ಇನ್ನು ಬರೀ ಹದಿನೈದೇ ದಿನಗಳಲ್ಲಿ 15 ಕೆಜಿ ಇಳಿಸಿಕೊಳ್ಳಿ..!

By Super

ಸಾಮಾನ್ಯವಾಗಿ ಭಾರತೀಯ ಅಡುಗೆಗಳಲ್ಲಿ ಬಳಸುವ ಮಸಾಲೆಯಲ್ಲಿ ಪುಟ್ಟ ಜೀರಿಗೆ ಅನಿವಾರ್ಯವಾಗಿದೆ. ಮಸಾಲೆಯ ಹೊರತಾಗಿ ಹಲವು ತಿಂಡಿ, ಸಿಹಿ, ಬಿಸ್ಕತ್ತು, ರಸ್ಕ್ ಮೊದಲಾದ ಸಿದ್ಧ ಅಡುಗೆಗಳಲ್ಲಿಯೂ ಬಳಸಲಾಗುತ್ತದೆ. ಕೇರಳ ತಮಿಳುನಾಡುಗಳಲ್ಲಂತೂ ಜೀರಿಗೆ ಹಾಕಿ ಕುದಿಸಿದ ನೀರನ್ನೇ ಕುಡಿಯಲು ನೀಡಲಾಗುತ್ತದೆ. ರುಚಿಯನ್ನು ಹೆಚ್ಚಿಸುವ ಈ ಜೀರಿಗೆ ತೂಕವನ್ನೂ ಇಳಿಸುತ್ತದೆ ಎಂಬುದು ನಿಮಗೆ ಗೊತ್ತಿತ್ತೇ?

ಒಂದು ಸಂಶೋಧನೆಯ ಪ್ರಕಾರ ಸತತವಾಗಿ ಇಪ್ಪತ್ತು ದಿನಗಳ ಕಾಲ ಜೀರಿಗೆಯನ್ನು ಸೇವಿಸಿದರೆ ಕಷ್ಟಕರವಾದ ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಾಧ್ಯವಾಗುತ್ತದೆ. ಹೊಟ್ಟೆಯ ಕೊಬ್ಬಿನ ಹೊರತಾಗಿ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬನ್ನು ಕರಗಿಸಲೂ ನೆರವಾಗುತ್ತದೆ. ಒಂದು ಸಂಶೋಧನೆಯಲ್ಲಿ ಸ್ಥೂಲಕಾಯವುಳ್ಳ 88 ಮಹಿಳೆಯರನ್ನು ನಿಯಮಿತವಾಗಿ ಜೀರಿಗೆಯ ಸೇವನೆಯ ಚಿಕಿತ್ಸೆ ನೀಡಿದ ಬಳಿಕ ಅವರ ಸ್ಥೂಲಕಾಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದುದು ಕಂಡುಬಂದಿದೆ.

ಅಷ್ಟಕ್ಕೂ ಸ್ಥೂಲಕಾಯವನ್ನು ಈ ಪುಟ್ಟ ಜೀರಿಗೆ ಹೇಗೆ ಕರಗಿಸುತ್ತದೆ? ಈ ಪ್ರಶ್ನೆಗೆ ಉತ್ತರ ಪಡೆಯಲು ಕೊಬ್ಬಿನ ಬಗ್ಗೆ ಕೊಂಚ ತಿಳಿದಿರುವುದು ಉತ್ತಮ. ನಮ್ಮ ದೇಹ ಸೇವಿಸುವ ಆಹಾರದಲ್ಲಿ ಹೆಚ್ಚುವರಿ ಅಂಶವನ್ನು ದೇಹ ಕೊಬ್ಬಿನ ರೂಪದಲ್ಲಿ ಮುಂದಿನ ದಿನಗಳಿಗಾಗಿ ಸಂಗ್ರಹಿಸುತ್ತದೆ. ಇದನ್ನು ಕರಗಿಸಲು ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ದೇಹದ ಶಕ್ತಿ ಖರ್ಚಾಗಬೇಕು.

ಇದು ದೈಹಿಕ ಅಥವಾ ಜೀವರಾಸಾಯನಿಕ ಕ್ರಿಯೆಗಳಲ್ಲಿ ಹೆಚ್ಚಳದ ಮೂಲಕ ಸಾಧ್ಯ. ಜೀರಿಗೆಯ ಸೇವನೆಯಿಂದ ಜೀವರಾಸಾಯನಿಕ ಕ್ರಿಯೆ ಹೆಚ್ಚುತ್ತದೆ. ಇದು ಕರಗಿದ್ದ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಕೊಬ್ಬು ಕರಗಿಸುವ ಹೊರತಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ರಕ್ತಹೀನತೆಯನ್ನು ಕಡಿಮೆಗೊಳಿಸುತ್ತದೆ, ಹಸಿವನ್ನು ಹೆಚ್ಚಿಸುತ್ತದೆ, ಹಾಗೂ ಹೊಟ್ಟೆಯಲ್ಲಿ ವಾಯುವಿನ ಉತ್ಪತ್ತಿಯಾಗದಂತೆ ತಡೆಯುತ್ತದೆ.

ಜೀರಿಗೆಯನ್ನು ಸೂಕ್ತ ಕ್ರಮದಲ್ಲಿ ಸೇವಿಸುವ ಮೂಲಕ ಹದಿನೈದೇ ದಿನಗಳಲ್ಲಿ ಹೊಟ್ಟೆಯ ಸುತ್ತಳತೆ ಕಡಿಮೆಯಾಗಿರುವುದು ಕಂಡುಬರುತ್ತದೆ. ಜೀರಿಗೆ ಪುಡಿ ಅಥವಾ ಜೀರಿಗೆ ಕುದಿಸಿದ ನೀರನ್ನು ಕುಡಿಯುವ ಮೂಲಕ ತೂಕ ಇಳಿಸುವ ರಹಸ್ಯವನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ಜೀರಿಗೆ ಪೇಯ ತಯಾರಿಸುವ ವಿಧಾನ

ಜೀರಿಗೆ ಪೇಯ ತಯಾರಿಸುವ ವಿಧಾನ

ಒಂದು ದೊಡ್ಡಲೋಟ ನೀರಿನಲ್ಲಿ ಎರಡು ದೊಡ್ಡಚಮಚ ಜೀರಿಗೆಯನ್ನು ಇಡಿಯ ರಾತ್ರಿ ನೆನೆಸಿಡಿ. ಬೆಳಿಗ್ಗೆ ಇದನ್ನು ಕುದಿಸಿ ಕೊಂಚ ಹೊತ್ತಿನ ಬಳಿಕ ಸೋಸಿ ಜೀರಿಗೆಯ ಕಾಳುಗಳನ್ನು ನಿವಾರಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜೀರಿಗೆ ಪೇಯ ತಯಾರಿಸುವ ವಿಧಾನ

ಜೀರಿಗೆ ಪೇಯ ತಯಾರಿಸುವ ವಿಧಾನ

ಇನ್ನು ಈ ನೀರಿಗೆ ಅರ್ಧ ಲಿಂಬೆಯ ಹಣ್ಣನ್ನು ಹಿಂಡಿ ರಸವನ್ನು ಸೇರಿಸಿ. ಈ ನೀರನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿ ಮುಂದಿನ ಮುಕ್ಕಾಲು ಘಂಟೆ ಏನೂ ಸೇವಿಸದಿರಿ. ಎರಡೇ ವಾರದಲ್ಲಿ ತೂಕ ಕಡಿಮೆಯಾಗುತ್ತಿರುವುದು ಕಂಡುಬರುತ್ತದೆ.

ತೂಕ ಇಳಿಸಲು ಜೀರಿಗೆಯ ಬಳಕೆಯ ಪರ್ಯಾಯ ವಿಧಾನಗಳು

ತೂಕ ಇಳಿಸಲು ಜೀರಿಗೆಯ ಬಳಕೆಯ ಪರ್ಯಾಯ ವಿಧಾನಗಳು

ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಮೂರು ಗ್ರಾಂ ಜೀರಿಗೆ ಪುಡಿ ಮತ್ತು ಕೆಲವು ಹನಿ ಜೇನನ್ನು ಸೇರಿಸಿ ಮಿಶ್ರಣ ಮಾಡಿ ಬಳಿಕ ಕುಡಿಯಿರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತೂಕ ಇಳಿಸಲು ಜೀರಿಗೆಯ ಬಳಕೆಯ ಪರ್ಯಾಯ ವಿಧಾನಗಳು

ತೂಕ ಇಳಿಸಲು ಜೀರಿಗೆಯ ಬಳಕೆಯ ಪರ್ಯಾಯ ವಿಧಾನಗಳು

ಇನ್ನೊಂದು ವಿಧಾನವೆಂದರೆ ವಿವಿಧ ತರಕಾರಿಗಳನ್ನು ಬಳಸಿ ಸೂಪ್ ತಯಾರಿಸಿ ಇದಕ್ಕೆ ಒಂದು ಚಿಕ್ಕಚಮಚ ಜೀರಿಗೆಯನ್ನು ಸೇರಿಸಿ. ಇದಕ್ಕೆ ಒಂದು ಚಮಚ ಕಂದು ಅಕ್ಕಿಯ ಹಿಟ್ಟನ್ನು ಸೇರಿಸುವ ಮೂಲಕ ರುಚಿ ಹೆಚ್ಚುತ್ತದೆ ಹಾಗೂ ತೂಕ ಇಳಿಸಲೂ ನೆರವಾಗುತ್ತದೆ.

ಲಿಂಬೆ, ಶುಂಠಿ ಮತ್ತು ಜೀರಿಗೆ ಸಹಾ ತೂಕ ಇಳಿಸಲು ಸಹಕಾರಿ

ಲಿಂಬೆ, ಶುಂಠಿ ಮತ್ತು ಜೀರಿಗೆ ಸಹಾ ತೂಕ ಇಳಿಸಲು ಸಹಕಾರಿ

ತೂಕ ಇಳಿಸಲು ಶುಂಠಿ ಮತ್ತು ಲಿಂಬೆ ಸಹಾ ಉಪಯುಕ್ತವಾಗಿವೆ. ಇವುಗಳನ್ನು ಜೀರಿಗೆಯ ಜೊತೆ ಸೇವಿಸಿದರೆ ಈ ಶಕ್ತಿ ಇನ್ನಷ್ಟು ಹೆಚ್ಚುತ್ತದೆ.

ಲಿಂಬೆ, ಶುಂಠಿ ಮತ್ತು ಜೀರಿಗೆ ಸಹಾ ತೂಕ ಇಳಿಸಲು ಸಹಕಾರಿ

ಲಿಂಬೆ, ಶುಂಠಿ ಮತ್ತು ಜೀರಿಗೆ ಸಹಾ ತೂಕ ಇಳಿಸಲು ಸಹಕಾರಿ

ಇದಕ್ಕಾಗಿ ಕೊಂಚ ನೀರಿನಲ್ಲಿ ಕ್ಯಾರೆಟ್ ಮತ್ತಿತ ತರಕಾರಿಗಳನ್ನು ಕುದಿಸಿ ಇದಕ್ಕೆ ಚಿಕ್ಕ ಶುಂಠಿಯನ್ನು ತುರಿದು ಸೇರಿಸಿ. ಬಳಿಕ ಈ ನೀರಿಗೆ ಕೊಂಚ ಜೀರಿಗೆ ಪುಡಿ ಮತ್ತು ಲಿಂಬೆರಸ ಸೇರಿಸಿ ಕುದಿಸಿ. ಬಳಿಕ ಈ ತರಕಾರಿಗಳನ್ನು ಊಟದಲ್ಲಿ ಸೇವಿಸಿ.

ಹೊಟ್ಟೆಯ ಕೊಬ್ಬು ಕರಗಿಸಲು ಜೀರಿಗೆ ಬಳಸಿ

ಹೊಟ್ಟೆಯ ಕೊಬ್ಬು ಕರಗಿಸಲು ಜೀರಿಗೆ ಬಳಸಿ

ಹೊಟ್ಟೆಯ ಕೊಬ್ಬು ಕರಗಿಸುವುದು ಕೊಂಚ ಕಷ್ಟಕರ. ಆದರೆ ಜೀರಿಗೆಯಲ್ಲಿರುವ ವಿವಿಧ ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟುಗಳು ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸಿ ಸಂಗ್ರಹವಾಗಿದ್ದ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಇದು ಹೊಟ್ಟೆಯ ಕೊಬ್ಬನ್ನು ಶೀಘ್ರವಾಗಿ ಕರಗಿಸಲು ನೆರವಾಗುತ್ತದೆ.

ಜೀರ್ಣಕ್ರಿಯೆ ಹೆಚ್ಚಿಸುತ್ತದೆ ಹಾಗೂ ಅಪಾನವಾಯುವನ್ನು ತಡೆಯುತ್ತದೆ

ಜೀರ್ಣಕ್ರಿಯೆ ಹೆಚ್ಚಿಸುತ್ತದೆ ಹಾಗೂ ಅಪಾನವಾಯುವನ್ನು ತಡೆಯುತ್ತದೆ

ಜೀರಿಗೆಯ ಸೇವನೆಯ ಮೂಲಕ ಜೀರ್ಣಕ್ರಿಯೆ ಹೆಚ್ಚುತ್ತದೆ. ಪರಿಣಾಮವಾಗಿ ಹೊಟ್ಟೆಯಲ್ಲಿ ವಿವಿಧ ವಾಯುಗಳು ಉತ್ಪತ್ತಿಯಾಗದಂತೆ ತಡೆಯುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜೀರ್ಣಕ್ರಿಯೆ ಹೆಚ್ಚಿಸುತ್ತದೆ ಹಾಗೂ ಅಪಾನವಾಯುವನ್ನು ತಡೆಯುತ್ತದೆ

ಜೀರ್ಣಕ್ರಿಯೆ ಹೆಚ್ಚಿಸುತ್ತದೆ ಹಾಗೂ ಅಪಾನವಾಯುವನ್ನು ತಡೆಯುತ್ತದೆ

ಆಹಾರ ಪೂರ್ಣವಾಗಿ ಜೀರ್ಣಗೊಳ್ಳುವ ಮೂಲಕ ಆಹಾರದಿಂದ ಪೂರ್ಣಪ್ರಮಾಣದಲ್ಲಿ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುವುದು ಮಾತ್ರವಲ್ಲ ವಿಸರ್ಜನೆಯೂ ಸುಲಲಿತವಾಗುತ್ತದೆ.

ಹೃದಯಾಘಾತವನ್ನೂ ತಡೆಯುತ್ತದೆ

ಹೃದಯಾಘಾತವನ್ನೂ ತಡೆಯುತ್ತದೆ

ಜೀರಿಗೆಯ ನಿಯಮಿತ ಸೇವನೆಯಿಂದ ದೇಹದಲ್ಲಿ ಸಂಗ್ರಹವಾಗಿ ಅನಾರೋಗ್ಯಕರ ಕೊಬ್ಬು ಮತ್ತು ಕೆಟ್ಟ ಕೊಲೆಸ್ಟ್ರಾಲ್ ತೊಲಗಲು ಸಾಧ್ಯವಾಗುತ್ತದೆ. ಆದ್ದರಿಂದ ಜೀರಿಗೆಯ ನಿಯಮಿತ ಸೇವನೆಯಿಂದ ತೂಕ ಕಳೆದುಕೊಳ್ಳುವುದು ಮಾತ್ರವಲ್ಲ ಹೃದಯಾಘಾತವಾಗುವ ಸಂಭವವನ್ನೂ ಕಡಿಮೆಗೊಳಿಸಬಹುದು.

X
Desktop Bottom Promotion