Latest Updates
-
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
45 ಡಿಗ್ರಿ ಬಿಸಿಲಲ್ಲಿ ಮದುವೆ ಪ್ಲಾನ್ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ ಎಚ್ಚರಿಕೆ ಮರೆಯದಿರಿ! -
ಶಾಖದ ಅಲೆ ಎಚ್ಚರಿಕೆ: ಎಸಿ ಇಲ್ಲದೆ ಮನೆಯನ್ನು ತಂಪಾಗಿಡಲು ಮತ್ತು ನಿಮ್ಮ ಗಿಡಗಳನ್ನು ಬಿಸಿಲಿನಿಂದ ರಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ಪಾನೀಯ ಮತ್ತು ಆಹಾರವೇ ಸಂಜೀವಿನಿ! -
ಸೀರೆ ಉಡೋದ್ರಲ್ಲಿ ಹೊಸ ಕ್ರಾಂತಿ: ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗ್ತಿರೋ 'ದೇಸಿ-ಕೋರ್' ಸೀರೆ ಸ್ಟೈಲ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲೂ ಫಿಟ್ ಆಗಿರಬೇಕೆ? ಮುಂಜಾನೆಯ ಈ ಸಣ್ಣ ಬದಲಾವಣೆ ನಿಮ್ಮ ಆರೋಗ್ಯಕ್ಕೆ ವರದಾನ! -
ಬಿಸಿಲ ಧಗೆಯಲ್ಲಿ ಮದುವೆ ಸಮಾರಂಭಗಳ ಸಂಕಟ: ಅತಿಥಿಗಳಿಗೂ ನಿಮಗೂ ಆರಾಮ ನೀಡುವ ಸೀಕ್ರೆಟ್ ಟಿಪ್ಸ್ ಇಲ್ಲಿದೆ! -
ಬಿಸಿಲ ಬೇಗೆಯಿಂದ ಮನೆ ತತ್ತರ: ಎಸಿ ಇಲ್ಲದೆಯೇ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಸರಳ ಉಪಾಯಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮಗಳನ್ನು ಪಾಲಿಸಿ, ಆರೋಗ್ಯವಾಗಿರಿ! -
ಕಾನ್ ರೆಡ್ ಕಾರ್ಪೆಟ್ ಮೇಲೆ ದಿಶಾ ಮದನ್ ಅಬ್ಬರ: ಹಳೆಯ ಸೀರೆಯಿಂದ ಸೃಷ್ಟಿಯಾದ ಈ ಫ್ಯಾಷನ್ ಮ್ಯಾಜಿಕ್ ನೋಡಿ!
ಸ್ವಲ್ಪ ತಾಳಿ, ಒಪ್ಪೊತ್ತಿನ ಊಟ ಬಿಡುವ ಮೊದಲು ಇತ್ತ ಗಮನಿಸಿ
ಆಫೀಸ್‍ಗೆ ಹೋಗಲು ತಡವಾಗುತ್ತಿದೆ. ಉಪಾಹಾರ ಮಾಡಲು ಸಮಯವಿಲ್ಲ. ಒಂದು ಹೊತ್ತು ಊಟ ಬಿಟ್ಟರೆ ಸತ್ತು ಹೋಗುತ್ತೇವೆಯೇ?ಎಂಬ ಪ್ರಶ್ನೆಗಳನ್ನು ಹಲವರು ಕೇಳುವುದನ್ನು ನಾವು ನೋಡಿರಬಹುದು. ಆದರೆ ಇದು ನಿಜಕ್ಕು ಒಳ್ಳೆಯ ಆಲೋಚನೆಯಲ್ಲ.
ತೂಕ ಹೆಚ್ಚಾಗುತ್ತದೆಯೆಂದೋ, ಕೆಲಸಕ್ಕೆ ತಡವಾಗುತ್ತದೆಯೆಂದೋ, ಯಾವುದಾದರು ಒಂದು ನೆಪದಿಂದ ಊಟ ಮಾಡುವುದನ್ನು ಬಿಟ್ಟಲ್ಲಿ, ಅದರಿಂದ ಮುಂದೆ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುವುದರಲ್ಲಿ, ಸಂಶಯವೇ ಇಲ್ಲ.
ಇದಕ್ಕಾಗಿ ತಜ್ಞರು ಹಲವಾರು ಸಂಶೋಧನೆಗಳನ್ನು ಮಾಡಿ, ಯಾವುದೇ ಕಾರಣಕ್ಕು ಊಟ ಮಾಡುವುದನ್ನು ಬಿಡದಿರುವಂತೆ ಹೇಳಿದ್ದಾರೆ. ಇದರಿಂದ ನಮ್ಮ ದೇಹದ ಮೇಲೆ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎಂದು ಸಹ ಎಚ್ಚರಿಸಿದ್ದಾರೆ! ಬನ್ನಿ ನಾವು ಒಂದು ಹೊತ್ತು ಊಟ ಮಾಡುವುದನ್ನು ಏಕೆ ಬಿಡಬಾರದು ಎಂದು ಕೆಲವು ಕಾರಣಗಳು ಇವೆ ನೋಡಿ.
ಒಂದು ಹೊತ್ತು ಸಹ ತಪ್ಪಿಸದೆ ಆರೋಗ್ಯಕರವಾದ ಆಹಾರವನ್ನು ಸೇವಿಸುವುದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದನ್ನು ನಾವು ಮರೆಯಬಾರದು. ಬನ್ನಿ ಆ ಕಾರಣಗಳು ಯಾವುವು ಎಂದು ತಿಳಿದುಕೊಳ್ಳೋಣ.

ರಕ್ತದಲ್ಲಿ ಸಕ್ಕರೆ ಪ್ರಮಾಣ
ಆಹಾರದಲ್ಲಿರುವ ಕಾರ್ಬೋಹೈಡ್ರೇಟ್‌ಗಳನ್ನು ವಿಭಜಿಸಿ ಸಕ್ಕರೆಯನ್ನು ನಮ್ಮ ದೇಹ ಪಡೆಯುತ್ತದೆ. ಈ ಕಾರ್ಬೋಹೈಡ್ರೇಟ್‌ಗಳು ನಮ್ಮ ದೇಹದ ಅಂಗಗಳು ಕಾರ್ಯನಿರ್ವಹಿಸಲು ಬೇಕಾದ ಇಂಧನವಾಗಿರುತ್ತದೆ. ಯಾವಾಗ ನೀವು ಊಟವನ್ನು ಮಾಡದೆ ಬಿಟ್ಟು ಬಿಡುತ್ತೀರೋ,ಆಗ ನಮ್ಮ ದೇಹಕ್ಕೆ ಅಗತ್ಯವಾದ ರಕ್ತದಲ್ಲಿ ಸಕ್ಕರೆ ಪ್ರಮಾಣ ಕುಸಿಯುತ್ತದೆ. ಆಗ ನಿಮಗೆ ತಲೆ ಸುತ್ತು ಮತ್ತು ಸುಸ್ತು ಕಂಡು ಬರುತ್ತದೆ.

ಮೂಡ್ ಬದಲಾವಣೆ
ಊಟ ಬಿಡುವುದರಿಂದ ನಿಮ್ಮ ಮೂಡ್ ಕ್ಷಣ ಕ್ಷಣಕ್ಕು ಬದಲಾಗುತ್ತ ಇರುತ್ತದೆ. ಆಹಾರದಿಂದ ಗ್ಲೂಕೋಸ್ ದೊರೆಯುತ್ತದೆ. ಇದು ನಿಮ್ಮ ಚೈತನ್ಯಕ್ಕೆ ಮೂಲ ಕಾರಣ. ಆದ್ದರಿಂದ ಆಹಾರವನ್ನು ಸೇವಿಸದೆ ಬಿಟ್ಟು ಬಿಟ್ಟರೆ, ನಿಮ್ಮ ಮೂಡ್ ಏರು ಪೇರಾಗುತ್ತದೆ. ಜೊತೆಗೆ ನಿಮಗೆ ಕಿರಿಕಿರಿಯುಂಟಾಗುತ್ತದೆ.

ಮಧುಮೇಹ ಬರಬಹುದು
ಒಂದು ವೇಳೆ ನೀವು ಸಂಜೆಯ ಹೊತ್ತು ಆಹಾರ ಸೇವಿಸುವುದನ್ನು ಬಿಟ್ಟು ಬಿಟ್ಟರೆ, ಮಧುಮೇಹ ಬರುವ ಅಪಾಯ ಹೆಚ್ಚಾಗಿರುತ್ತದೆ. ಏಕೆಂದರೆ ಆಹಾರ ಸೇವಿಸದೆ ಇದ್ದಲ್ಲಿ ಈ ಮೊದಲು ಹೇಳಿದಂತೆ, ರಕ್ತದಲ್ಲಿ ಸಕ್ಕರೆ ಪ್ರಮಾಣ ಏರು ಪೇರಾಗುತ್ತದೆ. ಅದರಿಂದ ನಿಮ್ಮ ದೇಹವು ಇನ್ಸುಲಿನ್ ಉತ್ಪಾದಿಸಲು ಸಮಯ ತೆಗೆದುಕೊಳ್ಳುತ್ತದೆ. ಅದಕ್ಕಾಗಿ ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸಿ.

ಜೀರ್ಣಕ್ರಿಯೆಯನ್ನು ಏರುಪೇರು ಮಾಡುತ್ತದೆ
ಊಟ ಮಾಡುವುದನ್ನು ತಪ್ಪಿಸಿದರೆ, ಅದರಿಂದ ನಿಮ್ಮ ಜೀರ್ಣಾಂಗ ಮತ್ತು ವಿಸರ್ಜನಾಂಗಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದಾಗಿ ನಿಮ್ಮ ದೇಹ ಶಕ್ತಿಯನ್ನು ಮತ್ತು ಲವಲವಿಕೆಯನ್ನು ಇರಿಸಿಕೊಳ್ಳಲು ಕಷ್ಟಪಡುತ್ತದೆ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ನಿಮ್ಮ ತೂಕ ಇಳಿಸಿಕೊಳ್ಳುವ ಆಲೋಚನೆಯ ಮೇಲೆ ಸಹ ಪರಿಣಾಮ ಬೀರುತ್ತದೆ.

ಅಜೀರ್ಣತೆಯ ಸಮಸ್ಯೆ
ಅಸಿಡಿಟಿ ಮತ್ತು ಗ್ಯಾಸ್ಟಿಕ್ಟ್ ರಿಫ್ಲಕ್ಸ್‌ಗೆ ಮುಖ್ಯ ಕಾರಣ ಸರಿಯಾದ ಸಮಯಕ್ಕೆ ಊಟ ಮಾಡದೆ ಇರುವುದು. ಪ್ರತಿ ಬಾರಿ ನೀವು ಊಟ ಮಾಡುವುದನ್ನು ಬಿಟ್ಟಾಗ, ಜಠರವು ಕೆಲವೊಂದು ಆಸಿಡ್‌ಗಳನ್ನು ಬಿಡುಗಡೆ ಮಾಡುತ್ತದೆ. ಇವು ನೇರವಾಗಿ ನಿಮ್ಮ ಜಠರದ ಮೇಲೆ ದಾಳಿ ಮಾಡಿ, ಅಲ್ಸರ್, ಅಬ್ಡೊಮಿನ್ ನೋವು ಮುಂತಾದವನ್ನು ತರುತ್ತವೆ. ಆದ್ದರಿಂದ ಊಟ ಮಾಡುವುದನ್ನು ಯಾವುದೇ ಕಾರಣಕ್ಕು ತಪ್ಪಿಸಬೇಡಿ.

ತೂಕದಲ್ಲಿ ಹೆಚ್ಚಳ
ಇಡಿಯ ವಿಶ್ವದಲ್ಲಿ ಹೆಚ್ಚಿನ ತೂಕವುಳ್ಳವರು ಸಾಮಾನ್ಯವಾಗಿ ತೆಗೆದುಕೊಳ್ಳುವ ತಪ್ಪು ನಿರ್ಧಾರವೆಂದರೆ ಊಟ ಬಿಡುವುದು. ತೂಕಕ್ಕೆ ಪ್ರಮುಖ ಕಾರಣ ಸಂಗ್ರಹವಾಗಿರುವ ಕೊಬ್ಬು. ಪ್ರತಿದಿನ ನಮ್ಮ ದೇಹ ಕೊಬ್ಬನ್ನು ಬಳಸುತ್ತಲೇ ಇರುತ್ತದೆ ಹಾಗೂ ಹೆಚ್ಚಿನ ಆಹಾರದಿಂದ ಸಂಗ್ರಹವಾದ ಪೋಷಕಾಂಶಗಳನ್ನು ಕೊಬ್ಬಾಗಿ ಪರಿವರ್ತಿಸಿ ಸಂಗ್ರಹದಲಿಟ್ಟುಕೊಳ್ಳುತ್ತಲೇ ಇರುತ್ತದೆ. ತೂಕ ಕಳೆದುಕೊಳ್ಳಲು ಕೊಬ್ಬು ಕರಗಿಸುವುದನ್ನು ಹೆಚ್ಚಿಸಿ ಸಂಗ್ರಹವನ್ನು ಕಡಿಮೆಗೊಳಿಸುವುದೇ ಅತ್ಯಂತ ಆರೋಗ್ಯಕರ ವಿಧಾನವಾಗಿದೆ. ಆದರೆ ಊಟ ಬಿಟ್ಟೇ ಬಿಡುವುದರಿಂದ ಕೊಬ್ಬು ಕರಗುವುದಿಲ್ಲ. ಬದಲಿಗೆ ಸಂಗ್ರಹವಾಗಿದ್ದ ಕೊಬ್ಬು ಕರಗದೇ ದೇಹದ ಇತರ ಪ್ರಮುಖ ಅಂಗಗಳೇ ಪ್ರಭಾವಿತವಾಗಿ ತೂಕ ಇನ್ನಷ್ಟು ಹೆಚ್ಚಲು ಕಾರಣವಾಗುತ್ತದೆ.

ಅತೀವ ಸುಸ್ತು
ಒಂದು ಹೊತ್ತಿನ ಊಟ ಬಿಟ್ಟು ಇನ್ನುಳಿದ ಹೊತ್ತಿನ ಊಟ ಮಾಡಿದರೂ ದೇಹದ ಲಯ ತಪ್ಪುವುದರಿಂದ ನಿಧಾನಕ್ಕೆ ಚೈತನ್ಯ ಕಳೆದುಕೊಂಡ ದೇಹ ದಿನನಿತ್ಯದ ಕಾರ್ಯಗಳಿಗೆ ಸ್ಪಂದಿಸುವುದನ್ನು ಕಡಿಮೆಗೊಳಿಸುತ್ತಾ ಹೋಗುತ್ತದೆ. ಪರಿಣಾಮವಾಗಿ ಇಡಿಯ ದಿನ ಸುಸ್ತು ಆವರಿಸಿರುತ್ತದೆ. ಯಾವುದೇ ಕೆಲಸಕ್ಕೆ, ಓದಿಗೆ, ಸಂಗೀತಕ್ಕೆ ಮನ ಸ್ಪಂದಿಸದೇ ಮಂಕು ಕವಿಯುತ್ತದೆ. ಇದು ನಿಮ್ಮ ಆರೋಗ್ಯಕ್ಕೂ, ನಿಮ್ಮ ದೈನಂದಿನ ಕೆಲಸಗಳಿಗೂ ಪರಿಣಾಮಬೀರಿ ಹಲವು ತೊಂದರೆಗಳು ಎದುರಾಗುತ್ತವೆ.

ಮೆದುಳಿನ ಕಾರ್ಯಕ್ಷಮತೆಯಲ್ಲಿ ಕೊರತೆ
ನಮ್ಮ ದೇಹದ ರಕ್ತಪೂರೈಕೆಯಲ್ಲಿ ಸಿಂಹಪಾಲು ಮೆದುಳಿಗೆ ರವಾನೆಯಾಗುತ್ತದೆ. ಅದರಲ್ಲೂ ಮೆದುಳಿಗೆ ಹೋಗುವ ರಕ್ತದಲ್ಲಿ ಗ್ಲುಕೋಸ್ ನಿರಂತರವಾಗಿ ಪೂರೈಕೆಯಾಗುತ್ತಲೇ ಇರಬೇಕು. ಪ್ರತಿ ಆರು ಘಂಟೆಗಳಿಗೆ ಊಟ ಮಾಡುವ ಮೂಲಕ ಈ ಪೂರೈಕೆಯನ್ನು ನಿಯಮಿತರೂಪದಲ್ಲಿಡುವುದು ಆರೋಗ್ಯಕಾರಿಯಾಗಿದೆ. ಒಂದು ವೇಳೆ ಒಂದು ಹೊತ್ತಿನ ಊಟ ಬಿಟ್ಟೇ ಬಿಟ್ಟರೆ ಮೆದುಳಿಗೆ ಪೂರೈಕೆಯಾಗುವ ಗ್ಲುಕೋಸ್ ನಲ್ಲಿ ಏರುಪೇರಾಗಿ ಮೆದುಳು ಸೊರಗುತ್ತದೆ. ಇದರಿಂದಾಗಿ ತಲೆನೋವು, ವಾಕರಿಕೆ ಮೊದಲಾದ ನೇರಪರಿಣಾಮಗಳೂ, ಸರಿಯಾಗಿ ಸ್ಪಂದಿಸಲಾಗದ ಹಲವು ಪ್ರಕ್ರಿಯೆಗಳು ಇತರ ಪರೋಕ್ಷ ತೊಂದರೆಗಳಿಗೂ ಕಾರಣವಾಗುತ್ತವೆ.

ಥಟ್ಟನೇ ಬದಲಾಗುವ ಭಾವೋದ್ವೇಗ
ಒಂದು ವೇಳೆ ಮದ್ಯಾಹ್ನದ ಊಟದ ಬಳಿಕ ಸುಖನಿದ್ದೆ ಸವಿಯುತ್ತಿರುವ ಹೊತ್ತಿನಲ್ಲಿ ಮಕ್ಕಳು ಗಲಾಟೆ ಮಾಡುತ್ತಿದ್ದು ನಿಮ್ಮ ನಿದ್ದೆ ಹಾಳಾದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ಇದೇ ಪರಿಸ್ಥಿತಿ ನಿಯಮಿತವಾಗಿ ಊಟ ಬಿಟ್ಟಾಗಲೂ ಬರುತ್ತದೆ. ಪರಿಸ್ಥಿತಿಗೆ ವಿಪರೀತವಾಗಿ ಭಾವೋದ್ವೇಗಕ್ಕೆ ಒಳಗಾಗುತ್ತೀರಿ. ಸರಿಯಾದ ಆಹಾರವಿಲ್ಲದಿರುವ ಕಾರಣ ಹಾರ್ಮೋನುಗಳ ಏರುಪೇರಿನಿಂದ ಈ ಪರಿಸ್ಥಿತಿ ಎದುರಾಗುತ್ತದೆ.

ಹೊಟ್ಟೆ ಬಿರಿಯುವಷ್ಟು ತಿನ್ನುವುದು
ಒಂದು ಹೊತ್ತು ಊಟ ಬಿಟ್ಟವರ ಹೊಟ್ಟೆ ತೀವ್ರವಾಗಿ ಹಸಿಯುವ ಕಾರಣ ಮುಂದಿನ ಊಟವನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಸಾಧ್ಯತೆ ಹೆಚ್ಚು. ಇದರಿಂದಾಗಿ ಒಂದು ಹೊತ್ತು ಊಟಮಾಡದೇ ಕಳೆದುಕೊಂಡಿದ್ದರ ಹತ್ತರಷ್ಟು ಹೆಚ್ಚು ಕೊಬ್ಬು ಸಂಗ್ರಹವಾಗುವಷ್ಟು ಆಹಾರವನ್ನು ಒಮ್ಮೆಲೇ ಸೇವಿಸಿದ್ದರ ಪರಿಣಾಮವಾಗಿ ತೂಕ ಇನ್ನಷ್ಟು ಹೆಚ್ಚುತ್ತದೆ. ಆದುದರಿಂದ ತೂಕ ಇಳಿಸುವ ಇರಾದೆಯುಳ್ಳವರು ಒಂದು ವೇಳೆ ಒಂದು ಹೊತ್ತಿನ ಊಟ ಬಿಡುವ ಇರಾದೆಯಿದ್ದರೆ ಅದನ್ನು ಬದಲಿಸುವುದು ಒಳ್ಳೆಯದು.



Click it and Unblock the Notifications