುರವಾದ ವಸ್ತುಗಳೂ ಮಣಭಾರವೆನಿಸುತ್ತದೆ
ಹಿಂದೆ ಲೀಲಾಜಾಲವಾಗಿ ಭಾರದ ವಸ್ತುಗಳನ್ನು ಎತ್ತಿ ಹೊತ್ತು ಹೋಗುತ್ತಿದ್ದ ನಿಮಗೆ ಈಗ ಸಾಮಾನ್ಯ ಭಾರದ ವಸ್ತುಗಳನ್ನು ಎತ್ತಲೂ ಅತೀವ ಕಷ್ಟಪಡಬೇಕಾಗಿ ಬಂದರೆ, ಬಗ್ಗಿದಲ್ಲಿ ಬೆನ್ನುನೋವು, ಮೊಣಗಂಟು ನೋವು ಬಾಧಿಸಿದರೆ ಇವು ಮುಪ್ಪು ಆವರಿಸುತ್ತಿರುವ ಸ್ಪಷ್ಟ ಸೂಚನೆಯಾಗಿದೆ. ಅಂದರೆ ನಿಮಗೆ ಹೆಚ್ಚಿನ ದೈಹಿಕ ವ್ಯಾಯಾಮ ಅಗತ್ಯವಿದೆ ಎಂದರ್ಥ.



Click it and Unblock the Notifications
