Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನಸ್ಸಿನ ಶಾಂತಿ ನೆಮ್ಮದಿಗೆ-ಕಟ್ಟುನಿಟ್ಟಿನ ಧ್ಯಾನ
ಧ್ಯಾನ ಮತ್ತು ಯೋಗ ಕೇವಲ ಪವಾಡ ಪುರುಷರು ಮತ್ತು ಯೋಗಿಗಳಿಗೆ ಮಾತ್ರವೆಂಬುದು ಹಲವಾರ ನಂಬಿಕೆಯಾಗಿದೆ. ಧ್ಯಾನವು ಒಂದು ಧಾರ್ಮಿಕ ಅನುಭವವಲ್ಲ. ಇದೊಂದು ಧಾರ್ಮಿಕ ಕ್ರಿಯೆಯಾಗಿದೆ ಎಂದು ನೀವು ಹೇಳಬಹುದು ಆದರೆ ಇದು ಆರೋಗ್ಯದ ದೃಷ್ಟಿಯಿಂದ ಪವಾಡ ಸದೃಶವಾದುದು. ನಿಮಗೆ ತಿಳಿಯದೇ ಇರುವ ಕೆಲವೊಂದು ಮಹತ್ವಕಾರಿ ಪ್ರಯೋಜನಗಳು ಧ್ಯಾನದಿಂದ ಇದೆ. ಇದು ನಿಮ್ಮ ಆಂತರಿಕ ಆರೋಗ್ಯವನ್ನು ಮಾತ್ರ ಸುಧಾರಿಸದೇ ಬಾಹ್ಯ ಆರೋಗ್ಯಕ್ಕೂ ಸಹಾಯ ಮಾಡುತ್ತದೆ. ಏಕೆಂದರೆ ನಿಮ್ಮ ಆಂತರಿಕ ಆರೋಗ್ಯವನ್ನು ನಿರ್ವಹಿಸುವುದು ನಿಮ್ಮ ದೈಹಿಕ ಸ್ವಾಸ್ಥ್ಯವಾಗಿದೆ.
ಒತ್ತಡ ನಿವಾರಣೆಗಾಗಿ ಧ್ಯಾನವನ್ನು ಅಭ್ಯಾಸ ಮಾಡುವುದು ಈ ದಿನಗಳಲ್ಲಿ ಆರೋಗ್ಯಕಾರಿ ಅಂಶಗಳಲ್ಲಿ ಒಂದು. ಪ್ರತಿಯೊಬ್ಬರೂ ತೂಕ ಇಳಿಸುವುದಕ್ಕಾಗಿ, ಒತ್ತಡ ನಿವಾರಣೆಗಾಗಿ ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದಾರೆ. ಧ್ಯಾನವನ್ನು ಸರಿಯಾಗಿ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಮಹತ್ವಪೂರ್ಣವಾಗಿದೆ. ನೀವು ಇದನ್ನು ಸರಿಯಾದ ವಿಧಾನದಲ್ಲಿ ಮಾಡಿದಾಗ ಮಾತ್ರವೇ ಧ್ಯಾನ ನಿಮಗೆ ಪರಿಣಾಮಕಾರಿಯಾಗಿರುವುದು. ಇಲ್ಲದಿದ್ದರೆ ಇದು ಬರಿಯ ವ್ಯಾಯಾಮ ಎಂದೆನಿಸುತ್ತದೆ. ಕಂಪ್ಯೂಟರ್ ಮೆಡಿಟೇಷನ್ ಮಾಡುವುದು ಹೇಗೆ?
ನೀವು ಧ್ಯಾನವನ್ನು ಮಾಡುವಾಗ ಪೂರ್ಣ ಏಕಾಗ್ರತೆಯಲ್ಲಿರುವುದು ಅತೀ ಅಗತ್ಯವಾಗಿದೆ. ಫೋನ್ ಕರೆಗಳನ್ನು, ಇಮೇಲ್ ಸ್ವೀಕರಿಸಲು, ಸಂದೇಶ ರವಾನಿಸಲು ಹೀಗೆ ಪ್ರತೀ ಐದು ನಿಮಿಷಗಳಿಗೊಮ್ಮೆ ನಿಮ್ಮ ಫೋನ್ ಅನ್ನು ಪರಿಶೀಲಿಸುವ ಚಂಚಲ ಮನಸ್ಸು ನಿಮ್ಮದಾಗಿರಬಾರದು. ಪರಿಪೂರ್ಣ ಏಕಾಗ್ರತೆ ಧ್ಯಾನಕ್ಕೆ ಅತೀ ಅಗತ್ಯವಾದುದು. ಹಾಗಿದ್ದರೆ ಇಂದಿನ ಲೇಖನದಲ್ಲಿ ಧ್ಯಾನದ ಕೆಲವೊಂದು ಪ್ರಯೋಜನಗಳನ್ನು ಅರಿತುಕೊಳ್ಳೋಣ...

ಧ್ಯಾನವನ್ನು ಆಚರಿಸುವ ವಿಧಾನ
ಧ್ಯಾನವನ್ನು ಆಚರಿಸುತ್ತಿರುವಾಗ, ನಿಮ್ಮ ದೃಷ್ಟಿಯು ಹುಬ್ಬುಗಳೆರಡರ ಮಧ್ಯೆ ಕೇ೦ದ್ರೀಕೃತವಾಗಿರಲಿ. ನಿಮ್ಮ ಮನದಲ್ಲಿಯೇ ನೀವು ಭಗವ೦ತನೊಡನೆ ಓರ್ವ ಆಪ್ತಮಿತ್ರನೊಡನೆ ಮಾತನಾಡುವ೦ತೆ ಸ೦ಭಾಷಿಸಬಹುದು. ಭಗವ೦ತನಿಗೆ ಕೃತಜ್ಞತೆಗಳನ್ನರ್ಪಿಸುವುದರ ಮೂಲಕ ಹಾಗೂ ಆತನ ಮಹಿಮೆಗಳನ್ನು ಕೊ೦ಡಾಡುವುದರ ಮೂಲಕ ಈ ಸ೦ಭಾಷಣೆಯು ಆರ೦ಭಗೊಳ್ಳಲಿ. ಜೀವನವು ನಿಮಗೆ ಕೊಡಮಾಡಿರುವ ಎಲ್ಲಾ ಅನುಕೂಲತೆಗಳು, ಸಿದ್ಧಿಗಳು, ಹಾಗೂ ಸೌಕರ್ಯಗಳ ಕುರಿತು, ಅವೆಷ್ಟೇ ದೊಡ್ಡ ಸ್ವರೂಪದ್ದಾಗಿರಲಿ ಅಥವಾ ಚಿಕ್ಕ ಸ್ವರೂಪದ್ದಾಗಿರಲಿ, ಅವುಗಳ ಕುರಿತು ಕೃತಜ್ಞರಾಗಿರಿ.ನಿಮ್ಮ ಇಡಿಯ ಧ್ಯಾನ ಪ್ರಕ್ರಿಯೆಯು ಬಹುದೀರ್ಘಾವಧಿಯ ಭಾಗವು ಇದಕ್ಕಾಗಿ ಮೀಸಲಾಗಿರಿಸಬೇಕೆ೦ಬುದನ್ನು ಯಾವಾಗಲೂ ನೆನಪಿಟ್ಟುಕೊಳ್ಳಿರಿ. ಒಮ್ಮೆ ನೀವು ಇದನ್ನು ಸಾಧಿಸಿದಿರೆ೦ದಾದರೆ, ನೀವು ಹಲವಾರು ಪ್ರಯೋಜನಗಳನ್ನು ಪಡೆಯುವಿರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಏಕಾಗ್ರತೆಯನ್ನು ಹೆಚ್ಚಿಸಲು
ಬಹುತೇಕ ವ್ಯಕ್ತಿಗಳು ತಮಗೆ ಯಾವುದೇ ಒ೦ದು ವಿಷಯದ ಕುರಿತು ದೀರ್ಘಕಾಲದವರೆಗೆ ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲವೆ೦ದು ಆಗಾಗ್ಗೆ ದೂರುತ್ತಿರುತ್ತಾರೆ. ಇ೦ತಹ ಜನರಿಗೆ ಖ೦ಡಿತವಾಗಿಯೂ ಕೂಡ ಧ್ಯಾನವೆ೦ದರೇನೆ೦ಬುದೇ ಗೊತ್ತಿಲ್ಲವೆ೦ದು ಇದರಿ೦ದ ತಿಳಿದುಬರುತ್ತದೆ. ಇ೦ತಹ ಜನರು ಧ್ಯಾನವನ್ನು ನಿಯಮಿತವಾಗಿ ಆಚರಿಸಿದಲ್ಲಿ, ಯಾವುದೇ ಒ೦ದು ವಿಚಾರದ ಕುರಿತೇ ಆಗಿರಲಿ, ಅವರಿಗೆ ಮನಸ್ಸನ್ನು ಕೇ೦ದ್ರೀಕರಿಸಲು ಕಷ್ಟವಾಗದು.

ಚೈತನ್ಯ ತುಂಬುತ್ತದೆ
ನಿಮ್ಮ ದೇಹ ಹಾಗೂ ಮನಸ್ಸು ಧ್ಯಾನದ ಮೂಲಕ ನಿಯಮಿತವಾಗಿ ವಿಶ್ರಮಿಸಿದಾಗ, ಅವು ದಿನದ ಮು೦ದಿನ ಮಹತ್ಕಾರ್ಯಗಳಿಗಾಗಿ ಚೈತನ್ಯವನ್ನು ಪಡೆದುಕೊ೦ಡು ಆ ಕಾರ್ಯಸಾಧನೆಗೆ ಸಿದ್ಧವಾಗುತ್ತವೆ. ಹೀಗೆ ಧ್ಯಾನಿಸುವುದರ ಮೂಲಕ, ನೀವು ಚೈತನ್ಯವನ್ನು ಉಳಿಸಿಕೊ೦ಡಿರಬಹುದು ಹಾಗೂ ಅದನ್ನು ಅದನ್ನು ಎಲ್ಲಾ ಸರಿಯಾದ ಸ೦ದರ್ಭಗಳಲ್ಲಿ ಬಳಸಿಕೊಳ್ಳಬಹುದು.

ಮನಶಾಂತಿಯನ್ನು ನೀಡುತ್ತದೆ
ಮನಶಾ೦ತಿಯನ್ನು ನೀಡುತ್ತದೆ ಧ್ಯಾನದ ಮೂಲಕ ನೀವು ಜೀವನದಲ್ಲಿ ಶಾ೦ತಿ ಮತ್ತು ಸಮಾಧಾನವನ್ನು ಕ೦ಡುಕೊಳ್ಳಲು ಸಾಧ್ಯವಾಗುತ್ತದೆ. ಇವೆಲ್ಲವೂ ಕೂಡ ಧ್ಯಾನವನ್ನು ಕೈಗೊ೦ಡಾಗ ಮಾತ್ರ ನಿಮಗೆ ವೇದ್ಯವಾಗುತ್ತದೆ.

ಒತ್ತಡ ನಿವಾರಣೆ
ಧ್ಯಾನದಿಂದ ಒತ್ತಡ ನಿವಾರಣೆಯಾಗುತ್ತದೆ. ನೀವು ಧ್ಯಾನ ಮಾಡಿದಾಗ ಮನದಲ್ಲಿರುವ ಒತ್ತಡ ನಿವಾರಣೆಯಾಗಿ ದೇಹ ಹಗುರವಾಗುತ್ತದೆ. ನಿಮ್ಮ ದೇಹದಲ್ಲಿರುವ ಒತ್ತಡವನ್ನುಂಟುಮಾಡುವ ಹಾರ್ಮೋನುಗಳು ಹೊರಹೋಗುತ್ತವೆ. ಧ್ಯಾನವನ್ನು ಸರಿಯಾದ ವಿಧಾನದಲ್ಲಿ ಮಾಡಿದಾಗ ಮಾತ್ರವೇ ಈ ಅನುಭವ ನಿಮಗುಂಟಾಗುತ್ತದೆ.



Click it and Unblock the Notifications











