Latest Updates
-
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು!
ಚಿಂತೆ ಚಿತೆ ಕಟ್ಟಬಹುದು ಎಚ್ಚರ..!
ಈ ಲೈಫೇ ಇಷ್ಟು.. ಯಾವಾಗ್ಲೂ ಟೆನ್ಷನ್ ಟೆನ್ಷನ್.. ಪ್ರತಿಯೊಬ್ಬರ ಲೈಫ್‌ನಲ್ಲೂ ಚಿಂತೆ, ಒತ್ತಡ ಮಾಮೂಲು. ಒಂದಿಲ್ಲೊಂದು ವಿಚಾರಕ್ಕೆ ಚಿಂತೆ ಮಾಡ್ಕೊಳ್ತನೇ ಇರ್ತೀವಿ. ಚಿಂತೆ ಇಲ್ಲದ ಮನುಷ್ಯ ಈ ಭೂಮಿಯಲ್ಲಿ ಒಬ್ಬನೂ ಇರೋಕೆ ಸಾಧ್ಯವಿಲ್ಲ. ಅವ್ರದ್ದೇ ಆದ ಕೆಲವು ಬದುಕಿನ ಜಂಜಾಟಗಳು ಇನ್ನಿಲ್ಲದಂತೆ ಕಾಡಲು ಶುರುವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಉಂಟು ಮಾಡುತ್ತೆ. ಚಿಂತೆ ಮಾಡಿದವನು ಎಂದಿಗೂ ಸಂತೋಷದಿಂದ ತನ್ನ ಬದುಕನ್ನು ಕಳೆಯಲು ಸಾಧ್ಯವಿಲ್ಲ.
ಕಾಯಿಲೆ ಅನ್ನೋದು ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತಾ ಅಂತ ಕೇಳಿದ ಹಾಗೆ ಚಿಂತೆ ಅನ್ನೋದು ಮನುಷ್ಯನಿಗೆ ಬರದೆ ಮರಕ್ಕೆ ಬರೋಕೆ ಸಾಧ್ಯವಿದ್ಯಾ ಅಂತ ಅನ್ನಿಸಿದ್ರೂ, ಕೆಲವರು ಅನವಶ್ಯಕ ಕಾರಣಗಳಿಗಾಗಿ ಚಿಂತೆ ಮಾಡ್ಕೊಂಡು ಬಿಡ್ತಾರೆ. ಆದ್ರೆ ಇಂತಹ ಕಾರಣಗಳಿಗಂತೂ ನೀವು ಯಾವತ್ತೂ ಚಿಂತೆ ಮಾಡ್ಬಾರ್ದು. ಮಾಡಿದ್ರೆ ಖಂಡಿತ ಅದು ನಿಮ್ಮ ಮಹಾಪರಾಧವೇ ಸರಿ. ಯಾಕಂದ್ರೆ ಇಲ್ಲಿ ನೀಡಿರುವ ಕಾರಣಗಳು ನಿಜಕ್ಕೂ ಚಿಂತೆ ಮಾಡುವಂತೆ ಮಾಡಿದ್ರೂ ಇವೆಲ್ಲವೂ ಅನಗತ್ಯ ಕಾರಣಗಳಾಗಿರುತ್ತೆ.ಈ ಕಾರಣಗಳಿಂದ ಮಾಡಿಕೊಳ್ಳುವ ಚಿಂತೆ ಕೇವಲ ನಿಮ್ಮ ಅನಾರೋಗ್ಯದ ಮುನ್ನುಡಿಯೇ ಹೊರತು ಖಂಡಿತ ಇದ್ರಿಂದ ಯಾವುದೇ ಲಾಭವಾಗೋದಿಲ್ಲ. ಹಾಗಾದ್ರೆ ಆ ಕಾರಣಗಳು ಯಾವುದು ಮುಂದೆ ಓದಿ..

ಬೇರೆಯವ್ರು ಏನ್ ಅಂತಾರೋ ಏನೋ..!
ಇನ್ನೊಬ್ರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.. ಬೇರೆಯವ್ರು ನಿಮ್ ಬಗ್ಗೆ ಏನ್ ತಿಳ್ಕೊತ್ತಾರೋ ಅಂತ ಚಿಂತೆ ಮಾಡ್ಬೇಡಿ. ಇನ್ನೊಬ್ಬರಿಗಾಗಿ ನೀವು ಬದುಕ್ತಾ ಇಲ್ಲ. ನಿಮ್ಮ ಬದುಕು ನಿಮ್ಮದು. ಹಾಗಾಗಿ ಮತ್ತೊಬ್ಬರ ಮಾತುಕತೆಯ ಬಗ್ಗೆ ನೀವು ನಿಶ್ಚಿಂತೆಯಿಂದಿರಿ. ಇಲಿ ಹೋದ್ರೆ ಹುಲಿ ಹೋಯ್ತು ಅನ್ನುವ ಮನುಷ್ಯರೂ ಇರ್ತಾರೆ. ಅಂತವರು ನಿಮ್ಮ ಬಗ್ಗೆ ಮಾತನಾಡುವ ಅನಗತ್ಯ ವಿಚಾರಗಳು ನಿಮ್ಮ ಚಿಂತೆಗೆ ಯಾವುತ್ತೂ ಕಾರಣವಾಗಬಾರದು. ನಾಯಿ ಬೊಗಳಿದ್ರೆ ದೇವಲೋಕ ಹಾಳಾಗುತ್ತಾ ಅನ್ನೋ ಮನಸ್ಥಿತಿ ನಿಮ್ಮಲ್ಲಿ ಬೆಳೆದಿರಬೇಕು. ಅದು ನಿಮ್ಮ ಆತ್ಮಸ್ಥೈರ್ಯ ಮತ್ತು ನಿಮ್ಮ ಮೇಲೆ ನಿಮಗಿರುವ ನಂಬಿಕೆಯಾಗಿರುತ್ತೆ. ಯಾರೇ ಏನೇ ಅಂದ್ರೂ ನಿಮ್ಮ ಬಗ್ಗೆ ನಿಮಗೆ ಮೊದಲು ನಂಬಿಕೆ ಅಗತ್ಯ. ನಿಮ್ಮನ್ನ ನೀವು ಯಾವುದೇ ವಿಚಾರದಲ್ಲಿ ಸಮರ್ಥಿಸಿಕೊಳ್ಲುವ ಸಾಮರ್ಥ್ಯ ಹೊಂದಿರಬೇಕೆ ವಿನಃ ವಿನಾಃಕಾರಣ ಚಿಂತೆ ಮಾಡಿಕೊಳ್ಳಬಾರದು.
ಮತ್ತೊಬ್ಬರ ಗೆಲವು..!
ಯಾರೋ ಹೆಸ್ರು ಗಳಿಸಿದ್ರು, ನಿಮ್ಮ ಪರಿಚಿತರ್ಯಾರೋ ಗೆಲವು ಸಾಧಿಸಿದ್ರು ಅಂದ್ರೆ ಅದಕ್ಕಾಗಿ ನೀವು ಪರಿತಪಿಸ್ಬೇಡಿ. ಅವರಂತೆ ನಾವಾಗ್ಬೇಕು ಅನ್ನೋ ನಿಟ್ಟಿನಲ್ಲಿ ಪ್ರಯತ್ನವಿರಬೇಕೇ ಹೊರತು ನೀವು ಹೊಟ್ಟೆಕಿಚ್ಚು ಪಟ್ಟು ಚಿಂತೆ ಮಾಡ್ಬಾರ್ದು. ಹೆಚ್ಚಿನ ಸಂದರ್ಬದಲ್ಲಿ ಚಿಂತೆಯುಂಟು ಮಾಡೋದು ನಾವು ಮತ್ತೊಬ್ಬರೊಂದಿಗೆ ನಮ್ಮನ್ನು ನಾವು ಹೋಲಿಸಿಕೊಂಡಾಗ..ಹಾಗೆ ಹೋಲಿಸಿಕೊಳ್ಳೋದನ್ನು ಬಿಟ್ಟುಬಿಡಿ. ನೀವು ನೀವಾಗಿರಿ. ಆಗ ನಿಮ್ಮದೇ ಆದ ಒಂದು ಐಡೆಂಟಿಡಿ ಹುಟ್ಟಿಕೊಳ್ಳಲು ಸಾಧ್ಯವಾಗುತ್ತೆ. ಅದು ನಿಮ್ಮ ಬದುಕನ್ನ ಉನ್ನತ ಶಿಖರಕ್ಕೆ ಕೊಂಡೊಯ್ಯಬಲ್ಲದು. ಇನ್ಪಿರೇಷನ್ ಇರಲಿ. ಆದ್ರೆ ಕಂಪ್ಯಾರಿಸನ್ ಬೇಡ. ಅಂದ್ರೆ ಒಬ್ಬರಿಂದ ನೀವು ಪ್ರೇರಣೆಗೆ ಒಳಗಾಗಬಹುದು ಆದ್ರೆ ಅವರೊಂದಿಗೆ ನಿಮ್ಮನ್ನ ಹೋಲಿಸಿಕೊಳ್ಳಬೇಡಿ. ಒತ್ತಡವನ್ನು ಚಿಟಿಕೆ ಹೊಡೆದಷ್ಟು ಸುಲಭವಾಗಿ ನಿಯಂತ್ರಿಸಿ!
ಅಂದಚೆಂದದ ಬಗ್ಗೆ ತಲೆಬಿಸಿ
ನೀವು ಹೇಗೆ ಕಾಣ್ತಿದ್ದೀರಿ ಅನ್ನೋದು ತುಂಬಾ ಮುಖ್ಯ ನಿಜ. ಎಲ್ಲರಿಗಿಂತ ಭಿನ್ನವಾಗಿರಬೇಕು ಸತ್ಯವೇ.ಎಲ್ಲರಿಗಿಂತ ಚೆನ್ನಾಗಿ ಕಾಣ್ಬೇಕು ಅನ್ನೋ ಆಸೆ ಪ್ರತಿ ಮನುಷ್ಯನನ್ನು ಸಹಜ. ಅದಕ್ಕಾಗಿ ಇನ್ನಿಲ್ಲದ ಕಸರತ್ತು ಮಾಡ್ತಲೇ ಇರ್ತಾರೆ. ಅದ್ರಲ್ಲೂ ಮಹಿಳೆಯರು ತಮ್ಮ ಅಂದಚೆಂದದ ಬಗ್ಗೆ ಚಿಂತೆಗೀಡಾಗ್ತಾರೆ, ಆದ್ರೆ ಅದರ ಬಗ್ಗೆ ಓವರ್ ಕಾನ್ಶಿಯಸ್ ಆಗಿರಬೇಡಿ. ದೇವರು ಕೊಟ್ಟ ಸಹಜ ಸೌಂದರ್ಯದ ಬಗ್ಗೆ ಆತ್ಮಾಭಿಮಾನ ಇರಲಿ. ನಾನು ಸುಂದರವಾಗಿದ್ದೇನೆ ಅನ್ನುವ ನಂಬಿಕೆ ನಿಮ್ಮಲ್ಲಿರಬೇಕು. ಅತಿಯಾಗಿ ನಿಮ್ಮ ಸೌಂದರ್ಯದ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳಬೇಡಿ. ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಿ ಮಾನಸಿಕವಾಗಿಯೂ ನಿಮ್ಮನ್ನ ಖಿನ್ನರಾಗುವಂತೆ ಮಾಡ್ಬಹುದು.
ಹಣವೇ ಎಲ್ಲವೂ ಅಲ್ಲ
ದುಡ್ಡದ್ದವನೇ ದೊಡ್ಡಪ್ಪ ಅನ್ನೋ ಮಾತಿದೆ ನಿಜ. ಆದ್ರೆ ದುಡ್ಡೇ ಬದುಕಲ್ಲ. ಬದುಕಿಗಾಗಿ ದುಡ್ಡು ಬೇಕು ಅಷ್ಟೇ.. ಹಾಗಾಗಿ ಹಣದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಹಾಸಿಗೆ ಇದ್ದಷ್ಟು ಕಾಲು ಚಾಚಿ ಉತ್ತಮ ಜೀವನ ನಡೆಸಿ. ಚಿಂತೆಯಿಂದ ದೂರವಿರಿ. ಬಡವನಾಗಿ ಹುಟ್ಟಿರಬಹುದು ಹಾಗಂತ ಬಡವನಾಗಿ ಸಾಯಬೇಕು ಅಂತೇನಿಲ್ಲ ಅನ್ನೋದು ಸರಿಯಾದ ಮಾತೇ.. ಆದ್ರೆ ಶ್ರೀಮಂತರಾಗುವ ಗೋಜಿನಲ್ಲಿ ಚಿಂತೆಯೆಂಬ ಚಿತೆ ಏರಬಾರದು. ಬದಲಾಗಿ ಪರಿಶ್ರಮದಿಂದ ಕಾರ್ಯಸಾಧನೆಯದ್ದ ಚಿತ್ತವಿರಬೇಕು. ಹಣಕ್ಕಾಗಿ ನಿಮ್ಮನ್ನ ನೀವು ಅನಾರೋಗ್ಯಕ್ಕೆ ತಳ್ಳಿಕೊಳ್ಳಬೇಡಿ. ಬದುಕಿನಲ್ಲಿ ಎಲ್ಲದಕ್ಕೂ ಮಹತ್ವ ನೀಡಿ. ಹಣದ ಹೊರತಾಗಿಯೂ ಒಂದು ಬದುಕಿರುತ್ತೆ. ಆ ಬದುಕಿಗಾಗಿ ನೀವು ಗಳಿಸುವ ಹಣ ಮಹತ್ವ ಪಡೆದಿರುತ್ತೆ ಅನ್ನೋದು ನೆನಪಿನಲ್ಲಿಡಿ.
ಅತಿಯಾಗಿ ಪರಿಪೂರ್ಣತೆಗೆ ಮುಂದಾಗ್ಬೇಡಿ
ಎಲ್ಲರೂ ಎಲ್ಲಾ ವಿಷ್ಯದಲ್ಲೂ ಫರ್ಫೆಕ್ಟ್ ಆಗಿರೋದಿಲ್ಲ. ತಪ್ಪುಗಳು ಮನುಷ್ಯನಿಂದಾಗದೇ ಮರದಿಂದಾಗೋದಿಲ್ಲ. ಸೋ ನಿಮ್ಮ ಕೆಲ್ಸದಲ್ಲಿ ತಪ್ಪುಗಳಾದಾಗ ಚಿಂತೆ ಮಾಡ್ಬೇಡಿ.ಮುಂದಿನ ಬಾರಿ ಈ ತಪ್ಪನ್ನು ತಿದ್ದಿಕೊಂಡು, ಸರಿ ಮಾಡಿಕೊಳ್ಳುವ ಬಗ್ಗೆ ನಿಮ್ಮ ಯೋಚನೆ ಮತ್ತು ಯೋಜನೆ ಇರಲಿ.. ಕೆಲಸದಲ್ಲಿ ಪರಿಪೂರ್ಣತೆ ಇಲ್ಲದೆ ಬಾಸ್ ಬಳಿ ಬೈಸಿಕೊಳ್ಳೋದು ಇವೆಲ್ಲ ಕೆಲಸದಲ್ಲಿ ಆಗುವ ಮಾಮೂಲಿ ತಪ್ಪುಗಳು. ಹೆಚ್ಚು ತಪ್ಪುಮಾಡುವವನು ಪರಿಪಕ್ವಗೊಳ್ಳಲು ಸಹಾಯವಾಗುತ್ತಂತೆ. ಆದ್ರೆ ಮಾಡಿದ ತಪ್ಪನ್ನೇ ಪುನಃ ಪುನಃ ಮಾಡದೆ ಹೊಸ ತಪ್ಪುಗಳಿಗಾಗಿ ನಿಮ್ಮನ್ನು ನೀವು ತೆರೆದುಕೊಳ್ಳಿ. ನೆಮ್ಮದಿ ಕೆಡಿಸುವ ಮಾನಸಿಕ ಒತ್ತಡಕ್ಕೆ ಕಾರಣವೇನು?
ಎಲ್ಲರೊಡನೆ ಬೆರೆತು ಬದುಕಿ
ಎಲ್ಲರೊಡನೆ ಬೆರೆತು ಬದುಕಿ.. ಮುಜುಗರದ ಸ್ವಭಾವದಿಂದಲೇ ಕೆಲವರು ಟೆಕ್ಷನ್ ಮಾಡ್ಕೊತಾರೆ. ಆದ್ರೆ ಎಲ್ಲರೊಡನೆ ಮಿಂಗಲ್ ಆಗಿ ಬದುಕೋದ್ರಿಂದ ಲೈಫಲ್ಲಿ ಚೆನ್ನಾಗಿರ್ಬಹುದು ಅನ್ನೋದು ನೆನಪಿರಲಿ. ಒಟ್ಟಿನಲ್ಲಿ ಚಿಂತೆಯಿಂದ ದೂರವಿರಬೇಕು ಅಂದ್ರೆ ನೀವು ಸಿಂಪಲ್ ಸೂತ್ರಗಳನ್ನು ಅಳವಡಿಸಿಕೊಳ್ಳೋದು ಒಳಿತು. ಆಗ ಮಾತ್ರ ನೀವು ಚಿತೆ ಏರುವ ದಿನಗಳು ದೂರವಿರಲು ಸಾಧ್ಯ ಅನ್ನೋದನ್ನು ಮರೀಬೇಡಿ..ಅತಿಯಾಗಿ ಚಿಂತೆ ಮಾಡುವ ಮನುಷ್ಯನ ಆಯಸ್ಸು ಕುಂಠಿತವಾಗುತ್ತೆ ಅನ್ನೋದು ಸಂಶೋಧನೆಗಳಿಂದಲೇ ದೃಢಪಟ್ಟಿದೆ...
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications













